Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಬೇಸಿಗೆಯಲ್ಲಿ ಬಿಸಿ ನೀರಿನ ಸ್ನಾನ ಮಾಡಿದರೆ ಈ ಪ್ರಯೋಜನಗಳಿವೆ
ಬೇಸಿಗೆಯಲ್ಲಿ ತಣ್ಣನೆಯ ನೀರಿನಲ್ಲಿ ಸ್ನಾನ ಮಾಡಿದರೆ ತುಂಬಾನೇ ರಿಲ್ಯಾಕ್ಸ್ ಅನಿಸುವುದು ಅಲ್ವಾ? ಮೈಯೆಲ್ಲಾ ತಂಪಾಗುತ್ತದೆ ಸಕತ್ ಕೂಲ್ ಅನಿಸುವುದು.
ಆದರೆ ನಿಮಗೆ ಗೊತ್ತಾ ಬೇಸಿಗೆಯಲ್ಲಿಉಗುರು ಬೆಚ್ಚಗಿ ನೀರಿನ ಸ್ನಾನ ಕೂಡ ತುಂಬಾ ಒಳ್ಳೆಯದು.ಏಕೆ ? ನೋಡೋಣ ಬನ್ನಿ:

ಬಿಸಿ ನೀರಿನ ಸ್ನಾನ ಸ್ನಾಯುಗಳಿಗೆ ವಿಶ್ರಾಂತಿ ಕೊಡುತ್ತೆ: ಗಂಟೆಗಟ್ಟಲೆ ಲ್ಯಾಪ್‌ಟಾಪ್, ಕಂಪ್ಯೂಟರ್ ಮುಂದೆ ಕೂರುವುದರಿಂದ ಸ್ನಾಯುಗಳು ಬಿಗಿದುಕೊಂಡು ನೋವು ಉಂಟಾಗುವುದು. ಬಿಸಿ ನೀರಿನ ಸ್ನಾನ ಈ ನೋವು ಕಡಿಮೆ ಮಾಡಲು ಸಹಕಾರಿಯಾಗಿದೆ.
ಮೂಗು ಕಟ್ಟುವುದು ತಡೆಗಟ್ಟುತ್ತದೆ: ಸೆಕೆ ಅಂತ ತುಂಬಾ ಜೋರಾಗಿ ಫ್ಯಾನ್ ಹಾಕಿ ಕೂರುವುದು ಅಥವಾ ಎಸಿಯಲ್ಲಿ ಕೂರುವುದು ಮಾಡುತ್ತೇವೆ. ಇದರಿಂದ ಮೂಗು ಕಟ್ಟುವುದು, ಶೀತ ಈ ಬಗೆಯ ಸಮಸ್ಯೆ ಕಂಡು ಬರುವುದು. ಈ ರೀತಿಯಾದರೆ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಮೂಗು ಕಟ್ಟುವುದು ಕಡಿಮೆಯಾಗುವುದು.
ನಿದ್ದೆಗೆ ಒಳ್ಳೆಯದು
ರಾತ್ರಿ ಮಲಗುವ ಹೊತ್ತಿನಲ್ಲಿ ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ಬೇಗನೆ ನಿದ್ದೆ ಬರುವುದು. ತುಂಬಾ ಸುಸ್ತಾಗಿದ್ದ ದಿನ ನಿದ್ದೆ ಚೆನ್ನಾಗಿ ಬಂದ್ರೆ ಒಳ್ಳೆಯದು, ಆದರೆ ಕೆಲವೊಮ್ಮೆ ನಿದ್ದೆ ಬರುವುದಿಲ್ಲ, ಆವಾಗ ಬಿಸಿ ನೀರಿನಲ್ಲಿ ಸ್ನಾನ ಮಾಡಿ ನೋಡಿ ಬೇಗನೆ ನಿದ್ದೆ ಬರುವುದ.
ಮೈಕೈ ನೋವು ಕಡಿಮೆಯಾಗುವುದು
ಬಿಸಿ ನೀರಿನಲ್ಲಿ ಸ್ನಾನ ಮಾಡುವುದರಿಂದ ಮೈಕೈ ನೋವು ಕಡಿಮೆಯಾಗುವುದು.
ಬಿಸಿ ನೀರಿನಲ್ಲಿ ಸ್ನಾನ ಮಾಡಿದರೂ ಮೈ ತಂಪಾಗುವುದು
ಬೇಸಿಗೆಯಲ್ಲಿ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿದರೆ ತಣ್ಣೀರಿನಲ್ಲಿ ಸ್ನಾನ ಮಾಡಿದ್ದಕ್ಕಿಂತಲೂ ತುಂಬಾ ಹಿತ ಅನಿಸುವುದು.
ಮುಟ್ಟಿನ ಸಮಯದಲ್ಲಿ ಬಿಸಿ ನೀರಿನ ಸ್ನಾನ ಒಳ್ಳೆಯದು
ಮುಟ್ಟಿನ ಸಮಯದಲ್ಲಿ ನೋವು, ಸುಸ್ತು ಕಡಿಮೆ ಮಾಡಲು ಬಿಸಿ ನೀರಿನ ಸ್ನಾನ ಒಳ್ಳೆಯದು. ಬಿದಿ ನೀರಿನ ಸ್ನಾನ ನರಗಳಲ್ಲಿ ಉರಿಯೂತ ಕಡಿಮೆ ಮಾಡಲು ಸಹಕಾರಿ.
ಮೈಗ್ರೇನ್ ಸಮಸ್ಯೆ ತಡೆಗಟ್ಟುತ್ತದೆ
ಮೈಗ್ರೇನ್ ಸಮಸ್ಯೆ ಇರುವವರು ಬಿಸಿ ನೀರಿನ ಸ್ನಾನ ಮಾಡುವುದು ಒಳ್ಳೆಯದು, ಇದರಿಂದ ಮೂಗು ಕಟ್ಟುವುದು ತಡೆಗಟ್ಟಿ ಮೈಗ್ರೇನ್ ತಡೆಗಟ್ಟಬಹುದು. ತಲೆನೋವು ಕಡಿಮೆ ಮಾಡುವುದು.
ರಕ್ತ ಸಂಚಾರ ಚೆನ್ನಾಗಿ ಆಗುವುದು
ಬಿಸಿ ನೀರಿನಲ್ಲಿ ಸ್ನಾನ ಮಾಡಿದರೆ ರಕ್ತ ಸಂಚಾರ ಚೆನ್ನಾಗಿಗುವುದು. ಒಂದು ಟಬ್‌ನಲ್ಲಿ ಉಗುರು ಬೆಚ್ಚಗಿನ ನೀರು ತುಂಬಿ ಅದರಲ್ಲಿ ಕುತ್ತಿಗೆಯವರೆಗೆ ನೀರಿನಲ್ಲಿ ಮುಳುಗಿಸಿ ಕೂತರೆ ದೇಹದಲ್ಲಿ ರಕ್ತ ಸಂಚಲ ಚೆನ್ನಾಗಿ ನಡೆಯುತ್ತದೆ, ಇದರಿಂದ ಹೃದಯದ ಆರೋಗ್ಯಕ್ಕೆ ಒಳ್ಳೆಯದು.
ತಣ್ಣೀರಿನಲ್ಲಿ ಸ್ನಾನ
ಬೇಸಿಗೆಯಲ್ಲಿ ತಣ್ಣೀರ ಸ್ನಾನ ಒಳ್ಳೆಯದು, ಇದರಿಂದ ಹೀಟ್ ಸ್ಟ್ರೋಕ್ ತಡೆಗಟ್ಟಬಹುದು.
ಆದರೆ ಮೈ ಕೈ ನೋವು , ಮೈಗ್ರೇನ್ ತಲೆನೋವು ದೂರಾಗಲು, ತುಂಬಾ ರಿಲ್ಯಾಕ್ಸ್ ಅನಿಸಲು, ಬೇಗನೆ ನಿದ್ದೆ ಬರಲು ಬಿಸಿ ನೀರಿನ ಸ್ನಾನ ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

