Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2023 Health tips: ಕೋವಿಡ್ ನಂತರ ಹೃದಯಾಘಾತ ಹೆಚ್ಚಳ, ಈ ರೀತಿ ಎಚ್ಚರವಹಿಸಿದ್ರೆ ಅಪಘಾತ ತಪ್ಪಿಸಬಹುದು
ಕೋವಿಡ್ ದಾಳಿ 2020ರಲ್ಲಿ ಆರಂಭವಾಗಿ ಎರಡು ವರ್ಷ ಜನರನ್ನು ಬಿಟ್ಟೂ ಬಿಡದಂತೆ ಕಾಡಿತ್ತು. ಆದರೆ ಈಗಷ್ಟೇ ಜನ ಕೋವಿಡ್‌ನಿಂದ ಸ್ವಲ್ಪ ಮುಕ್ತಿ ಪಡೆದು ಉಸಿರಾಡಲು ಆರಂಭಿಸಿದ್ದಾರೆ. ಆದರೆ ದಿನೇ ಹೆಚ್ಚುತ್ತಿರುವ ಹೃದಯಾಘಾತದ ಪ್ರಕರಣಗಳು ಜನರಲ್ಲಿ ಈಗ ಮತ್ತೊಂದು ಹೊಸ ಭೀತಿ ಸೃಷ್ಟಿಸಿದೆ.
ಈ ವರ್ಷ ಎಲ್ಲರ ಗಮನ ಸೆಳೆದ ಮತ್ತೊಂದು ವಿಷಯವೆಂದರೆ ಹೃದಯ ಸಂಬಂಧಿ ಕಾಯಿಲೆಗಳಿಂದ ಅದರಲ್ಲೂ ಹೆಚ್ಚಾಗಿ ಯುವಜನತೆಯೇ ಈ ಹೃದಯಾಘಾತಕ್ಕೆ ಸಾವನ್ನಪ್ಪುತ್ತಿರುವುದು ಎಲ್ಲರನ್ನೂ ಆತಂಕಕ್ಕೆ ದೂಡಿದೆ.

1. ಯಾರನ್ನೂ ಬಿಡದ ಹೃದಯಾಘಾತದ ಭಯ
ಸಾಮಾನ್ಯ ವ್ಯಕ್ತಿಯಿಂದ ಹಿಡಿದು ದೊಡ್ಡ ದೊಡ್ಡ ಸೆಲೆಬ್ರಿಟಿಯಿಂದ ಯಾರನ್ನೂ ಬಿಡದೆ ಹೃದಯಾಘಾತ ಸಾಕಷ್ಟು ಪ್ರಾಣವನ್ನು ಪಡೆದಿದೆ. ಎಲ್ಲರಲ್ಲೂ ಹೃದಯಾಘಾತದ ಭೀತಿ ಹೆಚ್ಚಿಸಿದೆ. ಕನ್ನಡದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಸೇರಿಂದತೆ, ಸಚಿವ ಉಮೇಶ್ ಕತ್ತಿ, ಖ್ಯಾತ ಆರ್‌ಜೆ ರಚನಾ, ಹಾಸ್ಯನಟ ರಾಜು ಶ್ರೀವಾಸ್ತವ, ಕಿರುತೆರೆ ನಟ ಸಿದ್ಧಾಂತ ವೀರ್ ಸೂರ್ಯವಂಶಿ ಜಿಮ್‌ನಲ್ಲಿ ವರ್ಕೌಟ್ ಮಾಡುವಾಗ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಒಳಗಾಗಿ ಜಗತ್ತಿಗೆ ವಿದಾಯ ಹೇಳಿದರು. ಅಷ್ಟೇ ಅಲ್ಲ, ಈ ವರ್ಷದ ಆರಂಭದಲ್ಲಿ ಖ್ಯಾತ ಗಾಯಕ ಕೆಕೆ, ನಟ ದೀಪೇಶ್ ಭಾನ್, ಟಿಕ್‌ಟಾಕ್ ತಾರೆ ಮತ್ತು ನಾಯಕಿ ಸೋನಾಲಿ ಫೋಗಟ್ ಸೇರಿದಂತೆ ಅನೇಕ ಕಲಾವಿದರು ಈ ಕಾರಣಕ್ಕಾಗಿ ಪ್ರಾಣ ಕಳೆದುಕೊಂಡಿದ್ದಾರೆ.

2. ನಿಮಿಷಗಳಲ್ಲಿ ಪ್ರಾಣ ಕಳೆದುಕೊಂಡ ಜನರು
ಇಷ್ಟೇ ಅಲ್ಲ, ಕಳೆದ ಹಲವು ದಿನಗಳಿಂದ ಇಂತಹ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿದ್ದು, ನಿಮಿಷದ ಹಿಂದೆ ತುಂಬಾ ಆರೋಗ್ಯವಾಗಿದ್ದವರು ಹಠಾತ್ ಹೃದಯಾಘಾತ ಅಥವಾ ಹೃದಯ ಸ್ತಂಭನಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಇನ್ನು ಕೆಲವು ಪ್ರಕರಣಗಳಲ್ಲಿ ಬಹಳ ಚಿಕ್ಕ ವಯಸ್ಸಿಗೇ ಹೃದಯಾಘಾತ ಅಥವಾ ಹೃದಯ ಸ್ತಂಭನದಿಂದ ಅಸುನೀಗಿಸದ ಸುದ್ದಿಗಳನ್ನು ಸಹ ಕೇಳುತ್ತಿದ್ದೇವೆ. ಇಂಥಾ ಪ್ರಕರಣಗಳು ನಿರಂತರವಾಗಿ ಕೇಳುತ್ತಿರುವ ಜನರಲ್ಲಿ ಭಯ ಆರಂಭವಾಗಿದೆ, ತಮ್ಮ ಆರೋಗ್ಯದ ಬಗ್ಗೆ ಬಹಳ ಜಾಗರೂಕರಾಗಿರುತ್ತಿದ್ದಾರೆ.

3. ಮುನ್ನೆಚ್ಚರಿಕೆಗಳು
ಈ ಹಿನ್ನೆಲೆ ಹೃದಯಾಘಾತದಂಥ ಅಪಘಾತದ ಹೆಚ್ಚಳಕ್ಕೆ ಕಾರಣ ಮತ್ತು ಅದನ್ನು ತಪ್ಪಿಸಲು ವಹಿಸಬೇಕಾದ ಮುನ್ನೆಚ್ಚರಿಕೆಗಳೇನು ಮುಂದೆ ನೋಡೋಣ:
ಹಠಾತ್ ಹೃದಯ ಸ್ತಂಭನ ಮತ್ತು ತೀವ್ರ ಹೃದಯಾಘಾತದ ಹೆಚ್ಚಳಕ್ಕೆ ಕಾರಣವೆಂದರೆ ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಧೂಮಪಾನ, ಬೊಜ್ಜು ಮತ್ತು ಒತ್ತಡದಂತಹ ಸಮಸ್ಯೆಗಳು. ಇದೆಲ್ಲದರ ಹೊರತಾಗಿ, ಇಂಥಾ ಜನರು ಸಹ ಹೃದಯಾಘಾತ ಅಥವಾ ಹೃದಯ ಸ್ತಂಭನದ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ:
* ನೀವು ಮಧುಮೇಹ ರೋಗಿಯಾಗಿದ್ದರೆ ಮತ್ತು ಇನ್ಸುಲಿನ್ ತೆಗೆದುಕೊಳ್ಳುತ್ತಿದ್ದರೆ.
* ನಿಮ್ಮ ಪ್ರೋಟೀನ್ ಮಟ್ಟವು ಹೆಚ್ಚಿದ್ದರೆ, ನೀವು ಅಪಾಯದಲ್ಲಿದ್ದೀರಿ ಎಂಧರ್ಥ.
* ಕೆಟ್ಟ ಕೊಲೆಸ್ಟ್ರಾಲ್‌ನ ಹೆಚ್ಚಳದಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ಸಹ ಎದುರಿಸಬಹುದು.
* ದೇಹದಲ್ಲಿನ ವಿಟಮಿನ್ ಡಿ ಕೊರತೆಯು ನಿಮಗೆ ಅಪಾಯಕಾರಿ.
* ನಿಮ್ಮ ತೂಕವು ಸಾಕಷ್ಟು ಹೆಚ್ಚಿದ್ದರೆ, ನೀವು ಹೆಚ್ಚಿನ ಅಪಾಯದಲ್ಲಿದ್ದೀರಿ.
* ಫ್ಯಾಟಿ ಲಿವರ್ ಸಮಸ್ಯೆಯಿಂದ ಬಳಲುತ್ತಿರುವವರಿಗೂ ಈ ಸಮಸ್ಯೆ ಬರುವ ಸಾಧ್ಯತೆ ಹೆಚ್ಚು.

4. ಹೃದಯಾಘಾತ ಅಥವಾ ಹೃದಯ ಸ್ತಂಭನವನ್ನು ತಪ್ಪಿಸಲು ಇದನ್ನು ಅನುಸರಿಸಿ
* ಫಿಟ್ ಆಗಿರಲು, ನೀವು ಸಕ್ರಿಯವಾಗಿರುವುದು ಮುಖ್ಯ. ದೇಹದ ಚಟುವಟಿಕೆಯನ್ನು ಕಾಪಾಡಿಕೊಳ್ಳಲು ನೀವು ಯೋಗ ಅಥವಾ ವ್ಯಾಯಾಮ ಇತ್ಯಾದಿಗಳನ್ನು ಮಾಡಬಹುದು.
* ಧಾವಂತದ ಬದುಕಿನಲ್ಲಿ ಆರೋಗ್ಯಕರವಾಗಿರಲು ಉತ್ತಮ ಆಹಾರ ಕ್ರಮವನ್ನು ಹೊಂದುವುದು ಬಹಳ ಮುಖ್ಯ, ಆದ್ದರಿಂದ ನಿಮ್ಮ ಆಹಾರದಲ್ಲಿ ಹಣ್ಣುಗಳು, ತರಕಾರಿ, ಧಾನ್ಯಗಳು ಇತ್ಯಾದಿಗಳನ್ನು ಸೇರಿಸಿ.
* ಅಧಿಕ ತೂಕ ಹೊಂದಿರುವ ಜನರು ಹೃದಯ ಸಂಬಂಧಿ ಕಾಯಿಲೆಗಳಿಗೆ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಆದ್ದರಿಂದ ನಿಮ್ಮ ತೂಕವನ್ನು ನಿಯಂತ್ರಿಸಲು ಮತ್ತು ಅತಿಯಾಗಿ ತಿನ್ನುವುದನ್ನು ತಡೆಯಲು ಪ್ರಯತ್ನಿಸುವುದು ಬಹಳ ಮುಖ್ಯ.
* ನಿಮ್ಮ ಕೆಟ್ಟ ಜೀವನಶೈಲಿಯಲ್ಲಿ ನೀವು ಆರೋಗ್ಯಕರವಾಗಿರಲು ಬಯಸಿದರೆ, ಸಮತೋಲಿತ ಮತ್ತು ಆರೋಗ್ಯಕರ ಆಹಾರಕ್ಕೆ ಆದ್ಯತೆ ನೀಡಿ.
* ನೀವು ಧೂಮಪಾನ ಮತ್ತು ಮದ್ಯದಂತಹ ಕೆಟ್ಟ ಅಭ್ಯಾಸಗಳಿಂದ ದೂರವಿರುವುದು ಮುಖ್ಯ.
* ಮಾನಸಿಕ ಒತ್ತಡವು ಹೃದಯ ಸ್ತಂಭನದ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಕೆಲಸದ ಒತ್ತಡ ಮತ್ತು ನಿಮ್ಮ ವೈಯಕ್ತಿಕ ಜೀವನವು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡದಿರುವುದು ಬಹಳ ಮುಖ್ಯ.



Click it and Unblock the Notifications