Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಆಕರ್ಷಕವಾದ ಜೆಲ್ ಕ್ಯಾಂಡೆಲ್ ತಯಾರಿಸುವ ವಿಧಾನ
ಮೇಣದ ಬತ್ತಿಗಳಿಂದ ಮನೆಯನ್ನು ತುಂಬಾ ಆಕರ್ಷಕವಾಗಿ ಅಲಂಕರಿಸಬಹುದು. ಕ್ಯಾಂಡೆಲ್ ಲೈಟ್ ಡಿನ್ನರ್ ಮಾಡುವಾಗ ಅಥವಾ ರಾತ್ರಿ ಹನ್ನೆರಡು ಗಂಟೆಗೆ ಸ್ನೇಹಿತರ ಹಟ್ಟು ಹಬ್ಬವನ್ನು ಆಚರಿಸುವಾಗ, ಮೇಣದ ಬತ್ತಿಯನ್ನು ಅಂಗಡಿಯಿಂದ ಕೊಂಡು ತರುವುದಕ್ಕಿಂತ ಆಕರ್ಷಕವಾದ ಕ್ಯಾಂಡೆಲ್ ಅನ್ನು ನಾವೇ ತಯಾರಿಸಬಹುದು. ಅದು ಹೇಗೆ ಎಂದು ತಿಳಿಯಲು ಮುಂದೆ ಓದಿ.

ಬೇಕಾಗುವ ಸಾಮಾಗ್ರಿಗಳು:
* ಗ್ಲಾಸ್
* ಜೆಲ್ ವ್ಯಾಕ್ಸ್ (ಜೆಲ್ ಮೇಣ)
* ಬತ್ತಿ
* ಸುವಾಸನೆಯಿರುವ ಎಣ್ಣೆ ( ಜೆಲ್ ಗೆ ಮಿಶ್ರವಾಗುವಂತಹ)
* ಲಿಕ್ವಿಡ್ ಕಲರ್ ಡೈ ( ದ್ರಾವಣ ರೂಪದ ಬಣ್ಣ)
ಈ ಸಾಮಾನುಗಳು ಮಾರುಕಟ್ಟೆಯಲ್ಲಿ ಪ್ರತ್ಯೇಕವಾಗಿ ದೊರೆಯುತ್ತದೆ ಇಲ್ದಿದ್ದರೆ ಜೆಲ್ ಕ್ಯಾಂಡೆಲ್ ಕಿಟ್ ಕೊಂಡರೆ ಎಲ್ಲಾ ಸಾಮಾಗ್ರಿಗಳು ದೊರೆಯುತ್ತದೆ.
ತಯಾರಿಸುವ ವಿಧಾನ:
1. ಜೆಲ್ ಅನ್ನು ಚೌಕಾಕಾರದಲ್ಲಿ ಕತ್ತರಿಸಿ ನಂತರ ಅದನ್ನು ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಯಲ್ಲಿ ಹಾಕಿ ಸಾಧಾರಣ ಉರಿಯಲ್ಲಿ ಬಿಸಿ ಮಾಡಬೇಕು.
2. ಜೆಲ್ ಮೃದುವಾದ ನಂತರ ಲಿಕ್ವಿಡ್ ಕಲರ್ ಡೈ ಮತ್ತು 1/4 ಚಮಚ ಸುವಾಸನೆಯಿರುವ ಎಣ್ಣೆಯನ್ನು ಜೆಲ್ ಗೆ ಸೇರಿಸಬೇಕು.
3. ಈಗ ಗ್ಲಾಸ್ ಅನ್ನು 150-160 ಡಿಗ್ರಿ F ಉಷ್ಣತೆಗೆ ಬಿಸಿ ಮಾಡಿ ಅದಕ್ಕೆ ಮಿಶ್ರಣವನ್ನು ಸುರಿದು ಬತ್ತಿಯನ್ನು ಹಾಕಿ, ಬತ್ತಿ ಮಿಶ್ರಣದ ಮೇಲೆ ಇರುವಷ್ಟು ಉದ್ದದಲ್ಲಿ ಹಾಕಿ 4-5 ಗಂಟೆಯವರೆಗೆ ಸೆಟ್ ಆಗಲು ಬಿಡಬೇಕು.
4. ನಂತರ ಬತ್ತಿಯನ್ನು ಬೇಕಷ್ಟು ಉದ್ದದಲ್ಲಿ ಇಟ್ಟು ಉಳಿದ ಭಾಗವನ್ನು ಕತ್ತರಿಸಬೇಕು. ಈ ರೀತಿ ಮಾಡಿದರೆ ಆಕರ್ಷಕವಾದ ಜೆಲ್ ಕ್ಯಾಂಡೆಲ್ ರೆಡಿ
ಸೂಚನೆ:
*ಜೆಲ್ ಬಿಸಿ ಮಾಡುವಾಗ 230 ಡಿಗ್ರಿ F ಉಷ್ಣತೆಗಿಂತ ಅಧಿಕ ಬಿಸಿ ಮಾಡಬಾರದು. ಅಧಿಕ ಬಿಸಿ ಮಾಡಿದರೆ ಹೊತ್ತಿಕೊಂಡು ಉರಿಯುತ್ತದೆ. ಆದ್ದರಿಂದ ಥರ್ಮೋಮೀಟರ್ ಇಟ್ಟು ಉಷ್ಣತೆಯನ್ನು ಪರೀಕ್ಷಿಸುತ್ತಿರಬೇಕು.
* ಲಿಕ್ವಿಡ್ ಕಲರ್ ಡೈಯನ್ನು ಸ್ವಲ್ಪ ಬಳಸಬೇಕು. ಏಕೆಂದರೆ ಸ್ವಲ್ಪ ಹಾಕಿದರೆ ಕ್ಯಾಂಡೆಲ್ ನೋಡಲು ಆಕರ್ಷಕವಾಗಿರುತ್ತದೆ.



Click it and Unblock the Notifications
