ಮೈಯ ದುರ್ಗಂಧ ಪತ್ತೆಹಚ್ಚಲು ಇಲ್ಲಿದೆ ನೋಡಿ ನಾಲ್ಕು ಸಿಂಪಲ್ ಟಿಪ್ಸ್

ಟಿವಿ ಮುಂದೆ ಒಂದರ್ಧ ಗಂಟೆ ಕುಳಿತರೆ ಆಗ ನಿಮಗೆ ಮೈಯ ದುರ್ಗಂಧ ದೂರ ಮಾಡುವ ಉತ್ಪನ್ನದ ಜಾಹೀರಾತು ಒಂದೆರಡು ಬಾರಿ ಖಂಡಿತವಾಗಿಯೂ ಕಣ್ಣಿಗೆ ಬೀಳುವುದು. ಬೆವರು ಹರಿದು ದುರ್ಗಂಧ ಬರುವುದು ಸಾಮಾಣ್ಯ ವಿಚಾರ. ಯಾಕೆಂದರೆ ದೇಹದ ಉಷ್ಣತೆ ಸಮತೋಲನದಲ್ಲಿಡಲು ಬೆವರುವುದು. ಇದರಿಂದ ಮೈ ಜಿಗುಟಿನಿಂದ ಕೂಡುವುದು ಮತ್ತು ದುರ್ಗಂಧ ಬೀರುವುದು. ವಯಸ್ಸು, ಆಹಾರ ಕ್ರಮ, ಆರೋಗ್ಯ ಮತ್ತು ಲಿಂಗ ಬೇಧವಿಲ್ಲದೆ ಇದು ಪ್ರತಿಯೊಬ್ಬರನ್ನು ಕಾಡುವುದು. ವ್ಯಕ್ತಿಯ ಸಾಮರ್ಥ್ಯಕ್ಕೆ ಅನುಗುಣವಾಗಿ ಬೆವರುವುದು.

ಮನುಷ್ಯನ ಮೂಗು ಸುಮಾರು ಒಂದು ಟ್ರಿಲಿಯನ್ ವಿವಿಧ ವಾಸನೆಯನ್ನು ಘ್ರಾಣಿಸಬಹುದು. ಆದರೆ ದೇಹದ ವಾಸನೆಯನ್ನು ಮೂಗು ಘ್ರಾಣಿಸಿಕೊಳ್ಳುವುದು ಒಳ್ಳೆಯದಲ್ಲ. ಇದರಿಂದ ಮೂಗಿಗೆ ತೊಂದರೆ ಆಗುವುದು. ದೇಹದ ದುರ್ಗಂಧ ಚರ್ಮದಲ್ಲಿರುವ ಬ್ಯಾಕ್ಟೀರಿಯಾವು ಬೆವರಿನಲ್ಲಿರುವಂತಹ ಪ್ರೋಟೀನ್ ನ್ನು ವಿವಿಧ ರೀತಿಯ ಆಮ್ಲವನ್ನಾಗಿ ವಿಘಟಿಸಲು ಪ್ರಯತ್ನಿಸುವುದು. ಇದರಿಂದಾಗಿ ದೇಹದಲ್ಲಿ ವಾಸನೆ ಬರುವುದು. ಚರ್ಮದಲ್ಲಿ ಇದೇ ಬ್ಯಾಕ್ಟೀರಿಯಾಗಳಿಂದಾಗಿ ದುರ್ಗಂಧವು ಮೂಡುವುದು.

Body Odor

ಕೆಲವೊಂದು ಸಲ ದೇಹದಿಂದ ಬೆವರು ಬರದೇ ಇದ್ದರೂ ದುರ್ಗಂಧವು ಬರುವುದು. ಇದು ದೇಹದಲ್ಲಿ ಇರುವಂತಹ ಅತಿಯಾದ ಬ್ಯಾಕ್ಟೀರಿಯಾದ ಪರಿಣಾಮ ಕಾಣಿಸುವುದು. ಕಂಕುಳ, ತೊಡೆಸಂಧು, ಮೊಣಕೈಯಲ್ಲಿ ದುರ್ಗಂಧ ಬರುವಂತಹ ಸಾಧ್ಯತೆಯು ಹೆಚ್ಚಾಗಿ ಇರುತ್ತದೆ. ಬಾಯಿಯ ವಾಸನೆಯನ್ನು ಕೂಡ ದೇಹದ ದುರ್ಗಂಧವೆಂದು ಪರಿಗಣಿಸಲಾಗುತ್ತದೆ.

ದೇಹದ ದುರ್ಗಂಧದಿಂದಾಗಿ ನಮಗೆ ಮುಜುಗರ ಉಂಟಾಗಬಹುದು. ಇದರಿಂದಾಗಿ ಆತ್ಮವಿಶ್ವಾಸ ಕುಂದಬಹುದು ಮತ್ತು ವ್ಯಕ್ತಿತ್ವದ ಮೇಲೆ ಪರಿಣಾಮ ಉಂಟಾಗಬಹುದು. ದೇಹದ ದುರ್ಗಂಧ ಪತ್ತೆ ಮಾಡಲು ಸಾಧ್ಯವಾಗುತ್ತಿಲವೇ? ಕೆಲವೊಂದು ವಿಧಾನಗಳಿಂದ ದೇಹದ ದುರ್ಗಂಧ ಪತ್ತೆ ಮಾಡಬಹುದು ಮತ್ತು ಇದನ್ನು ನಿವಾರಣೆ ಮಾಡಬಹುದು. ದೇಹದ ದುರ್ಗಂಧ ಪತ್ತೆ ಮಾಡಲು ಕೆಲವೊಂದು ವಿಧಾನಗಳು

ಬಟ್ಟೆ ಪರೀಕ್ಷೆ
ಪ್ರತಿನಿತ್ಯ ನೀವು ಬಳಸಿದ ಬಟ್ಟೆಗಳನ್ನು ಪರೀಕ್ಷಿಸಿ ಅದರಿಂದ ವಾಸನೆ ಬರುತ್ತಿದೆಯಾ ಎಂದು ತಿಳಿಯಿರಿ. ನಿಮ್ಮ ಬಟ್ಟೆಯ ಪ್ರತಿಯೊಂದು ಭಾಗವನ್ನು ಮೂಸಿ ನೋಡಿದರೆ ಆಗ ನಿಮಗೆ ಯಾವ ಭಾಗದಿಂದ ದುರ್ಗಂಧ ಬರುತ್ತಿದೆ ಎಂದು ತಿಳಿಯುವುದು. ಉದ್ಯೋಗದ ಜಾಗದಲ್ಲಿ ಇದು ತುಂಬಾ ಸಮಸ್ಯೆಯಾಗಬಹುದು. ಆದರೆ ನೀವು ಶೌಚಾಲಯಕ್ಕೆ ಹೋಗಿ ಇದನ್ನು ಪರೀಕ್ಷಿಸಿ. ಒದ್ದೆಯಾಗುವ ಜಾಗದ ಕಡೆ ಹೆಚ್ಚು ಗಮನಹರಿಸಿ. ಬಟ್ಟೆಯಿಂದ ಸ್ವಲ್ಪ ದುರ್ಗಂಧ ಬಂದರೂ ಆಗ ಬೇರೆಯವರಿಗೆ ಇದು ತೀವ್ರವಾಗಿ ಬರಬಹುದು. ದುರ್ಗಂಧ ಬರುವಂತಹ ಜಾಗಕ್ಕೆ ನೀವು ಡಿಯೋಡ್ರೆಂಟ್ ನ್ನು ಹಚ್ಚಿಕೊಳ್ಳಿ.

ಉಸಿರಿನ ಪರೀಕ್ಷೆ


ನಮ್ಮ ಬಾಯಿಂದ ಬರುವ ಉಸಿರಿನಿಂದ ಹೆಚ್ಚು ವಾಸನೆ ಬರುವುದು. ಇದು ನಾವು ತಿನ್ನುವ ಆಹಾರ ಮತ್ತು ಬಾಯಿ ಸಮಸ್ಯೆಯಿಂದ ಬರಬಹುದು. ಇದನ್ನು ನೀವು ಕೈಯನ್ನು ಬಾಯಿ ಮುಂದೆ ಇಟ್ಟು, ಉಸಿರು ಬಿಟ್ಟು ಪರೀಕ್ಷಿಸಿ. ಇದರಿಂದ ನಿಮಗೆ ವಾಸನೆ ತಿಳಿದುಬರುವುದು. ಬಾಯಿ ರುಚಿಯನ್ನು ನೀವು ಪ್ರಯತ್ನಿಸಿ ನೋಡಿ. ಬಾಯಿ ರುಚಿ ಕೆಟ್ಟದಾಗಿದ್ದರೆ ಆಗ ನಿಮ್ಮ ಬಾಯಿಯ ವಾಸನೆ ಇದೆ ಎಂದು ಅರ್ಥ ಮಾಡಿಕೊಳ್ಳಿ.

ವಾಸನೆ ವ್ಯವಸ್ಥೆ ಬದಲಾವಣೆ
ಘ್ರಾಣಿಸುವ ವ್ಯವಸ್ಥೆಯನ್ನು ನೀವು ಸಮತೋಲನದಲ್ಲಿ ಇಟ್ಟುಕೊಳ್ಳಬೇಕು. ದೇಹದಲ್ಲಿ ಇರುವಂತಹ ವಾಸನೆಯನ್ನು ಇದು ಕಂಡುಹಿಡಿಯುವುದು. ನೀವು ತುಂಬಾ ಗಾಢ ವಾಸನೆ ಇರುವಂತಹ ಕಾಫಿ ಅಥವಾ ಪುದೀನಾದ ವಾಸನೆ ತೆಗೆದುಕೊಳ್ಳಿ. ಇದನ್ನು ಒಂದು ನಿಮಿಷ ಕಾಲ ಘ್ರಾಣಿಸಿ. ಇದರ ಬಳಿಕ ನೀವು ಕಂಕುಳ ಮತ್ತು ಬ್ಯಾಕ್ಟೀರಿಯಾ ನೆಲೆಸುವ ಬೇರೆ ಜಾಗವನ್ನು ಘ್ರಾಣಿಸಿ. ಮೊಣಕೈಯಲ್ಲಿ ಕೂಡ ಬೆವರಿನ ಗ್ರಂಥಿಗಳು ಇರುವ ಕಾರಣ ನೀವು ಇದನ್ನು ಕೂಡ ಘ್ರಾಣಿಸಿ. ಇದರ ಬಳಿಕ ನಿಮಗೆ ಎಲ್ಲಿಂದ ದುರ್ಗಂಧ ಬರುವುದು ಎಂದು ತಿಳಿಯುತ್ತದೆ.

ಕೂದಲಿನ ಪರೀಕ್ಷೆ
ಕೆಲವೊಂದು ಸಲ ದುರ್ಗಂಧ ಬರಲು ನಿಮ್ಮ ದೇಹವು ಕಾರಣವಾಗದೆ ಇರಬಹುದು. ಆದರೆ ಕೂದಲು ದುರ್ಗಂಧ ಬೀರಬಹುದು. ತಲೆಬುರುಡೆಯು ಬೆವರುತ್ತಿರುತ್ತದೆ ಮತ್ತು ಇದರಿಂದಾಗಿ ಕೂದಲು ಒದ್ದೆ ಆಗುವುದು. ಇದರಿಂದ ನೀವು ವಾರದಲ್ಲಿ ಎರಡರಿಂದ ಮೂರು ಸಲ ಕೂದಲು ತೊಳೆಯಿರಿ. ತಲೆಬುರುಡೆಯಲ್ಲಿ ಬೆವರು ತುಂಬಿಕೊಂಡಿರುವುದು ಮತ್ತು ಇದರ ಪರಿಣಾಮ ವಾಸನೆ ಬರುವುದು. ಸೋಪ್ ಬಳಸದೆ ನೀವು ಬಿಸಿ ನೀರಿನಲ್ಲಿ ಕೈಗಳನ್ನು ತೊಳೆಯಿರಿ ಮತ್ತು ಇದರ ಬಳಿಕ ತಲೆಬುರುಡೆಗೆ ಕೆಲವು ಸಲ ನೀವು ಕೈಗಳನ್ನು ಕೊಂಡುಹೋಗಿ. ಈ ವೇಳೆ ಬೆರಳುಗಳು ವಾಸನೆ ಬರುತ್ತಲಿದ್ದರೆ ಆಗ ತಲೆಬುರುಡೆಯಲ್ಲಿ ಇರುವ ವಾಸನೆಯಿಂದ ಎಂದು ತಿಳಿಯಿರಿ.

ವಾಸನೆ ನಿವಾರಣೆ ಮಾಡಲು ಕೆಲವು ವಿಧಾನಗಳು
ದೇಹದ ದುರ್ಗಂಧವನ್ನು ಡಿಯೋಡ್ರೆಂಟ್, ವೆಟ್ ವೈಪ್ಸ್ ಮತ್ತು ಸ್ವಚ್ಛತೆಯಿಂದ ಕಡಿಮೆ ಮಾಡಬಹುದು. ಕೆಲವೊಂದು ಸಲ ಈ ಯಾವುದೂ ಪರಿಣಾಮ ಬೀರದೆ ಇರಬಹುದು. ದೇಹದಿಂದ ಬರುವಂತಹ ದುರ್ಗಂಧದಲ್ಲಿ ರಾಸಾಯನಿಕಗಳು ತುಂಬಿರುವ ಕಾರಣದಿಂದಾಗಿ ಇದರ ನಿವಾರಣೆ ತುಂಬಾ ಕಷ್ಟ. ಕೆಲವೊಂದು ನೈಸರ್ಗಿಕ ವಿಧಾನಗಳಿಂದ ದೇಹದ ದುರ್ಗಂಧ ತೆಗೆಯಬಹುದು ಮತ್ತು ಇದರಿಂದ ಯಾವುದೇ ಹಾನಿಯಾಗದು.

ಟ್ರೀ ಟ್ರಿ ಮರದ ಎಣ್ಣೆ
ಟ್ರೀ ಟ್ರಿ ಎಣ್ಣೆಯನ್ನು ಸ್ವಲ್ಪ ತೆಗೆದುಕೊಂಡು ನೀರಿಗೆ ಹಾಕಿ ಮಿಶ್ರಣ ಮಾಡಿ ಮತ್ತು ಇದನ್ನು ಕಂಕುಳಿನ ಭಾಗ ಮತ್ತು ಬಾಧಿತ ಜಾಗಕ್ಕೆ ನಿತ್ಯವೂ ಹಚ್ಚಿಕೊಳ್ಳಿ. ಒಂದು ವಾರ ಅಥವಾ ಎರಡು ವಾರದಲ್ಲಿ ನಿಮ್ಮ ದೇಹದ ವಾಸನೆಯು ದೂರವಾಗುವುದು.

ಆ್ಯಪಲ್ ಸೀಡರ್ ವಿನೇಗರ್
ಆ್ಯಪಲ್ ಸೀಡರ್ ವಿನೇಗರ್ ನಲ್ಲಿ ಒಂದು ಹತ್ತಿ ಉಂಡೆ ಅದ್ದಿಕೊಳ್ಳಿ ಮತ್ತು ಇದನ್ನು ನೇರವಾಗಿ ಕಂಕುಳ, ತೊಡೆಸಂಧು ಮತ್ತು ಬೆವರು ಬರುವ ಇತರ ಭಾಗಗಳಿಗೆ ಹಚ್ಚಿರಿ. ಇದು ದೇಹದ ದುರ್ಗಂಧ ಹೋಗಲಾಡಿಸುವುದು ಮಾತ್ರವಲ್ಲದೆ ಕಂಕುಳ ಮೊಣಕೈ ಭಾಗದಲ್ಲಿನ ಕಪ್ಪು ಕಲೆ ಕೂಡ ನಿವಾರಣೆ ಮಾಡುವುದು.

ಮೆಂತ್ಯೆ ಕಾಳು
ರಾತ್ರಿ ವೇಳೆ ಸ್ವಲ್ಪ ಮೆಂತ್ಯೆ ಕಾಳುಗಳನ್ನು ನೀರಿನಲ್ಲಿ ನೆನೆಯಲು ಹಾಕಿ ಮತ್ತು ಬೆಳಗ್ಗೆ ಎದ್ದ ಬಳಿಕ ನೀವು ಇದನ್ನು ದಿನನಿತ್ಯವು ಕುಡಿಯಬೇಕು. ಮೆಂತ್ಯೆ ಕಾಳು ದೇಹವನ್ನು ನಿರ್ವಿಷಗೊಳಿಸುವುದು ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದಾಗಿ ಇದು ದೇಹವನ್ನು ಶುದ್ಧ ಹಾಗೂ ದುರ್ಗಂಧ ರಹಿತವಾಗಿಸುವುದು.

ಲಿಂಬೆ
ಲಿಂಬೆಯನ್ನು ನೇರವಾಗಿ ಬಾಧಿತ ಜಾಗಕ್ಕೆ ಹಚ್ಚಬಹುದು ಅಥವಾ ಅದರ ರಸ ತೆಗೆದು ಹಚ್ಚಬಹುದು. ಹಚ್ಚಿಕೊಂಡ ಕೆಲವು ನಿಮಿಷಗಳ ಕಾಲ ಹಾಗೆ ಬಿಡಿ. ಇದ ಬಳಿಕ ಉಗುರಬೆಚ್ಚಗಿನ ನೀರಿನಿಂದ ತೊಳೆಯಿರಿ. ಲಿಂಬೆಯಲ್ಲಿ ಆಮ್ಲೀಯ ಗುಣಗಳು ಇರುವ ಕಾರಣದಿಂದಾಗಿ ಇದು ಬ್ಯಾಕ್ಟೀರಿಯಾ ಬೆಳೆಯದಂತೆ ತಡೆಯುತ್ತದೆ. ಕೂದಲನ್ನು ಸರಿಯಾಗಿ ತೊಳೆಯಿರಿ ಮತ್ತು ಸರಿಯಾದ ಸ್ವಚ್ಛತೆ ಪಾಲಿಸಿಕೊಂಡು ಹೋಗಿ. ಬೇಸಿಗೆಯಲ್ಲಿ ಹೆಚ್ಚು ಬೆವರುವ ಕಾರಣದಿಂದಾಗಿ ಹತ್ತಿ ಬಟ್ಟೆಗಳನ್ನು ಬಳಸಿ. ಇದರಿಂದ ದೇಹದಲ್ಲಿ ಬೆವರು ಜಮೆಯಾಗುವುದು ತಪ್ಪುತ್ತದೆ. ದೇಹದ ದುರ್ಗಂಧ ಸಾಮಾನ್ಯ ಮತ್ತು ಇದರಿಂದ ನೀವು ಮುಕ್ತಿ ಪಡೆಯಬಹುದು. ಹೀಗಾಗಿ ನಿಮ್ಮ ದೇಹದಲ್ಲಿ ದುರ್ಗಂಧ ವಿದ್ದರೆ ಆಗ ನೀವು ಚಿಂತೆ ಮಾಡಬೇಡಿ. ಇದನ್ನು ದೂರ ಮಾಡುವಂತಹ ವಿಧಾನಗಳನ್ನು ನೀವು ಪರೀಕ್ಷಿಸಿಕೊಳ್ಳಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Four Simple Tips To Detect Body Odor

Body odor is generally generated when the bacteria which is present on your skin breaks down the protein present in your sweat into different acids. It is the process of growth of bacteria on the skin that generates the stinky unpleasant odor. Sometimes sweat doesn’t come out from your body and a bad odor is produced. This is also because of excess bacteria.
Story first published: Saturday, August 3, 2019, 11:01 [IST]
X
Desktop Bottom Promotion