For Quick Alerts
ALLOW NOTIFICATIONS  
For Daily Alerts

ಭಾರತದಲ್ಲಿ 2022 ಫೆಬ್ರವರಿಯಲ್ಲಿ ಕೊರೊನಾ 3ನೇ ಅಲೆ ಕಂಡು ಬರುವುದೇ?

|

ಕೊರೊನಾ ಆತಂಕ ಕಡಿಮೆಯಾಯಿತು ಎಂದು ಅಂದುಕೊಳ್ಳುವಷ್ಟರಲ್ಲಿ ಮತ್ತೆ ಕೊರೊನಾ ಆತಂಕ ಎದುರಾಗಿದೆ. ಇಳಿಮುಖವಾಗಿದ್ದ ಕೊರೊನಾ ಕೇಸ್‌ಗಳಲ್ಲಿ ಏರಿಕೆ ಕಂಡು ಬರುತ್ತಿರುವುದೇ ಆತಂಕಕ್ಕೆ ಕಾರಣವಾಗಿದೆ.

Omicron-driven third wave in India

ವಿಶ್ವದಲ್ಲಿ ಕೊರೊನಾ ರೂಪಾಂತರ ಒಮಿಕ್ರಾನ್ ವೇಗವಾಗಿ ಹರಡುತ್ತಿದೆ, ಭಾರತದಲ್ಲಿಯೂ ಒಮಿಕ್ರಾನ್‌ ಕಂಡು ಬಂದಿದೆ, ಆದರೆ ಈಗ ಡೆಲ್ಟಾ ಕೇಸ್‌ಗಳು ಹೆಚ್ಚಾಗಿ ಕಂಡು ಬರುತ್ತಿದೆ. ಭಾರತದಲ್ಲಿ ದಿನವೊಂದಕ್ಕೆ ಸುಮಾರು 7,500 ಕೇಸ್‌ಗಳು ಕಂಡು ಬರುತ್ತಿವೆ, ಹೊಸ ವರ್ಷದ ಪ್ರಾರಂಭದಲ್ಲಿ ಭಾರತದಲ್ಲಿ 3ನೇ ಅಲೆ ಕಂಡು ಬರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಭಾರತದಲ್ಲಿ 3ನೇ ಅಲೆಗೆ ಒಮಿಕ್ರಾನ್ ಕಾರಣವಾಗುವುದೇ?

ಭಾರತದಲ್ಲಿ 3ನೇ ಅಲೆಗೆ ಒಮಿಕ್ರಾನ್ ಕಾರಣವಾಗುವುದೇ?

ಡೆಲ್ಟಾಗಿಂತ ಒಮಿಕ್ರಾನ್‌ ಹೆಚ್ಚಾದರೆ 3ನೇ ಅಲೆಗೆ ಕಾರಣವಾಗುವುದು ಎಂದು ತಜ್ಞರು ಎಚ್ಚರಿಸಿದ್ದಾರೆ. ರಾಷ್ಟ್ರೀಯ ಕೋವಿಡ್ 19 ಸೂಪರ್ ಮಾಡೆಲ್ ಕಮಿಟಿಯ ಮುಖ್ಯಸ್ಥರಾಗಿರುವ ವಿದ್ಯಾಸಾಗರ್ 'ಒಮಿಕ್ರಾನ್‌ನಿಂದಾಗಿ ಭಾರತದಲ್ಲಿ 3ನೇ ಅಲೆ ಉಂಟಾಗಲಿದೆ, ಆದರೆ ಎರಡನೇ ಅಲೆಗಿಂತ 3ನೇ ಅಲೆಯ ಪರಿಣಾಮ ಕಡಿಮೆ ಇರಲಿದೆ' ಎಂದು ಹೇಳಿದ್ದಾರೆ.

ಭಾರತದಲ್ಲಿ ಕೊರೊನಾ 3ನೇ ಅಲೆಯ ಸಾಧ್ಯತೆ ಯಾವಾಗ?

ಭಾರತದಲ್ಲಿ ಕೊರೊನಾ 3ನೇ ಅಲೆಯ ಸಾಧ್ಯತೆ ಯಾವಾಗ?

2022ರ ಪ್ರಾರಂಭದಲ್ಲಿ ಭಾರತದಲ್ಲಿ ಕೊರೊನಾ 3ನೇ ಅಲೆ ಕಂಡು ಬರಬಹುದು ಎಂದು ಅಂದಾಜಿಸಲಾಗಿದೆ, ಆದರೆ 2ನೇ ಅಲೆಯಷ್ಟು ಗಂಭೀರ ಸ್ವರೂಪದ್ದು ಆಗಿರಲ್ಲ, ಏಕೆಂದರೆ ದೇಹದ ಬಹುಪಾಲು ಜನತೆ ಕೊರೊನ ಲಸಿಕೆ ಪಡೆದು ರೋಗ ನಿರೋಧಕ ಸಾಮರ್ಥ್ಯ ಹೆಚ್ಚಿಸಿಕೊಂಡಿದ್ದಾರೆ, ಆದ್ದರಿಂದ ಇದರ ಪರಿಣಾಮ ಕಡಿಮೆ ಇರಲಿದೆ.

ಭಾರತದಲ್ಲಿ ಪ್ರತಿನಿತ್ಯ ಕೊರೊನಾ ಕೇಸ್‌ಗಳು ಹೆಚ್ಚಾಗುತ್ತಿದೆ, ಇದರಿಂದ ಖಂಡಿತ 3ನೇ ಅಲೆ ಉಂಟಾಗುವುದು ಎನ್ನುತ್ತಿದ್ದಾರೆ ತಜ್ಞರು.

2ನೇ ಅಲೆಗಿಂತ ಕಡಿಮೆ ಇರಲಿದೆ ಕೇಸ್‌ಗಳು

2ನೇ ಅಲೆಗಿಂತ ಕಡಿಮೆ ಇರಲಿದೆ ಕೇಸ್‌ಗಳು

2ನೇ ಅಲೆಯಲ್ಲಿ ಕಂಡು ಬಂದಿರುವುದಕ್ಕಿಂತಲೂ ಕಡಿಮೆ ಕೇಸ್‌ಗಳು 3ನೇ ಅಲೆಯಲ್ಲಿ ಇರಲಿದೆ. ಭಾರತದಲ್ಲಿ ಫ್ರಂಟ್‌ಲೈನ್‌ ವರ್ಕರ್ಸ್‌ಗೆ ಅಲ್ಲದೆ ಇತರರಿಗೆ ಮಾರ್ಚ್‌ 1 ರಿಂದ ಲಸಿಕೆ ನೀಡಲಾರಂಭಿಸಿತ್ತು. ಶೇ. 100 ಸಂಖ್ಯೆಯಲ್ಲಿ ಫ್ರಂಟ್‌ಲೈನ್‌ ವರ್ಕರ್ಸ್ ಮಾತ್ರ ಲಸಿಕೆ ಪಡೆದಿದ್ದಾರೆ. ನಮ್ಮಲ್ಲಿ ಒಂದು ಡೋಸ್‌ ಕೂಡ ಲಸಿಕೆ ಹಾಕದವರು ಅನೇಕರು ಇದ್ದಾರೆ.

ಅಲ್ಲದೆ 2ನೇ ಅಲೆಯಲ್ಲಿ ಹೆಚ್ಚಿನವರಿಗೆ ವೈರಸ್‌ ತಗುಲಿದೆ, ವೈರಸ್‌ ಇದುವರೆಗೆ ತಗುಲದೇ ಇರುವವರ ಸಂಖ್ಯೆ ಕಡಿಮೆ ಇದೆ, ಹಾಗಾಗಿ 2ನೇ ಅಲೆಯಲ್ಲಿ ಕಂಡಷ್ಟು ಕೇಸ್‌ಗಳು 3ನೇ ಅಲೆಯಲ್ಲಿ ಕಂಡು ಬರುವ ಸಾಧ್ಯತೆ ಕಡಿಮೆ.

ಒಮಿಕ್ರಾನ್‌ ಪರಿಣಾಮ

ಒಮಿಕ್ರಾನ್‌ ಪರಿಣಾಮ

ಒಮಿಕ್ರಾನ್‌ ಪರಿಣಾಮ ಹೇಗಿರುತ್ತದೆ ಎಂಬುವುದು 2 ಅಂಶಗಳನ್ನು ಅವಲಂಬಿಸಿದೆ.

1. ಈಗಾಗಲೇ ಡೆಲ್ಟಾ ವೈರಸ್‌ ತಗುಲಿದವರಿಗೆ ನೈಸರ್ಗಿಕವಾಗಿ ಒಮಿಕ್ರಾನ್ ವಿರುದ್ಧ ರೋಗ ನಿರೋಧಕ ಶಕ್ತಿ ಉಂಟಾಗಿರುತ್ತದೆ. ಇವರಲ್ಲಿ ಒಮಿಕ್ರಾನ್ ಕಡಿಮೆ ಪರಿಣಾಮ ಬೀರುವುದು.

2. ಅದರಂತೆ ಎರಡು ಡೋಸ್‌ ಲಸಿಕೆ ಪಡೆದವರಲ್ಲಿಯೂ ಒಮಿಕ್ರಾನ್‌ ಪರಿಣಾಮ ಕಡಿಮೆ ಬೀರುವುದು.

ದಕ್ಷಿಣ ಆಫ್ರಿಕದಲ್ಲಿ ಕಂಡು ಬರುತ್ತಿರುವ ಕೊರೊನಾವೈರಸ್‌ ಕೇಸ್‌ಗಳ ಅಧ್ಯಯನ ವರದಿಯು ಅಲ್ಲಿ ಲಸಿಕೆ ಪಡೆದವರಗಿಂತ ಪಡೆಯದೇ ಇರುವವರು ಆಸ್ಪತ್ರೆಗೆ ಸೇರುತ್ತಿದ್ದಾರೆ ಎಂದು ಹೇಳಿದೆ.

ಭಾರತದಲ್ಲಿ ಕೊರೊನಾ 3ನೇ ಅಲೆಯ ಅಪಾಯವಿದೆ ಎಂದು ತಜ್ಞರು ಎಚ್ಚರಿಸಿರುವುದರಿಂದ ಎರಡು ಡೋಸ್‌ ಲಸಿಕೆ ಪಡೆಯುವುದು ಸುರಕ್ಷತೆಯ ಮೊದಲನೇ ಹೆಜ್ಜೆಯಾಗಿದೆ.

ಕೊನೆಯದಾಗಿ: ಕೊರೊನಾ ನಿಯಮಗಳನ್ನು ಪಾಲಿಸಿ, ಮಾಸ್ಕ್ ಧರಿಸಿ, ಕೈಗಳಿಗೆ ಸ್ಯಾನಿಟೈಸರ್ ಬಳಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.

English summary

Omicron-Driven Third Wave Likely To Peak in India in February: Covid panel

Omicron-driven third wave likely to peak in India in February: Covid panel, Read on..
Story first published: Monday, December 20, 2021, 21:05 [IST]
X
Desktop Bottom Promotion