ಪುರುಷರಲ್ಲಿ ಕಾಣಿಸಿಕೊಳ್ಳುವ 10 ಆರೋಗ್ಯ ಸಮಸ್ಯೆಗಳು-ಅಪ್ಪಿತಪ್ಪಿಯೂ ಇದನ್ನು ನಿರ್ಲಕ್ಷಿಸಬೇಡಿ

ಪುರುಷರು ನಿಜಕ್ಕೂ ಆರೋಗ್ಯದ ವಿಷಯದಲ್ಲಿ ಬಡಪಾಯಿಗಳು! ಅವರಿಗೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು ಒಂದಾ, ಎರಡಾ? ನಮ್ಮ ದೇಶದಲ್ಲಿ ಮನೆಯ ಜವಾಬ್ದಾರಿಯನ್ನು ಬಹುತೇಕ ಪಾಲು ಪುರುಷರೇ ಹೊತ್ತಿರುತ್ತಾರೆ.

Mens Health Issues

ಅಂತಹ ಪುರುಷರಿಗೆ ಆರೋಗ್ಯದ ಸಮಸ್ಯೆಯಿಂದ ಏನಾದರೂ ಹೆಚ್ಚು ಕಡಿಮೆಯಾದರೇ, ಅವರೊಬ್ಬರಿಗೆ ಮಾತ್ರವಲ್ಲ ಅವರ ಇಡೀ ಕುಟುಂಬವೇ ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತಿ ತಲೆದೋರುತ್ತದೆ. ಬನ್ನಿ ಪುರುಷರೇ ನಿಮ್ಮ ಆರೋಗ್ಯದ ಕುರಿತು ಉದಾಸೀನ ಮಾಡಬೇಡಿ. ನಿಮಗೆ ಕಾಣಿಸಿಕೊಳ್ಳುವ ಟಾಪ್ 10 ಆರೋಗ್ಯ ಸಮಸ್ಯೆಗಳು ಯಾವುವು ಎಂದು ತಿಳಿದುಕೊಂಡು, ಅವುಗಳಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಿ. ಆ ಸಮಸ್ಯೆಗಳು ಯಾವುವು ಎಂದರೆ:

ಹೃದ್ರೋಗ ಸಮಸ್ಯೆಗಳು

ಹೃದ್ರೋಗ ಸಮಸ್ಯೆಗಳು

ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಪ್ರಕಾರ ಪ್ರತಿ ಮೂರು ಪುರುಷರಲ್ಲಿ ಒಬ್ಬರಿಗೆ ಹೃದ್ರೋಗ ಸಮಸ್ಯೆ ಇರುತ್ತದೆಯಂತೆ. ಅಂದಾಜು 2.8 ಮಿಲಿಯನ್ ಪುರುಷರು ಹೃದಯಾಘಾತದ ಅನುಭವವನ್ನು ಪಡೆದಿದ್ದಾರಂತೆ ಹಾಗೂ ಅಧಿಕ ರಕ್ತದೊತ್ತಡದ ಅನುಭವವು ಯುವಕರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದೆ. ಆಗಾಗ ನಿಯಮಿತವಾಗಿ ಹೃದಯದ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದರಿಂದ ನಿಮ್ಮನ್ನು ನೀವು ಈ ಸಮಸ್ಯೆಯಿಂದ ಕಾಪಾಡಿಕೊಳ್ಳಬಹುದು.

ಶ್ವಾಸಕೋಶದ ಸಮಸ್ಯೆಗಳು

ಶ್ವಾಸಕೋಶದ ಸಮಸ್ಯೆಗಳು

ಬಹುತೇಕ ಗಂಡಸರಿಗೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ ಎಂದು ಅಮೇರಿಕನ್ ಲಂಗ್ ಅಸೋಸಿಯೇಶನ್ ತಿಳಿಸಿದೆ. ಇದಕ್ಕೆ ಧೂಮಪಾನವೇ ಪ್ರಮುಖ ಕಾರಣವಾದರೂ, ಧೂಮಪಾನ ಮತ್ತು ಕಲುಷಿತ ಗಾಳಿ ಇರುವ ಪ್ರದೇಶದಲ್ಲಿ ಹೆಚ್ಚಾಗಿ ಇರುವ ಕಾರಣ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.

ಮದ್ಯಪಾನ

ಮದ್ಯಪಾನ

ಆಲ್ಕೋಹಾಲ್ ಅಥವಾ ಮದ್ಯಪಾನಕ್ಕೆ ಸಂಬಂಧಪಟ್ಟ ಆರೋಗ್ಯ ಸಮಸ್ಯೆಯಿಂದ ಬಳಲುವವರು ಬಹುತೇಕ ಪುರುಷರೇ ಆಗಿರುತ್ತಾರೆ. ಸಿಡಿಸಿ ಸಂಸ್ಥೆಯವರ ಪ್ರಕಾರ ಮದ್ಯಪಾನ ಸೇವನೆಯಿಂದ ಬಾಯಿ, ಗಂಟಲು, ಅನ್ನನಾಳ, ಲಿವರ್ ಮತ್ತು ಕೋಲನ್ ಕ್ಯಾನ್ಸರ್‌ಗಳ ಸಮಸ್ಯೆಗೆ ಹೆಚ್ಚಾಗಿ ತುತ್ತಾಗುವವರು ಗಂಡಸರೇ ಆಗಿರುತ್ತಾರಂತೆ. ಈ ಆಲ್ಕೋಹಾಲ್ ಸೇವನೆಯು ವೃಷಣಗಳ ಕಾರ್ಯವೈಖರಿ ಮತ್ತು ಹಾರ್ಮೋನ್ ಉತ್ಪಾದನೆ ಮೇಲೆ ಪ್ರಭಾವ ಬೀರುತ್ತದೆಯಂತೆ. ಇದಲ್ಲದೆ ಮಹಿಳೆ ಮತ್ತು ಪುರುಷರ ಆಯುಸ್ಸಿನ ಪ್ರಮಾಣದ ನಡುವಿನ ವ್ಯತ್ಯಾಸವು ಸಹ ಹೆಚ್ಚಾಗುತ್ತಿದೆ. ವಿಶೇಷವಾಗಿ, ಅತಿಯಾದ ಧೂಮಪಾನ ಮತ್ತು ಕುಡಿತವು ಪುರುಷರ ಆಯುಸ್ಸಿನ ಪ್ರಮಾಣದ ಮೇಲೆ ಪ್ರಭಾವ ಬೀರುತ್ತವೆ. ಅದೃಷ್ಟವಶಾತ್, ಮೇಲೆ ತಿಳಿಸಲಾಗಿರುವ ಬಹುತೇಕ ಪುರುಷರ ಆರೋಗ್ಯ ಸಮಸ್ಯೆಗಳನ್ನು ಮೊದಲೇ ನಿಯಂತ್ರಿಸಬಹುದು ಅಥವಾ ಮೊದಲೇ ಪತ್ತೆ ಹಚ್ಚಿದಲ್ಲಿ, ನಿವಾರಿಸಬಹುದು.

ಖಿನ್ನತೆ ಮತ್ತು ಆತ್ಮಹತ್ಯೆ

ಖಿನ್ನತೆ ಮತ್ತು ಆತ್ಮಹತ್ಯೆ

ಪುರುಷರು ಮಹಿಳೆಯರಿಗಿಂತ ಭಿನ್ನವಾಗಿ ಖಿನ್ನತೆಯನ್ನು ಅನುಭವಿಸುತ್ತಾರೆ. ಇವರು ಸುಸ್ತು ಮತ್ತು ಕಿರಿಕಿರಿ ಸಮಸ್ಯೆಗಳು ನಮ್ಮನ್ನು ಹೆಚ್ಚು ಕಾಡುತ್ತವೆ ಎಂದು ದೂರುತ್ತಾರೆ. ಇನ್ನೂ ಒಂದು ದೊಡ್ಡ ಸಮಸ್ಯೆಯೇನೆಂದರೆ, ಇವರು ತಮಗೆ ಇರುವ ಸಮಸ್ಯೆಗಳನ್ನು ಬಹುತೇಕ ಸಂದರ್ಭದಲ್ಲಿ ಹೇಳಿಕೊಳ್ಳುವುದಿಲ್ಲ. ಆದರೂ ಹೆಂಗಸರು ಆತ್ಮಹತ್ಯೆಗೆ ಅತಿ ಹೆಚ್ಚು ಬಾರಿ ಪ್ರಯತ್ನ ಪಡುತ್ತಾರೆ. ಆದರೆ ಪುರುಷರು, ಆತ್ಮಹತ್ಯೆ ಮಾಡಿಕೊಂಡು ಸಾಯುವುದು ಹೆಚ್ಚು.

ಉದ್ದೇಶಪೂರ್ವಕವಲ್ಲದ ಗಾಯಗಳು ಮತ್ತು ಅಪಘಾತಗಳು

ಉದ್ದೇಶಪೂರ್ವಕವಲ್ಲದ ಗಾಯಗಳು ಮತ್ತು ಅಪಘಾತಗಳು

ಸಿಡಿಸಿ ಸಂಸ್ಥೆಯವರ ಪ್ರಕಾರ 2009 ನೇ ಇಸವಿಯಲ್ಲಿ ಸಂಭವಿಸಿದ ಸಾವುಗಳ ಪೈಕಿ ಮೂರನೇ ಅತಿ ಹೆಚ್ಚು ಸಾವುಗಳಿಗೆ ಉದ್ದೇಶಪೂರ್ವಕವಲ್ಲದ ಗಾಯಗಳು ಮತ್ತು ಅಪಘಾತಗಳು ಕಾರಣವಾಯಿತು ಎಂದು ತಿಳಿದು ಬಂದಿದೆ. ಉದ್ದೇಶಪೂರ್ವಕವಲ್ಲದ ಗಾಯಗಳು ಪುರುಷರಲ್ಲಿ 6.2% ಸಾವುಗಳಿಗೆ ಕಾರಣವಾದರೆ, ಇದರ ಪ್ರಮಾಣವು ಮಹಿಳೆಯರಲ್ಲಿ 3.5% ಆಗಿರುತ್ತದೆ.

ಮಧುಮೇಹ

ಮಧುಮೇಹ

ಮಧುಮೇಹವು ಪುರುಷರಲ್ಲಿ ಒಂದು ವಿಶೇಷ ಬಗೆಯ ತೊಡಕುಗಳ ಸರಣಿಯನ್ನೇ ಉಂಟು ಮಾಡುತ್ತದೆ. ಅದರಲ್ಲಿ ಮುಖ್ಯವಾಗಿ ಲೈಂಗಿಕ ಅಸರ್ಮರ್ಥತೆ ಒಂದಾಗಿರುತ್ತದೆ. ಜೊತೆಗೆ ಟೆಸ್ಟೋಸ್ಟಿರೋನ್ ಮಟ್ಟಗಳು ಸಹ ಕಡಿಮೆಯಾಗುವ ಸಮಸ್ಯೆಯನ್ನು ಇವರು ಅನುಭವಿಸುತ್ತಾರೆ. ಇದರ ಪರಿಣಾಮವಾಗಿ ಇವರು ಖಿನ್ನತೆ ಮತ್ತು ಆತಂಕವನ್ನು ಅನುಭವಿಸುತ್ತಾರೆ. ಮಧುಮೇಹಕ್ಕೆ ಚಿಕಿತ್ಸೆಯನ್ನು ಪಡೆಯದಿದ್ದಲ್ಲಿ, ಅದು ನರಗಳು ಮತ್ತು ಮೂತ್ರಪಿಂಡ, ಹೃದ್ರೋಗ ಸಮಸ್ಯೆ, ಪಾರ್ಶ್ವವಾಯು ಮತ್ತು ದೃಷ್ಟಿಯ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಇದಲ್ಲದೆ ಮಹಿಳೆ ಮತ್ತು ಪುರುಷರ ಆಯುಸ್ಸಿನ ಪ್ರಮಾಣದ ನಡುವಿನ ವ್ಯತ್ಯಾಸವು ಸಹ ಹೆಚ್ಚಾಗುತ್ತಿದೆ. ವಿಶೇಷವಾಗಿ, ಅತಿಯಾದ ಧೂಮಪಾನ ಮತ್ತು ಕುಡಿತವು ಪುರುಷರ ಆಯುಸ್ಸಿನ ಪ್ರಮಾಣದ ಮೇಲೆ ಪ್ರಭಾವ ಬೀರುತ್ತವೆ. ಅದೃಷ್ಟವಶಾತ್, ಮೇಲೆ ತಿಳಿಸಲಾಗಿರುವ ಬಹುತೇಕ ಪುರುಷರ ಆರೋಗ್ಯ ಸಮಸ್ಯೆಗಳನ್ನು ಮೊದಲೇ ನಿಯಂತ್ರಿಸಬಹುದು ಅಥವಾ ಮೊದಲೇ ಪತ್ತೆ ಹಚ್ಚಿದಲ್ಲಿ, ನಿವಾರಿಸಬಹುದು. ಈ ಸ್ಲೈಡ್ ಶೋವು ಪುರುಷರನ್ನು ಕಾಡುವ ಟಾಪ್ 10 ಆರೋಗ್ಯ ಸಮಸ್ಯೆಗಳ ಕುರಿತು ನಿಮಗೆ ತಿಳಿಸಿಕೊಡುತ್ತವೆ.

ತ್ವಚೆಯ ಕ್ಯಾನ್ಸರ್

ತ್ವಚೆಯ ಕ್ಯಾನ್ಸರ್

ಸ್ಕಿನ್ ಕ್ಯಾನ್ಸರ್ ಫೌಂಡೇಶನ್ ಪ್ರಕಾರ, 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರಿಗೆ ತ್ವಚೆಯ ಕ್ಯಾನ್ಸರ್ ಕಾಣಿಸಿಕೊಳ್ಳುವ ಅಪಾಯ ಮಹಿಳೆಯರಿಗಿಂತ ದುಪ್ಪಟ್ಟಾಗಿರುತ್ತದೆ. ಇದಕ್ಕೆ ಮುಖ್ಯ ಕಾರಣ ಪುರುಷರು ಬಿಸಿಲಿನಲ್ಲಿ ಹೆಚ್ಚಾಗಿ ಸುತ್ತಾಡುತ್ತಾ ಇರುತ್ತಾರೆ ಮತ್ತು ವೈದ್ಯರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳುವುದು ತುಂಬಾ ಕಡಿಮೆ ಹಾಗಾಗಿ.

ಎಚ್‌ಐವಿ/ಏಡ್ಸ್

ಎಚ್‌ಐವಿ/ಏಡ್ಸ್

ಪುರುಷರಲ್ಲಿ ಸಲಿಂಗ ಕಾಮ, ಹೆಣ್ಣು ಮತ್ತು ಪುರುಷ ಇಬ್ಬರ ಜೊತೆಗೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳುವುದು ಮತ್ತು ಈಗಾಗಲೇ ಮತ್ತೊಬ್ಬ ಪುರುಷರ ಜೊತೆಗೆ ಲೈಂಗಿಕ ಸಂಪರ್ಕ ಇಟ್ಟುಕೊಂಡಾತನ ಜೊತೆಗೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳುವುದರಿಂದಾಗಿ ಎಚ್‌ಐವಿ/ಏಡ್ಸ್‌ಗೆ ತುತ್ತಾಗುವ ಪ್ರಮಾಣ ಇತ್ತೀಚೆಗೆ ಹೆಚ್ಚಾಗುತ್ತಿದೆ. 2009 ರಲ್ಲಿ 61% ಹೊಸ ಎಚ್‌ಐವಿ ಸೋಂಕು ಪೀಡಿತರು ಪತ್ತೆಯಾದರು. ಇವರೆಲ್ಲರೂ ಈ ಮೇಲಿನ ಲೈಂಗಿಕ ಚಟುವಟಿಕೆಗಳ ಪರಿಣಾಮವಾಗಿ ಎಚ್‌ಐವಿಗೆ ತುತ್ತಾಗಿದ್ದರು. ಅದರಲ್ಲಿ 69% ಜನರು 13 ರಿಂದ 29 ವರ್ಷದ ವಯಸ್ಸಿನವರದು ಎಂಬುದು ವಿಪರ್ಯಾಸ.

ಇನ್‌ಫ್ಲೂಯೆಂಜಾ ಮತ್ತು ನ್ಯುಮೋನಿಯಾ

ಇನ್‌ಫ್ಲೂಯೆಂಜಾ ಮತ್ತು ನ್ಯುಮೋನಿಯಾ

ಪುರುಷರಿಗೆ ಕಾಡುವ ಇನ್ನಿತರ ಸಮಸ್ಯೆಗಳು ಎಂದರೆ ಸಿ‌ಓಪಿಡಿ, ಮಧುಮೇಹ, ಏಡ್ಸ್ ಮತ್ತು ಕ್ಯಾನ್ಸರ್ ಇವುಗಳು ಪುರುಷರನ್ನು ಇನ್‌ಫ್ಲೂಯೆಂಜಾ ಮತ್ತು ನ್ಯುಮೋನಿಯಾಗೆ ತುತ್ತಾಗುವಂತೆ ಮಾಡುತ್ತವೆ. ಅಮೆರಿಕನ್ ಲಂಗ್ ಅಸೋಸಿಯೇಶನ್ಸ್‌ರವರು ಇದೀಗ 65 ವರ್ಷ ತುಂಬಿದ ಪುರುಷರಿಗೆ ಇನ್‌ಫ್ಲೂಯೆಂಜಾ ಮತ್ತು ನ್ಯುಮೋನಿಯಾಗೆ ಸಂಬಂಧಪಟ್ಟ ಲಸಿಕೆಯನ್ನು ಹಾಕಿಸಿಕೊಳ್ಳಲು ಶಿಫಾರಸು ಮಾಡುತ್ತಿದೆ.

ಲಿವರ್ ಕಾಯಿಲೆ

ಲಿವರ್ ಕಾಯಿಲೆ

ಆಲ್ಕೋಹಾಲ್ ಮತ್ತು ತಂಬಾಕನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದಾಗಿ ಪುರುಷರು ತಮ್ಮ ಲಿವರ್ ಅನ್ನು ಅಪಾಯಕ್ಕೆ ತಳ್ಳುತ್ತಾರೆ. ಇದರಿಂದಾಗಿ ಸಿರ್ರೋಹೊಸಿಸ್ ಮತ್ತು ಆಲ್ಕೋಹಾಲಿಕ್ ಲಿವರ್ ರೋಗಗಳು ಬರುತ್ತದೆ. ಪುರುಷರ ಜೊತೆಗೆ ಲೈಂಗಿಕ ಸಂಪರ್ಕ ಇಟ್ಟುಕೊಳ್ಳುವ ಪುರುಷರು ವೈರಲ್ ಹೆಪಟೈಟಿಸ್ ಬಿ ರೋಗಕ್ಕೆ ತುತ್ತಾಗುವ ಸಮಸ್ಯೆ ಹೆಚ್ಚಾಗಿರುತ್ತದೆ ಮತ್ತು ಇದನ್ನು ಮೊದಲೇ ಪತ್ತೆ ಹಚ್ಚಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ. ಇವುಗಳನ್ನು ತಿಳಿದುಕೊಳ್ಳಿ. ನಿಯಮಿತವಾಗಿ ನಿಮ್ಮ ಆರೋಗ್ಯವನ್ನು ಪರೀಕ್ಷೆ ಮಾಡಿಸಿಕೊಳ್ಳಿ ಮತ್ತು ನಿಮ್ಮನ್ನು ಮತ್ತು ನಿಮ್ಮ ನಂಬಿರುವವರನ್ನು ಕಾಪಾಡಿಕೊಳ್ಳಿ.

English summary

Top 10 Men's Health Issues

we sharing you top 10 Men's Health Issues, which you should not ignore... have a look...
X
Desktop Bottom Promotion