Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಕಷಾಯದ ಅತಿಯಾದ ಸೇವನೆಯಿಂದ ಒಳಿತಿಗಿಂತ, ಹಾನಿಯಾಗುವುದೇ ಹೆಚ್ಚು!
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಕಷಾಯದ ಪಾತ್ರ ಎಷ್ಟಿದೆ ಎಂಬುದು ಈ ಕೊರೊನಾ ಕಾಲದಲ್ಲಿ ಎಲ್ಲರಿಗೂ ಚೆನ್ನಾಗಿ ಅರ್ಥವಾಗಿದೆ. ಈ ಹಿಂದೆಯೂ ಕಷಾಯ ಸೇವಿಸುತ್ತಿದ್ದೂ, ದೇಶದಲ್ಲಿ ಕರೋನವೈರಸ್ ಸಾಂಕ್ರಾಮಿಕವು ಪ್ರಾರಂಭವಾದಾಗಿನಿಂದ, ಮನೆಯಲ್ಲಿ ತಾಯಿ ಅಥವಾ ಅಜ್ಜಿ ನಮಗೆ ಔಷಧಿಗಳ ಮೊದಲು ಗಾಢ ಬಣ್ಣದ ಕಷಾಯವನ್ನು ಹೆಚ್ಚೆಚ್ಚು ನೀಡುತ್ತಿದ್ದಾರೆ.

ಕಷಾಯವು ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದು ಸಾಮಾನ್ಯ ಶೀತ, ಜ್ವರ ಅಥವಾ ನೋಯುತ್ತಿರುವ ಗಂಟಲಿಗೆ ಪರಿಣಾಮಕಾರಿ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹಕ್ಕೆ ಪ್ರಯೋಜನವಾಗುವ ಬದಲು ಹಾನಿಯಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?.. ಹಾಗಾದರೆ ಕಷಾಯವನ್ನು ಹೆಚ್ಚು ಕುಡಿಯುವುದರಿಂದ ಆಗುವ ಅನನುಕೂಲಗಳೇನು ಎಂಬುದನ್ನು ತಿಳಿಯೋಣ.

ಹೆಚ್ಚು ಕಷಾಯ ಸೇವನೆ ಹಾನಿಕಾರಕ ಹೇಗೆ?:
ಕೋವಿಡ್ ಮಹಾಮಾರಿ ವಕ್ಕರಿಸಿ ಎರಡು ವರ್ಷಗಳು ಕಳೆದಿವೆ, ನಾವು ಇನ್ನೂ ಕಷಾಯವನ್ನು ಸೇವಿಸುತ್ತಿದ್ದೇವೆ. ಆದರೆ ಕಷಾಯವನ್ನು ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ?.. ಕಷಾಯದಲ್ಲಿ ಸಿಗುವ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡದಂತೆ ತಜ್ಞರು ಸಲಹೆ ನೀಡುತ್ತಾರೆ. ಅತಿಯಾದ ಕಷಾಯವು ನಿಮ್ಮ ಮೂತ್ರಪಿಂಡ ಮತ್ತು ಯಕೃತ್ತಿನ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ನೀವು ಈಗಾಗಲೇ ಯಾವುದೇ ಕಾಯಿಲೆಯಿಂದ ಬಳಲುತ್ತಿದ್ದರೆ, ಕಷಾಯವನ್ನು ಸೇವಿಸುವ ಮೊದಲು ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ.

ಕಷಾಯಕ್ಕೆ ಏನು ಹಾಕಬೇಕು?:
ಭಾರತದಲ್ಲಿ ಆಯುರ್ವೇದ ಔಷಧವು ಸಾವಿರಾರು ವರ್ಷಗಳಷ್ಟು ಹಳೆಯದು. ಇದರ ಪ್ರಕಾರ, ಔಷಧಿಗಳನ್ನು 5 ವಿಧಗಳಲ್ಲಿ ಸೇವಿಸಬಹುದು. ಅದರಲ್ಲಿ ಕಷಾಯವೂ ಒಂದು.
ಆಯುರ್ವೇದ ಔಷಧಗಳನ್ನು ಸೇವಿಸುವ ಸಾಮಾನ್ಯ ವಿಧಾನಗಳಲ್ಲಿ ಕಷಾಯ ಒಂದಾಗಿದೆ. ತುಳಸಿ, ಅಮೃತಬಳ್ಳಿ, ಅರಿಶಿನ, ಕರಿಮೆಣಸು, ಶುಂಠಿ, ಲವಂಗ, ನಿಂಬೆ, ಅಶ್ವಗಂಧ, ಏಲಕ್ಕಿ ಮತ್ತು ದಾಲ್ಚಿನ್ನಿ ಕಷಾಯವನ್ನು ತಯಾರಿಸಲು ಬಳಸುವ ಕೆಲವು ಸಾಮಾನ್ಯ ಪದಾರ್ಥಗಳು. ಇದನ್ನು ಹೊರತುಪಡಿಸಿ, ಬೇರಾವುದೇ ಪದಾರ್ಥಗಳನ್ನು ಸೇರಿಸಬೇಡಿ.

ಮಾರ್ಗಸೂಚಿ ಹೇಗಿದೆ?:
ದೇಶಾದ್ಯಂತ ಖ್ಯಾತ ವೈದ್ಯರೊಂದಿಗೆ ಸಮಾಲೋಚಿಸಿ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಅಧಿಕೃತ ಮಾರ್ಗಸೂಚಿಗಳ ಪ್ರಕಾರ, ತುಳಸಿ, ದಾಲ್ಚಿನ್ನಿ, ಕರಿಮೆಣಸು, ಶುಂಠಿ (ಒಣ ಶುಂಠಿ) ಮತ್ತು ಒಣದ್ರಾಕ್ಷಿ ಸೇರಿಸಿದ ಕಷಾಯವನ್ನು ದಿನಕ್ಕೆ ಒಂದು ಅಥವಾ ಎರಡು ಬಾರಿ ಮಾತ್ರ ಸೇವಿಸಬೇಕು. ಅದಕ್ಕಿಂತ ಹೆಚ್ಚು ಬಾರಿ ಸೇವನೆ ಒಳಿತಿಗಿಂತ ಹಾನಿ ಮಾಡಬಹುದು. ರುಚಿಗೆ ಸಕ್ಕರೆಯ ಬದಲು ಬೆಲ್ಲ ಹಾಕಬೇಕು. ಕರೋನವೈರಸ್ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು 10 ಗ್ರಾಂ ಚ್ಯವನ್‌ಪ್ರಾಶ್ ಅನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡುತ್ತದೆ, ಅಂದರೆ ಬೆಳಿಗ್ಗೆ ಒಂದು ಟೀಚಮಚ ಸೇವಿಸಬೇಕು.



Click it and Unblock the Notifications