Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೊಸ ಬಟ್ಟೆ ಒಗೆಯದೇ ಧರಿಸಿದರೆ ಈ ಸಮಸ್ಯೆ ಎದುರಿಸಬೇಕಾಗಬಹುದು
ಹೊಸ ಬಟ್ಟೆ ಯಾರಿಗೆ ಇಷ್ಟವಿಲ್ಲ? ಅದರಲ್ಲೂ ಹೊಸ ನಮೂನೆಯ ಬಟ್ಟೆಗಳು ಬಂದರೆ ಆದಷ್ಟೂ ಬೇಗನೇ ಇವನ್ನು ತೊಟ್ಟು ಸಂಭ್ರಮಿಸುವ ಅವಕಾಶವನ್ನು ಬಿಡಲು ಯಾರೂ ಸಿದ್ಧರಿರುವುದಿಲ್ಲ. ಆದರೆ ಹೊಸ ಬಟ್ಟೆ ಕೊಂಡ ಬಳಿಕ ಒಗೆಯದೇ ನೇರವಾಗಿ ತೊಟ್ಟುಕೊಂಡರೆ ಕೆಲವಾರು ತೊಂದರೆಗಳು ಎದುರಾಗಬಹುದು. ಇಂದಿನ ಲೇಖನದಲ್ಲಿ ಈ ಬಗ್ಗೆ ಕೆಲವಾರು ಮಾಹಿತಿಗಳನ್ನು ಒದಗಿಸಲಾಗಿದ್ದು ಅಗತ್ಯ ಎಚ್ಚರಿಕೆಯನ್ನೂ ನೀಡಲಾಗಿದೆ.

ಹೊಸ ಬಟ್ಟೆ ಸಾಮಾನ್ಯವಾಗಿ ಸ್ವಚ್ಛ ಸ್ಥಿತಿಯಲ್ಲಿಯೇ ಇರುತ್ತದೆ. ನಯವಾದ ಇಸ್ತ್ರಿ, ಹೊಳಪಿನ ಮೇಲ್ಮೆ, ಗಮನ ಸೆಳೆಯುವ ಪ್ಯಾಕಿಂಗ್ ಇವೆಲ್ಲಾ ಒಗೆಯುವುದೇಕೆ ಎಂಬ ಪ್ರಶ್ನೆಯನ್ನು ಒಡ್ಡಬಹುದು. ಸಾಮಾನ್ಯವಾಗಿ ನಾವು ಹೊಸ ಬಟ್ಟೆಯನ್ನು ಪ್ಯಾಕಿಂಗಿನಿಂದ ಹೊರ ತೆಗೆದ ಬಳಿಕ ಇವುಗಳಿಗೆ ಅಂಟಿಸಿದ್ದ ಬೆಲೆಪಟ್ಟಿ ಹಾಗೂ ಇತರ ಸಾಮಾಗ್ರಿಗಳನ್ನು ನಿವಾರಿಸಿ ತೊಟ್ಟುಬಿಡುತ್ತೇವೆ. ಆದರೆ ವಾಸ್ತವದಲ್ಲಿ ಈ ಅಭ್ಯಾಸದಿಂದ ಕೆಲವಾರು ಚರ್ಮಕ್ಕೆ ಸಂಬಂಧಿಸಿದ ತೊಂದರೆಗಳು ಎದುರಾಗಬಹುದು.
ಇದು ಸಂಭವಿಸುವುದು ಸಹಜ ಮತ್ತು ಪ್ರತಿಯೊಬ್ಬರೂ ಹೊಸ ಬಟ್ಟೆಗಳನ್ನು ಆದಷ್ಟೂ ಬೇಗನೇ ಧರಿಸಲು ಇಷ್ಟಪಡುತ್ತಾರೆ, ಆದರೆ ಮಾರುಕಟ್ಟೆಯಿಂದ ಬಟ್ಟೆಗಳನ್ನು ತಂದ ನಂತರ, ಅವುಗಳನ್ನು ಒಗೆಯದೇ, ಹಾಗೇ ನೇರವಾಗಿ ಧರಿಸುವುದು ಸುರಕ್ಷಿತವಲ್ಲ! ಹೊಸ ಬಟ್ಟೆಗಳನ್ನು ತಂದ ನಂತರ ಅವುಗಳನ್ನು ಒಮ್ಮೆ ಒಗೆಯಬೇಕು, ಈಗ ನೀವು ಹೊಸ ಬಟ್ಟೆಗಳ ಹೊಳಪನ್ನು ಏಕೆ ಹಾಳು ಮಾಡಬೇಕೆಂದು ಯೋಚಿಸುತ್ತಿರಬೇಕು. ಆದರೆ ಹೊಸ ಬಟ್ಟೆಗಳು ಸ್ವಚ್ಛ ವಾಗಿದೆ ಎಂದು ನೀವು ಭಾವಿಸಿದರೆ, ಅದು ಅಲ್ಲ, ಏಕೆಂದರೆ ಬೇರೆ ಯಾರೋ ಈಗಾಗಲೇ ಆ ಬಟ್ಟೆಗಳನ್ನು ಧರಿಸಿ ಪ್ರಯತ್ನಿಸಿರಬಹುದು. ಹೊಸ ಬಟ್ಟೆಗಳನ್ನು ಧರಿಸುವ ಮೊದಲು ಒಗೆಯಬೇಕಾದ ಅಗತ್ಯತೆಗಳನ್ನು ನೋಡೋಣ:

ಹೊಸ ಬಟ್ಟೆಯಲ್ಲಿಯೂ ಸೂಕ್ಷ್ಮಜೀವಿಗಳು ಇರಬಹುದು
ಬಟ್ಟೆಗಳನ್ನು ತಯಾರಿಸಿದಾಗ, ಆ ಬಟ್ಟೆಗಳನ್ನು ಎಲ್ಲಿ ತಯಾರಿಸಲಾಗುತ್ತದೆ ಮತ್ತು ಎಲ್ಲಿ ಸಂಗ್ರಹಿಸಲಾಗುತ್ತದೆ, ಸಾಗಾಣಿಕಾ ಸಮಯದಲ್ಲಿ ಯಾವ ಬಗೆಯ ಸುರಕ್ಷಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು, ಇದನ್ನು ಇಲ್ಲಿ ಬರುವವರೆಗೆ ಮುಟ್ಟಿರುವ ವ್ಯಕ್ತಿಗಳು ನೈರ್ಮಲ್ಯವನ್ನು ಕಾಪಾಡಿಕೊಂಡಿದ್ದರೇ? ಸಂಗ್ರಹಸಿಟ್ಟ ಸ್ಥಳದ ವಾತಾವರಣ ಸುರಕ್ಷಿತವಾಗಿತ್ತೋ ಇದೊಂದೂ ನಮಗೆ ತಿಳಿದಿಲ್ಲ. ಬಟ್ಟೆಗಳನ್ನು ಸಾರಿಗೆಯ ಮೂಲಕ ಬೇರೆ ಸ್ಥಳಕ್ಕೆ ಸಾಗಿಸಲಾಗುತ್ತದೆ ಮತ್ತು ಪ್ಯಾಕಿಂಗ್ ಸಮಯದಲ್ಲಿ ಎಲ್ಲಿಯಾದರೂ ಇಡಬಹುದು. ನೀವು ಖರೀದಿಸುವ ಬಟ್ಟೆಗಳು ನಿಮಗೆ ಗೋಚರಿಸದಿದ್ದರೂ ಅತಿ ಸೂಕ್ಷ್ಮಜೀವಿಗಳನ್ನು ಹೊಂದಿರಬಹುದು ಆದರೆ ಬಟ್ಟೆಗಳು ಇವುಗಳ ಇರುವಿಕೆಯನ್ನು ತೋರಗೊಡದೇ ಸ್ವಚ್ಛವಾಗಿಯೇ ಇರಬಹುದು.

ನೀವು ಕೊಳ್ಳುವ ಮುನ್ನ ಬೇರೆ ಯಾರೋ ಈ ಬಟ್ಟೆಗಳನ್ನು ತೊಟ್ಟು ಪ್ರಯತ್ನಿಸಿರಬಹುದು
ಇತ್ತೀಚಿನ ದಿನಗಳಲ್ಲಿ, ಬಟ್ಟೆ ಅಂಗಡಿಗಳಲ್ಲಿ, ಪ್ರತಿಯೊಬ್ಬರೂ ಖರೀದಿಸುವ ಮೊದಲು ಬಟ್ಟೆಗಳನ್ನು ತೊಟ್ಟು ತಾವು ಹೇಗೆ ಕಾಣಿಸಿಕೊಳ್ಳುತ್ತೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಯತ್ನಿಸುತ್ತಾರೆ. ಅಲ್ಲದೆ, ಬಟ್ಟೆಗಳು ತಮಗೆ ಒಪ್ಪುತ್ತವೆಯೋ ಹಾಗೂ ಶರೀರದ ಆಕಾರಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತವೆಯೋ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದು ಸರಿಯಾದ ಕ್ರಮವೂ ಹೌದು. ಆದರೆ ನಿಮಗೂ ಮುನ್ನ ಈ ಬಟ್ಟೆಗಳನ್ನು ಧರಿಸಿ ಪ್ರಯತ್ನಿಸಿದ್ದ ವ್ಯಕ್ತಿಗೆ ಕೆಲವು ರೀತಿಯ ಚರ್ಮದ ಸೋಂಕು ಇದ್ದರೆ ಅಥವಾ ಬೆವರಿನ ಮೂಲಕ ಆ ವ್ಯಕ್ತಿಯ ದೇಹದಲ್ಲಿದ್ದ ರೋಗಾಣುಗಳು ಈ ಬಟ್ಟೆಗಳಿಗೆ ಅಂಟಿಕೊಂಡಿದ್ದರೆ, ಈ ಬಟ್ಟೆಗಳನ್ನು ಹಾಗೇ ಧರಿಸುವ ಮೂಲಕ ಈ ರೋಗಾಣುಗಳನ್ನು ನಾವೇ ನಮ್ಮ ದೇಹಕ್ಕೆ ಮುಕ್ತ ಆಹ್ವಾನ ನೀಡಿದಂತೆ. ಒಗೆಯದೇ ಹಾಗೇ ಹೊಸ ಬಟ್ಟೆ ಧರಿಸುವುದರಿಂದ ಚರ್ಮದ ತೊಂದರೆ ಉಂಟಾಗಬಹುದು. ಆದ್ದರಿಂದ ಯಾವುದೇ ಅನಪೇಕ್ಷಿತ ಸೋಂಕು ಅಥವಾ ರೋಗಾಣುಗಳ ಇರುವಿಕೆಯನ್ನು ಕಡ್ಡಾಯವಾಗಿ ಇಲ್ಲಗಾಗಿಸಲು ನೀವು ಆ ಬಟ್ಟೆಯನ್ನು ಒಂದು ಬಾರಿ ಚೆನ್ನಾಗಿ ಒಗೆಯಬೇಕು. ಸಾಧ್ಯವಿದ್ದರೆ, ಬಟ್ಟೆಯ ಬಗೆಯನ್ನು ಅನುಸರಿಸಿ ಬಿಸಿನೀರನ್ನೇ ಒಗೆಯಲು ಬಳಸಬೇಕು. ಅದರಲ್ಲೂ ಮಕ್ಕಳ ಬಟ್ಟೆಗಳನ್ನಂತೂ ಒಗೆಯದೇ ಪ್ರಯತ್ನಿಸುವುದೂ ಕ್ಷೇಮವಲ್ಲ. ಏಕೆಂದರೆ ಹಿರಿಯರಿಗಿಂತ ಮಕ್ಕಳ ತ್ವಚೆ ಹೆಚ್ಚು ಸೂಕ್ಷ್ಮವಾಗಿರುವ ಕಾರಣ ಸೋಂಕು ಅಥವಾ ಅಲರ್ಜಿ ಎದುರಾಗುವ ಸಂಭವ ಮಕ್ಕಳಿಗೇ ಹೆಚ್ಚು.

ಬಟ್ಟೆಗಳನ್ನು ತಯಾರಿಸುವಾಗ ಬಳಸುವ ರಾಸಾಯನಿಕಗಳು ಉಳಿದುಕೊಂಡಿರಬಹುದು
ಇಂದು ವಸ್ತ್ರೋದ್ಯಮ ಭಾರೀ ಮಟ್ಟದ ಏಳ್ಗೆಯನ್ನು ಕಂಡಿದೆ. ಜಗತ್ತಿನಲ್ಲಿ ತಯಾರಾಗುವ ಬಹುತೇಕ ಎಲ್ಲಾ ಬಟ್ಟೆಗಳೂ ಈಗ ಸಿದ್ಧ ಉಡುಪುಗಳ ರೂಪದಲ್ಲಿ ನಮ್ಮ ನಗರಗಳಲ್ಲಿ ಲಭ್ಯವಾಗುತ್ತಿವೆ. ಇವುಗಳನ್ನು ತಯಾರಿಸುವಾಗ ಹಲವಾರು ಬಗೆಯ ಬಣ್ಣಗಳು ಅಥವಾ ಡೈ ಗಳು, ಕೃತಕ ನೂಲು, ಪಿಷ್ಟಕಾರಕ, ಹಾಗೂ ಇತರ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಹೊಳಪು ನೀಡಲು ರಾಸಾಯನಿಕಗಳನ್ನು ಬಳಸಬಹುದು. ಇದೇ ತರಹ ಮುದ್ರಣ (ಪ್ರಿಂಟ್) ಹಾಕುವಾಗ ಬೇರೆಯೇ ರಾಸಾಯನಿಕಗಳು ಮತ್ತು ಬಣ್ಣಗಳನ್ನು ಬಳಸಬಹುದು. ಆದರೆ ಸಿದ್ಧ ಉಡುಪು ತಯಾರಾದ ಬಳಿಕ ಇವನ್ನು ತಯಾರಕರಂತೂ ಒಗೆದು ಕೊಡುವುದಿಲ್ಲ, ಬದಲಿಗೆ ಹಾಗೇ ಚೆನ್ನಾಗಿ ಹಬೆಯಲ್ಲಿ ಕಡಕ್ ಇಸ್ತ್ರಿ ಮಾಡಿ ಸುಂದರವಾಗಿ ಪ್ಯಾಕ್ ಮಾಡಿ ಕೊಡುತ್ತಾರೆ. ಹಾಗಾಗಿ, ಇವನ್ನು ಮೊದಲ ಬಾರಿ ತೊಡುವಾಗ ಈ ರಾಸಾಯನಿಕಗಳ ಸಡಿಲವಾಗಿರುವ ಕಣಗಳು ನೇರವಾಗಿ ಚರ್ಮಕ್ಕೆ ಅಂಟಿಕೊಳ್ಳುವ ಸಾಧ್ಯತೆ ಅತಿ ಹೆಚ್ಚಾಗಿರುತ್ತದೆ. ಒಂದು ವೇಳೆ ಒಗೆಯುವ ವೇಳೆ ಬಣ್ಣ ಬಿಟ್ಟಿದೆಯಾದರೆ ಈ ಬಟ್ಟೆ ಇನ್ನೂ ಅಪಾಯಕಾರಿ! ಆದ್ದರಿಂದ ಬಟ್ಟೆ ಎಷ್ಟೇ ಸ್ವಚ್ಛವಾಗಿರುವಂತೆ ಕಂಡರೂ ಸರಿ, ಒಮ್ಮೆ ಒಗೆದು ಇಸ್ತ್ರಿ ಮಾಡದೆ ಸರ್ವಥಾ ತೊಡಬಾರದು. ಅದರಲ್ಲೂ ವಿಶೇಷವಗಿ ಒಳ ಉಡುಪುಗಳನ್ನು ಒಗೆದು ಎರಡೂ ಬದಿಗಳಲ್ಲಿ ಚೆನ್ನಾಗಿ ಇಸ್ತ್ರಿ ಮಾಡಿಯೇ ತೊಡಬೇಕು.

ಹೊಸ ಬಟ್ಟೆಗಳು ತುರಿಕೆ ಮತ್ತು ಉರಿತ ಉಂಟುಮಾಡಬಹುದು
ನೀವು ಹೊಸ ಬಟ್ಟೆಗಳನ್ನು ಧರಿಸಿದಾಗ, ಅವು ಉತ್ತಮವಾಗಿ ಕಾಣಿಸಬಹುದು, ಆದರೆ ಈ ಬಟ್ಟೆಗಳು ನಿಮ್ಮ ಬೆವರುವಿಕೆಯನ್ನು ಹೀರಿಕೊಳ್ಳಲಾರವು. ಕಾರಣ ಹೊಸ ಬಟ್ಟೆಯಲ್ಲಿರುವ ಪಿಷ್ಟ (starch). ಇದೇ ಕಾರಣಕ್ಕೆ ಹೊಸಬಟ್ಟೆ ನೀರನ್ನು ಅತಿ ನಿಧಾನವಾಗಿ ಹೀರಿಕೊಳ್ಳುತ್ತದೆ. ಅದೇ ಹಲವಾರು ಬಾರಿ ಒಗೆದು ಹಳೆಯದಾಗಿರುವ ಬಟ್ಟೆ ನೀರನ್ನು ಅತಿ ಶೀಘ್ರವಾಗಿ ಮತ್ತು ಸುಲಭವಾಗಿ ಹೀರಿಕೊಳ್ಳುತ್ತದೆ. ಏಕೆಂದರೆ ಪ್ರತಿ ಬಾರಿ ಒಗೆದಾಗಲೂ ಪಿಷ್ಟದ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಹೊಸ ಬಟ್ಟೆಯಲ್ಲಿ ಗರಿಷ್ಟ ಪ್ರಮಾಣದ ಪಿಷ್ಟ ಇರುವ ಕಾರಣ ಒಮ್ಮೆಯೂ ಒಗೆಯದಿದ್ದರೆ ಈ ಬಟ್ಟೆ ನಿಮ್ಮ ಬೆವರನ್ನು ಹೀರಿಕೊಳ್ಳುವುದು ಅನುಮಾನ! ಹೊಸ ಬನಿಯನ್ ಆದರೂ ಸರಿ. ಹೀಗೆ ಹೀರಿಕೊಳ್ಳಲಾರದ ಬೆವರು ಉಡುಪಿನ ಒಳಭಾಗದಲ್ಲಿ ತೇವದಂತೆ ಅಂಟಿಕೊಂಡಿದ್ದು ಚರ್ಮದ ಹೊರಪದರಕ್ಕೆ ಸತತವಾಗಿ ಉಜ್ಜುವ ಮೂಲಕ ಚರ್ಮದಲ್ಲಿ ಉರಿ, ತುರಿಕೆ ಮತ್ತು ಒಂದು ವೇಳೆ ಬಟ್ಟೆಗೆ ಅಂಟಿಕೊಂಡಿರುವ ಯಾವುದೇ ಕಣ ಅಥವಾ ಧೂಳು ಅಲರ್ಜಿಕಾರಕವಾಗಿದ್ದರೆ ಚರ್ಮದಲ್ಲಿ ದದ್ದುಗಳನ್ನೂ ಉಂಟುಮಾಡುತ್ತದೆ ಮತ್ತು ನಿಮಗೆ ಕೆಲವು ಸಮಸ್ಯೆಗಳನ್ನು ಉಂಟುಮಾಡುತ್ತದೆ. ಬಟ್ಟೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ, ನಿಮ್ಮ ಚರ್ಮವೂ ಸ್ವಚ್ಛವಾಗಿರುತ್ತದೆ ಮತ್ತು ಕಲೆಗಳಿಂದ ಮುಕ್ತವಾಗಿರುತ್ತದೆ, ಆದ್ದರಿಂದ ಬಟ್ಟೆಗಳನ್ನು ನೇರವಾಗಿ ಧರಿಸುವ ಬದಲು, ನೀವು ಒಮ್ಮೆ ಅವುಗಳನ್ನು ಒಗೆಯುವುದು ಅವಶ್ಯ.
ಈ ಎಲ್ಲಾ ಕಾರಣಗಳನ್ನು ತಿಳಿದ ನಂತರ, ನಿಮ್ಮ ಹೊಸ ಬಟ್ಟೆಗಳನ್ನು ನೇರವಾಗಿ ಧರಿಸುವ ಬದಲು ನೀವು ಒಮ್ಮೆ ಒಗೆದು ಇಸ್ತ್ರಿ ಮಾಡಿಯೇ ತೊಟ್ಟುಕೊಳ್ಳುತ್ತೀರಲ್ಲವೇ?



Click it and Unblock the Notifications