Latest Updates
-
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ
ಈ ಕಾಯಿಲೆಗಳಿಗೆ ಬೆಸ್ಟ್ ಮನೆಮದ್ದು ಈರುಳ್ಳಿ
ಈರುಳ್ಳಿಯನ್ನು ಹಿಂದಿನಿಂದಲೂ ಭಾರತೀಯರು ತಮ್ಮ ಅಡುಗೆಯಲ್ಲಿ ಬಳಸಿಕೊಂಡು ಬರುತ್ತಿದ್ದಾರೆ. ಈರುಳ್ಳಿಯು ಅಡುಗೆಗೆ ರುಚಿ ನೀಡುವುದರ ಜತೆಗೆ ಇದರಲ್ಲಿರುವ ಹಲವಾರು ರೀತಿಯ ಪೋಷಕಾಂಶಗಳು ದೇಹಕ್ಕೂ ತುಂಬಾ ಒಳ್ಳೆಯದು. ಇದೇ ಕಾರಣದಿಂದಾಗಿ ಕೆಲವೊಂದು ಪ್ರದೇಶಗಳಲ್ಲಿ ಹಸಿ ಈರುಳ್ಳಿ ಜತೆಗೆ ರೊಟ್ಟಿ ಅಥವಾ ಚಪಾತಿ ತಿನ್ನುವ ಪರಿಪಾಠವು ಬೆಳೆದು ಬಂದಿದೆ. ಹಲವಾರು ರೀತಿಯ ಮನೆಮದ್ದುಗಳಲ್ಲಿ ಈರುಳ್ಳಿಯನ್ನು ಬಳಸಿಕೊಳ್ಳಲಾಗುತ್ತದೆ. ಇದರಲ್ಲಿ ರಕ್ತ ಶುದ್ಧೀಕರಿಸುವ ಗುಣ ಎಂದು ಹೇಳಲಾಗುತ್ತದೆ. ಈಗಲೂ ಗ್ರಾಮಾಂತರ ಭಾಗಗಳಲ್ಲಿ ಶೀತ ಅಥವಾ ಕೆಮ್ಮು ಇದ್ದರೆ ಈರುಳ್ಳಿಯನ್ನು ಬಳಸಿಕೊಂಡು ಕಷಾಯ ಮಾಡಿ ಕುಡಿಯುವರು.

ಇದು ತುಂಬಾ ಪರಿಣಾಮಕಾರಿ ಆಗಿರುವುದು. ಈರುಳ್ಳಿಯು ನಂಜು ನಿರೋಧಕ ಮತ್ತು ಆಂಟಿಬಯೋಟಿಕ್ ಗುಣವನ್ನು ಹೊಂದಿದ್ದು, ಇದರಲ್ಲಿ ಸಲ್ಫರ್ ಅಂಶವು ಅಧಿಕವಾಗಿದೆ. ಕ್ಯಾನ್ಸರ್ ನಂತಹ ಮಾರಕ ಕಾಯಿಲೆ ಉಂಟು ಮಾಡುವಂತಹ ಫ್ರೀ ರ್ಯಾಡಿಕಲ್ ವಿರುದ್ಧ ಇದು ಹೋರಾಡುವುದು. ಈರುಳ್ಳಿಯು ಪ್ರತಿರೋಧಕ ಶಕ್ತಿ ವೃದ್ಧಿಸುವುದು, ವಾಂತಿ ತಡೆಯುವುದು, ಶ್ವಾಸಕೋಶದ ಸಮಸ್ಯೆ ನಿವಾರಿಸುವುದು, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ಪರಿಣಾಮಕಾರಿ. ಕೊಲೆಸ್ಟ್ರಾಲ್ ಮತ್ತು ಸಂಧಿವಾತವನ್ನು ಇದು ತಗ್ಗಿಸುವುದು.
ಅಮೆರಿಕಾದಲ್ಲಿ ಶೀತ ಹಾಗೂ ಜ್ವರ ನಿವಾರಣೆ ಮಾಡಲು ಹಿಂದೆ ಈರುಳ್ಳಿ ಬಳಕೆ ಮಾಡಲಾಗುತ್ತಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ಕೂಡ ಈರುಳ್ಳಿಯಿಂದ ಶ್ವಾಸಕೋಶದ ಸೋಂಕು, ಕೆಮ್ಮು, ಕಫ ಕಟ್ಟುವಿಕೆ ಮತ್ತು ಬ್ರಾಂಕೈಟಿಸ್(ಶ್ವಾಸಕೋಶದ ಒಳಪೊರೆಯ ಉರಿಯೂತ) ಕಡಿಮೆ ಮಾಡುವುದು. ಸಾಮಾನ್ಯ ಕಾಯಿಲೆಗಳಿಗೆ ಈರುಳ್ಳಿಯನ್ನು ಬಳಸುವ ತುಂಬಾ ಸರಳ ವಿಧಾನಗಳ ಬಗ್ಗೆ ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ.

ಕೆಮ್ಮು
ಒಂದು ಈರುಳ್ಳಿಯನ್ನು ಅರ್ಧ ಮಾಡಿಕೊಂಡು ಅದಕ್ಕೆ ಒಂದು ಚಮಚ ಬೆಲ್ಲವನ್ನು ಪ್ರತಿ ಭಾಗಕ್ಕೆ ಹಾಕಿ ಅರ್ಧ ಗಂಟೆ ಕಾಲ ಹಾಗೆ ಬಿಡಿ. ಕೆಮ್ಮು ನಿವಾರಣೆ ಮಾಡಲು ಹೀಗೆ ನೀವು ಎರಡು ದಿನಗಳ ಕಾಲ ತಿನ್ನಿ. ಈರುಳ್ಳಿಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಇವೆ ಮತ್ತು ಇದು ಕೆಮ್ಮು ಉಂಟು ಮಾಡುವ ಸೂಕ್ಷ್ಮಾಣುಗಳನ್ನು ನಿವಾರಣೆ ಮಾಡುವುದು.
ಸಲ್ಫರ್ ದೇಹದಲ್ಲಿ ಇರುವಂತಹ ವಿಷವನ್ನು ಹೊರಹಾಕುವ ಕೆಲಸ ಮಾಡುವುದು. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಕೆಮ್ಮಿನ ವೇಳೆ ಉಂಟಾಗುವ ನೋವು ಮತ್ತು ಉರಿಯೂತವನ್ನು ಕಡಿಮೆ ಮಾಡುವುದು.

ಕೂದಲು ಉದುರುವಿಕೆ ನಿವಾರಣೆ
ಒಂದು ಈರುಳ್ಳಿ ಹಾಕಿಕೊಂಡು ನೀರು ಬಿಸಿ ಮಾಡಿ ಮತ್ತು ಇದನ್ನು ಕೂದಲು ತೊಳೆಯಲು ಶಾಂಪೂವಿನ ಹಾಗೆ ಬಳಸಿ ಮತ್ತು ಇದು ಕೂದಲು ಬೆಳೆಯಲು ನೆರವಾಗುವುದು. ಇದರಲ್ಲಿ ಇರುವಂತಹ ಸೂಕ್ಷ್ಮಾಣು ವಿರೋಧಿ ಗುಣಗಳು ತಲೆಹೊಟ್ಟು ನಿವಾರಿಸುವುದು ಮತ್ತು ಕೂದಲು ಉದುರುವಿಕೆಗೆ ನೆರವಾಗುವುದು. ಆಂಟಿಆಕ್ಸಿಡೆಂಟ್ ಅಂಶವು ಕೂದಲು ಉದುರುವಿಕೆ ತಡೆಯುವುದು ಮತ್ತು ಕೂದಲು ಬಲವಾಗಿ ಬೆಳೆಯಲು ನೆರವಾಗುವುದು.

ಎದೆಗಟ್ಟುವಿಕೆ ಸಡಿಲಗೊಳಿಸುವುದು
ಈರುಳ್ಳಿ ಜಜ್ಜಿಕೊಂಡು ಅದರ ಪೇಸ್ಟ್ ಮಾಡಿ ಮತ್ತು ಅದಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಹಾಕಿ. ಈ ಪೇಸ್ಟ್ ಅನ್ನು ಎದೆಗೆ ಹಚ್ಚಿಕೊಳ್ಳಿ ಮತ್ತು ಸಣ್ಣ ಟವೆಲ್ ಹಾಕಿ. ಈರುಳ್ಳಿಯು ನೈಸರ್ಗಿಕ ಆಂಟಿಬಯೋಟಿಕ್ ಆಗಿ ಕೆಲಸ ಮಾಡುವುದು ಮತ್ತು ಪ್ರತಿರೋಧಕ ಶಕ್ತಿ ಹೆಚ್ಚಿಸುವುದು. ಕೆಮ್ಮು ಉಂಟು ಮಾಡಲು ಕಾರಣವಾಗುವಂತಹ ಕಫವನ್ನು ಸಡಿಲ ಮಾಡಲು ಈರುಳ್ಳಿಯು ವೆಪೊರಬ್ ನ ಹಾಗೆ ಕೆಲಸ ಮಾಡುವುದು.

ಮಕ್ಕಳ ಉದರಶೂಲೆ ನಿವಾರಣೆ
ಪ್ರತೀ ಒಂದು ಗಂಟೆಗೆ ಒಂದು ಚಮಚ ಈರುಳ್ಳಿ ಚಹಾ ನೀಡಿದರೆ ಆಗ ಮಕ್ಕಳ ಉದರಶೂಲೆ ಕಡಿಮೆ ಆಗುವುದು. ಈರುಳ್ಳಿಯಲ್ಲಿ ಸ್ನಾಯುಗಳಿಗೆ ಆರಾಮ ನೀಡುವ, ಹೊಟ್ಟೆ ಬಲಪಡಿಸುವ ಮತ್ತು ಜೀರ್ಣಕ್ರಿಯೆ ನಿರ್ವಹಿಸುವ ಗುಣಗಳು ಇವೆ. ಸ್ವಲ್ಪ ನೀರಿನಲ್ಲಿ ತುಂಡು ಮಾಡಿದ ಈರುಳ್ಳಿ ಹಾಕಿ ಕುದಿಸಿ. ಇದು ತಣ್ಣಗಾದ ಬಳಿಕ ಸೋಸಿಕೊಳ್ಳಿ.

ಕೀಟ ಕಡಿತ ಶಮನ
ಕೀಟ ಕಡಿದಿರುವಂತಹ ಭಾಗಕ್ಕೆ ಒಂದು ತುಂಡು ಈರುಳ್ಳಿ ಅಥವಾ ರಸ ಹಚ್ಚಿ. ಈರುಳ್ಳಿಯಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಉರಿಯೂತ ಮತ್ತು ಕೀಟ ಕಡಿತದಿಂದ ಉಂಟಾಗಿರುವ ನೋವು ಕಡಿಮೆ ಮಾಡುವುದು.

ಕಿವಿ ಸೋಂಕಿಗೆ
ತೆಳುವಾದ ಸಾಕ್ಸ್ ನಲ್ಲಿ ಒಂದು ತುಂಡು ಈರುಳ್ಳಿ ಹಾಕಿ ಮತ್ತು ಅದನ್ನು ಗಟ್ಟಿಯಾಗಿ ಕಟ್ಟಿಕೊಳ್ಳಿ. ಈ ಸಾಕ್ಸ್ ಅನ್ನು ಕಿವಿಯ ಮೇಲಿಡಿ ಮತ್ತು ಟೋಪಿ ಅದರ ಮೇಲಿಟ್ಟು ಬಿಡಿ. ನೋವು ಶಮನವಾಗುವ ತನಕ ಹಾಗೆ ಇರಲಿ.

ಗಾಯ
ಈರುಳ್ಳಿಯ ಹೊರಗಿನ ಪದರವನ್ನು ಗಾಯದ ಭಾಗಕ್ಕೆ ಇಡಿ. ಇದು ನಂಜು ನಿರೋಧಕವಾಗಿ ಕೆಲಸ ಮಾಡುವುದು ಮತ್ತು ರಕ್ತಸ್ರಾವವನ್ನು ಬೇಗನೆ ತಡೆಯುವುದು. ಆಂಟಿಬಯೋಟಿಕ್ ಮತ್ತು ಉರಿಯೂತ ಶಮನಕಾರಿ ಗುಣವು ಗಾಯವನ್ನು ಒಣಗಿಸುವುದು. ಸೂಕ್ಷ್ಮಾಣು ವಿರೋಧಿ ಗುಣಗಳು ಸೋಂಕು ಹರಡದಂತೆ ತಡೆಯುವುದು.

ಗಂಟಲು ನೋವಿಗೆ
ಈರುಳ್ಳಿ ಸಿಪ್ಪೆಯ ನೀರನ್ನು ತಯಾರಿಸಿಕೊಳ್ಳಿ. ಇದರಿಂದ ಬಾಯಿ ಮುಕ್ಕಳಿಸಿ. ಇದರ ರುಚಿಯು ತುಂಬಾ ಕಹಿಯಾಗಿದ್ದರೆ ಆಗ ಸ್ವಲ್ಪ ಲಿಂಬೆ ಮತ್ತು ಜೇನುತುಪ್ಪ ಹಾಕಿ. ಇದರಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣವು ಗಂಟಲಿನ ನೋವು ನಿವಾರಣೆ ಮಾಡುವುದು.

ವಾಂತಿ ತಡೆಯಲು
ಒಂದು ಈರುಳ್ಳಿ ತೆಗೆದುಕೊಂಡು ಅದನ್ನು ತುರಿದು, ಬಟ್ಟೆಗೆ ಹಾಕಿ ರಸ ತೆಗೆಯಿರಿ. ಪುದೀನಾ ಚಾ ಮಾಡಿಕೊಂಡು ತಣ್ಣಗಾಗಲು ಇಡಿ. ಎರಡು ಚಮಚ ಈರುಳ್ಳಿ ರಸ ಕುಡಿಯಿರಿ ಮತ್ತು ಐದು ನಿಮಿಷ ಹಾಗೆ ಇರಿ. ಇದರ ಬಳಿಕ ಎರಡು ಚಮಚ ಪುದೀನಾ ಚಾ ಕುಡಿಯಿರಿ. ವಾಂತಿ ನಿಲ್ಲುವ ತನಕ ಹೀಗೆ ಮಾಡಿ.

ಗಾಳಿ ಶುದ್ಧೀಕರಿಸುವುದು
ಈರುಳ್ಳಿಯು ಗಾಳಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ಮತ್ತು ವೈರಸ್ ಅನ್ನು ಹೀರಿಕೊಳ್ಳುವ ಮೂಲಕ ಗಾಳಿ ಶುದ್ಧೀಕರಿಸುವುದು.

ಬಿಸಿಲು ಮತ್ತು ಸುಟ್ಟ ಸಣ್ಣ ಗಾಯಗಳಿಗೆ
ತಾಜಾ ಈರುಳ್ಳಿಯನ್ನು ಗಾಯದ ಮೇಲಿಟ್ಟರೆ ಆಗ ಸೋಂಕು ತಡೆಯಬಹುದು. ಇದರಲ್ಲಿ ಇರುವಂತಹ ಸಲ್ಫರ್ ಅಂಶವು ಚರ್ಮವು ಪುನಶ್ಚೇತನಗೊಳ್ಳಲು ಮತ್ತು ಕೆಂಪಾಗಿರುವ ಭಾಗಕ್ಕೆ ಶಮನ ನೀಡುವುದು.

ಜ್ವರಕ್ಕೆ
ಈರುಳ್ಳಿಯನ್ನು ತೆಳುವಾದ ತುಂಡುಗಳನ್ನಾಗಿ ಮಾಡಿ. ಪಾದದ ಹಿಂದಿನ ಭಾಗಕ್ಕೆ ಸ್ವಲ್ಪ ತೆಂಗಿನ ಎಣ್ಣೆ ಹಚ್ಚಿಕೊಳ್ಳಿ. ಈ ಈರುಳ್ಳಿ ಭಾಗವನ್ನು ಪಾದದ ಅಡಿಯಲ್ಲಿ ಇಡಿ. ಪ್ಲಾಸ್ಟಿಕ್ ನಿಂದ ಕಟ್ಟಿಕೊಳ್ಳಿ ಮತ್ತು ಸಾಕ್ಸ್ ಹಾಕಿ. ಈರುಳ್ಳಿಯು ದೇಹದಲ್ಲಿನ ವಿಷ, ಬ್ಯಾಕ್ಟೀರಿಯಾ ಮತ್ತು ಅನಾರೋಗ್ಯವನ್ನು ಹೊರಗೆ ಹಾಕುವುದು.



Click it and Unblock the Notifications









