Latest Updates
-
ರಣವೀರ್-ದೀಪಿಕಾ ದಂಪತಿಗೆ ಹೆಣ್ಣು ಮಗು: ಹೊಸ ಪೋಷಕರಿಗೆ ಸಂಬಂಧಿಕರು ನೀಡಬೇಕಾದ ಗೌರವಯುತ ಬೆಂಬಲವೇನು? -
ಬೆಂಗಳೂರಿನಲ್ಲಿ ಇಂದು 6 ಗಂಟೆಗಳ ಕಾಲ ನೀರಿನ ವ್ಯತ್ಯಯ: ಈ ಪ್ರದೇಶಗಳ ನಿವಾಸಿಗಳು ಎಚ್ಚರ! -
ಗಣೇಶ ಹಬ್ಬದ ಸಂಭ್ರಮ: ಮಧುಮೇಹಿಗಳಿಗೂ ಸುರಕ್ಷಿತವಾದ ಆರೋಗ್ಯಕರ 'ಉಕಡಿಚೆ ಮೋದಕ' ತಯಾರಿಸುವುದು ಹೇಗೆ? -
ಸೆಪ್ಟೆಂಬರ್ ಇಕ್ವಿನಾಕ್ಸ್: ನಿಮ್ಮ ಕ್ಯಾಮೆರಾದಲ್ಲಿ ಸೂರ್ಯೋದಯ-ಸೂರ್ಯಾಸ್ತದ ಅದ್ಭುತ ದೃಶ್ಯ ಸೆರೆಹಿಡಿಯಿರಿ! -
ವಿಶ್ವ ಕಾರ್-ಫ್ರೀ ಡೇ: ಟ್ರಾಫಿಕ್ ಬಿಟ್ಟು 20 ನಿಮಿಷದ ಈ ಸಿಂಪಲ್ ರೂಟೀನ್ ಫಾಲೋ ಮಾಡಿ! -
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ!
ಹೆಚ್ಚುತ್ತಿರುವ ಆತಂಕ ನಿವಾರಿಸಲು ಇಂಥಾ ಆಹಾರ ಬೆಸ್ಟ್
ಆಹಾರವು ನಮ್ಮ ದೇಹ ಹಾಗೂ ಆರೋಗ್ಯದ ಮೇಲೆ ಪರಿಣಾಮ ಬೀರುವುದು ಎಂದು ನಾವೆಲ್ಲರೂ ಭಾವಿಸಿದ್ದೇವೆ. ಆದರೆ ನಾವು ಸೇವಿಸುವಂತಹ ಆಹಾರವು ನಮ್ಮ ಆಲೋಚನೆ ಮತ್ತು ನಡವಳಿಕೆಗೂ ಕಾರಣವಾಗುವುದು. ನಾವು ಸೇವಿಸುವಂತಹ ಆಹಾರ ಮತ್ತು ಮೆದುಳಿನ ಮಧ್ಯೆ ಅವಿನಾಭಾವ ಸಂಬಂಧವಿದೆ.

ಆಧುನಿಕ ಜಗತ್ತಿನಲ್ಲಿ ಪ್ರತಿನಿತ್ಯವೂ ಒತ್ತಡವು ಇದ್ದೇ ಇರುತ್ತದೆ. ಇಂತಹ ಸಮಯದಲ್ಲಿ ಆತಂಕವು ಮನೆಮಾಡಿರುವುದು. ಹೀಗಾಗಿ ಇದನ್ನು ದೂರ ಮಾಡಲು ಕೆಲವೊಂದು ಆಹಾರಗಳನ್ನು ಸೇವಿಸಬೇಕು. ಇಂತಹ ಆಹಾರಗಳು ಯಾವುದು ಎಂದು ತಿಳಿಯುವುದು ಅತೀ ಅನಿವಾರ್ಯ. ಇದನ್ನು ನಾವು ನಿಮಗೆ ಇಲ್ಲಿ ತಿಳಿಸಿಕೊಡಲಿದ್ದೇವೆ.

ಬ್ರೆಜಿಲ್ ನಟ್
ಇದು ಕ್ಯಾಲ್ಸಿಯಂ, ಕಬ್ಬಿಣಾಂಶ, ಮೆಗ್ನಿಶಿಯಂ, ಪ್ರೋಟೀನ್, ಸೆಲೆನಿಯಂ, ವಿಟಮಿನ್ ಇ ಮತ್ತು ವಿಟಮಿನ್ ಬಿ-6ನಿಂದ ಸಮೃದ್ಧವಾಗಿದ್ದು, ದೊಡ್ಡವರಿಗೆ ದೈನಂದಿನ ಅಗತ್ಯಕ್ಕೆ ಬೇಕಾಗುವಷ್ಟು 91 ಎಂಸಿಜಿ ಸೆಲೆನಿಯಂ ಇದರಲ್ಲಿದೆ. ಸೆಲೆನಿಯಂ ಮನಸ್ಥಿತಿ ಸುಧಾರಣೆ ಮಾಡುವುದು ಮತ್ತು ಆತಂಕ ಕಡಿಮೆ ಮಾಡಲು ನೆರವಾಗುವುದು. ಇದರಿಂದ ನೀವು ಆಹಾರ ಕ್ರಮದಲ್ಲಿ 2-3 ಬ್ರೆಜಿಲ್ ನಟ್ ನ್ನು ಸೇರಿಸಿಕೊಳ್ಳಿ. ಸೆಲೆನಿಯಂ ಆಂಟಿಆಕ್ಸಿಡೆಂಟ್ ಆಗಿಯೂ ಕೆಲಸ ಮಾಡುವ ಕಾರಣದಿಂದಾಗಿ ಇದು ಅಂಗಾಂಶಗಳಿಗೆ ಆಗುವ ಹಾನಿ ತಡೆಯುವುದು.

ಮೊಟ್ಟೆ
ದಿನಕ್ಕೊಂದು ಮೊಟ್ಟೆ ತಿಂದರೆ ಆರೋಗ್ಯವಾಗಿರಬಹುದು ಎಂದು ಹೇಳಲಾಗುತ್ತದೆ. ಆದರೆ ಇದೇ ಮೊಟ್ಟೆ ಆತಂಕ ನಿವಾರಣೆ ಮಾಡುವಲ್ಲಿಯೂ ಪ್ರಮುಖ ಪಾತ್ರ ವಹಿಸುವುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಮೊಟ್ಟೆಯ ಲೋಳೆಯಲ್ಲಿ ಉನ್ನತ ಮಟ್ಟದ ವಿಟಮಿನ್ ಡಿ ಇದೆ. ಇದರ ಜತೆಗೆ ಪ್ರೋಟೀನ್, ಅಮಿನೋ ಆಮ್ಲ ಕೂಡ ಇದರಲ್ಲಿದ್ದು. ದೇಹದ ಬೆಳವಣಿಗೆಗೆ ನೆರವಾಗುವುದು. ಮೊಟ್ಟೆಯಲ್ಲಿ ಇರುವಂತಹ ಟ್ರಿಪ್ಟೊಫಾನ್ ಅಂಶವು ನರಪ್ರೇಕ್ಷಕವಾಗಿರುವ ಸಿರೋಟೊನಿನ್ ಅಂಶವನ್ನು ಹೊಂದಿದೆ. ಈ ನರಪ್ರೇಕ್ಷಕವು ಮನಸ್ಥಿತಿ, ನಿದ್ರೆ, ನಡವಳಿಕೆ ನಿಯಂತ್ರಿಸುವುದು ಮತ್ತು ಮೆದುಳಿನ ಕ್ರಿಯೆಯನ್ನು ಸುಧಾರಿಸಿ, ಆತಂಕ ನಿವಾರಿಸುವುದು.

ಕುಂಬಳಕಾಯಿ ಬೀಜ
ಕುಂಬಳಕಾಯಿ ಬೀಜವು ಆತಂಕ ನಿವಾರಣೆ ಮಾಡುವ ಗುಣ ಹೊಂದಿದೆ ಮತ್ತು ಇದರಲ್ಲಿ ಉತ್ತಮ ಮಟ್ಟದ ಪೊಟಾಶಿಯಂ ಅಂಶವಿದೆ. ಇದು ರಕ್ತದೊತ್ತಡ ನಿಯಂತ್ರಿಸುವುದು ಮತ್ತು ಎಲೆಕ್ಟ್ರೋಲೈಟ್ ನ್ನು ಸಮತೋಲನದಲ್ಲಿ ಇಡುತ್ತದೆ. ಇದು ಆತಂಕ ಮತ್ತು ಒತ್ತಡವನ್ನು ಕಡಿಮೆ ಮಾಡುವ ಚಿಹ್ನೆಗಳಾಗಿವೆ. ಕುಂಬಳಕಾಯಿ ಬೀಜದಲ್ಲಿ ಇರುವಂತಹ ಅಪಾರ ಪ್ರಮಾಣದ ಸತುವಿನ ಅಂಶವು ನರಗಳ ಬೆಳವಣಿಗೆಗೆ ಒಳ್ಳೆಯದು. ಕುಂಬಳಕಾಯಿ ಬೀಜ ನಿಮಗೆ ಸಿಗದೆ ಇದ್ದರೆ ಆಗ ನೀವು ಬಾಳೆಹಣ್ಣನ್ನು ಸೇರಿಸಿಕೊಂಡು ಪೊಟಾಶಿಯಂ ಅಂಶ ಪಡೆಯಬಹುದು. ಇದು ಕೂಡ ಆತಂಕ ನಿವಾರಣೆ ಮಾಡುವುದು.

ಕೊಬ್ಬಿನಾಮ್ಲದ ಮೀನು
ಕೊಬ್ಬಿನಾಮ್ಲದ ಮೀನುಗಳಾಗಿರುವಂತಹ ಬೂತಾಯಿ, ಟ್ರೌಟ್, ಸಾಲ್ಮನ್, ಬಂಗುಡೆ ಇತ್ಯಾದಿಗಳು ಆತಂಕ ನಿವಾರಣೆ ಮಾಡಲು ತುಂಬಾ ಒಳ್ಳೆಯದು ಮತ್ತು ಇದು ಮಾನಸಿಕ ಆರೋಗ್ಯ ಕಾಪಾಡುವುದು. ಒಮೆಗಾ-3 ಕೊಬ್ಬಿನಾಮ್ಲವನ್ನು ಹೊಂದಿರುವಂತ ಆಹಾರದಲ್ಲಿ ಆಲ್ಫಾ ಲಿನೋಲೆನಿಕ್ ಆಮ್ಲ(ಎಎಲ್ ಎ) ಅಂಶವಿದ್ದು, ಇದು ಎರಡು ಕೊಬ್ಬಿನಾಮ್ಲವಾಗಿರುವಂತಹ ಡೊಕೊಸಾಹೆಕ್ಸೆನೊಯಿಕ್ ಆಮ್ಲ (ಡಿಎಚ್‌ಎ) ಮತ್ತು ಐಕೋಸಾಟೆಟ್ರೇನೊಯಿಕ್ ಆಮ್ಲ (ಇಪಿಎ) ಒದಗಿಸುವುದು. ಈ ಕೊಬ್ಬಿನಾಮ್ಲಗಳು ನರಪ್ರೇಕ್ಷಕಗಳನ್ನು ಉತ್ತೇಜಿಸುವುದು ಮತ್ತು ಮೆದುಳು ಆರೋಗ್ಯಕಾರಿ ಆಗಿ ಕೆಲಸ ಮಾಡಲು ನೆರವಾಗುವುದು. ಹೀಗಾಗಿ ಆತಂಕವು ಕಡಿಮೆ ಆಗುವುದು. ಆತಂಕ ಕಡಿಮೆ ಮಾಡಲು ವಾರದಲ್ಲಿ ಎರಡು ಸಲ ನೀವು ಕೊಬ್ಬಿನಾಮ್ಲವು ಇರುವ ಮೀನು ತಿನ್ನಬೇಕು. ನೀವು ಸಸ್ಯಾಹಾರಿ ಆಗಿದ್ದರೆ ಆಗ ನೀವು ಒಮೆಗಾ-3 ಸಪ್ಲಿಮೆಂಟ್ ಸೇವಿಸಬಹುದು.

ಡಾರ್ಕ್ ಚಾಕಲೇಟ್
ತುಂಬಾ ರುಚಿಕರ ಹಾಗೂ ಹೆಚ್ಚಿನವರು ಇಷ್ಟಪಡುವಂತಹ ಚಾಕಲೇಟ್ ಒತ್ತಡ ನಿವಾರಣೆ ಮಾಡುವುದು. ನೀವು ಒತ್ತಡ ಅಥವಾ ಆತಂಕಕ್ಕೆ ಒಳಗಾದ ವೇಳೆ ಒಂದು ತುಂಡು ಡಾರ್ಕ್ ಚಾಕಲೇಟ್ ತಿನ್ನಿ. ಇದರಿಂದ ನಿಮ್ಮ ಮನಸ್ಥಿತಿ ಉತ್ತಮವಾಗುವುದು. ಡಾರ್ಕ್ ಚಾಕಲೇಟ್ ನಲ್ಲಿ ಶೇ.70ರಷ್ಟು ಕೋಕಾ ಇರುವ ಕಾರಣದಿಂದಾಗಿ ಇದನ್ನು ಸೇವಿಸಿ. ಫ್ಲಾವನಾಯ್ಡ್ ಅಂಗಾಂಶ ಸಾಯುವುದನ್ನು ತಗ್ಗಿಸುವುದು ಮತ್ತು ನರದ ಉರಿಯೂತ ಕಡಿಮೆ ಮಾಡುವುದರ ಜತೆಗೆ ರಕ್ತ ಸಂಚಾರ ಸುಗಮಗೊಳಿಸುವುದು. ಅಧಿಕ ಮಟ್ಟದ ಟ್ರಿಪ್ಟೊಫಾನ್ ಹೊಂದಿರುವ ಚಾಕಲೇಟ್ ಸಿರೊಟೊನಿನ್ ಉತ್ಪತ್ತಿ ಮಾಡಿ ಮನಸ್ಥಿತಿ ಸುಧಾರಿಸುವುದು. ಇದರಲ್ಲಿ ಹೆಚ್ಚಿನ ಪ್ರಮಾಣದ ಮೆಗ್ನಿಶಿಯಂ ಇರುವುದರಿಂದ ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುವುದು.



Click it and Unblock the Notifications
