For Quick Alerts
ALLOW NOTIFICATIONS  
For Daily Alerts

ವಿಟಮಿನ್ ಡಿ ಹೆಚ್ಚು ತೆಗೆದುಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ

|

ದೇಹದ ಆರೋಗ್ಯಕ್ಕೆ ಪ್ರತಿಯೊಂದು ವಿಟಮಿನ್ ಅವಶ್ಯಕ. ವಿಟಮಿನ್‌ಗಳಲ್ಲಿ ಯಾವುದಾದರೂ ಒಂದು ವಿಟಮಿನ್ ಕೊರತೆ ಉಂಟಾದರೂ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ವಿಟಮಿನ್ ಡಿ ಎನ್ನುವುದು ನಮ್ಮ ದೇಹಕ್ಕೆ ಸೂರ್ಯನಿಂದ ನೇರವಾಗಿ ದೊರೆಯುತ್ತದೆ. ಆದರೆ ಬದಲಾದ ಜೀವನಶೈಲಿಯಿಂದಾಗಿ ವಿಟಮಿನ್ ಡಿ ಕೊರತೆ ಕೆಲವರಲ್ಲಿ ಕಂಡು ಬರುತ್ತದೆ.

Side Effects Of Having High Doses Of Vitamin D

ಈಗ ಜನರು ವಿವಿಧ ಶಿಫ್ಟ್‌ಗಳಲ್ಲಿ ಕೆಲಸ ಮಾಡುತ್ತಾರೆ, ಕೆಲವರಂತೂ ಸೂರ್ಯೋದಯ, ಸೋರ್ಯಾಸ್ತಮ ನೋಡಿ ಎಷ್ಟೋ ದಿನಗಳಾಗಿರುತ್ತವೆ. ಅಫೀಸ್‌ನೊಳಗೆ ಎಸಿ ರೂಂನಲ್ಲಿ ಕೆಲಸ ಮಾಡುತ್ತಾರೆ. ಸೂರ್ಯನ ಬಿಸಿಲಿಗೆ ಓಡಾಡುವುದೇ ಕಡಿಮೆ, ಅಂಥವರಲ್ಲಿ ವಿಟಮಿನ್ ಡಿ ಕೊರತೆ ಉಂಟಾಗುತ್ತದೆ.

ವಿಟಮಿನ್‌ ಡಿ ಕೊರತೆ ಉಂಟಾದಾಗ ದೇಹಕ್ಕೆ ವಿಟಮಿನ್ ಡಿಗಾಗಿ ಸಪ್ಲಿಮೆಂಟ್‌ ತೆಗೆದುಕೊಳ್ಳುತ್ತಾರೆ, ವಿಟಮಿನ್ ಡಿ ಸಪ್ಲಿಮೆಂಟ್‌ ಹೆಚ್ಚಾದರೆ ದೇಹದ ಆರೋಗ್ಯದ ಮೇಲೆ ಬೀರುವ ಅಡ್ಡ ಪರಿಣಾಮಗಳೇನು ಎಂದು ಈ ಲೇಖನದಲ್ಲಿ ಹೇಳಲಾಗಿದೆ:

1. ಕೈಪರ್‌ಕಲಾಮಿಯಾ

1. ಕೈಪರ್‌ಕಲಾಮಿಯಾ

ವಿಟಮನ್‌ ಡಿ ಹೆಚ್ಚಾರೆ ಹೈಪರ್‌ಕಲಾಮಿಯಾ ಅಂದರೆ ರಕ್ತದಲ್ಲಿ ಕ್ಯಾಲ್ಸಿಯಂ ಪ್ರಮಾಣ ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಾಗುವುದು. ದೇಹದಲ್ಲಿ ವಿಟಮಿನ್ ಡಿ ಹೆಚ್ಚಾದರೆ ದೇಹ ಹೆಚ್ಚಾಗಿ ಕ್ಯಾಲ್ಸಿಯಂ ಹೀರಿಕೊಳ್ಳುತ್ತದೆ. ಇದರಿಂದಾಗಿ ಹೊಟ್ಟೆ ಹಾಳಾಗುತ್ತದೆ ಹಾಗೂ ಅಧಿಕ ರಕ್ತದೊತ್ತಡ ಉಂಟಾಗುವುದು.

ಇದರಿಂದಾಗಿ ಎದೆನೋವು, ಅಧಿಕ ರಕ್ತದೊತ್ತಡ, ಮಾನಸಿಕ ಒತ್ತಡ, ಕಿರಿಕಿರಿ ಉಂಟಾಗುವುದು.

2. ಕಿಡ್ನಿಗೆ ತೊಂದರೆ

2. ಕಿಡ್ನಿಗೆ ತೊಂದರೆ

ವಿಟಮಿನ್ ಡಿ ಹೆಚ್ಚಾದರೆ ಕಿಡ್ನಿ ತೊಂದರೆ ಉಂಟಾಗುತ್ತದೆ, ಏಕೆಂದರೆ ವಿಟಮಿನ್ ಡಿ ಹೆಚ್ಚಾದರೆ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಾಗುವುದು, ಇದರಿಂದಾಗಿ ಕಿಡ್ನಿ ಹಾಳಾಗುತ್ತದೆ.

ಈ ರೀತಿ ಉಂಟಾದಾಗ ಜ್ವರ, ವಾಂತಿ, ತಲೆಸುತ್ತು, ತುಂಬಾ ಹೊಟ್ಟೆನೋವವು ಉಂಟಾಗುವುದು.

3. ಮೂಳೆಗಳ ಆರೋಗ್ಯ ಕಡಿಮೆಯಾಗುತ್ತದೆ

3. ಮೂಳೆಗಳ ಆರೋಗ್ಯ ಕಡಿಮೆಯಾಗುತ್ತದೆ

ವಿಟಮಿನ್ ಡಿ ಕೊರತೆ ಉಂಟಾದರೆ ಮೂಳೆ ಮುರಿತ, ಮೂಳೆ ಸವಿತ ಉಂಟಾಗುವುದು. ವಿಟಮಿನ್ ಡಿ ಹೆಚ್ಚಾದರೆ ದೇಹದ ರಕ್ತದಲ್ಲಿ ವಿಟಮನ್ ಕೆ2 ಕಡಿಮೆಯಾಗುತ್ತದೆ. ಕೆ2ನ ಪ್ರಮುಖ ಕೆಲಸವೆಂದರೆ ಮೂಳೆಯಲ್ಲಿ ಕ್ಯಾಲ್ಸಿಯಂ ಸಂಗ್ರಹಿಸುವುದು, ವಿಟಮಿನ್ ಡಿ ವಿಟಮಿನ್ ಕೆ2 ಚಟುವಟಿಕೆಯನ್ನು ಕಡಿಮೆ ಮಾಡುತ್ತದೆ.

ಹೀಗೆ ಉಂಟಾದರೆ ತುಂಬಾ ಬೆನ್ನುನೋವು, ಸಂಧಿನೋವು, ಮೂಳೆಯಲ್ಲಿ ಬಿರುಕು ಮುಂತಾದ ತೊಂದರೆ ಉಂಟಾಗುವುದು.

4. ಹೃದಯ ಬಡಿತದಲ್ಲಿ ವ್ಯತ್ಯಾಸ

4. ಹೃದಯ ಬಡಿತದಲ್ಲಿ ವ್ಯತ್ಯಾಸ

ಅತ್ಯಧಿಕ ವಿಟಮಿನ್ ಡಿಯಿಂದ ಹೈಪರ್‌ಕಲಾಮಿಯಾ ಉಂಟಾಗುವುದರಿಂದ ಹೃದಯ ಬಡಿತದಲ್ಲಿ ವ್ಯತ್ಯಾಸ ಉಂಟಾಗುವುದು. ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಾದರೆ ಇದು ಹೃದಯ ಸಂಬಂಧಿ ಕಾಯಿಲೆಗೆ ಕಾರಣವಾಗುತ್ತದೆ, ಇದರಿಂದಾಗಿ ಹೃದಯಾಘಾತ ಕೂಡ ಉಂಟಾಗಬಹುದು.

ಹೀಗೆ ಉಂಟಾದಾಗ ಹೃದಯಬೇನೆ, ಸುಸ್ತು, ತಲೆಸುತ್ತು ಕಂಡು ಬರುವುದು.

5. ಶ್ವಾಸಕೋಶ ಹಾಳಾಗುತ್ತದೆ

5. ಶ್ವಾಸಕೋಶ ಹಾಳಾಗುತ್ತದೆ

ಅತ್ಯಧಿಕ ವಿಟಮಿನ್ ಡಿಯಿಂದಾಗಿ ಕ್ಯಾಲ್ಸಿಯಂ ಹಾಗೂ ರಂಜಕ ಅಂಶ ಹೆಚ್ಚಾಗಿ ರಕ್ತದಲ್ಲಿ ಚಿಕ್ಕ-ಚಿಕ್ಕ ಕಣಗಳನ್ನು ಉಂಟು ಮಾಡುತ್ತವೆ, ಇದು ಶ್ವಾಸಕೋಶದಲ್ಲಿ ಸಂಗ್ರಹವಾಗಿ ಶ್ವಾಸಕೋಶ ಹಾಳಾಗುವುದು.

ಈ ರೀತಿ ಉಂಟಾದಾಗ ಉಸಿರಾಟದ ತೊಂದರೆ, ಎದೆ ನೋವು ಕಂಡು ಬರುವುದು.

6. ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು

6. ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು

ವಿಟಮಿನ್ ಡಿ ಹೆಚ್ಚಾದರೆ ಕ್ಯಾಲ್ಸಿಯಂ ಪ್ರಮಾಣ ಹೆಚ್ಚುವುದರಿಂದ ಕಿಡ್ನಿ ಆರೋಗ್ಯ ಹಾಳಾಗಿ ಮೂತ್ರ ಸಂಗ್ರಹಿಸುವ ಸಾಮಾರ್ಥ್ಯ ಕಡಿಮೆಯಾಗುವುದು. ಇದರಿಂದಾಗಿ ಮೂತ್ರ ಬಂದಾಗ ತಡೆ ಹಿಡಿಯಲು ಸಾಧ್ಯವಾಗುವುದಿಲ್ಲ, ಅಲ್ಲದೆ ದೇಹದಲ್ಲಿ ನೀರಿನಂಶ ಕೂಡ ಕಡಿಮೆಯಾಗುತ್ತದೆ.

7. ವಾಂತಿ ಮತ್ತು ತಲೆಸುತ್ತು

7. ವಾಂತಿ ಮತ್ತು ತಲೆಸುತ್ತು

ವಿಟಮನ್‌ ಡಿ ಸಪ್ಲಿಮೆಂಟ್‌ ಹೆಚ್ಚಾದರೆ ಮತ್ತೊಂದು ಅಡ್ಡಪರಿಣಾಮವೆಂದರೆ ವಾಂತಿ, ತಲೆಸುತ್ತು ಉಂಟಾಗುವುದು. ಇವೆಲ್ಲಾ ಪ್ರಮುಖವಾಗಿ ದೇಹದಲ್ಲಿ ಕ್ಯಾಲ್ಸಿಯಂ ಅಂಶ ಹೆಚ್ಚಾಗುವುದರಿಂದ ಉಂಟಾಗುತ್ತದೆ.

8. ಹೊಟ್ಟೆ ನೋವು

8. ಹೊಟ್ಟೆ ನೋವು

ವಿಟಮಿನ್ ಡಿನಲ್ಲಿರುವ ಕಶ್ಮಲದಿಂದಾಗಿ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ತುಂಬಾ ಹೊಟ್ಟೆನೋವು ಉಂಟಾಗುವುದು, ಇದರಿಂದ ಅಜೀರ್ಣ ಸಮಸ್ಯೆ, ಮಲಬದ್ಧತೆ, ವಾಂತಿ ಉಂಟಾಗುವುದು.

9. ಮೇಧೋಜೀರಕ ಗ್ರಂಥಿಗೆ ತೊಂದರೆ ಉಂಟಾಗುವುದು

9. ಮೇಧೋಜೀರಕ ಗ್ರಂಥಿಗೆ ತೊಂದರೆ ಉಂಟಾಗುವುದು

ವಿಟಮಿನ್ ಡಿ ಅತ್ಯಧಿಕ ಪ್ರಮಾಣದಲ್ಲಿ ತೆಗೆದುಕೊಳ್ಳುವುದರಿಂದ ಇದರಿಂದ ಮೇಧೋಜೀರಕ ಗ್ರಂಥಿಗೆ ತೊಂದರೆ ಉಂಟಾಗಿ ಉರಿಯೂತ ಉಂಟಾಗುವುದು. ಈ ರೀತಿ ಉಂಟಾದಾಗ ತೂಕ ಇಳಿಕೆ,ಕೆಳಹೊಟ್ಟೆ ನೋವು, ಜ್ವರ ಕಂಡು ಬರುವುದು.

ಇತರ ತೊಂದರೆಗಳೆಂದರೆ ಬಾಯಿ ಒಣಗುವುದು, ಹಸಿವು ಇಲ್ದಿರುವುದು, ಸುಸ್ತು, ಆಗಾಗ ತಲೆನೋವು ಬರುವುದು, ಸ್ನಾಯುಗಳಲ್ಲಿ ನೋವು, ಅಧಿಕ ರಕ್ತದೊತ್ತಡ, ಕಿವಿ ಕೇಳದಿರುವುದು, ಅಲ್ಸರ್, ಕೋಮಾ ಕೂಡ ಉಂಟಾಗಬಹುದು.

ವಿಟಮಿನ್ ಡಿ ಸಪ್ಲಿಮೆಂಟ್‌ ವೈದ್ಯರ ಸೂಚನೆಯಂತೆ ತೆಗೆದುಕೊಳ್ಳಿ.

English summary

Side Effects Of Having High Doses Of Vitamin D

Here are side effects of having high doses of vitamin D, Read on
Story first published: Saturday, March 14, 2020, 14:34 [IST]
X
Desktop Bottom Promotion