Latest Updates
-
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್!
ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಅಗತ್ಯವಾಗಿದ್ದರೂ, ಈ ಸಂದರ್ಭಗಳಲ್ಲಿ ವ್ಯಾಯಾಮ ಬೇಡ
ನಿಮ್ಮನ್ನು ಸದೃಢವಾಗಿ ಮತ್ತು ಆರೋಗ್ಯವಾಗಿಡಲು ನಿಮ್ಮ ದಿನಚರಿಯಲ್ಲಿ ವ್ಯಾಯಾಮವನ್ನು ಸೇರಿಸುವುದು ಬಹಳ ಮುಖ್ಯ. ಆದರೆ, ಎಲ್ಲವೂ ಸರಿಯಾಗಿದ್ದರೆ ಮಾತ್ರ. ಕೆಲವು ಜನರು ಯಾವುದೇ ಪರಿಸ್ಥಿತಿಯಲ್ಲಿದ್ದರೂ ವ್ಯಾಯಾಮದಿಂದ ತಪ್ಪಿಸಿಕೊಳ್ಳುವುದಿಲ್ಲ. ಇದು ತಪ್ಪು. ಏಕೆಂದರೆ, ಕೆಲವೊಮ್ಮೆ ನಮ್ಮ ದೇಹವು ಕಠಿಣ ದೈಹಿಕ ಚಟುವಟಿಕೆಗಳಿಗೆ ಸಿದ್ಧವಾಗಿರುವುದಿಲ್ಲ, ಆಗ ನಾವು ದೇಹಕ್ಕೆ ಒತ್ತಡ ಹಾಕಿದಾಗ, ಅದು ಸಮಸ್ಯೆಗಳಿಗೆ ತಿರುಗಬಹುದು. ಆದ್ದರಿಂದ ದೇಹ ನೀಡುವ ಸಂಕೇತಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ಹಾಗಿದ್ದರೆ, ಯಾವಾಗ ವ್ಯಾಯಾಮ ಮಾಡದಿರುವುದು ಉತ್ತಮ ಎಂದು ಯೋಚಿಸುತ್ತಿದ್ದೀರಾ?, ಈ ಸ್ಟೋರಿ ಓದಿ, ನಿಮಗೆ ತಿಳಿಯುತ್ತೆ..
ದೇಹ ವ್ಯಾಯಾಮ ಮಾಡಲು ಸಿದ್ಧವಿಲ್ಲ ಎಂದು ನೀಡುವ ಸಂಕೇತಗಳಾವುವು? ಯಾವಾಗ ವ್ಯಾಯಾಮ ಮಾಡಬಾರದು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ನೀವು ನಿದ್ರೆ ಮಾಡಿರದಿದ್ದರೆ:
ಹಿಂದಿನ ರಾತ್ರಿ ನಿಮಗೆ ಸರಿಯಾಗಿ ನಿದ್ದೆ ಮಾಡಲು ಸಾಧ್ಯವಾಗದಿದ್ದರೆ ಅಥವಾ ಬೆಳಿಗ್ಗೆ ನಿಮಗೆ ಸಾಕಷ್ಟು ನಿದ್ರೆ ಮಾಡಲು ಸಾಧ್ಯವಾಗದಿದ್ದರೆ, ಆಗ ವ್ಯಾಯಾಮ ತಪ್ಪಿಸುವುದು ಒಳ್ಳೆಯದು. ಜೊತೆಗೆ ಬೆಳಿಗ್ಗೆ ವ್ಯಾಯಾಮ ಮಾಡುವಾಗ ದಣಿವು ಕಂಡುಬಂದರೆ ಸಹ ಆ ದಿನ ವ್ಯಾಯಾಮಕ್ಕೆ ವಿರಾಮ ನೀಡುವುದು ಉತ್ತಮ. ಏಕೆಂದರೆ, ಸರಿಯಾಗಿ ನಿದ್ರೆ ಬಾರದೇ, ಅದೇ ಮಂಪರಿನಲ್ಲಿ ಅವಘಡಗಳಾಗುವ ಸಂದರ್ಭ ಹೆಚ್ಚಾಗಿರುತ್ತದೆ.

ದಣಿದಿದ್ದರೆ:
ವ್ಯಾಯಮ ಆರೋಗ್ಯಕ್ಕೆ ಬೇಕು, ಹಾಗಂತ, ದಣಿದಿರುವ ದೇಹವನ್ನು ಮತ್ತಷ್ಟು ದಂಡಿಸುವುದು ಸರಿಯಲ್ಲ. ಸಂಜೆಯ ವೇಳೆ, ನಿಸ್ಸಂಶಯವಾಗಿ, ದಣಿದಿರುತ್ತೀರಿ. ಆಗ ದೇಹದ ಶಕ್ತಿಯು ಕಡಿಮೆಯಾಗಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಯಾವುದಾದರೂ ಸಣ್ಣ ತಪ್ಪಿನಿಂದ ಕೂಡ ಗಾಯಗಳಾಬಹುದು. ಆದ್ದರಿಂದ ಸುಸ್ತು, ದಣಿವಾಗಿದ್ದರೆ, ವ್ಯಾಯಾಮ ಬೇಡ.

ಯಾವುದಾದರೂ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ:
ನೀವು ಯಾವುದಾದರೂ ಪ್ರಮುಖ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರೆ, ವೈದ್ಯರು ಸಹಜವಾಗಿ ಕೆಲವು ದಿನಗಳವರೆಗೆ ಬೆಡ್ ರೆಸ್ಟ್ ಅನ್ನು ಶಿಫಾರಸು ಮಾಡುತ್ತಾರೆ. ಆದರೆ ಯಾವುದೇ ದೊಡ್ಡ ಶಸ್ತ್ರಚಿಕಿತ್ಸೆ ಇಲ್ಲದಿದ್ದರೂ, ಕೆಲವು ದಿನಗಳವರೆಗೆ ಜಿಮ್‌ನಿಂದ ವಿರಾಮ ತೆಗೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ದೇಹವು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತದೆ. ವ್ಯಾಯಾಮದ ಸಮಯದಲ್ಲಿ, ದೇಹದಲ್ಲಿನ ರಕ್ತದ ಹರಿವು ಗಮನಾರ್ಹವಾಗಿ ಹೆಚ್ಚಾಗುತ್ತದೆ, ಇದು ರಕ್ತಸ್ರಾವಕ್ಕೆ ಕಾರಣವಾಗಬಹುದು. ಇದರ ಜೊತೆಗೆ, ವ್ಯಾಯಾಮದ ಸಮಯದಲ್ಲಿ ಬೆವರುವುದು ಸೋಂಕಿಗೆ ಕಾರಣವಾಗಬಹುದು.

ಜ್ವರವಿದ್ದರೆ:
ಹವಾಮಾನ ಬದಲಾವಣೆಯಿಂದ ಅನೇಕ ಬಾರಿ ಜ್ವರ ಮತ್ತು ಸೋಂಕು ಉಂಟಾಗುತ್ತದೆ. ಇದರಿಂದಾಗಿ ಶೀತದ ಸಮಸ್ಯೆ ಇರುತ್ತದೆ. ಜ್ವರವು ಸಾಮಾನ್ಯ ಸಮಸ್ಯೆಯಾಗಿದ್ದು, ಅನೇಕ ಜನರು ತಮ್ಮ ವ್ಯಾಯಾಮ ದಿನಚರಿಯನ್ನು ಹಾಳುಮಾಡಲು ಬಯಸುವುದಿಲ್ಲ, ಆದರೆ ನಿಮಗೆ ಜ್ವರವಿದ್ದಾಗ ವ್ಯಾಯಾಮ ಮಾಡುವುದು ಹೆಚ್ಚು ಅನಾರೋಗ್ಯಕ್ಕೆ ಕಾರಣವಾಗಬಹುದು. ವಾಸ್ತವವಾಗಿ, ಜ್ವರ ಎಂಬುದು ದೇಹಕ್ಕೆ ವಿಶ್ರಾಂತಿ ಬೇಕು ಎಂಬ ಸಂಕೇತವಾಗಿದೆ. ಹಾಗಿದ್ದಾಗ, ನೀವು ಮತ್ತಷ್ಟು ದೇಹ ದಂಡಿಸಿದರೆ, ಅನಾರೋಗ್ಯ ಇನ್ನಷ್ಟು ಕೈಕೊಡಬಹುದು.



Click it and Unblock the Notifications
