For Quick Alerts
ALLOW NOTIFICATIONS  
For Daily Alerts

ಕೊವಿಶೀಲ್ಡ್‌, ಕೊವಾಕ್ಸಿನ್‌ ಮಿಕ್ಸ್‌ ಮಾಡಿದರೆ ಹೆಚ್ಚು ಪರಿಣಾಮಕಾರಿ: ICMR

|

ಕೊರೊನಾ ಲಸಿಕೆ ಕೊರೊನಾ ಎಂಬ ಮಹಾಮಾರಿ ವಿರುದ್ಧ ಹೋರಾಡಲು ಸಮರ್ಥವಾಗಿದೆ ಎಂಬುವುದು ಸಾಬೀತಾಗಿದೆ. ಆದರೆ ಈ ಲಸಿಕೆ ಪಡೆದ ಬಳಿಕ ಇದರಿಂದ ದೊರೆಯುವ ರೋಗ ನಿರೋಧಕ ಶಕ್ತಿ ಎಷ್ಟು ಸಮಯವಿರುತ್ತದೆ ಎಂಬುವುದರ ಬಗ್ಗೆ ಒಂದು ಸ್ಪಷ್ಟ ಮಾಹಿತಿ ಇದುವರೆಗೆ ಸಿಕ್ಕಿಲ್ಲ. ಎರಡು ಡೋಸ್‌ ಲಸಿಕೆ ತೆಗೆದುಕೊಳ್ಳುವುದು ಕೊರೊನಾ ತಡೆಗಟ್ಟಲು ಸಹಕಾರಿಯಾಗಿದೆ ಎಂಬುವುದು ಮಾತ್ರ ತಿಳಿದು ಬಂದಿದೆ. ಈ ಲಸಿಕೆಗಳ ಪ್ರಭಾವದ ಬಗ್ಗೆ ಅರಿಯಲು ಸಾಕಷ್ಟು ಸಂಶೋಧನೆಗಳು ನಡೆಯುತ್ತಿವೆ.

Coronavirus Vaccine

ಕೆಲ ಸಂಶೋಧಕರು ಎರಡು ಡೋಸ್‌ ಲಸಿಕೆಯಷ್ಟೇ ಸಾಕಾಗುವುದಿಲ್ಲ ಬೂಸ್ಟರ್‌ ತೆಗೆದುಕೊಳ್ಳಬೇಕು ಎಂದು ಹೇಳಿದರೆ ಇನ್ನು ಕೆಲ ತಜ್ಞರು ಬೂಸ್ಟರ್ ಅಗ್ಯತವಿಲ್ಲ ಎಂದು ಹೇಳುತ್ತಿದ್ದಾರೆ. ಕೆಲವೊಂದು ದೇಶಗಳು ಬೂಸ್ಟರ್ ನೀಡಲಾರಂಭಿಸಿವೆ.

ಭಾರತದಲ್ಲಿ ಕೋವಿಡ್‌ 19ಗೆ ಕೊವಾಕ್ಸಿನ್, ಕೋವಿಶೀಲ್ಡ್ ಎಂಬ ಎರಡು ಬಗೆಯ ಲಸಿಕೆ ನೀಡಲಾಗುತ್ತಿದೆ. ಮೊದಲಿಗೆ ಯಾವ ಲಸಿಕೆ ಪಡೆಯುತ್ತೇವೋ ಅದೇ ಲಸಿಕೆಯನ್ನು ಎರಡನೇ ಡೋಸ್‌ನಲ್ಲಿ ತೆಗೆದುಕೊಳ್ಳಬೇಕು ಎಂಬ ಮಾರ್ಗಸೂಚಿ ಇದೆ, ಇವನ್ನು ಆರೋಗ್ಯ ಇಲಾಖೆಯಲ್ಲಿ ತಪ್ಪದೆ ಪಾಲಿಸಲಾಗುತ್ತಿದೆ. ಆದರೆ ಇತ್ತೀಚೆಗೆ ನಡೆಸುತ್ತಿರುವ ICMR ಅಧ್ಯಯನ ವರದಿಯು ಲಸಿಕೆಗಳನ್ನು ಮಿಕ್ಸ್‌ ಮಾಡುವುದರಿಂದ ಕೊರೊನಾ ವಿರುದ್ಧ ಮತ್ತಷ್ಟು ಸಮರ್ಥವಾಗಿ ಹೋರಾಡಬಹುದು ಎಂದು ಹೇಳಿದೆ.

ಅಧ್ಯಯನ ವರದಿ ಹೇಳಿದೆ, ಈ ರಿತಿ ಲಸಿಕೆ ಮಿಕ್ಸ್ ಮಾಡುವುದರಿಂದ ದೊರೆಯುವ ಪ್ರಯೋಜನಗಳೇನು, ಈ ರೀತಿಯ ಮಿಕ್ಸಿಂಗ್ ಸುರಕ್ಷಿತವೇ ಎಂಬೆಲ್ಲಾ ಮಾಹಿತಿ ತಿಳಿಯೋಣ:

ಅಧ್ಯಯನ ವರದಿ ಏನು ಹೇಳಿದೆ?

ಅಧ್ಯಯನ ವರದಿ ಏನು ಹೇಳಿದೆ?

ICMR (Indian Council of Medical Research) ಇತ್ತೀಚೆಗೆ ಒಮದು ಅಧ್ಯಯನ ನಡೆಸಿತ್ತು. ಇದರಲ್ಲಿ ಕೋವಿಶೀಲ್ಡ್ ಹಾಗೂ ಕೊವಾಕ್ಸಿನ್ ಮಿಕ್ಸ್ ಮಾಡಿದರೆ ಹೇಗೆ ಪರಿಣಾಮ ಬೀರುವುದು ಎಂಬುವುದರ ಬಗ್ಗೆ ಅಧ್ಯಯನ ನಡೆಸಲಾಯಿತು. ಈ ಅಧ್ಯಯನದಲ್ಲಿ ಭಾಗವಹಿಸಿದವರಿಗೆ ಕೊವಾಕ್ಸಿನ್‌, ಕೊವಿಶೀಲ್ಡ್ ಮಿಕ್ಸ್ ನೀಡಲಾಯಿತು. ಅಂದರೆ ಮೊದಲ ಡೋಸ್‌ನಲ್ಲಿ 18 ಜನರಿಗೆ ಕೊವಿಶೀಲ್ಡ್ ನೀಡಿ ನಂತರ ಸೆಕೆಂಡ್‌ ಡೋಸ್‌ಗೆ ಕೊವಾಕ್ಸಿನ್ ನೀಡಲಾಯಿತು. ಇದರಲ್ಲಿ ತಿಳಿದು ಬಂದ ಅಂಶವೇನೆಂದರೆ ಹೀಗೆ ಮಿಕ್ಸ್ ಮಾಡಿ ನೀಡಿರುವುದರಿಂದ ಒಂದೇ ಬಗೆಯ ಡೋಸ್‌ ಪಡೆಯುವುದಿಕ್ಕಿಂತಲೂ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಅಲ್ಲದೆ ಈ ಅಧ್ಯಯನದಲ್ಲಿ ಒಳಪಟ್ಟಿದವರಲ್ಲಿ ಯಾರಿಗೂ ಯಾವುದೇ ಅಡ್ಡಪರಿಣಾಮ ಉಂಟಾಗಿರಲಿಲ್ಲ ಎಂದು ICMR ಹೇಳಿದೆ.

ಎರಡು ಬಗೆಯ ಲಸಿಕೆ ಮಿಕ್ಸ್ ಮಾಡುವುದು ಸುರಕ್ಷಿತವೇ?

ಎರಡು ಬಗೆಯ ಲಸಿಕೆ ಮಿಕ್ಸ್ ಮಾಡುವುದು ಸುರಕ್ಷಿತವೇ?

ICMR ಅಧ್ಯಯನ ನಡೆಸುವ ಮುನ್ನ ಉತ್ತರ ಪ್ರದೇಶದಲ್ಲಿ ಅಚಾನಕ್ ಆಗಿ ಕೆಲ ವ್ಯಕ್ತಿಗಳಿಗೆ ಮಿಕ್ಸ್ ನೀಡಲಾಗಿತ್ತು. ಅಂದರೆ ಮೊದಲಿಗೆ ಕೊವಿಶೀಲ್ಡ್ ಸಿಕ್ಕಿದವರಿಗೆ ನಂತರ ಡೋಸ್ ಕೊವಾಕ್ಸಿನ್‌, ಮೊದಲು ಕೊವಾಕ್ಸಿನ್‌ ಪಡೆದವರಿಗೆ ನಂತರ ಕೋವಿಶೀಲ್ಡ್ ಸಿಕ್ಕಿತ್ತು. ಆದರೆ ಆ ಮಿಕ್ಸ್ ಲಸಿಕೆ ಪಡೆದಕೊಂಡ ವ್ಯಕ್ತಿಗಳ ಮೇಲೆ ಯಾವುದೇ ಅಡ್ಡಪರಿಣಾಮ ಉಂಟಾಗಿರಲಿಲ್ಲ. ಇದನ್ನು ಗಮನಿಸಿದ ICMR ಈ ಅಧ್ಯಯನ ನಡೆಸಿ ಲಸಿಕೆ ಮಿಕ್ಸಿಂಗ್‌ ದೇಹದ ಮೇಲೆ ಯಾವ ರೀತಿಯ ಪ್ರಭಾವ ಬೀರುವುದು ಎಂದು ತಿಳಿಯಲು ಮುಂದಾಯ್ತು.

ಇನ್ನು ವ್ಯಾಕ್ಸಿನ್‌ ಮಿಕ್ಸಿಂಗ್‌ನಿಂದ ಯಾವುದೇ ಅಡ್ಡಪರಿಣಾಮಗಳು ಇದುವರೆಗೆ ಉಂಟಾಗಿಲ್ಲ. ಕೊರೊನಾ ಲಸಿಕೆಗಳು ಕೆಲವೊಂದು ವ್ಯಕ್ತಿಗಳ ಮೇಲೆ ಅಡ್ಡ ಪರಿಣಾಮ ಬೀರಿವೆ. ಈ ರೀತಿಯ ಅಡ್ಡಪರಿಣಾಮಗಳು ಈ ಮಿಕ್ಸಿಂಗ್‌ ಲಸಿಕೆ ಪಡೆದಾಗ ಕೆಲ ವ್ಯಕ್ತಿಯಲ್ಲಿ ಕಂಡು ಬರಬಹುದು. ಆದರೆ ಇದುವರೆಗೆ ನಡೆಸಿದ ಅಧ್ಯಯನದಲ್ಲಿ ಯಾವುದೇ ವ್ಯಕ್ತಿಯ ಮೇಲೆ ಮಿಕ್ಸಿಂಗ್‌ ಲಸಿಕೆ ಅಡ್ಡಪರಿಣಾಮ ಬೀರಿಲ್ಲ ಎಂಬುವುದು ಸಾಬೀತಾಗಿದೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ICMR ಕೋವಿಡ್ ಲಸಿಕೆಗಳನ್ನು ಮಿಕ್ಸ್ ಮಾಡಿದೆ. ಕೆನಡಾ, ಯುಕೆಯಲ್ಲೂ ಈ ರೀತಿ ಮಿಕ್ಸಿಂಗ್‌ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.

ಕೊರೊನಾ ಲಸಿಕೆಗಳನ್ನು ಮಿಕ್ಸ್ ಮಾಡುವುದರಿಂದ ಲೈಫ್‌ಟೈಮ್ ರೋಗ ನಿರೋಧಕ ಶಕ್ತಿ ಪಡೆಯಬಹುದು ಎಂದು ಹೇಳಲಾಗುತ್ತಿದೆ, ICMR ಪ್ರಯೋಗ ಮಾಡಿದ 18 ಜನರು ಹಾಗೂ ಕೆಲವು ಕಡೆ ವೈದ್ಯಕೀಯ ಸಿಬ್ಬಂದಿಯ ಪ್ರಮಾದದಿಂದ ಮಿಕ್ಸ್‌ ಲಸಿಕೆ ಪಡೆದಿದ್ದಾರೆ. ಆದ್ದರಿಂದ ಭಾರತದಲ್ಲಿ ಈ ರೀತಿ ಮಿಕ್ಸಿಂಗ್‌ ಲಸಿಕೆ ಪಡೆದವರ ಸಂಖ್ಯೆ ಬೆರಳಿಣಿಕೆಯಲ್ಲಿದೆ.

ಲಸಿಕೆಗಳನ್ನು ಮಿಕ್ಸ್ ಮಾಡಿದರೆ ಬೂಸ್ಟರ್ ಅಗ್ಯತವಿಲ್ಲವೇ?

ಲಸಿಕೆಗಳನ್ನು ಮಿಕ್ಸ್ ಮಾಡಿದರೆ ಬೂಸ್ಟರ್ ಅಗ್ಯತವಿಲ್ಲವೇ?

ಈ ಎಲ್ಲಾ ವಿಷಯಗಳ ಬಗ್ಗೆ ಸಾಕಷ್ಟು ಸಂಶೋಧನೆಗಳು ನಡೆಯುತ್ತಲೇ ಇವೆ. ಎರಡು ಲಸಿಕೆಗಳನ್ನು ಮಿಕ್ಸ್ ಮಾಡಿದರೆ ರೋಗ ನಿರೋಧಕ ಶಕ್ತಿ ದೀರ್ಘ ಸಮಯವಿರುತ್ತೆ ಎಂದು ಹೇಳುತ್ತಿರುವುದರಿಂದ ಈ ರೀತಿ ಮಿಕ್ಸ್ ಮಾಡಿದರೆ ಬೂಸ್ಟರ್‌ ಅಗ್ಯತವಿರಲ್ಲ.

ಇನ್ನು ಈಗೀನ ಪರಿಸ್ಥಿತಿಯಲ್ಲಿ ಎಲ್ಲರಿಗೆ ಬೂಸ್ಟರ್‌ ದೊರೆಯುವುದು ಸುಲಭವಲ್ಲ, ತುಂಬಾ ದೊಡ್ಡ ಪ್ರಮಾಣದಲ್ಲಿ ಬೂಸ್ಟರ್ ಉತ್ಪಾದಿಸಬೇಕಾಗುತ್ತದೆ, ಅದಕ್ಕೆ ಸಾಕಷ್ಟು ಸಮಯ ಬೇಕಾಗುವುದು. ಅಲ್ಲದೆ ಭಾರತದಲ್ಲಿ ಬೂಸ್ಟರ್ ಲಭ್ಯತೆ ಬಗ್ಗೆ ಹೆಚ್ಚಿನ ಮಾಹಿತಿಯಿಲ್ಲ, ಆದ್ದರಿಂದ ಇದಕ್ಕೆ ಪರ್ಯಾವಾಗಿ ಲಸಿಕೆಗಳನ್ನು ಮಿಕ್ಸ್ ಮಾಡುವುದು ಸೂಕ್ತವಾಗಿದೆ.

English summary

Coronavirus Vaccine Mixing: Mixing Covaxin and Covishield vaccines is safe and effective : ICMR study

Coronavirus Vaccine Mixing: Mixing Covaxin and Covishield vaccines is safe and effective : ICMR study,
Story first published: Wednesday, October 20, 2021, 18:25 [IST]
X
Desktop Bottom Promotion