Latest Updates
-
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ -
ಸ್ವಾತಂತ್ರ್ಯ ದಿನದ ಸಂಭ್ರಮ: ಟೆರೇಸ್ ಮೇಲೆ ಗಾಳಿಪಟ ಹಾರಿಸುವ ಮುನ್ನ ಈ ಸುರಕ್ಷತಾ ಕ್ರಮಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ: ಸಿಹಿ ತಿನಿಸುಗಳ ಸವಿಯ ಜೊತೆಗೆ ಆರೋಗ್ಯವನ್ನೂ ಕಾಪಾಡಿಕೊಳ್ಳಿ, ಇಲ್ಲಿದೆ ಸಿಂಪಲ್ ಟಿಪ್ಸ್! -
ಸ್ವಾತಂತ್ರ್ಯ ದಿನದ ಸಂಭ್ರಮದಲ್ಲಿ ಆರೋಗ್ಯದ ಜಾಗೃತಿ: ಮಳೆಗಾಲದಲ್ಲಿ ಯಾವ ಆಹಾರ ಸೇವಿಸುವುದು ಸುರಕ್ಷಿತ? -
ಸ್ವಾತಂತ್ರ್ಯ ದಿನಾಚರಣೆ: ಮಳೆಯಲ್ಲೂ ಮಿಂಚಲು ಇಲ್ಲಿದೆ ಸಿಂಪಲ್ ಟ್ರೈಕಲರ್ ಫ್ಯಾಷನ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: 10 ನಿಮಿಷದಲ್ಲಿ ತ್ರಿರಂಗ ಲುಕ್ನಲ್ಲಿ ಮಿಂಚುವುದು ಹೇಗೆ? -
ಸ್ವಾತಂತ್ರ್ಯ ದಿನದ 'ತಿರಂಗಾ ರೈಡ್': ಮಳೆಗಾಲದಲ್ಲಿ ಸುರಕ್ಷಿತ ಸೈಕ್ಲಿಂಗ್ಗೆ ಇಲ್ಲಿವೆ ಬೆಸ್ಟ್ ಟಿಪ್ಸ್! -
ಸ್ವಾತಂತ್ರ್ಯ ದಿನಾಚರಣೆ: ಪರೇಡ್ ವೀಕ್ಷಿಸುವ ಮುನ್ನ ಈ 10 ನಿಮಿಷದ ವ್ಯಾಯಾಮ ಮರೆಯದಿರಿ! -
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು!
ಮಧ್ಯಾಹ್ನದ ಊಟದಲ್ಲಿ ಈ ಆಹಾರಗಳಿದ್ದರೆ, ಆರೋಗ್ಯಕ್ಕೆ ಸಂಕಷ್ಟ ಎದುರಾದೀತು
ಸಾಮಾನ್ಯವಾಗಿ, ಹೊರಗೆ ಕೆಲಸಕ್ಕೆ ಹೋಗುವವರು ಮಧ್ಯಾಹ್ನ ಹೊರಗಿನ ಊಟ ಸೇವಿಸುತ್ತಾರೆ. ಆದರೆ, ಈ ಸಮಯದಲ್ಲಿ ಏನು ಸೇವಿಸುತ್ತೀರಿ ಎನ್ನುವುದು ತುಂಬಾ ಮುಖ್ಯ. ಹೊಟ್ಟೆ ತುಂಬಲೆಂದು ಸಿಕ್ಕಸಿಕ್ಕ ಆಹಾರವನ್ನು ಮಧ್ಯಾಹ್ನದ ಊಟವಾಗಿ ಸೇವಿಸಿದರೆ, ನಿಮ್ಮ ಆರೋಗ್ಯಕ್ಕೆ ಕುತ್ತು ಬರಬಹುದು. ಅದಕ್ಕಾಗಿಯೇ ಮನೆಯಿಂದ ಊಟ ತೆಗೆದುಕೊಂಡು ಹೋಗುವುದು ಉತ್ತಮ. ಅದು ಸಾಧ್ಯವಾಗದಿದ್ದಲ್ಲಿ ಹೊರಗೆ ತಿನ್ನುವವರು ಈ ಆಹಾರಗಳನ್ನು ಮಧ್ಯಾಹ್ನ ಸೇವಿಸಬೇಡಿ. ಈ ಆಹಾರವು ನಿಮ್ಮ ದೇಹದಲ್ಲಿ ವಿವಿಧ ರೀತಿಯ ಸಮಸ್ಯೆಗಳನ್ನು ಸೃಷ್ಟಿಸಿ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುವುದು.
ತಜ್ಞರ ಪ್ರಕಾರ, ಊಟದ ಸಮಯದಲ್ಲಿ ಕೆಳಗೆ ತಿಳಿಸಲಾದ ಆಹಾರಗಳನ್ನು ಸೇವಿಸುವುದನ್ನು ನಿಲ್ಲಿಸಬೇಕು, ಅವುಗಳೆಂದರೆ:

1. ಮಧ್ಯಾಹ್ನದ ಊಟದಲ್ಲಿ ತರಕಾರಿ ಸೂಪ್ ಬೇಡ:
ತರಕಾರಿ ಸೂಪ್ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕ್ಯಾಲೋರಿಗಳು ಮತ್ತು ಇತರ ಪೋಷಕಾಂಶಗಳು ಕಂಡುಬರುತ್ತವೆ, ಆದರೆ ಪ್ರೋಟೀನ್ ಸಾಕಷ್ಟು ಕಂಡುಬರುವುದಿಲ್ಲ. ಆದ್ದರಿಂದ ಮಧ್ಯಾಹ್ನದ ಊಟದಲ್ಲಿ ಇದನ್ನು ಸೇವಿಸಿದರೆ ಹೆಚ್ಚು ಹೊತ್ತು ಹೊಟ್ಟೆ ತುಂಬದೇ ಮತ್ತೆ ಹಸಿವಾಗುವಂತೆ ಮಾಡುತ್ತದೆ. ಪ್ರೋಟೀನ್ ಸೇವನೆಯು ಬೇಗ ಹಸಿವನ್ನು ಉಂಟುಮಾಡುವುದಿಲ್ಲ, ಇದರಿಂದಾಗಿ ಹೆಚ್ಚು ತಿನ್ನಲು ಸಹ ಬಯಸುವುದಿಲ್ಲ. ಈ ಕಾರಣದಿಂದಾಗಿ ಜನರು ಹೆಚ್ಚು ಪ್ರೋಟೀನ್ ಅನ್ನು ಬಳಸಲು ಸಲಹೆ ನೀಡುತ್ತಾರೆ. ಆದ್ದರಿಂದ, ಊಟದಲ್ಲಿ ತರಕಾರಿ ಸೂಪ್ ಸೇವನೆಯನ್ನು ತಪ್ಪಿಸಿ, ಬದಲಾಗಿ ಚಿಕನ್ ಸೂಪ್ ತೆಗೆದುಕೊಳ್ಳಿ. ಚಿಕನ್ ಸೂಪ್ ಲೀನ್ ಪ್ರೊಟೀನ್ ಅನ್ನು ಹೊಂದಿದ್ದು, ಇದರಿಂದ ನಿಮಗೆ ಬೇಗನೆ ಹಸಿವಾಗುವುದಿಲ್ಲ. ಇದರೊಂದಿಗೆ ಓಟ್ಸ್, ಅನ್ನ, ಸೇಬು ಅಥವಾ ರೊಟ್ಟಿಯನ್ನೂ ಸೇವಿಸಬಹುದು.

2. ಫಾಸ್ಟ್ ಫುಡ್ ತಪ್ಪಿಸಿ:
ತ್ವರಿತ ಆಹಾರ ಅಥವಾ ಫಾಸ್ಟ್ ಫುಡ್‌ನಲ್ಲಿ ಹೆಚ್ಚಿನ ಪ್ರಮಾಣದ ಕೊಬ್ಬು ಇರುವುದರಿಂದ ಹೊಟ್ಟೆಯ ಜೊತೆಗೆ ದೇಹವನ್ನು ಭಾರವಾಗಿಸುತ್ತದೆ. ಇದರಿಂದ ನೀವು ಆಲಸ್ಯ ಮತ್ತು ಆಯಾಸವನ್ನು ಅನುಭವಿಸುತ್ತೀರಿ. ಈ ಕಾರಣಕ್ಕಾಗಿಯೇ ಊಟದಲ್ಲಿ ಇದನ್ನು ತಪ್ಪಿಸಬೇಕು.

3. ಪಾಸ್ಟಾ ಬೇಡ:
ಪಾಸ್ಟಾವನ್ನು ಸಂಸ್ಕರಿಸಿದ ಕಾರ್ಬ್ ಎಂದು ಹೇಳಲಾಗುತ್ತದೆ, ಇದು ಸಾಮಾನ್ಯವಾಗಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಮಧ್ಯಾಹ್ನದ ಊಟದಲ್ಲಿ ಇದನ್ನು ಸೇವಿಸಿದ ನಂತರ ನಿಮಗೆ ನಿದ್ರೆ ಬರುವುದು, ಇದು ಕೆಲಸದ ಜೊತೆಗೆ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

4. ಹಸಿರು ರಸವು ಹಾನಿಕಾರಕ:
ಸಾಮಾನ್ಯವಾಗಿ, ಮಧ್ಯಾಹ್ನ ಹೊಟ್ಟೆ ತುಂಬಿಸಲು ಹಸಿರು ರಸವನ್ನು ಸೇವಿಸಬೇಕು ಎಂದು ಹೇಳುತ್ತಾರೆ. ಆದರೆ ತಜ್ಞರ ಪ್ರಕಾರ, ಮಧ್ಯಾಹ್ನ ಈ ಜ್ಯೂಸ್ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಮಧ್ಯಾಹ್ನದ ಊಟದಲ್ಲಿ ನಾರಿನಂಶ, ಪ್ರೊಟೀನ್, ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬನ್ನು ಒಳಗೊಂಡಿರುವ ಸಮತೋಲನದ ಊಟದ ಅವಶ್ಯಕತೆಯಿರುತ್ತದೆ. ಇವು ನಿಮ್ಮ ಹೊಟ್ಟೆಯನ್ನು ತುಂಬುವಂತೆ ಮಾಡುತ್ತದೆ.

5. ಕರಿದ ಆಹಾರವೂ ತಪ್ಪಿಸಿ:
ಮಧ್ಯಾಹ್ನದ ಊಟದಲ್ಲಿ ಕರಿದ ಪದಾರ್ಥಗಳನ್ನು ಆದಷ್ಟು ತಪ್ಪಿಸಿ ಎನ್ನುತ್ತಾರೆ ತಜ್ಞರು. ಇದು ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಕರಿದ ಆಹಾರವು ದೇಹದಲ್ಲಿ ಕೊಬ್ಬನ್ನು ಹೆಚ್ಚಿಸುತ್ತದೆ ಜೊತೆಗೆ ಅದರಲ್ಲಿ ಕ್ಯಾಲೊರಿಗಳ ಪ್ರಮಾಣವೂ ಅಧಿಕವಾಗಿರುತ್ತದೆ, ಇದು ನಿಮ್ಮ ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

6. ಸ್ಯಾಂಡ್‌ವಿಚ್ ಮಾರಕ:
ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹಳಷ್ಟು ಸ್ಯಾಂಡ್‌ವಿಚ್‌ಗಳಲ್ಲಿ ಸಂರಕ್ಷಕಗಳು ಮತ್ತು ಸಾಸ್‌ಗಳು ಕಂಡುಬರುತ್ತವೆ, ಇದರಿಂದಾಗಿ ನೀವು ಆಲಸ್ಯವನ್ನು ಅನುಭವಿಸುತ್ತೀರಿ ಮತ್ತು ಇದು ಇತರ ಕಾಯಿಲೆಗಳನ್ನು ಸೃಷ್ಟಿಸುತ್ತದೆ.



Click it and Unblock the Notifications