Latest Updates
-
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ! -
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು!
ಹಲಸಿನ ಹಣ್ಣನ್ನು ಈ ಸೀಸನ್‌ನಲ್ಲಿ ಯಾವುದೇ ಭಯವಿಲ್ಲದೆ ಎನ್ನುವುದಕ್ಕೆ ಪ್ರಮುಖ ಕಾರಣಗಳಿವು
ಇದೀಗ ಹಲಸಿನ ಹಣ್ಣಿನ ಸೀಸನ್, ಈ ಹಲಸಿನ ಹಣ್ಣು ಏಪ್ರಿಲ್ ಮಾಸದಿಂದ ಆಗಸ್ಟ್‌ವರೆಗೆ ದೊರೆಯುತ್ತದೆ,ಕೆಲವು ಕಡೆ ಬೇಗನೆ ಹಣ್ಣಾಗಿ ಬೇಗನೆ ಮರ ಖಾಲಿಯಾದರೆ ಇನ್ನು ಕೆಲವು ಕಡೆ ಆಗಸ್ಟ್‌ವರೆಗೆ ಈ ಹಣ್ಣುಗಳು ಸಿಗುತ್ತದೆ. ಸಿಹಿಯಾದ , ಸುವಾಸನೆ ಈ ಹಣ್ಣನ್ನು ನೋಡುತ್ತಿದ್ದಂತೆ ಬಾಯಲ್ಲಿ ನೀರೂರುವುದು.
ಕೆಲವರು ಹಲಸಿನ ಹಣ್ಣು ತಿಂದಾಗ ಕೆಮ್ಮು ಉಂಟಾಗುವುದು, ಶೀತ ಉಂಟಾಗುವುದು ಎಂದು ಭಯ ಪಡುತ್ತಾರೆ. ಹಲಸಿನ ಹಣ್ಣು ಅಂತಲ್ಲ ಯಾವುದೇ ಸೀಸನಲ್ ಹಣ್ಣಾದರೆ ಅದನ್ನು ತಿನ್ನಲು ಹಿಂದೇಟು ಹಾಕಬೇಡಿ, ಪ್ರಕೃತಿ ಆ ಸೀಸನ್‌ಗೆ ಅಗ್ಯತವಾದ ಪೋಷಕಾಂಶಗಳನ್ನು ಅದರಲ್ಲಿ ತುಂಬಿರುತ್ತದೆ, ಅದುವೇ ಪ್ರಕೃತಿಯ ವಿಶೇಷ.

ಹಲಸಿನ ಹಣ್ಣು ತಿನ್ನುವುದರಿಂದ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:
ಪುರುಷರ ಸಂತಾನೋತ್ಪತ್ತಿ ಅಂಗಗಳ ಆರೋಗ್ಯ ಒಳ್ಳೆಯದು
ಇದು ಪುರುಚರ ವೃಷಣದ ಆರೋಗ್ಯಕ್ಕೆ ಒಳ್ಳೆಯದು. ವೀರ್ಯಗಳ ಸಂಖ್ಯೆ ಹೆಚ್ಚಿಸಲು ಸಹಕಾರಿ. ಈ ಹಣ್ಣು ಸೇವನೆ ಪುರುಷರಲ್ಲಿ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿಸುವುದು.
ರಕ್ತ ಉತ್ಪತ್ತಿಗೆ ಸಹಕಾರಿ
ಈ ಹಣ್ಣು ಸೇವನೆಯಿಂದ ದೇಹದಲ್ಲಿ ಕೆಂಪು ರಕ್ತಕಣಗಳು ಹೆಚ್ಚಾಗುವುದು. ರ್ಕತಹೀನತೆ ಸಮಸ್ಯೆ ಇರುವವರು ಈ ಸೀಸನ್ ಪೂರ್ತಿ ಒಂದೆರಡು ತೊಳೆ ಹಲಸಿನ ಹಣ್ಣು ಸೇವನೆ ಮಾಡುವುದು ತುಂಬಾನೇ ಒಳ್ಳೆಯದು.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
ಹಲಸಿನ ಹಣ್ಣು ಸೀಸನಲ್ ಹಣ್ಣು, ಇದರಲ್ಲಿ ವಿಟಮಿನ್ ಸಿ ಅಂಶವಿದೆ. ಈ ವಿಟಮಿನ್ ಸಿ ಮಳೆಗಾಲದಲ್ಲಿ ಕಾಡುವ ಶೀತ -ಕೆಮ್ಮು ಈ ಬಗೆಯ ಆರೋಗ್ಯ ಸಮಸ್ಯೆ ತಡೆಗಟ್ಟುತ್ತದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ನಮ್ಮ ದೇಹದಲ್ಲಿ ಪ್ರತಿರೋಧದ ಶಕ್ತಿ ಹೆಚ್ಚಿಸುತ್ತದೆ.
ಮಧುಮೇಹಿಗಳೂ ತಿನ್ನಬಹುದು
ಮಧುಮೇಹ ಇರುವವರು ಹಲಸಿನ ಹಣ್ಣು ತಿನ್ನಬಾರದು ಎಂಬ ಕಲ್ಪನೆ ಹಲವರಲ್ಲಿದೆ, ಆದರೆ ಅದು ತಪ್ಪು ಕಲ್ಪನೆ, ಇದನ್ನು ನೀವು ಮಿತಿಯಲ್ಲಿ ಸೇವಿಸಿದರೆ ಸಮಸ್ಯೆ, ಇನ್ನು ಸ್ವಲ್ಪ ಬಲಿತಿರುವ ಹಲಸಿನ ಕಾಯಿ ತಿನ್ನಲು ರುಚಿಯಾಗಿರುತ್ತದೆ, ಅದನ್ನು ಸವಿಯಬಹುದು.
ಈ ಹಲಸಿನ ಹಣ್ಣು ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು
ಹಲಸಿನ ಹಣ್ಣಿನಲ್ಲಿ ಮೆಗ್ನಿಷ್ಯಿಯಂ, ಕ್ಯಾಲ್ಸಿಯಂ, ಪೊಟಾಷ್ಯಿಯಂ ಅಧಿಕವಿದೆ, ಹೀಗಾಗಿ ಇದು ಮಳೆಗಾಲದಲ್ಲಿ ಮೂಳೆಗಳ ಆರೋಗ್ಯ ರಕ್ಷಣೆ ಮಾಡುತ್ತದೆ.
ಇನ್ನು ಹಲಸಿನ ಹಣ್ಣು ತಿಂದು ಬೀಜ ಬಿಸಾಡಬೇಡಿ, ಅದರಲ್ಲಿಯೂ ಹಲವು ಪ್ರಯೋಜನಗಳಿವೆ
ಒಂದು ಹಲಸಿನ ಬೀಜ ಬೇಯಿಸಿ ಅಥವಾ ಸುಟ್ಟು ತಿಂದರೆ ಸಾಕು ಅಜೀರ್ಣ ಸಮಸ್ಯೆ ದೂರಾಗುವುದು. ಹಣ್ಣು ತಿಂದ ಮೇಲೆ ಒಂದಾದರೂ ಬೀಜ ತಿಂದರೆ ಒಳ್ಳೆಯದು ಎಂದು ಹೇಳಲಾಗುವುದು
ಸುಟ್ಟು ತಿಂದರೆ ತುಂಬಾನೇ ರುಚಿ: ಸೌದೆ ಒಲೆ ಇದ್ದರೆ ಕೆಂಡದಲ್ಲಿ ಸುಟ್ಟು ತಿಂದರೆ ಸೂಪರ್ ಟೇಸ್ಟ್‌ನ ಸ್ನ್ಯಾಕ್ಸ್ ಇದು. ಅಲ್ಲದೆ ಬೀಜದಲ್ಲಿ ಕಣ್ಣಿನ ಆರೋಗ್ಯಕ್ಕೆ ಅವಶ್ಯಕವಾದ ವಿಟಮಿನ್ ಎ ಇದೆ. ಇನ್ನು ಜೀರ್ಣಕ್ರಿಯೆಗೆ ಸಹಾಯ ಮಾಡುವುದರಿಂದ ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications