Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ಮನೆಯಿಂದ ದೂರವಿರೋಕೆ ಕಷ್ಟವಾಗ್ತಿದ್ಯಾ? ಹಾಗಿದ್ರೆ ಈ ಟಿಪ್ಸ್ ಅಳವಡಿಸಿಕೊಳ್ಳಿ ಖುಷಿಯಾಗಿರಬಹುದು
ಪ್ರತಿಯೊಬ್ಬರಿಗೂ ತಮ್ಮ ಮನೆ ಅಂದ್ರೆ ಅದೇನೋ ಎಮೋಷನ್. ಆದ್ರೆ ತಮ್ಮ ಜೀವನದ ಯಾವುದೋ ಹಂತದಲ್ಲಿ ತಾವು ಹುಟ್ಟಿ ಬೆಳೆದ ಮನೆಯಿಂದ, ತಮ್ಮ ಪ್ರೀತಿ-ಪಾತ್ರರಿಂದ ದೂರ ಉಳಿಯಲೇಬೇಕಾಗುತ್ತದೆ. ಅದು ಹೆಣ್ಣಿಗಾಗಲೀ ಅಥವಾ ಗಂಡಿಗಾಗಲೀ ಮನೆಯಿಂದ ದೂರ ಉಳಿಯುವುದು ಅನಿವಾರ್ಯ ಪರಿಸ್ಥಿತಿ. ಅಂತಹ ಸಮಯದಲ್ಲಿ ಕೆಲವರು ಬಹಳ ನೋವನ್ನ ಅನುಭವಿಸುತ್ತಾರೆ. ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಬಹಳ ಸಮಸ್ಯೆ ಎದುರಿಸುತ್ತಾರೆ. ಸದಾಕಾಲ ತಮ್ಮ ಮನೆಯ ನೆನಪುಗಳೇ ಅವರನ್ನ ಕಾಡುತ್ತಿರುತ್ತವೆ. ಆದರೆ ಇದರಿಂದ ಹೊರಬರುವುದು ಅನಿವಾರ್ಯ. ಅದು ಹೇಗೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಮನೆಯ ನೆನಪಿನಿಂದ ಹೊರಬಂದು, ನೀವಿರುವ ಜಾಗದಲ್ಲಿ ಸಂತೋಷದಿಂದರಲು ಶಿಫಾರಸ್ಸು ಮಾಡುವ 5 ಮಾರ್ಗಗಳ ಬಗ್ಗೆ ಹೇಳಲಾಗಿದೆ:

1. ಹವ್ಯಾಸ ಬೆಳೆಸಿಕೊಳ್ಳಿ
ನಿಮಗೆ ಆಸಕ್ತಿಯಿರುವ ಯಾವುದೇ ಕ್ಷೇತ್ರದಲ್ಲಿ ಒಂದು ಹವ್ಯಾಸವನ್ನು ಬೆಳೆಸಿಕೊಳ್ಳಿ. ಇದರಿಂದ ನಿಮಗೆ ಹಲವಾರು ಪ್ರಯೋಜನಗಳಿವೆ. ಹೊಸ ಹವ್ಯಾಸದಿಂದ ಹೊಸದನ್ನು ಕಲಿಯಬಹುದು. ಮನಸ್ಸು ಹೊಸತನ್ನು ಯೋಚಿಸಲು ಪ್ರಾರಂಭಿಸಿ, ನಿಮ್ಮ ಬೇಸರದ ಭಾವನೆಗಳಿಂದ ಹೊರಬರಲು ಸಹಾಯ ಮಾಡುವುದು. ಕ್ರಿಕೆಟ್ ಆಡುವುದು, ಡ್ಯಾನ್ಸ್ ಕ್ಲಾಸದ ಸೇರಿಕೊಳ್ಳುವುದು ಅಥವಾ ಈಜಲು ಹೋಗುವುದು ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

2. ಸಕ್ರಿಯರಾಗಿರಿ
ಸದಾ ಕಾಲ ಸಕ್ರಿಯರಾಗಿದ್ದು, ಯಾವುದೇ ಕೆಲಸವನ್ನು ಮಾಡಲು ಸಿದ್ಧವಾಗಿರುವುದು ಖುಷಿಯಾಗಿರಲು ಉತ್ತಮ ಉಪಾಯವಾಗಿದೆ. ಆಲಸ್ಯ ಮತ್ತು ಸೋಮಾರಿಯಾಗಿರುವುದು ನಿಮ್ಮ ಮನಸ್ಸಿಗೆ ಅದೇ ಆಲೋಚನೆ ಕಾಡುವಂತೆ ಮಾಡುತ್ತದೆ. ಸಕ್ರಿಯ ಮತ್ತು ಕಾರ್ಯನಿರತವಾಗಿರುವಾಗ ಸಾಮಾನ್ಯವಾಗಿ ಹೊಸ ಹೊಸ ಆಲೋಚನೆಗಳು ಬರದಂತೆ ತಡೆಯುತ್ತದೆ. ಆದ್ದರಿಂದ, ಕಾರ್ಯನಿರತರಾಗಿರಿ. ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ ಏಕೆಂದರೆ ಅದು ನಿಮಗೆ ಯಾವುದೇ ಪ್ರಯೋಜನ ನೀಡದು.

3. ಸಾಧ್ಯವಾದರೆ ಹೊರಗೆ ಹೋಗಿ
ನಿಮಗೆ ಸಾಧ್ಯವಾದರೆ, ಹೆಚ್ಚು ಹೊರಗೆ ಹೋಗಲು ಪ್ರಾರಂಭಿಸಿ. ಹೊರಗೆ ಹೋಗುವುದು ಅಂದ್ರೆ, ಪಾರ್ಟಿ ಮಾಡುವುದು ಮತ್ತು ಕ್ಲಬ್‌ಗಳಿಗೆ ಹೋಗುವುದು ಎಂದರ್ಥವಲ್ಲ. ಪ್ರಕೃತಿಯನ್ನು ಅನ್ವೇಷಿಸುವುದು, ಸೈಕಲ್ ರೈಡ್ ಮಾಡುವುದು ಬಿಡುವಿಲ್ಲದ ವೇಳಾಪಟ್ಟಿಗೆ ಸೇರಿಸಬಹುದಾದ ಹಲವಾರು ಚಟುವಟಿಕೆಗಳಾಗಿವೆ. ಟ್ರಕ್ಕಿಂಗ್ ಹೋಗುವುದು ಉತ್ತಮ ಆಯ್ಕೆಯಾಗಿದೆ. ಇದು ಪ್ರಕೃತಿಯೊಂದಿಗೆ ಸಂಪರ್ಕ ಸಾಧಿಸಲು ಮತ್ತು ದೈಹಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಅದರ ಒಂದು ಭಾಗವನ್ನು ಅನುಭವಿಸಲು ಸಹಾಯ ಮಾಡುತ್ತದೆ.

4. ನೀವೇ ಅಡುಗೆ ಮಾಡಿ
ಊಟಕ್ಕೆ ಹೊರಗಿನಿಂದ ಆರ್ಡರ್ ಮಾಡುವ ಬದಲು ಮನೆಯಲ್ಲಿಯೇ ಆಹಾರವನ್ನು ತಯಾರಿಸಿ. ಕೆಲವೊಮ್ಮೆ ಅಡುಗೆ ವಿಚಾರದಲ್ಲಿ ಜಗಳವಾಗಬಹುದು. ಆದರೆ ಇದು ಹೆಚ್ಚು ಧನಾತ್ಮಕತೆಯನ್ನು ಹೊಂದಿದೆ. ನೀವು ಮನೆಯಲ್ಲಿ ತಯಾರಿಸಿದ ಆಹಾರ ಸೇವಿಸುವುದು, ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುವುದಲ್ಲದೇ, ನಿಮ್ಮ ಸಂಸ್ಕೃತಿಯೊಂದಿಗೆ ಸಂಪರ್ಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೆ, ಅಡುಗೆ ಸಮಯ ತೆಗೆದುಕೊಳ್ಳುವುದರಿಂದ ಮನೆಯ ಯಾವುದೋ ನೆನಪುಗಳನ್ನು ಆಲೋಚಿಸಲು ಕಡಿಮೆ ಸಮಯ ಸಿಗುವುದು.

5. ಸಂಪರ್ಕಿಸಲು ಹೊಸ ಮಾರ್ಗಗಳನ್ನು ಹುಡುಕಿ
ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಿ. ವೀಡಿಯೊ ಕರೆಗಳು ಮತ್ತು ಮೆಸೇಜ್ ಕಳುಹಿಸುವುದು ಒಂದು ಮಾರ್ಗವಾಗಿದ್ದರೂ, ಅದನ್ನು ಇನ್ನಷ್ಟು ಉತ್ಸಾಹದಿಂದ ನಡೆಸಲು, ವಿವಿಧ ದಾರಿಗಳನ್ನು ಅನುಸರಿಸಬಹುದು. ಇದಕ್ಕಾಗಿ ಸ್ನೇಹಿತರು ಮತ್ತು ಕುಟುಂಬಗಳಿಗಾಗಿ ಆನ್‌ಲೈನ್ ಈವೆಂಟ್ ಆಯೋಜಿಸಬಹುದು ಅಥವಾ ಹೊಸ ಆನ್‌ಲೈನ್ ಮಲ್ಟಿಪ್ಲೇಯರ್ ಆಟಗಳನ್ನು ಆಡಬಹುದು. ಇದು ನಿಮ್ಮ ಕುಟುಂಬ ಮತ್ತು ಸ್ನೇಹಿತರ ಜೊತೆ ಹೆಚ್ಚು ಸಂಪರ್ಕದಲ್ಲಿರಲು ಸಹಾಯ ಮಾಡುವುದು.



Click it and Unblock the Notifications
