Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗಮನಿಸಿ : ಜಾಸ್ತಿ ಖುಷಿಯಾದರೂ, ಜಾಸ್ತಿ ದುಖಃವಾದರೂ ಸಾವು ಬರಬಹುದು!
ನಿಮಗೊಂದು ಗೊತ್ತಾ? ನಮಗೆ ಜಾಸ್ತಿ ಖುಷಿ ಆದರೂ, ಜಾಸ್ತಿ ದುಖಃವಾದರೂ ಸಾವಿಗೆ ಕಾರಣವಾಗುತ್ತೆ ಎನ್ನುವುದು?. ಅನೇಕರಿಗೆ ಈ ವಿಚಾರ ಗೊತ್ತಿರಲಿಕ್ಕೆ ಇಲ್ಲ. ಹೌದು, ಮನುಷ್ಯನಿಗೆ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಮತ್ತು ಹ್ಯಾಪಿ ಹಾರ್ಟ್ ಸಿಂಡ್ರೋಮ್ ಎಂಬ ಎರಡು ರೀತಿಯ ಸಿಂಡ್ರೋಮ್‌ಗಳಿದೆ. ಈ ಅಪರೂಪದ ಸಿಂಡ್ರೋಮ್ ಅನ್ನು ಜರ್ಮನ್ ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಈ ವಿಜ್ಞಾನಿಗಳು ಹೇಳುವ ಪ್ರಕಾರ ಅತಿಯಾದ ಸಂತೋಷ ಅಥವಾ ಅತಿಯಾದ ದುಃಖವು ಸಾವಿಗೆ ಕಾರಣವಾಗುತ್ತಂತೆ.
ಈ ಲಕ್ಷಣವು ಹೃದಯಾಘಾತವನ್ನೇ ಹೋಲುವ ಆದರೆ ಚೇತರಿಕೆ ಕಾಣುವ ಆರೋಗ್ಯ ಸ್ಥಿತಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಈ ಲಕ್ಷಣ ಟಕೋಟ್ಸುಬೊ ಕಾರ್ಡಿಯೊಮಿಯೊಪತಿ ಅಥವಾ ಒತ್ತಡ ಕಾರ್ಡಿಯೊಮಿಯೊಪತಿ ಎಂದು ಕರೆಯಲಾಗಿದೆ. ಇನ್ನು ಇದನ್ನು ಸುಲಭವಾಗಿ ಹೇಳಬೇಕಂದರೆ . ಯಾವುದೇ ದುಃಖದ ಘಟನೆಯಿಂದಾಗಿ ತೀವ್ರವಾದ ಒತ್ತಡವನ್ನು ಅನುಭವಿಸಿದ ನಂತರ ವ್ಯಕ್ತಿಯು ಸಾಯಬಹುದು ಇದನ್ನು ಬ್ರೋಕನ್ ಹಾರ್ಟ್ ಸಿಂಡ್ರೋಮ್ ಎಂದು ಹೇಳಲಾಗುತ್ತದೆ.
ಇನ್ನು ಅತೀವ ಸಂತೋಷದಿಂದ ವ್ಯಕ್ತಿ ಸಾಯಬಹುದು ಇದನ್ನು ಹ್ಯಾಪಿ ಹಾರ್ಟ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಈ ಎರಡು ರೋಗಲಕ್ಷಣಗಳು ಬಹುತೇಕ ಒಂದೇ ರೀತಿಯ ಫಲಿತಾಂಶವನ್ನು ಹೊಂದಿದೆ. ಈ ರೀತಿಯ ಲಕ್ಷಣ ಮುಖ್ಯವಾಗಿ ವ್ಯಕ್ತಿಯ ಹೃದಯದ ಮೇಲೆ ಪರಿಣಾಮ ಬೀರುತ್ತದೆ

ಬ್ರೋಕನ್ ಹಾರ್ಟ್ ಸಿಂಡ್ರೋಮ್ ಎಂದರೇನು?
ಇದು ನಿಮಗೆ ತೀವ್ರ ತರದ ಬೇಸರ, ನೋವು ಉಂಟಾದಾಗ ಸೃಷ್ಟಿಯಾಗುವ ಒತ್ತಡದಿಂದ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಉಂಟಾಗುತ್ತದೆ. ಬ್ರ್ರೋಕನ್ ಹಾರ್ಟ್ ಸಿಂಡ್ರೋಮ್ ರೋಗಲಕ್ಷಣಗಳು ಒಂದು ರೀತಿಯಲ್ಲಿ ಹೃದಯಾಘಾತವನ್ನೇ ಹೋಲುತ್ತದೆ. ಮೊದಲು ಹೃದಯಾಘಾತಕ್ಕಿಂತ ಭಿನ್ನವಾಗಿ, ಹಠಾತ್ ದೈಹಿಕ ಅಥವಾ ಭಾವನಾತ್ಮಕ ಒತ್ತಡವು ನಿಮ್ಮ ಹೃದಯ ಸ್ನಾಯುವಿನ ದುರ್ಬಲತೆಗೆ ಕಾರಣವಾದಾಗ ಬ್ರೋಕನ್ ಹಾರ್ಟ್ ಸಿಂಡ್ರೋಮ್ ಸಂಭವಿಸುತ್ತದೆ.
ನೀವು ಹೃದಯಾಘಾತದಿಂದ ಬಳಲುತ್ತಿದ್ದೀರಿ ಎಂದು ನಿಮಗೆ ಅನಿಸುತ್ತದೆ. ಉಸಿರಾಟದ ತೊಂದರೆ ಮತ್ತು ಎದೆ ನೋವು ಮುಂತಾದ ಲಕ್ಷಣಗಳು ನಿಮಗೆ ಕಾಡುತ್ತದೆ. ಉದಾಹರಣೆಗೆ ನೀವು ಏಕಾಏಕಿ ಶಾಕಿಂಗ್ ನ್ಯೂಸ್ ಕೇಳಿದರೆ, ಅಪಘಾತ ಆಗುವಾಗ ಉಂಟಾಗುವ ಶಾಕ್, ಹಠಾತ್ ನಿಮ್ಮ ಕಣ್ಣು ಮುಂದೆ ನಿಮಗೆ ನೋವು ತರುವ ಏನಾದರು ಘಟನೆ ನಡೆದರೆ. ಇದು ಬ್ರೋಕನ್ ಹಾರ್ಟ್ ಸಿಂಡ್ರೋಮ್ ಗೆ ಕಾರಣವಾಗಲಿದೆ. ಇದರಿಂದ ಶಾಶ್ವತ ಹೃದಯ ಸಮಸ್ಯೆ ಆಗುವುದಿಲ್ಲ. ಕೆಲವರಿಗೆ ಇದು ಮಾರಕವಾಗಲೂ ಬಹುದು, ಪ್ರಾಣಕ್ಕೆ ಕುತ್ತು ತರಬಹುದು. ಆದರೆ ಅನೇಕರು ಕೂಡಲೇ ಚೇತರಿಕೆ ಹೊಂದಬಹುದು. ಇನ್ನು ಕೆಲವರು ಆಸ್ಪತ್ರೆಗೆ ತೆರಳಿದ ಮೇಲೆ ಚೇತರಿಕೆಯಾಗಬಹುದು. ಅದರ ಪ್ರಭಾವ ಮತ್ತು ವ್ಯಕ್ತಿಯ ಆರೋಗ್ಯದ ಮೇಲೆ ಇದರ ತೀವ್ರತೆ ಉಂಟಾಗುತ್ತದೆ.

ಹ್ಯಾಪಿ ಹಾರ್ಟ್ ಸಿಂಡ್ರೋಮ್ ಎಂದರೇನು?
ಹ್ಯಾಪಿ ಹಾರ್ಟ್ ಸಿಂಡ್ರೋಮ್ ಎಂದರೆ ಅತೀ ಹೆಚ್ಚು ಸಂತೋಷ ಅಥವಾ ಅತೀ ಹೆಚ್ಚು ಖುಷಿ ಉಂಟಾದಾಗ ಉಂಟಾಗುವಂತಹ ಹೃದಯ ಸಂಬಂಧಿ ಸಮಸ್ಯೆಯಾಗಿದೆ. ಇದು ಕೆಲವರಿಗೆ ಸಾವು ತಂದುಕೊಡಬಹುದು. ಕೆಲವರಿಗೆ ಆರೋಗ್ಯದಲ್ಲಿ ಏರುಪೇರಾಗಬಹುದು. ಕೆಲವರು ಮೂರ್ಛೆ ತಪ್ಪಿ ಬಿದ್ದು ಏಳಲುಬಹುದು. ಹೌದು, ಇದು ನೀವು ಗಮನಿಸಿರಬಹುದು.
ಲಾಟರಿಯಲ್ಲಿ ಬಂಪರ್ ಹೊಡೆದಾಗ, ಮದುವೆ ಸಮಯದಲ್ಲಿನ ತೀವ ಖುಷಿಯಿಂದ, ಮಕ್ಕಳು ಅಥವಾ ಮೊಮ್ಮಕಳು ಹುಟ್ಟಿದರು ಎಂದು ಹೇಳುವಾಗ ಹೀಗೆ ಅನೇಕ ಖುಷಿಯ ವಿಚಾರ ಕೇಳುವಾಗ ಈ ರೀತಿ ಹ್ಯಾಪಿ ಹಾರ್ಟ್ ಸಿಂಡ್ರೋಮ್ ಸಂಭವಿಸಿದಬಹುದು. ಬ್ರೋಕನ್ ಹಾರ್ಟ್ ಸಿಂಡ್ರೋಮ್ ಗೆ ಹೋಲಿಕೆ ಮಾಡಿದರೆ ಹ್ಯಾಪಿ ಹಾರ್ಟ್ ಸಿಂಡ್ರೋಮ್ ಸಂಭವಿಸುವ ಸಂಖ್ಯೆ ಅತೀ ಕಡಿಮೆ.

ಯಾಕಾಗಿ ಈ ಎರಡು ಸಮಸ್ಯೆಗಳು ಸಂಭವಿಸಬಹುದು!
ಹೆಚ್ಚು ಖುಷಿ ಪಟ್ಟರೆ ಅಥವಾ ದುಖಃಪಟ್ಟರೆ ಸಾವು ಸಂಭವಿಸುತ್ತದೆ ಎಂದು ಹೇಳಿದರೆ ನಗುವುದು ಮತ್ತು ಖುಷಿ ಪಡದೆ ಇರದೆ ಕೂರಬೇಡಿ. ಆದರೆ, ಜಾಸ್ತಿ, ಖುಷಿ ಜಾಸ್ತಿ ನೋವನ್ನು ಹೃದಯಕ್ಕೆ ತೆಗೆದುಕೊಳ್ಳಬೇಡಿ. ಹೌದು, ಹೀಗೆ ವಿಪರೀತ ಖುಷಿ, ವಿಪರೀತ ನೋವನ್ನು ಯಾವತ್ತು ಹೃದಯಕ್ಕೆ ತೆಗೆದುಕೊಳ್ಳಬೇಡಿ. ಯಾಕೆಂದರೆ ಇದು ಹೃದಯಕ್ಕೆ ಒತ್ತಡ ನೀಡುತ್ತದೆ. ಹೀಗೆ ಒತ್ತಡದಿಂದ ಹೃದಯಕ್ಕೆ ಸರಬರಾಜು ಆಗುವ ರಕ್ತದಲ್ಲಿ ಅಸಮತೋಲನ ಉಂಟಾಗುತ್ತದೆ. ಈ ರೀತಿ ಆದರೆ ಹೃದ್ರೋಗ ಸಂಭವಿಸುತ್ತದೆ. ಹೆಚ್ಚಿನವರಿಗೆ ಇದರಿಂದ ಸಮಸ್ಯ್ತೆ ಉಂಟಾಗುವುದಿಲ್ಲ. ಆಲ್ ರೆಡಿ ನಿಮಗೆ ಹೃದ್ರೋಗ ಇದ್ದರೆ ಎಚ್ಚರಿಕೆ ವಹಿಸುವುದು ಒಳ್ಳೆಯದು.



Click it and Unblock the Notifications
