Latest Updates
-
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ
ಭಾರತೀಯರಲ್ಲಿ ಹೆಚ್ಚಾಗ್ತಿದೆ ಲಿವರ್ ಕ್ಯಾನ್ಸರ್ ಕಾರಣವೇನು ಗೊತ್ತಾ?
ಭಾರತೀಯರಲ್ಲಿ ಪಿತ್ತಜನಕಾಂಗದ ಕ್ಯಾನ್ಸರ್ ದಿನೇ ದಿನೇ ಹೆಚ್ಚಾಗುತ್ತಿದ್ದು, ಈ ವರದಿ ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ಅಷ್ಟಕ್ಕು ಲಿವರ್ ಕ್ಯಾನ್ಸರ್‌ನಲ್ಲಿ ಎಷ್ಟು ವಿಧಗಳಿದೆ? ಯಾವ ವಯೋಮಾನದವರಲ್ಲಿ ಇದು ಕಾಣಿಸಿಕೊಳ್ಳುತ್ತಿದೆ? ಇದನ್ನು ತಡೆಗಟ್ಟೋದು ಹೇಗೆ ಎಂಬುವುದನ್ನು ಒಂದೊಂದಾಗಿ ತಿಳಿಯೋಣ

ಲಿವರ್ ಕ್ಯಾನ್ಸರ್‌ನ ವಿಧಗಳು
ಲಿವರ್ ಅಥವಾ ಪಿತ್ತಜನಕಾಂಗದ ಕ್ಯಾನ್ಸರ್ ಪಿತ್ತಜನಕಾಂಗದ ಕೋಶಗಳಲ್ಲಿ ಮೊದಲಿಗೆ ಕಾಣಿಸಿಕೊಳ್ಳುತ್ತದೆ. ಇನ್ನೂ ಇದರಲ್ಲಿ ಅನೇಕ ವಿಧಗಳಿದ್ದು, ಅದ್ರಲ್ಲಿ ಮೊದಲನೇಯದ್ದು, ಹೆಪ್ಟಾಸೆಲ್ಯೂಲರ್ ಕಾರ್ಸಿನೋಮ (hepatocellular carcinoma). ಇದರ ಜೊತೆಗೆ ಇಂಟ್ರಾಹೆಪಾಟಿಕ್ ಕೋಲಾಂಜಿಯೋಕಾಸಿನೋಮ ಮತ್ತು ಹೆಪಟೊಬ್ಲಾಸ್ಟೊಮಾ ಇದು ಕೂಡ ಲಿವರ್ ಕ್ಯಾನ್ಸರ್‌ನ ಇತರ ಎರಡು ವಿಧಗಳು.

ಹೆಪ್ಟಾಸೆಲ್ಯೂಲರ್ ಕಾರ್ಸಿನೋಮ ಕ್ಯಾನ್ಸರ್ (ಹೆಚ್‌ಸಿಸಿ) ಯಿಂದ ಸಾವಾಗುತ್ತಾ?
ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಾಥಮಿಕ ಲಿವರ್ ಕ್ಯಾನ್ಸರ್‌ನಿಂದಾಗಿ ಜನ ವೇಗವಾಗಿ ಸಾವಿಗೆ ತುತ್ತಾಗ್ತಿದ್ದಾರಂತೆ. ಹೆಪ್ಟಾಸೆಲ್ಯೂಲರ್ ಕಾರ್ಸಿನೋಮ ಕ್ಯಾನ್ಸರ್(ಹೆಚ್‌ಸಿಸಿ) ಒಂದು ವರ್ಷದಲ್ಲಿ ಪ್ರತಿ ಒಂದು ಲಕ್ಷ ಪುರುಷರಲ್ಲಿ 4-7.5 ರಷ್ಟು ಜನರನ್ನು ಭಾದಿಸುತ್ತಿದ್ಯಂತೆ. ಇನ್ನೂ ಒಂದು ಲಕ್ಷ ಮಹಿಳೆಯರಲ್ಲಿ 1.2 ರಿಂದ 2.2 ರಷ್ಟು ಮಹಿಳೆಯರಿಗೆ ಹರಡುತ್ತಿರೋದು ನಿಜಕ್ಕೂ ಭಯ ಹುಟ್ಟಿಸುತ್ತಿದೆ. ಹೆಚ್‌ಸಿಸಿ ಹರಡುವ ಅನುಪಾತ ಪುರುಷ ಹಾಗೂ ಮಹಿಳೆಯರಲ್ಲಿ 4:1 ಅನುಪಾತದಲ್ಲಿದೆ. ಅದೂ ಕೂಡ 40 ರಿಂದ 70 ವರ್ಷದೊಳಗಿನವರಲ್ಲಿ ಹೆಚ್ಚಾಗಿ ಲಿವರ್ ಕ್ಯಾನ್ಸರ್ ಕಾಣಿಸಿಕೊಳ್ಳುತ್ತಿದೆ.
ಲಿವರ್ ಕ್ಯಾನ್ಸರ್‌ನಿಂದಾಗಿ ಅತ್ಯಂತ ವೇಗವಾಗಿ ಸಾವಾಗಿರೋ ಬಗ್ಗೆ ವರದಿಯಾಗಿದೆ. ಆದ್ರೆ ಹೆಚ್‌ಸಿಸಿ ಭಾದಿಸಿದವರಿಗೆ ಸಾವು ಕಟ್ಟಿಟ್ಟ ಬುತ್ತಿ ಎಂದು ಎಲ್ಲೂ ಹೇಳಿಲ್ಲ. ಸೂಕ್ತವಾದ ಚಿಕಿತ್ಸೆ ಪಡೆದರೆ ಖಂಡಿತ ಸಾವಿನಿಂದ ಪಾರಾಗಬಹುದು. ಅದಕ್ಕಿಂತ ಮುಖ್ಯವಾಗಿ ರೋಗ ಭಾದಿಸುವುದಕ್ಕಿಂತ ಮೊದಲು ಸೂಕ್ತ ಕ್ರಮಗಳನ್ನು ಕೈಗೊಂಡರೆ ಮತ್ತು ನಮ್ಮ ಜೀವನ ಶೈಲಿಯನ್ನ ಉತ್ತಮವಾಗಿಸಿದರೆ ಯಾವುದೇ ಅಪಾಯವಿಲ್ಲ.
ಈ ಕೆಳಗಿನ ಕ್ರಮಗಳನ್ನು ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಲಿವರ್ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸಬಹುದು.

1. ಹೆಪಟೈಟಿಸ್ ಬಿ ಮತ್ತು ಸಿ ರೋಗಕ್ಕೆ ಚಿಕಿತ್ಸೆ ಪಡೆದುಕೊಳ್ಳಿ
ಹೆಪಟೈಟಿಸ್ ಬಿ ರೋಗ ಲಿವರ್‌ಗೆ ಭಾದಿಸುತ್ತದೆ. ಒಂದು ವೇಳೆ ಹೆಪಟೈಟಿಸ್ ಬಿ ರೋಗವನ್ನು ಕಡೆಗಣಿಸಿ ನೀವೇನಾದರೂ ಚಿಕಿತ್ಸೆ ಪಡೆಯದೇ ಹೋದರೆ ಲಿವರ್ ಫೈಲ್ಯೂರ್ ಹಾಗೂ ಕ್ಯಾನ್ಸರ್ ಭಾದಿಸುವ ಸಾಧ್ಯತೆ ಹೆಚ್ಚಾಗಿದೆ. ಮಕ್ಕಳು ಹಾಗೂ ವಯಸ್ಕರಿಗಾಗಿ ಹೆಪಟೈಟಿಸ್ ಬಿ ಲಸಿಕೆ ಲಭ್ಯವಿದೆ. ನೀವು ಹೆಪಟೈಟಿಸ್ ಬಿ ಅಥವಾ ಸಿ ಸೋಂಕಿನ ಅಪಾಯದಲ್ಲಿದ್ದರೆ ಕಡ್ಡಾಯವಾಗಿ ಸ್ಕ್ರೀನಿಂಗ್ ಪರೀಕ್ಷೆಗೆ ಒಳಗಾಗಿರಿ.
ಇನ್ನೂ ಹೆಪಟೈಟಿಸ್ 'ಬಿ'ಗಾಗಿ ಆಂಟಿವೈರಲ್ ಚಿಕಿತ್ಸೆಯೂ ಲಭ್ಯವಿದೆ. ಇದು ಲಿವರ್ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸಲಿದೆ. ಮತ್ತೊಂದು ವಿಚಾರ ಅಂದ್ರೆ ಹೆಪಟೈಟಿಸ್ 'ಸಿ' ಗೆ ಯಾವುದೇ ತರಹದ ವ್ಯಾಕ್ಸಿನ್ ಲಭ್ಯವಿಲ್ಲ. ಸರಿಯಾದ ಚಿಕಿತ್ಸೆಯ ಮೂಲಕ ರೋಗವನ್ನು ಕಡಿಮೆ ಮಾಡಬಹುದು.

2. ಮಧ್ಯಪಾನ ಹಾಗೂ ತಂಬಾಕು ಸೇವನೆಯನ್ನ ಮಾಡದಿರಿ
ಸಿರೋಸಿಸ್ ರೋಗ ತಡೆಗಟ್ಟಬೇಕಾದರೆ ಮಧ್ಯಪಾನ ಮಾಡಬಾರದು. ಏಕೆಂದರೆ ಸಿರೋಸಿಸ್ ರೋಗವು ನಿಧಾನವಾಗಿ ಕ್ಯಾನ್ಸರ್‌ಗೆ ತಿರುಗುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಮಧ್ಯಪಾನ ಸೇವನೆಯನ್ನು ಬಿಟ್ಟುಬಿಡಿ. ಇದ್ರ ಜೊತೆಗೆ ಬೀಡಿ, ಸಿಗರೇಟ್, ತಂಬಾಕು ಸೇವನೆಯಿಂದ ಕೂಡ ಕ್ಯಾನ್ಸರ್‌ನ ಅಪಾಯಗಳು ಹೆಚ್ಚಿದೆ.

3. ಅನುವಂಶಿಯವಾಗಿ ಭಾಧಿಸುವುದರಿಂದ ಪರೀಕ್ಷೇಗೆ ಒಳಗಾಗಿ
ಅನೇಕರಲ್ಲಿ ಅನುವಂಶಿಯವಾಗಿ ಸಿರೋಸಿಸ್‌ನ ಅಪಾಯ ಹೆಚ್ಚಾಗಿದೆ. ಇದು ಲಿವರ್ ಕ್ಯಾನ್ಸರ್‌ನ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಅಂತವರು ಆದಷ್ಟು ಬೇಗ ಪರೀಕ್ಷೇಗೆ ಒಳಗಾಗಿ ಒಂದು ವೇಳೆ ಸಿರೋಸಿಸ್ ಕಂಡು ಬಂದಲ್ಲಿ ಚಿಕಿತ್ಸೆ ಪಡೆದುಕೊಳ್ಳಿ. ಉದಾಹಣೆಗೆ ಹೆಮೋಕ್ರೊಮಾಟೋಸಿಸ್ ಭಾದಿಸಿರುವ ಒಂದು ಕುಟುಂಬದಲ್ಲಿರುವ ಎಲ್ಲಾ ಮಕ್ಕಳನ್ನು ಪರೀಕ್ಷೇಗೆ ಒಳಪಡಿಸಿ ಚಿಕಿತ್ಸೆ ನೀಡಬೇಕು.

4. ಕ್ಯಾನ್ಸರ್‌ಕಾರಕ ವಸ್ತುಗಳಿಂದ ದೂರವಿರಿ
ಧೂಮಪಾನ ಸೇವನೆ, ಮಧ್ಯಪಾನ ಸೇವನೆ, ಸೂರ್ಯನ ಕಿರಣಕ್ಕೆ ಹೆಚ್ಚಾಗಿ ಕಾಣಿಸಿಕೊಳ್ಳೋದನ್ನ ಮಾಡಬೇಡಿ. ಇದರ ಜೊತೆಗೆ ಹೆಚ್‌ಪಿವಿ ಮತ್ತು ಹೆಚ್‌ಬಿವಿ ವ್ಯಾಕ್ಸಿನ್ ಪಡೆದುಕೊಳ್ಳಿ. ಹೀಗೆ ಮಾಡುವುದರಿಂದ ಲಿವರ್ ಕ್ಯಾನ್ಸರ್ ಅಪಾಯವನ್ನು ತಗ್ಗಿಸಬಹುದು.

5. ತೂಕ ನಿಯಂತ್ರಣದಲ್ಲಿರಲಿ
ಅತಿಯಾದ ಬೊಜ್ಜಿನ ಸಮಸ್ಯೆ ಕೂಡ ಪಿತ್ತಕೋಶದ ಕ್ಯಾನ್ಸರ್‌ಗೆ ಕಾರಣವಾಗಬಹುದು. ಯಾರ ದೇಹದಲ್ಲಿ ಬೊಜ್ಜು ಹೆಚ್ಚಾಗಿರುತ್ತದೆಯೋ ಅವರಿಗೆ ಪಿತ್ತಜನಕಾಂಗದ ಬೊಜ್ಜಿನ ಸಮಸ್ಯೆ ಮತ್ತು ಡಯಾಬಿಟಿಸ್ ಬರುವ ಸಾಧ್ಯತೆ ಹೆಚ್ಚಾಗಿದೆ.
ಎಲ್ಲಾ ಕ್ಯಾನ್ಸರ್‌ನಂತೆ ಲಿವರ್ ಕ್ಯಾನ್ಸರ್‌ಗೂ ಕೂಡ ಮೊದಲ ಹಂತದಲ್ಲಿ ಚಿಕಿತ್ಸೆ ನೀಡಿದರೆ ಮಾತ್ರ ಗುಣಪಡಿಸಲು ಸಾಧ್ಯ. ಹೀಗಾಗಿ " Prevention is better than cure" ಎಂಬಂತೆ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವುದು ತುಂಬಾನೇ ಮುಖ್ಯ. ಆಗ ಮಾತ್ರ ಲಿವರ್ ಕ್ಯಾನ್ಸರ್ ಭಾದಿಸುವುದನ್ನು ತಗ್ಗಿಸಲು ಸಾಧ್ಯ.



Click it and Unblock the Notifications











