For Quick Alerts
ALLOW NOTIFICATIONS  
For Daily Alerts

ಸ್ತನಗಳ ತೊಟ್ಟಿನ ತುರಿಕೆಗೆ ಉತ್ತಮ ಮನೆಮದ್ದುಗಳು

|

ಮಹಿಳೆಯರಲ್ಲಿ ದೇಹಾರೋಗ್ಯದಲ್ಲಿ ಹಲವಾರು ಬದಲಾವಣೆಗಳು ಕಾಲಕಾಲಕ್ಕೆ ಸಂಭವಿಸುತ್ತಾ ಇರುವುದು. ಇದರಲ್ಲಿ ಮುಖ್ಯವಾಗಿ ಸ್ತನಗಳ ತೊಟ್ಟುಗಳು ತುರಿಸುವುದು. ಇದು ಸಾಮಾನ್ಯವಾಗಿ ಗರ್ಭಧಾರಣೆ ಮಾಡಿರುವಂತಹ ಮಹಿಳೆಯರಲ್ಲಿ ಕಂಡುಬರುವುದು.

Best Home Remedies For Itchy Nipples

ಆದರೆ ಮಹಿಳೆಯರ ಸ್ತನಗಳ ತೊಟ್ಟುಗಳು ತುರಿಸಲು ಕೇವಲ ಗರ್ಭಧಾರಣೆ ಮಾತ್ರ ಕಾರಣವಲ್ಲ, ಇದಕ್ಕೆ ಬೇರೆ ಹಲವಾರು ಕಾರಣಗಳು ಕೂಡ ಇವೆ. ನಿರಂತರವಾಗಿ ಇದು ತುರಿಸುತ್ತಿದ್ದರೆ ಆಗ ಇದರ ಬಗ್ಗೆ ನೀವು ನಿರ್ಲಕ್ಷ್ಯ ವಹಿಸದೆ ತಕ್ಷಣವೇ ವೈದ್ಯರ ಬಳಿಕ ಚಿಕಿತ್ಸೆ ಪಡೆಯುವುದು ಸೂಕ್ತ. ಯಾಕೆಂದರೆ ಈ ತುರಿಕೆಯು ಯಾವುದಾದರೂ ಗಂಭೀರ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು.

ಕೆಲವು ಸಂದರ್ಭದಲ್ಲಿ ಅಲರ್ಜಿಯಿಂದಲೂ ಸ್ತನಗಳ ತೊಟ್ಟು ತುರಿಸುವುದು. ಇವುಗಳಲ್ಲಿ ಮುಖ್ಯವಾಗಿ ಧರಿಸುವ ಬಟ್ಟೆ, ಚರ್ಮದ ಉತ್ಪನ್ನಗಳು, ಪರ್ಫ್ಯೂಮ್, ಸೋಪ್ ಮತ್ತು ಟಾಲ್ಕಂ ಪೌಡರ್ ಸಮಸ್ಯೆ ಉಂಟು ಮಾಡಬಹುದು.

ಸ್ತನಗಳ ತೊಟ್ಟು ತುರಿಸುವುದಕ್ಕೆ ಏಳು ಮನೆಮದ್ದುಗಳ ಬಗ್ಗೆ ಇಲ್ಲಿ ತಿಳಿಸಿಕೊಡಲಿದ್ದೇವೆ.

1. ಬೆಣ್ಣೆ

1. ಬೆಣ್ಣೆ

ಮಹಿಳೆಯರು ಸ್ತನಗಳ ತೊಟ್ಟಿನಲ್ಲಿ ತುರಿಕೆ ಕಾಣಿಸಿಕೊಂಡರೆ ಆಗ ನೇರವಾಗಿ ಬೆಣ್ಣೆಯನ್ನು ತೊಟ್ಟುಗಳಿಗೆ ಹಚ್ಚಿಕೊಳ್ಳಬೇಕು. ಬೆಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಂಡ ಬಳಿಕ ನಿಧಾನವಾಗಿ ವೃತ್ತಾಕಾರದಲ್ಲಿ ಬೆರಳುಗಳಿಂದ ಮಸಾಜ್ ಮಾಡಿಕೊಳ್ಳಿ. ಹೀಗೆ ಮಾಡಿದ ಬಳಿಕ ತಣ್ಣೀರಿನಿಂದ ತೊಳೆಯಿರಿ. ಬೆಣ್ಣೆಯಲ್ಲಿ ಮೊಶ್ಚಿರೈಸರ್ ಗುಣಗಳು ಇರುವ ಕಾರಣದಿಂದಾಗಿ ತೊಟ್ಟುಗಳು ತುರಿಸುವುದು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗುವುದು.

2. ವಿಟಮಿನ್ ಸಿ

2. ವಿಟಮಿನ್ ಸಿ

ವಿಟಮಿನ್ ಸಿ ಯನ್ನು ಆಹಾರದಲ್ಲಿ ಸೇವನೆ ಮಾಡಿದರೆ ಅದರಿಂದ ಚರ್ಮದ ಅಂಗಾಂಶಗಳು ಸರಿಪಡಿಸಲ್ಪಡುವುದು. ಸ್ತನಗಳ ತೊಟ್ಟುಗಳು ತುರಿಸುತ್ತಾ ಇದ್ದರೆ ಆಗ ನೀವು ಆಹಾರ ಕ್ರಮದಲ್ಲಿ ವಿಟಮಿನ್ ಸಿ ಇರುವ ಹಣ್ಣುಗಳು ಹಾಗೂ ತರಕಾರಿಗಳನ್ನು ಸೇವಿಸಿ. ವಿಟಮಿನ್ ಸಿ ಅತ್ಯಧಿಕವಾಗಿ ಇರುವಂತಹ ಹಣ್ಣುಗಳು ಹಾಗೂ ತರಕಾರಿಗಳೆಂದರೆ ಕಿತ್ತಳೆ, ಕಿವಿ, ಪಪ್ಪಾಯಿ, ಟೊಮೆಟೊ ಇತ್ಯಾದಿ.

3. ಜೇನುತುಪ್ಪ

3. ಜೇನುತುಪ್ಪ

ಹಲವಾರು ಕಾಯಿಲೆಗಳಿಗೆ ಇದು ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗಿದೆ. ಜೇನುತುಪ್ಪದ ಅತ್ಯುತ್ತಮ ಅಂಶವೆಂದರೆ ಇದು ಹೆಚ್ಚಾಗಿ ಪ್ರತಿಯೊಂದು ಮನೆಯಲ್ಲೂ ಇರುವುದು. ಇದನ್ನು ನೀವು ಸ್ತನಗಳ ತೊಟ್ಟುಗಳಿಗೆ ಹಚ್ಚಿಕೊಂಡರೆ ಆಗ ತುರಿಕೆ ಕಡಿಮೆ ಆಗುವುದು ಮಾತ್ರವಲ್ಲದೆ, ಅದು ನಯವಾಗುವುದು. ತುರಿಕೆಯ ತೀವ್ರತೆಯನ್ನು ನೋಡಿಕೊಂಡು ಜೇನುತುಪ್ಪವನ್ನು ನೀವು ಹಚ್ಚಿಕೊಳ್ಳಿ. ತುರಿಕೆ ತೀವ್ರವಾಗಿದ್ದರೆ ಆಗ ದಿನಕ್ಕೆ ನಾಲ್ಕು ಸಲ ಇದನ್ನು ಹಚ್ಚಿಕೊಳ್ಳಿ.

4. ತುಳಸಿ ಎಲೆಗಳು

4. ತುಳಸಿ ಎಲೆಗಳು

ತುಳಸಿಯು ತುಂಬಾ ಪವಿತ್ರ ಹಾಗೂ ಹಲವಾರು ಔಷಧೀಯ ಗುಣಗಳನ್ನು ಹೊಂದಿರುವುದು. ಇದನ್ನು ಆಯುರ್ವೇದದಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಹಲವಾರು ರೀತಿಯ ಚರ್ಮದ ಸಮಸ್ಯೆಗಳಿಗೆ ತುಳಸಿ ಎಲೆಗಳನ್ನು ಔಷಧಿಯಾಗಿ ಬಳಸಲಾಗುತ್ತದೆ. ತುಳಸಿ ಎಲೆಗಳನ್ನು ಜಜ್ಜಿಕೊಂಡು ತುರಿಸುವ ಭಾಗಕ್ಕೆ ಹಚ್ಚಿಕೊಂಡರೆ ಆಗ ಖಂಡಿತವಾಗಿಯೂ ಸಮಸ್ಯೆ ನಿವಾರಣೆ ಆಗುವುದು. ಇದನ್ನು ಒಂದು ವಾರ ಕಾಲ ಬಿಡದೆ ಮಾಡಿ.

5. ತೆಂಗಿನ ಎಣ್ಣೆ

5. ತೆಂಗಿನ ಎಣ್ಣೆ

ಸ್ತನಗಳಲ್ಲಿನ ತುರಿಕೆಯು ಎಣ್ಣೆಯ ಮಸಾಜ್ ನಿಂದ ದೂರ ಮಾಡಬಹುದು. ತೆಂಗಿನ ಎಣ್ಣೆ ಬಳಸಿಕೊಂಡು ಸ್ತನಗಳ ತೊಟ್ಟುಗಳಿಗೆ ಮಸಾಜ್ ಮಾಡಿದರೆ ಆಗ ಖಂಡಿತವಾಗಿಯೂ ಇದು ತುಂಬಾ ಪರಿಣಾಮಕಾರಿ ಆಗಿರುವುದು. ತೆಂಗಿನ ಎಣ್ಣೆಯು ತುರಿಕೆ ಶಮನ ಮಾಡುವುದು. ವಿವಿಧ ರೀತಿಯ ಎಣ್ಣೆ ಬಳಸಿಕೊಂಡು ಸ್ತನಗಳ ತೊಟ್ಟು ಹಾಗೂ ಸ್ತನಗಳಿಗೆ ಮಸಾಜ್ ಮಾಡಿಕೊಳ್ಳಬಹುದು. ಅದರಲ್ಲೂ ತೆಂಗಿನ ಎಣ್ಣೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಮತ್ತು ಮೊಶ್ಚಿರೈಸರ್ ಗುಣಗಳು ಇವೆ.

ತೆಂಗಿನ ಎಣ್ಣೆಯು ಉರಿಯೂತ ಶಮನಕಾರಿಯೂ ಆಗಿದೆ. ಇದನ್ನು ಬಳಸುವುದು ತುಂಬಾ ಸುರಕ್ಷಿತ. ಬಾಣಂತಿ ಮಹಿಳೆಯರಲ್ಲಿ ಸ್ತನದ ಸಮಸ್ಯೆ ಕಾಣಿಸಿಕೊಂಡರೆ ಆಗ ಹೆಚ್ಚಾಗಿ ತೆಂಗಿನೆಣ್ಣೆ ಬಳಸಲಾಗುತ್ತದೆ.

6. ಅಲೋವೆರಾ

6. ಅಲೋವೆರಾ

ಅಲೋವೆರಾ ಲೋಳೆಯನ್ನು ಚರ್ಮದ ಹಲವಾರು ಸಮಸ್ಯೆಗಳಿಗೆ ಬಳಸಲಾಗುತ್ತದೆ. ಇದು ಸ್ತನಗಳ ತೊಟ್ಟುಗಳಲ್ಲಿ ಕಂಡುಬರುವ ತುರಿಕೆ ಸಮಸ್ಯೆ ಕೂಡ ನಿವಾರಣೆ ಮಾಡುವುದು. ಇದನ್ನು ತೊಟ್ಟುಗಳಿಗೆ ನೇರವಾಗಿ ಹಚ್ಚಿಕೊಳ್ಳಿ ಮತ್ತು 10 ನಿಮಿಷ ಕಾಲ ಹಾಗೆ ಬಿಡಿ. ಇದನ್ನು ನಿಧಾನವಾಗಿ ಮಸಾಜ್ ಮಾಡಿಕೊಳ್ಳಿ. 10 ನಿಮಿಷ ಬಳಿಕ ಬಟ್ಟೆ ಬಳಸಿಕೊಂಡು ಲೋಳೆಯನ್ನು ಒರೆಸಿಕೊಳ್ಳಿ. ಕೆಲವು ದಿನಗಳ ಕಾಲ ಇದನ್ನು ನೀವು ಪುನರಾವರ್ತಿಸಿ.

ಉತ್ತಮ ಫಲಿತಾಂಶ ಬರಬೇಕಾದರೆ ನೀವು ಅಲೋವೆರಾ ಲೋಳೆ ತೆಗೆದು ಅದನ್ನು ಫ್ರಿಡ್ಜ್ ನಲ್ಲಿಡಬೇಕು. ಇದರ ಬಳಿಕ ಬಳಸಿಕೊಂಡರೆ ಆಗ ಅದು ತಂಪು ನೀಡುವುದು. ತುರಿಸುವ ತೊಟ್ಟುಗಳಿಗೆ ತಂಪು ನೀಡಲು ಬಳಸುವ ಮೊದಲು 30 ನಿಮಿಷ ಕಾಲ ಇದನ್ನು ಪ್ರಿಡ್ಜ್ ನಲ್ಲಿ ಇಟ್ಟು ಬಿಡಿ.

7. ಐಸ್

7. ಐಸ್

ಸ್ತನಗಳ ತೊಟ್ಟುಗಳ ತುರಿಕೆಗೆ ಐಸ್ ತುಂಬಾ ಪರಿಣಾಮಕಾರಿ ಪರಿಹಾರ. ಐಸ್ ತುಂಡುಗಳನ್ನು ತೆಗೆದುಕೊಂಡು ತೆಳುವಾದ ಬಟ್ಟೆಯಲ್ಲಿ ಸುತ್ತಿಕೊಳ್ಳಿ. ಇದನ್ನು ತೊಟ್ಟುಗಳಿಗೆ ಹಚ್ಚಿಕೊಳ್ಳಿ. ಐಸ್ ಬಳಸಿದರೆ ಆಗ ಸ್ಪರ್ಶವಿಲ್ಲದಂತೆ ಆಗಬಹುದು. ಆದರೆ ಇದು ಖಂಡಿತವಾಗಿಯೂ ತುರಿಕೆಯನ್ನು ಬೇಗನೆ ಕಡಿಮೆ ಮಾಡುವುದು. ಬಾಣಂತಿ ಮಹಿಳೆಯರು ಮಗುವಿಗೆ ಹಾಲುಣಿಸುವ ಮಧ್ಯದ ಸಮಯದಲ್ಲಿ ಇದನ್ನು ಹಚ್ಚಿಕೊಳ್ಳಬೇಕು. ಇದರಿಂದ ತುರಿಕೆ ಕಡಿಮೆ ಆಗುವುದು.

ಕೆಲವು ಮುಂಜಾಗ್ರತಾ ಕ್ರಮ ಬಳಸಿಕೊಂಡರೆ ಆಗ ತೊಟ್ಟುಗಳಲ್ಲಿನ ತುರಿಕೆ ಕಡಿಮೆ ಮಾಡಬಹುದು. ಸರಿಯಾದ ಸ್ವಚ್ಛತೆ ಪಾಲಿಸಿಕೊಂಡು ಹೋಗುವುದು ಅತೀ ಅಗತ್ಯ. ತುಂಬಾ ಸುವಾಸನೆ ನೀಡುವಂತಹ ಟಾಲ್ಕಂ ಪೌಡರ್ ಮತ್ತು ಸೋಪ್ ಗಳನ್ನು ಕಡೆಗಣಿಸಿ. ಸರಿಯಾದ ಗಾತ್ರದ ಕಾಟನ್ ಬ್ರಾಗಳನ್ನು ಧರಿಸಿ.

ಮಹಿಳೆಯರ ಸ್ತನಗಳಲ್ಲಿ ತುರಿಕೆಯು ಎಲ್ಲಾ ವಯಸ್ಸಿನವರಲ್ಲಿ ಕಂಡುಬರುವುದು. ತುರಿಕೆ ಕಡಿಮೆ ಮಾಡಲು ನೀವು ಕೆಲವೊಂದು ಮುಂಜಾಗ್ರತೆ ತೆಗೆದುಕೊಂಡರೆ ತುಂಬಾ ಒಳ್ಳೆಯದು. ಎಲ್ಲಾ ಮುಂಜಾಗ್ರತೆ ತೆಗೆದುಕೊಂಡರೆ ತುರಿಕೆ ಕಂಡುಬರುತ್ತಲಿದ್ದರೆ ಆಗ ನೀವು ಮನೆಯಲ್ಲೇ ಸಿಗುವ ಕೆಲವು ಮನೆಮದ್ದುಗಳನ್ನು ಬಳಸಿಕೊಳ್ಳಬಹುದು.

English summary

Best Home Remedies For Itchy Nipples

Here we are discussing about Best Home Remedies For Itchy Nipples. While pregnancy is one of the most common reasons for itchy nipples, in certain rare cases, itchiness of the nipples can also be a symptom of Paget's disease of the breast requiring immediate medical attention. Read more.
X
Desktop Bottom Promotion