Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ನೀಲಿಚಿತ್ರಗಳ ಅತೀ ವೀಕ್ಷಣೆಯು ಈ ಗಂಭೀರ ಸಮಸ್ಯೆಗಳಿಗೆ ಮುನ್ನುಡಿಯಾಗುತ್ತೆ ಎಚ್ಚರ!
ಪ್ರಸ್ತುತ ಕಾಲದಲ್ಲಿ ಜನರು ಇಂಟರ್‌ನೆಟ್‌ಗೆ ವ್ಯಸನಿಯಾಗಿದ್ದು, ಸಂಬಂಧಗಳು ತಮ್ಮ ಮೌಲ್ಯಕಳೆದುಕೊಳ್ಳುತ್ತಿರುವುದು ಸುಳ್ಳಲ್ಲ. ಅದರ ಒಂದು ಫಲಿತಾಂಶವೇ ಅಶ್ಲೀಲ ಅಥವಾ ನೀಲಿ ಚಿತ್ರ ವೀಕ್ಷಣೆ. ಸಂಬಂಧದಲ್ಲಿ ಬಿರುಕು ಮೂಡಿದ ಪರಿಣಾಮ ಅಶ್ಲೀಲ ಸಿನಿಮಾ ನೋಡುವ ಚಟ ಜಾಸ್ತಿಯಾಗುವುದು. ಇದು ಕ್ಷಣಿಕ ಖುಷಿಯನ್ನು ನೀಡಬಹುದು. ಆದರೆ, ಕಾಲಕಳೆದಂತೆ, ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುವುದು. ಆದ್ದರಿಂದ ಅಶ್ಲೀಲ ಚಲನಚಿತ್ರಗಳನ್ನು ನೋಡುವುದರಿಂದ ಉಂಟಾಗುವ ಹಾನಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ವಾಸ್ತವವಾಗಿ, ಈ ಅಭ್ಯಾಸವು ದೈಹಿಕ ಮತ್ತು ಮಾನಸಿಕ ಬೆಳವಣಿಗೆಯನ್ನು ಮತ್ತು ನಿಮ್ಮ ಸಂಬಂಧಗಳನ್ನು ಹಾಳುಮಾಡುತ್ತದೆ. ಈ ಕುರಿತ ಮತ್ತಷ್ಟು ಮಾಹಿತಿ ಈ ಕೆಳಗಿದೆ.
ಸದ್ಯ ನೀಲಿಚಿತ್ರ ಅಥವಾ ಅಶ್ಲೀಲ ಚಲನಚಿತ್ರ ವೀಕ್ಷಣೆ ಒಂದು ಚಟುವಟಿಕೆಯಾಗಿದ್ದರೂ ಸಹ, ಇದನ್ನು ಮಾಡುವುದರಿಂದ ನಿಮ್ಮ ಸಂತೋಷಕ್ಕೆ ನೀವೇ ಧಕ್ಕೆ ಉಂಟು ಮಾಡಿಕೊಳ್ಳುತ್ತಿದ್ದೀರಿ. ಅದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮಾನಸಿಕ ದುರ್ಬಲತೆ:
ಜನರು ಸಿಗರೇಟ್ ಮತ್ತು ಮದ್ಯದ ಚಟಕ್ಕೆ ಹೇಗೆ ವ್ಯಸನಿಯಾಗುತ್ತಾರೋ, ಅದೇ ರೀತಿಯಲ್ಲಿ ಜನರು ನೀಲಿ ಚಿತ್ರ ನೋಡುವ ಚಟಕ್ಕೆ ಒಳಗಾಗುತ್ತಾರೆ. ಇದನ್ನು ಮಾಡುವುದರಿಂದ ಅವರ ಮೆದುಳಿಗೆ ಡೋಪಮೈನ್ ನೇಸಲ್ ರಾಸಾಯನಿಕವನ್ನು ತುಂಬುತ್ತದೆ, ಇದು ಮತ್ತೆ ಮತ್ತೆ ಅಶ್ಲೀಲ ಚಿತ್ರ ವೀಕ್ಷಣೆಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸುತ್ತದೆ.

ಸಂಬಂಧ ಕೆಡಿಸುವುದು:
ಅಶ್ಲೀಲ ಚಲನಚಿತ್ರಗಳನ್ನು ನೋಡುವುದರಿಂದ ನಿಮ್ಮ ವೈವಾಹಿಕ ಸಂಬಂಧ ಹಾಳಾಗುತ್ತದೆ ಎಂದು ಮನಶ್ಶಾಸ್ತ್ರಜ್ಞರು ನಂಬುತ್ತಾರೆ. ಇದು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ದುರ್ಬಲಗೊಳಿಸಿ, ಪತಿ-ಪತ್ನಿ ನಡುವೆ ಮನಸ್ತಾಪವನ್ನು ಹುಟ್ಟುಹಾಕಲು ಕಾರಣವಾಗುವುದು.

ಅಭದ್ರತೆ ಭಾವನೆ ಸೃಷ್ಠಿ:
ಮನುಷ್ಯ ಏಕಾಂತದಲ್ಲಿ ನೀಲಿಚಿತ್ರ ನೋಡುತ್ತಿದ್ದರೂ, ಸಹ ಇಂತಹ ಸಿನಿಮಾಗಳನ್ನು ನೋಡುವವರಲ್ಲಿ ಮುಜುಗರ, ಒಂಟಿತನ ಮತ್ತು ಅಭದ್ರತೆಯ ಭಾವನೆ ಹೆಚ್ಚುತ್ತದೆ. ಜನರಲ್ಲಿ ಉದ್ವಿಗ್ನತೆ ಮತ್ತು ಚಡಪಡಿಕೆ ಸಮಸ್ಯೆ ಉದ್ಭವಿಸುತ್ತದೆ.

ಹಿಂಸೆಯನ್ನು ಉತ್ತೇಜಿಸುವುದು:
ನೀಲಿಚಿತ್ರಗಳು ಸಾಮಾನ್ಯವಾಗಿ ಹಿಂಸೆಯನ್ನು ಉತ್ತೇಜಿಸುತ್ತವೆ. ಜೊತೆಗೆ ಮಹಿಳೆಯರು ಅಶ್ಲೀಲ ಚಲನಚಿತ್ರಗಳನ್ನು ನೋಡುವುದು ಅಪರಾಧವನ್ನು ಉತ್ತೇಜಿಸುತ್ತದೆ. ಪುರುಷರು ಅಶ್ಲೀಲ ಚಿತ್ರಗಳನ್ನು ನೊಡುವುದರಿಂದ ಮಹಿಳೆಯರ ಬಗ್ಗೆ ಗೌರವವನ್ನು ಕಳೆದುಕೊಳ್ಳುತ್ತಾರೆ ಮತ್ತು ನಿಂದನೆ, ಅತ್ಯಾಚಾರ ಮತ್ತು ಆಕ್ರಮಣದ ಭಾವನೆಯನ್ನು ಬೆಳೆಸಿಕೊಳ್ಳುತ್ತಾರೆ.



Click it and Unblock the Notifications
