Latest Updates
-
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ರಾಜ ಪರ್ಬ 2026: ಮಹಿಳೆಯರಿಗೆ ವಿಶ್ರಾಂತಿ ನೀಡುವ ಈ ಹಬ್ಬದ ಆಚರಣೆ ಮತ್ತು ವಿಶೇಷತೆಗಳೇನು? -
ದೆಹಲಿ ಮಾಲಿನ್ಯದ ಆತಂಕ: ನಿಮ್ಮ ಮನೆಯನ್ನು ವಿಷಕಾರಿ ಗಾಳಿಯಿಂದ ರಕ್ಷಿಸಲು ಈ ಸರಳ ಕ್ರಮಗಳನ್ನು ಪಾಲಿಸಿ -
ಖರ್ಜೂರದಲ್ಲಿ ಹುಳುಗಳ ಆತಂಕ: ಆನ್ಲೈನ್ನಲ್ಲಿ ಆರ್ಡರ್ ಮಾಡುವ ಮುನ್ನ ಈ ತಪ್ಪು ಮಾಡಬೇಡಿ! -
ಸ್ಪ್ಯಾನಿಷ್ ಗ್ರ್ಯಾಂಡ್ ಪ್ರಿಕ್ಸ್ 2026: ಬಾರ್ಸಿಲೋನಾದಲ್ಲಿ ಇಂದು ಹೈ-ವೋಲ್ಟೇಜ್ ರೇಸ್, ಮಿಸ್ ಮಾಡ್ಬೇಡಿ!
ಕೋವಿಡ್ 19ನಿಂದ ಗುಣಮುಖರಾದವರು ಯಾವಾಗ ಲಸಿಕೆ ಪಡೆಯಬಹುದು?
ಕೊರೊನಾ ಲಸಿಕೆ ಎನ್ನುವುದು ಜೀವ ರಕ್ಷಕವಾಗಿದೆ. ಕೊರೊನಾ ಲಸಿಕೆ ಪಡೆದರೆ ಕೋವಿಡ್ 19 ಬರುವುದಿಲ್ಲ ಅಂತಲ್ಲ, ಕೊರೊನಾ ಲಸಿಕೆ ಬಳಿಕ ಕೆಲವರಿಗೆ ಕೊರೊನಾ ಸೋಂಕು ಬಂದಿದೆ. ಅಂಕಿ ಅಂಶದ ಪ್ರಕಾರ ಕೊರೊನಾ ಲಸಿಕೆ ಎರಡು ಡೋಸ್ ಪಡೆದವರಲ್ಲಿ ಕೊವಾಕ್ಸಿನ್ ಲಸಿಕೆ ಪಡೆದವರಲ್ಲಿ ಶೇ.0.4ರಷ್ಟು, ಕೊವಿಶೀಲ್ಡ್ ಲಸಿಕೆ ಪಡೆದವರಲ್ಲಿ ಶೇ0.03 ಜನರಿಗೆ ಸೋಂಕು ಕಂಡು ಬಂದಿದೆ. ಆದರೆ ಕೊರೊನಾ ಲಸಿಕೆ ಪಡೆದವರು ಕೊರೊನಾ ಸೋಂಕಿನಿಂದ ಬೇಗನೆ ಚೇತರಿಸಿಕೊಳ್ಳುತ್ತಿದ್ದಾರೆ ಎಂಬುವುದು ಸಾಬೀತಾಗಿದೆ. ಈ ಕಾರಣದಿಂದಾಗಿ ಕೊರೊನಾ ಲಸಿಕೆ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಾಗಿದೆ.
ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪಡೆಯಲು ಅನುಮತಿ ಸಿಕ್ಕಿದೆ. ಆರೋಗ್ಯದ ದೃಷ್ಟಿಯಿಂದ ಲಸಿಕೆಯನ್ನು ಪಡೆಯುವುದು ಸುರಕ್ಷಿತವಾಗಿದೆ, ಆದರೆ ಕೊರೊನಾ ಸೋಂಕಿನಿಂದ ಗುಣಮುಖರಾದವರು ಲಸಿಕೆಯನ್ನು ಯಾವಾಗ ಪಡೆಯಬೇಕು ಎಂಬ ಸಂಶಯ ಅನೇಕರಲ್ಲಿದೆ. ಇದರ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ:

ಕೊರೊನಾದಿಂದ ಗುಣಮುಖರಾದವರು ಏನು ಮಾಡಬೇಕು?
ಸಿಡಿಸಿ (Centers for Disease Control and Prevention)ಯು ಕೊರೊನಾ ಸೋಂಕಿನಿಂದ ಗುಣಮುಖರಾದವರು ತಮ್ಮ ಮೊದಲ ಡೋಸ್ ಪಡೆಯಲು 90 ದಿನಗಳ ಕಾಲ ಕಾಯುವಂತೆ ಸೂಚಿಸಲಾಗಿದೆ. ಬೆಂಗಳೂರಿನ ಪ್ರಸಿದ್ಧ ವೈರಲಾಜಿಸ್ಟ್ ಡಾ. ವಿ. ರವಿಯವರು "ಕೊರೊನಾದಿಂದ ಚೇತರಿಸಿದವರಲ್ಲಿ ನೈಸರ್ಗಿಕವಾಗಿ ರೋಗ ನಿರೋಧಕಶಕ್ತಿ ಹೆಚ್ಚಾಗಿರುತ್ತದೆ, ಈ ರೋಗ ನಿರೋಧಕ ಶಕ್ತಿ ಕೆಲವು ತಿಂಗಳುಗಳವರೆಗೆ ಇರುವುದು, ಈ ಸಮಯದಲ್ಲಿ ಲಸಿಕೆ ಪಡೆದರೆ ಲಸಿಕೆಯ ಪ್ರಯೋಜನ ಸಿಗುವುದಿಲ್ಲ, ಅಲ್ಲದೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಈ ಸಮಯದಲ್ಲಿ ಲಸಿಕೆ ಪಡೆಯುವ ಅಗ್ಯತವೂ ಇರುವುದಿಲ್ಲ" ಎಂದಿದ್ದಾರೆ.
ಕೊರೊನಾದಿಂದ ಗುಣಮುಖರಾದವರಲ್ಲಿ ಕೆಲವು ತಿಂಗಳು ರೋಗ ನಿರೋಧಕ ಶಕ್ತಿ ಇರುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಕೊರೊನಾದಿಂದ ಗುಣಮುಖರಾದವರು 6 ತಿಂಗಳ ಬಳಿಕ ಲಸಿಕೆ ಪಡೆದರೆ ಸಾಕು ಎಂದಿದೆ. ಅಲ್ಲಿಯವರೆಗೆ ದೇಹವು ಕೊರೊನಾ ಸೋಂಕಿನ ವಿರುದ್ಧ ಹೋರಾಡುವ ಸಾಮರ್ಥ್ಯ ಹೊಂದಿರುತ್ತದೆ.

ಕೋವಿಡ್ 19ನಿಂದ ಚೇತರಿಸಿದ ಬಳಿಕ 2ನೇ ಡೋಸ್ ಪಡೆಯುವವರಾದರೆ?
ಕೆಲವರಲ್ಲಿ ಕೋವಿಡ್ 19 ಮೊದಲ ಡೋಸ್ ಪಡೆದ ಬಳಿಕ ಕೊರೊನಾ ಸೋಂಕು ತಗುಲಿ ಗುಣಮುಖರಾಗಿದ್ದಾರೆ. ಅಂಥವರಿಗೆ ಎರಡನೇ ಡೋಸ್ ಯಾವಾಗ ಪಡೆಯಬೇಕು? ನಿಗದಿತ ಸಮಯದಲ್ಲೇ ಪಡೆಯಬಹುದೇ ಎಂಬ ಗೊಂದಲವಿರುತ್ತದೆ.
ಏಕೆಂದರೆ ಮೊದಲ ಡೋಸ್ ಪಡೆದ ಬಳಿಕ 2ನೇ ಡೋಸ್‌ಗೆ 12 ವಾರಗಳ ಅಂತರವಿರುತ್ತದೆ, ಆ ಸಮಯದೊಳಗೆ ಕೊರೊನಾ ಸೋಂಕು ತಗುಲಿ ಚೇತರಿಸಿಕೊಂಡಿದ್ದರೆ ನಿಗದಿತ ಸಮಯದಲ್ಲೇ ತೆಗೆಯಬಹುದೇ ಎಂಬ ಗೊಂದಲವಿರುತ್ತದೆ.
ಇದಕ್ಕೆ ಡಾ. ವಿ ರವಿಯವರು ಕೊರೊನಾದಿಂದ ಗುಣಮುಖರಾಗಿ 8 ವಾರಗಳ ನಂತರ 2ನೇ ಡೋಸ್ ಪಡೆಯಬಹುದು ಎಂದು ತಿಳಿಸಿದ್ದಾರೆ.

ಎರಡನೇ ಡೋಸ್ ಸಮಯಕ್ಕೆ ಸಿಗದೇ ಹೋದರೆ?
ಇದೀಗ ಕೆಲವು ಕಡೆ ಲಸಿಕೆಯ ಅಭಾವ ಉಂಟಾಗಿದೆ. ಮೊದಲ ಡೋಸ್ ಪಡೆದು ಎರಡನೇ ಡೋಸ್ ನಿಗದಿತ ಸಮಯಕ್ಕೆ ಸಿಗದಿದ್ದರೆ ನೀವೇನು ಆತಂಕ ಪಡಬೇಕಾಗಿಲ್ಲ. ಕೊವಾಕ್ಸಿನ್ ಲಸಿಕೆ ಪಡೆದಿದ್ದರೆ 45 ದಿನಗಳ ಬಳಿಕ ಎರಡನೇ ಡೋಸ್ ಪಡೆಯಬಹುದು, ಕೋವಿಶೀಲ್ಡ್ ಪಡೆದಿದ್ದರೆ 12 ವಾರಗಳ ಅಂತರದಲ್ಲಿ ಅಥವಾ 3 ತಿಂಗಳ ನಂತರ ತೆಗೆದುಕೊಳ್ಳಬಹುದು.
ಭಾರತದಲ್ಲಿ ಕೋವಿಶೀಲ್ಡ್ ಅಂತರ ಮತ್ತಷ್ಟು ವಿಸ್ತರಿಸಲಾಗಿದೆ, ಕೋವಿಶೀಲ್ಡ್ ಎರಡನೇ ಡೋಸ್ 6 ತಿಂಗಳ ಒಳಗೆ ಪಡೆದರೂ ಅದರ ಪರಿಣಾಮವಿರುತ್ತದೆ, ಆದ್ದರಿಂದ ಆತಂಕ ಬೇಡ ಎಂದು ತಜ್ಞರು ಹೇಳುತ್ತಿದ್ದಾರೆ.

ಲಸಿಕೆ ಎರಡು ಡೋಸ್‌ನಲ್ಲಿ ತೆಗೆಯಲೇಬೇಕಾ?
ಕೆಲವೊಂದು ತಪ್ಪು ಮಾಹಿತಿ ಕೂಡ ಹರಿದಾಡುತ್ತಿದೆ. ಒಂದು ಡೋಸ್ ಲಸಿಕೆ ಪಡೆದರೆ ಸಾಕು ಎಂದು ಕೆಲವರು ನಂಬಿದ್ದಾರೆ, ಆದರೆ ಅದು ಸರಿಯಲ್ಲ.
ಸಂಶೋಧನೆ ಪ್ರಕಾರ ಮೊದಲ ಡೋಸ್ ಪಡೆದಾಗ ರೋಗ ನಿರೋಧಕ ಶಕ್ತಿ ಹೆಚ್ಚಿಸಿದರೆ, ಅದು ಬಲವಾಗಲು ಎರಡನೇ ಡೋಸ್ ಅಗ್ಯವಾಗಿದೆ.



Click it and Unblock the Notifications