Latest Updates
-
ಈ 5 ವಿಷಯಗಳಲ್ಲಿ ಮಿತಿ ಮೀರಿದ್ರೆ ಜೀವನ ಸರ್ವನಾಶ! ಅಹಂಕಾರ ಬಿಡಿ.. ಇಂದೇ ಇವುಗಳಿಂದ ದೂರವಿರಿ -
ಪಕ್ಕಾ ಹೈದರಾಬಾದಿ ರುಚಿ.. ಅತಿಥಿಗಳು ಬಂದ್ರೆ ಈ ಚಿಕನ್ ಯಖನಿ ಪುಲಾವ್ ಮಾಡಿ! ಸಿಂಪಲ್ & ಸೂಪರ್ ರುಚಿ -
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್!
ಪುರುಷರೇ, ನಿಮ್ಮಲ್ಲಿ ಈ ಆರೋಗ್ಯ ಸಮಸ್ಯೆಗಳು ಕಂಡುಬಂದರೆ, ಈ ಕೂಡಲೇ ವೈದ್ಯರನ್ನು ಸಂಪರ್ಕಿಸಿ
ಆರೋಗ್ಯ ಎಂಬುದು ಪ್ರತಿಯೊಬ್ಬರಿಗೂ ಮುಖ್ಯ, ಇದು ಯಾವುದೇ ಒಂದು ಲಿಂಗಕ್ಕೆ ಸೀಮಿತವಾಗಿಲ್ಲ. ಪ್ರತಿಯೊಬ್ಬ ವ್ಯಕ್ತಿಯು ತಮ್ಮ ವಯಸ್ಸು ಮತ್ತು ಲಿಂಗವನ್ನು ಲೆಕ್ಕಿಸದೇ ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೆ ಹೋಗುವುದು, ಉತ್ತಮ ಆಹಾರ ಮತ್ತು ಜೀವನಶೈಲಿಯ ಅನುಸರಿಸಬೇಕು. ಆದರೆ ಅನೇಕ ಅಧ್ಯಯನಗಳು ಪುರುಷರು ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸುವ ಸಾಧ್ಯತೆ ಹೆಚ್ಚು ಎಂದು ಹೇಳುತ್ತವೆ. ಏಕೆಂದರೆ ಪುರುಷರು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ, ತಮ್ಮನ್ನು ತಾವು ಫಿಟ್ ಮತ್ತು ಆರೋಗ್ಯಕರ ಎಂದು ಭಾವಿಸಿರುತ್ತಾರೆ.
ಆದರೆ ವಾಸ್ತವವಾಗಿ ಹಾಗಿರುವುದಿಲ್ಲ, ಅವರಲ್ಲೂ ನಾನಾ ಆರೋಗ್ಯ ಸಮಸ್ಯೆಗಳ ಲಕ್ಷಣಗಳಿರುತ್ತವೆ, ಅವುಗಳನ್ನು ಗಮನಿಸದೇ ನಿರ್ಲಕ್ಷ್ಯ ಮಾಡುತ್ತಾರೆ. ಇದು ಮುಂದೆ ದೊಡ್ಡ ಅಪಾಯವನ್ನು ಉಂಟುಮಾಡುತ್ತದೆ. ಆದ್ದರಿಂದ ಆರೋಗ್ಯದ ಹದಗೆಡುತ್ತಿರರುವ ಲಕ್ಷಣಗಳ ಬಗ್ಗೆ ಪುರುಷರು ಜಾಗರೂಕರಾಗಿರಬೇಕು. ನೀವು ಈ ಕೆಳಗಿನ ಯಾವುದೇ ಲಕ್ಷಣಗಳನ್ನು ಅನುಭವಿಸಿದರೆ, ಆರೋಗ್ಯ ತಪಾಸಣೆ ಮಾಡುವದನ್ನು ಮರೆಯಬೇಡಿ.
ಪುರುಷರು ನಿರ್ಲಕ್ಷಿಸಬಾರದ ಆರೋಗ್ಯ ಸಮಸ್ಯೆಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಮೂತ್ರ ವಿಸರ್ಜನೆಗೆ ಕಷ್ಟ ಅಥವಾ ಬಣ್ಣದಲ್ಲಿ ಬದಲಾವಣೆ:
ಮೂತ್ರದ ಬಣ್ಣದಲ್ಲಿ ಬದಲಾವಣೆ ಅಥವಾ ಬಾತ್‌ರೂಮ್‌ಗೆ ಹೋಗುವ ಅವಧಿಗಳಲ್ಲಿ ಹೆಚ್ಚು-ಕಡಿಮೆ ಆದರೆ, ಅದನ್ನು ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಇವು ಕೆಲವು ಸಮಸ್ಯೆಗಳ ಎಚ್ಚರಿಕೆಯಾಗಿರಬಹುದು. ಉದಾಹರಣೆಗೆ, ಮೂತ್ರದಲ್ಲಿ ರಕ್ತವನ್ನು ಕಂಡುಬರುವುದು ಕೆಲವು ಸೋಂಕಿನ ಸಂಕೇತವಾಗಬಹುದು, ಅಥವಾ ಕೆಲವು ಸಂದರ್ಭಗಳಲ್ಲಿ, ಪ್ರಾಸ್ಟೇಟ್ ಕ್ಯಾನ್ಸರ್ ಅಥವಾ ಕಿಡ್ನಿ ಸ್ಟೋನ್‌ನ ಆರಂಭಿಕ ಚಿಹ್ನೆಗಳಲ್ಲಿ ಒಂದಾಗಿರಬಹುದು. ಆದ್ದರಿಂದ ಮೂತ್ರವಿಸರ್ಜನೆಯಲ್ಲಿ ಯಾವುದಾದರೂ ಬದಲಾವಣೆ ಕಂಡರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಎದೆಯಲ್ಲಿ ನೋವು ಮತ್ತು ಉಸಿರಾಟದ ತೊಂದರೆ:
ಎದೆ ನೋವು ಮತ್ತು ಉಸಿರಾಟದ ತೊಂದರೆಗಳು ಹೃದಯ ಸಮಸ್ಯೆಗಳ ಸಂಕೇತವಾಗಿರಬಹುದು. ಹಠಾತ್ ಹಾರ್ಟ್ ಅಟ್ಯಾಕ್ ಆಗುವುದು ಎದೆ ಮತ್ತು ಭುಜದ ನೋವಿನೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ, ಯಾವುದೇ ಎದೆ ನೋವು, ಉಸಿರಾಟದ ಸಮಸ್ಯೆಗಳು, ವಿಪರೀತ ಬೆವರುವಿಕೆ ಅಥವಾ ಹೃದಯ ಬಡಿತದ ಏರಿಳಿತಗಳು ಕಂಡುಬಂದರೆ ಒಮ್ಮೆ ಪರೀಕ್ಷಿಸಿಕೊಳ್ಳಿ. ನಿಮ್ಮ ಕುಟುಂಬದಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಇತಿಹಾಸವಿದ್ದರೆ ಅಥವಾ ಧೂಮಪಾನ ಅಥವಾ ಮದ್ಯ ಸೇವನೆಯನ್ನ ಹೊಂದಿದ್ದರೆ, ಆದಷ್ಟು ಬೇಗ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ.

ಜನನಾಂಗಗಳಲ್ಲಿ ಗಡ್ಡೆ ಕಂಡುಬರುವುದು:
'ಜನನಾಂಗಗಳ' ಬಗ್ಗೆ ಯಾರೂ ಮಾತನಾಡುವುದಿಲ್ಲ, ಅದರ ಬಗ್ಗೆ ಹೇಳಿಕೊಳ್ಳಲು ಒಂದು ರೀತಿಯ ಮುಜುಗರ. ಆದರೆ ಇದನ್ನು ನಿರ್ಲಕ್ಷಿಸದಿರುವುದು ಬಹಳ ಮುಖ್ಯ. ಶಿಶ್ನ ಅಥವಾ ವೃಷಣಗಳ ಸುತ್ತ ಯಾವುದೇ ಗಡ್ಡೆಗಳು ಕಂಡುಬಂದರೆ ಎಚ್ಚರಗೊಳ್ಳುವುದು ಮುಖ್ಯ. ಇದು ಕ್ಯಾನ್ಸರ್‌ಗೆ ಕಾರಣವಾಗಬಹುದು. ಅಧ್ಯಯನದ ಪ್ರಕಾರ, ವೃಷಣ ಕ್ಯಾನ್ಸರ್ ಯುವಕರಲ್ಲಿ ಕಂಡುಬರುವ ಸಾಮಾನ್ಯ ವಿಧದ ಕ್ಯಾನ್ಸರ್‌ಗಳಲ್ಲಿ ಒಂದಾಗಿದ್ದು, ಹೆಚ್ಚಿನ ಗಮನಕ್ಕೆ ಬರುವುದಿಲ್ಲ. ಜನನಾಂಗಗಳಲ್ಲಿ ಯಾವುದೇ ಗಡ್ಡೆಗಳು ಅಥವಾ ದೇಹದ ಇತರ ಭಾಗಗಳಲ್ಲಿ ಊತಗಳು ಕಂಡುಬಂದರೆ ಅವುಗಳನ್ನು ನಿರ್ಲಕ್ಷಿಸಬಾರದು.

ಲೈಂಗಿಕ ತೃಪ್ತಿ ಇಲ್ಲದೇ ಇರುವುದು:
ಇದೊಂದು ಸಾಮಾನ್ಯವಾಗಿ ವಯಸ್ಸಿನಲ್ಲಿ ಪುರುಷರು ಎದುರಿಸುತ್ತಿರುವ ಸಮಸ್ಯೆಯಾಗಿದೆ, ಆದರೆ ಬಹಳಷ್ಟು ಜನರು ಇದನ್ನು ಗಣನೆಗೆ ತೆಗೆದುಕೊಳ್ಳುವುದೇ ಇಲ್ಲ. ಆದರೆ ಇದು ಇತರ ಆರೋಗ್ಯ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿರುತ್ತದೆ. ತಜ್ಞರ ಪ್ರಕಾರ, ಸುಮಾರು 70% ಪ್ರಕರಣಗಳು ಇತರ ಆರೋಗ್ಯ ಸ್ಥಿತಿಗಳಿಗೆ ಸಂಬಂಧಿಸಿದ್ದು, ಮುಂದೆ ಎದುರಿಸಬೇಕಾಗಿರುವ ಗಂಭೀರ ಸಮಸ್ಯೆಗಳ ಸೂಚನೆ ಎನ್ನುತ್ತಾರೆ. ಲೈಂಗಿಕ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವ ಕೆಲವು ಆರೋಗ್ಯ ಸಮಸ್ಯೆಗಳಲ್ಲಿ ಮೂತ್ರಪಿಂಡ ವೈಫಲ್ಯ, ನರವೈಜ್ಞಾನಿಕ ಅಸ್ವಸ್ಥತೆಗಳು, ತೀವ್ರ ಮಧುಮೇಹ, ಮದ್ಯಪಾನ ಅಥವಾ ಯಾವುದೇ ರೀತಿಯ ಚಟಗಳು ಸೇರಿಕೊಂಡಿವೆ. ಈ ಪರಿಸ್ಥಿತಿಗಳು ಕೆಲವು ನರಗಳು ಮತ್ತು ಅಂಗಾಂಶಗಳನ್ನು ಹಾನಿಗೊಳಿಸುವುದರ ಮೂಲಕ ಮನುಷ್ಯನಿಗೆ ಲೈಂಗಿಕ ತೃಪ್ತಿ ಸಾಧಿಸಲು ಕಷ್ಟಕರವಾಗಿಸುತ್ತದೆ.

ಅತಿಯಾದ ಬಾಯಾರಿಕೆ:
ದೇಹದ ಹೈಡ್ರೇಟಿಂಗ್ ಮಟ್ಟವನ್ನು ಕಾಪಾಡಿಕೊಳ್ಳುವುದು ಮತ್ತು ಪ್ರತಿ ದಿನವೂ 2-3 ಲೀಟರ್ ನೀರನ್ನು (ಅಥವಾ, ಕನಿಷ್ಠ 8-10 ಗ್ಲಾಸ್) ತಪ್ಪದೇ ಕುಡಿಯುವುದು ಮುಖ್ಯವಾಗಿದೆ. ಬೇಸಿಗೆಯಲ್ಲಿ ಬಾಯಾರಿಕೆಯಾಗುವುದು ಸಾಮಾನ್ಯವಾಗಿದ್ದರೂ, ದೀರ್ಘಕಾಲದ ಬಾಯಾರಿಕೆಯನ್ನು ಅನುಭವಿಸುವುದು ಅಥವಾ ಒಂದು ದಿನ ಹೆಚ್ಚು ನೀರು ಕುಡಿಯುವುದು ಹೈಪರ್ಗ್ಲೈಸೀಮಿಯಾದ ಎಚ್ಚರಿಕೆಯ ಚಿಹ್ನೆಯಾಗಿರಬಹುದು. ಇದು ಮಧುಮೇಹವನ್ನು ಬೆಳೆಸುವ ಸಂಕೇತವಾಗಿದೆ. ನೀವೇನಾದರೂ ಮಧುಮೇಹದ ಕೌಟುಂಬಿಕ ಇತಿಹಾಸವನ್ನು ಹೊಂದಿದ್ದರೆ ಅಥವಾ ಅಧಿಕ ರಕ್ತದ ಸಕ್ಕರೆ ಮಟ್ಟಗಳಿಗೆ ಸಂಬಂಧಿಸಿದ ಲಕ್ಷಣಗಳನ್ನು ಅನುಭವಿಸುತ್ತಿದ್ದರೆ, ಆಗಾಗ ವೈದ್ಯರನ್ನು ಭೇಟಿ ಮಾಡಬೇಕು. ನೆನಪಿಡಿ, ಸರಿಯಾದ ಆಹಾರ ಮತ್ತು ಜೀವನಶೈಲಿಯ ಬದಲಾವಣೆಗಳ ಸಹಾಯದಿಂದ ಸಮಯಕ್ಕೆ ರೋಗನಿರ್ಣಯ ಮಾಡಿದರೆ ಮಧುಮೇಹವನ್ನು ಚೆನ್ನಾಗಿ ನಿರ್ವಹಿಸಬಹುದು.

ಮರೆವು:
ಮರೆವು ಮನುಷ್ಯನಿಗೆ ಸಾಮಾನ್ಯ, ಆದರೆ ಆಗಾಗ ಈ ಸಮಸ್ಯೆ ಎದುರಿಸುತ್ತಿದ್ದರೆ, ಎಲ್ಲವನ್ನೂ ಮರೆಯುತ್ತಿದ್ದರೆ, ತಪಾಸಣೆಯ ಅಗತ್ಯವಿರುತ್ತದೆ. ವಯಸ್ಸಾಗಿಯುವಿಕೆಯಿಂದಾಗಿ ಸ್ವಲ್ಪ ಪ್ರಮಾಣದ ನೆನಪಿನ ಶಕ್ತಿಯ ಕುಸಿತವನ್ನು ಅನುಭವಿಸುವುದು ಸಾಮಾನ್ಯವಾಗಿದ್ದರೂ, ತೀವ್ರವಾದ ನೆನಪಿನ ನಷ್ಟವು ಮೆದುಳಿನ ಸೋಂಕುಗಳು, ಪಾರ್ಶ್ವವಾಯು, ಬುದ್ಧಿಮಾಂದ್ಯತೆಯಂತಹ ಸಮಸ್ಯೆಗಳ ಪರಿಣಾಮವಾಗಿರಬಹುದು. ನೆನಪಿನ ಶಕ್ತಿ ಕುಂಠಿತವಾಗುವುದು ಮತ್ತು ಇತರ ಮೆದುಳಿಗೆ ಸಂಬಂಧಿಸಿದ ಅಡಚಣೆಗಳು ವಿಟಮಿನ್ ಬಿ 12 ಕೊರತೆಯೂ ಸೇರಿದಂತೆ ಪೌಷ್ಟಿಕಾಂಶದ ಕೊರತೆಯ ಪರಿಣಾಮವಾಗಿರಬಹುದು ಎಂದು ಗಮನಿಸಬೇಕು.



Click it and Unblock the Notifications











