Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಪ್ರತಿದಿನ ಮಲಗುವ ಮುನ್ನ ಪಾದಗಳಿಗೆ ಎಣ್ಣೆ ಮಸಾಜ್ ಮಾಡಿ, ಫಲಿತಾಂಶ ನಿಮಗೆ ತಿಳಿಯುತ್ತೆ..
ನಮ್ಮ ದೈನಂದಿನ ಆರೈಕೆ ಕೇವಲ ನಮ್ಮ ಮುಖ, ಕೂದಲು, ದೇಹ ಮತ್ತು ಉಗುರುಗಳಿಗೆ ಸೀಮಿತವಾಗಿವೆ. ಹೆಚ್ಚಿನವರು ತಮ್ಮ ಪಾದಗಳ ಬಗ್ಗೆ ಅಷ್ಟಾಗಿ ಕಾಳಜಿ ಮಾಡುವುದಿಲ್ಲ. ಆದರೆ ನಮ್ಮ ದೇಹದ ಇತರ ಭಾಗಗಳಷ್ಟೇ ಮಹತ್ವವನ್ನು ಪಾದಗಳಿಗೂ ನೀಡಬೇಕು. ಏಕೆಂದರೆ ಪಾದಗಳಲ್ಲಿ ಸಾಕಷ್ಟು ವಿಷ ಸಂಗ್ರಹಣೆಯಾಗುತ್ತವೆ.
ಪಾದದ ಆರೈಕೆ ಮಾಡಲು ಹಗಲಿನಲ್ಲಿ ಬಿಡುವಿಲ್ಲವೆಂದರೆ ರಾತ್ರಿಯ ಸಮಯವಾದರೂ ಪಾದಗಳಿಗೆ ಮೀಸಲಿಡಬೇಕು. ಹೆಚ್ಚೇನು ಮಾಡಬೇಕಾಗಿಲ್ಲ, ಮಲಗುವ ಮುನ್ನ ಪಾದಗಳಿಗೆ ಎಣ್ಣೆ ಹಚ್ಚಿ ಮಸಾಜ ಮಾಡಿದರೆ ಸಾಕು. ಅದರಿಂದ ಸಿಗುವ ಪ್ರಯೋಜನಗಳ ಪಟ್ಟಿ ಬಹಳ ದೊಡ್ಡದಿದೆ. ಇದು ಪಾದಗಳಿಗೆ ಮಾತ್ರ ಉತ್ತಮವಲ್ಲ, ಆರೋಗ್ಯದ ದೃಷ್ಠಿಯಿಂದಲೂ ಒಳ್ಳೆಯದು.
ರಾತ್ರಿ ಮಲಗುವ ಮುನ್ನ ನಿಮ್ಮಿಷ್ಟದ ಎಣ್ಣೆಯಿಂದ ಪಾದಗಳಿಗೆ ಮಸಾಜ್ ಮಾಡುವುದರಿಂದ ಸಿಗುವ ಲಾಭಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಪಾದಗಳಿಗೆ ಮಸಾಜ್ ಮಾಡುವುದು ಹೇಗೆ?:
- ಮಲಗುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆಯಿರಿ.
- ಈಗ ನಿಮ್ಮ ಹಾಸಿಗೆಯ ಮೇಲೆ ಕುಳಿತು ನಿಮ್ಮ ಕಾಲುಗಳನ್ನು ಮುಂದೆ ನೀಡಿ.
- ಕೆಲವು ಹನಿ ಎಣ್ಣೆಯನ್ನು ತೆಗೆದುಕೊಂಡು ನಿಮ್ಮ ಪಾದಗಳನ್ನು ಮಸಾಜ್ ಮಾಡಿ.
- ನಿಮ್ಮ ಪಾದಗಳ ಮೇಲೆ, ಕಾಲ್ಬೆರಳುಗಳ ನಡುವೆ ಎಣ್ಣೆಯನ್ನು ಹಚ್ಚಿ.
- ಪ್ರತಿ ಬೆರಳನ್ನು ನಿಧಾನವಾಗಿ ಒತ್ತಿ.
- ಹೆಚ್ಚಿನ ಪರಿಣಾಮಕಾರಿತ್ವಕ್ಕಾಗಿ ಕನಿಷ್ಠ 5-10 ನಿಮಿಷಗಳ ಕಾಲ ಮಸಾಜ್ ಮಾಡುವುದನ್ನು ಮುಂದುವರಿಸಿ.
- ಉತ್ತಮ ವಿಶ್ರಾಂತಿಗಾಗಿ ಬೆಚ್ಚಗಿನ ಎಣ್ಣೆಯಿಂದ ಮಸಾಜ್ ಮಾಡಿ.
- ನಿಮ್ಮ ಪಾದಗಳು ತುಂಬಾ ಎಣ್ಣೆ ಎಣ್ಣೆ ಎಂದು ಅನಿಸಿದರೆ, ಪಾದಗಳ ಮೇಲೆ ಹಳೆಯ ಟವಲ್ ಅನ್ನು ಹಾಕಬಹುದು.

ಪಾದಗಳಿಗೆ ಎಣ್ಣೆ ಮಸಾಜ್ ಮಾಡುವುದರಿಂದ ಸಿಗುವ ಪ್ರಯೋಜನಗಳು:
ರಕ್ತ ಪರಿಚಲನೆ ಸುಧಾರಣೆಯಾಗುವುದು:
ಈ ಕೊರೊನಾದ ಸಮಯದಲ್ಲಿ ವಾಕಿಂಗ್, ಜಾಗಿಂಗ್ ಎಲ್ಲವೂ ಅನಿಯಮಿತವಾಗಿರುವುದರಿಂದ ನಮ್ಮ ಪಾದಗಳಿಗೆ ರಕ್ತ ಪರಿಚಲನೆ ಆಗುವುದಿಲ್ಲ. ಆದ್ದರಿಂದ ನಿಮ್ಮ ಪಾದಗಳನ್ನು ಆರೋಗ್ಯವಾಗಿಡಲು, ಎಣ್ಣೆ ಮಸಾಜ್ ಮಾಡಲು 5 ನಿಮಿಷಗಳನ್ನು ತೆಗೆದುಕೊಳ್ಳಬಹುದು. ಮಲಗುವ ಮುನ್ನ ನಿಮ್ಮ ಪಾದಗಳನ್ನು ನಿಮಗೆ ಇಷ್ಟವಾದ ಎಣ್ಣೆಯಿಂದ ನಿಧಾನವಾಗಿ ಮಸಾಜ್ ಮಾಡಿ. ಇದರಿಂದ ಪಾದಗಳಿಗೆ ರಕ್ತಸಂಚಾರವಾಗುವುದು.

ನಿದ್ರೆಯನ್ನು ಉತ್ತೇಜಿಸುವುದು:
ಮಲಗುವ ಮುನ್ನ ಎಣ್ಣೆಯನ್ನು ಮಸಾಜ್ ಮಾಡುವುದರಿಂದ ವಿಶ್ರಾಂತಿ ಪಡೆಯಲು ಸಹಾಯ ಆಗುತ್ತದೆ. ಇದು ಒತ್ತಡವನ್ನು ನಿವಾರಿಸಿ, ನರಗಳನ್ನು ಸಡಿಲಗೊಳಿಸುತ್ತದೆ. ನಿಮ್ಮ ಪಾದಗಳಲ್ಲಿ ನಿದ್ರೆಯನ್ನು ಪ್ರೇರೇಪಿಸುವ ಹಲವಾರು ಅಕ್ಯುಪಂಕ್ಚರ್ ಪಾಯಿಂಟ್‌ಗಳಿವೆ. ನೀವು ಸಂಪೂರ್ಣ ಪಾದವನ್ನು ಮಸಾಜ್ ಮಾಡಿದಾಗ, ಆ ಅಕ್ಯುಪಂಕ್ಚರ್ ಪಾಯಿಂಟ್‌ಗಳನ್ನು ಸಹ ಸಕ್ರಿಯಗೊಳಿಸುತ್ತೀರಿ. ಆದ್ದರಿಂದ, ಹೆಚ್ಚಿದ ರಕ್ತ ಪರಿಚಲನೆ ಮತ್ತು ಆರಾಮವಾಗಿರುವ ನರಗಳು, ಉತ್ತಮ ನಿದ್ರೆಯನ್ನು ನೀಡುತ್ತದೆ.

ನೋವನ್ನು ಕಡಿಮೆ ಮಾಡುವುದು:
ಎಣ್ಣೆ ಮಸಾಜ್ ಉರಿಯೂತವನ್ನು ಶಮನಗೊಳಿಸಿ, ಪಾದಗಳಲ್ಲಿರುವ ಯಾವುದೇ ರೀತಿಯ ಒತ್ತಡ ಅಥವಾ ನೋವನ್ನು ನಿವಾರಿಸುತ್ತದೆ. ಪಾದದ ಮೇಲೆ ವಿಶೇಷ ಒತ್ತು ನೀಡಿ ಇಡೀ ಪಾದಗಳನ್ನು ಮಸಾಜ್ ಮಾಡಿ. ಇದು ಆಯಾಸಗೊಂಡ ಸ್ನಾಯುಗಳನ್ನು ಸಡಿಲಗೊಳಿಸಲು ಸಹಾಯ ಮಾಡುತ್ತದೆ ಜೊತೆಗೆ ಉತ್ತಮ ನಿದ್ರೆಗಾಗಿ ನಿಮ್ಮ ಇಡೀ ದೇಹವನ್ನು ಸಡಿಲಗೊಳಿಸುತ್ತದೆ. ನಿಮ್ಮ ಪಾದಗಳನ್ನು ಬೆಚ್ಚಗಿನ ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯಿಂದ ಮಸಾಜ್ ಮಾಡುವುದರಿಂದ ಪಾದದ ಉರಿಯೂತಕ್ಕೆ ಪರಿಹಾರವನ್ನು ನೀಡಬಹುದು ಎಂದು ಸಾಬೀತಾಗಿದೆ.

ಋತುಸ್ರಾವದ ಸಮಸ್ಯೆಗಳನ್ನು ಕಡಿಮೆ ಮಾಡುವುದು:
ಮುಟ್ಟಿನ ಸಮಯದಲ್ಲಿ ಸಾಮಾನ್ಯವಾಗಿ ಮೂಡ್ ಸ್ವಿಂಗ್, ಉಬ್ಬುವಿಕೆ, ನಿದ್ರಾಹೀನತೆ, ವಾಕರಿಕೆ ಮತ್ತು ಹೊಟ್ಟೆಯ ಸೆಳೆತದಿಂದ ಬಳಲುವಂತೆ ಮಾಡುತ್ತದೆ. ಈ ರೋಗಲಕ್ಷಣಗಳನ್ನು ನಿಯಂತ್ರಿಸುವಲ್ಲಿ ಕಾಲು ಮಸಾಜ್ ಸಹ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಇದಕ್ಕಾಗಿ ನಿಮ್ಮ ಪಾದಗಳನ್ನು ಲ್ಯಾವೆಂಡರ್ ಎಣ್ಣೆಯಿಂದ ಮಸಾಜ್ ಮಾಡಬಹುದು. ಇದರಿಂದ ಯಾವುದೇ ತೊಂದರೆಯಿಲ್ಲದ ಋತುಸ್ರಾವವನ್ನು ಕಳೆಯಬಹುದು.



Click it and Unblock the Notifications