Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಊಟದ ನಂತರ ಮಜ್ಜಿಗೆ ಸೇವಿಸುವುದರಿಂದ ಇಷ್ಟೆಲ್ಲಾ ಲಾಭಗಳಿದ್ಯಾ?
ಮಜ್ಜಿಗೆ ಬಡವರ ಅಮೃತ ಇದ್ದ ಹಾಗೆ. ಹಿಂದಿನ ಕಾಲದಲ್ಲಿ ಜನ ಊಟದ ನಂತರ ಕಡ್ಡಾಯವಾಗಿ ಮಜ್ಜಿಗೆಯನ್ನು ಕುಡಿಯುತ್ತಿದ್ದರು. ಈಗಿನ ಕಾಲದ ಮಕ್ಕಳ ರೀತಿ ಬಣ್ಣ ಬಣ್ಣದ ಪಾನೀಯನ್ನು ಸೇವಿಸುತ್ತಿರಲಿಲ್ಲ.

ಬಹುಶಃ ಮಜ್ಜಿಗೆಗೆ ಸರಿಸಾಟಿಯಾದ ಪಾನೀಯ ಮತ್ತೊಂದಿಲ್ಲ ಅನ್ನಿಸುತ್ತೆ. ಮಜ್ಜಿಗೆಯನ್ನು ಇದೇ ರೀತಿ ಸೇವಿಸಬೇಕೆಂದೇನಿಲ್ಲ. ಅನೇಕರು ಉಪ್ಪು ಸೇರಿಸದೇ ಬರೀ ಮಜ್ಜಿಯನ್ನು ಸೇವಿಸುತ್ತಾರೆ. ಆದರೆ ಇನ್ನೂ ಕೆಲವರು ಮಜ್ಜಿಗೆಗೆ ಉಪ್ಪು, ಕೊತ್ತಂಬರಿ ಸೊಪ್ಪು, ಹಸಿಮೆಣಸಿನ ಕಾಯಿಯನ್ನೆಲ್ಲಾ ಸೇರಿಸಿ ನಂತರ ಕುಡಿಯುತ್ತಾರೆ. ನಿಮಗೊತ್ತಾ ಊಟದ ನಂತರ ಮಜ್ಜಿಗೆ ಸೇವಿಸುವುದರಿಂದ ಏನೆಲ್ಲಾ ಉಪಯೋಗಗಳಿದೆ ಅಂತ. ಅಷ್ಟಕ್ಕು ಮಜ್ಜಿಗೆ ನಮ್ಮ ಆರೋಗ್ಯಕ್ಕೆ ಯಾವ ರೀತಿ ಪ್ರಯೋಜನಕಾರಿಯಾಗಲಿದೆ ಅನ್ನೋದನ್ನು ನೋಡೋಣ.

1. ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ
ಪ್ರತಿನಿತ್ಯ ಊಟದ ನಂತರ ಮಜ್ಜಿಗೆ ಸೇವಿಸುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆ ಇದ್ದವರು ನಿತ್ಯ ಮಜ್ಜಿಗೆ ಸೇವನೆ ಮಾಡಬಹುದು. ಶೀತಾ, ಕೆಮ್ಮು ಇದ್ದ ಸಂದರ್ಭದಲ್ಲಿ ಮಜ್ಜಿಗೆ ಕುಡಿಯುವುದನ್ನು ನಿಲ್ಲಿಸಿ ಬೇರೆ ಸಮಯದಲ್ಲಿ ನಿತ್ಯ ಮಜ್ಜಿಗೆ ಸೇವನೆ ಮಾಡಬಹುದು.

2. ಆಸಿಡಿಟಿ ಕಡಿಮೆ ಮಾಡುತ್ತದೆ
ಎಣ್ಣೆಯುಕ್ತ ಹಾಗೂ ಅತೀ ಖಾರವಾದ ಆಹಾರ ಸೇವಿಸುವುದರಿಂದ ಹೊಟ್ಟೆಯೊಳಗಡೆ ಆಮ್ಲೀಯತೆ ಹೆಚ್ಚಾಗುತ್ತದೆ ಹಾಗೂ ಎದೆಯುರಿ ಕಾಣಿಸಿಕೊಳ್ಳುತ್ತದೆ. ಊಟದ ನಂತರ ಮಜ್ಜಿಗೆಗೆ ಕರಿಮೆಣಸು ಹಾಗೂ ಕೊತ್ತಂಬರಿ ಸೊಪ್ಪು ಸೇರಿಸುವುದರಿಂದ ಅದು ವೇಗವಾಗಿ ಹೊಟ್ಟೆಯ ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ.

3. ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ
ಊಟದ ನಂತರ ಮಜ್ಜಿಗೆ ಯಾವ ಕಾರಣಕ್ಕೆ ಸೇವಿಸಬೇಕು ಎಂದರೆ ಇದು ಜೀರ್ಣಕ್ರಿಯೆ ಹೇಳಿಮಾಡಿಸಿದ ಪಾನೀಯ ಅಂದ್ರೆ ತಪ್ಪಾಗೋದಿಲ್ಲ. ಮಜ್ಜಿಗೆಯಲ್ಲಿರುವ ಆರೋಗ್ಯಕರ ಬ್ಯಾಕ್ಟೀರಿಯಾಗಳು ಮತ್ತು ಲ್ಯಾಕ್ಟಿಕ್ ಆಸೀಡ್ ಚಯಾಪಚಯಕ್ರಿಯೆ ವೇಗವಾಗಿ ನಡೆಯುವಲ್ಲಿ ನೆರವಾಗುತ್ತದೆ ಹಾಗೂ ಜೀರ್ಣಕ್ರಿಯೆಗೆ ಸಹಕರಿಸುತ್ತದೆ.

4. ನಿರ್ಜಲೀಕರಣವನ್ನು ತಡೆಗಟ್ಟುತ್ತದೆ
ಮಜ್ಜಿಗೆಯನ್ನು ನೀರು ಹಾಗೂ ಮೊಸರು ಸೇರಿಸಿ ತಯಾರಿಸಲಾಗುತ್ತದೆ. ಮಜ್ಜಿಗೆಯಲ್ಲಿ ಶೇಕಡಾ ಹತ್ತರಷ್ಟು ಮಾತ್ರ ಮೊಸರಿದ್ದು ತೊಂಬತ್ತರಷ್ಟು ನೀರನ್ನು ಹೊಂದಿರುತ್ತದೆ. ಊಟದ ನಂತರ ಮಜ್ಜಿಗೆ ಯಾಕೆ ಸೇವಿಸಬೇಕು ಅಂದರೆ ಸಾಮಾನ್ಯವಾಗಿ ಊಟದ ನಂತರ ನಿದ್ದೆಗೆ ಜಾರುತ್ತೇವೆ. ಹೊಟ್ಟೆತುಂಬಾ ಮೊಸರು ಕುಡಿದಿದ್ದರೆ ಇದು ನಮ್ಮ ದೇಹದಲ್ಲಿ ನೀರಿನ ಅಂಶವನ್ನು ರಾತ್ರಿಯಿಡೀ ಕಾಪಾಡುತ್ತದೆ.

5. ತೂಕ ಕಡಿಮೆಗೊಳಿಸಲು ಸಹಕರಿಸುತ್ತದೆ
ಮಜ್ಜಿಗೆಯಲ್ಲಿ ಕ್ಯಾಲರಿ ಮತ್ತು ಕೊಬ್ಬಿನ ಅಂಶ ಕಡಿಮೆ ಇದ್ದು ಪ್ರೋಟಿನ್ ಮತ್ತು ವಿಟಮಿನ್ ಅಧಿಕ ಪ್ರಮಾಣದಲ್ಲಿದೆ. ಮಜ್ಜಿಗೆ ಕುಡಿಯುವುದರಿಂದ ಶಕ್ತಿಯುತವಾಗಿರಬಹುದು ಮತ್ತು ದೇಹದಲ್ಲಿ ನೀರಿನ ಅಂಶ ಕಾಪಾಡಲು ನೆರವಾಗುತ್ತದೆ. ಹಾಗೆಯೇ ಹೊಟ್ಟೆ ತುಂಬಿದಂತೆ ಭಾಸವಾಗುತ್ತದೆ. ಇದರಿಂದ ಹೊರಗಿನ ಜಂಕ್ ಆಹಾರಗಳನ್ನು ತಿನ್ನುವುದನ್ನು ಕಡಿಮೆ ಮಾಡುತ್ತೇವೆ. ತೂಕ ಇಳಿಸಬೇಕು ಅನ್ನುವವರಿಗೆ ಅಂಗಡಿಯಲ್ಲಿ ದೊರೆಯುವ ಬಣ್ಣ ಬಣ್ಣದ ಪಾನೀಯಗಳಿಗಿಂತ ಮಜ್ಜಿಗೆ ಉತ್ತಮ ಪಾನೀಯ.
ಮಧ್ಯಾಹ್ನ ಅಥವಾ ರಾತ್ರಿಯೇ ಆಗಲಿ ಊಟದ ನಂತರ ಮಜ್ಜಿಗೆ ಕುಡಿಯುವ ಅಭ್ಯಾಸ ಬೆಳೆಸಿ ಇದು ಉತ್ತಮ ಅಭ್ಯಾಸ. ಆರೋಗ್ಯಕ್ಕೆ ಒಳ್ಳೆಯದು ಅನ್ನುವ ಯಾವ ಅಭ್ಯಾಸಗಳನ್ನು ಖಂಡಿತ ಬಿಡಲೇಬಾರದು.



Click it and Unblock the Notifications
