Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಿಳೆಯರಿಗೆ ಕಾಡುವ ಪಿಸಿಒಎಸ್ ಸಮಸ್ಯೆಗೆ ನೈಸರ್ಗಿಕ ಪರಿಹಾರಗಳು
ಮಹಿಳೆಯರಲ್ಲಿ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಗರ್ಭಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ನಿಗಾ ವಹಿಸಬೇಕು. ಇದರಿಂದ ಹಲವಾರು ರೀತಿಯ ಸಮಸ್ಯೆಗಳು ಕಾಣಿಸಬಹುದು. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಗರ್ಭಕೋಶದ ಸಮಸ್ಯೆಗಳಲ್ಲಿ ಪಾಲಿಸಿಸ್ಟಿಕ್ ಓವೆರಿಯನ್ ಸಿಂಡ್ರೋಮ್(ಪಿಸಿಒಎಸ್) ಕೂಡ ಒಂದಾಗಿದೆ.

ಇದು ಮಹಿಳೆಯರಲ್ಲಿ ವಿಶ್ವದಾದ್ಯಂತ ಅತಿಯಾಗಿ ಕಾಡುವ ಹಾರ್ಮೋನು ಸಮಸ್ಯೆಯಾಗಿದೆ. ಗರ್ಭಕೋಶದಲ್ಲಿ ಕಿರುಚೀಲಗಳು ನಿರ್ಮಾಣಗೊಂಡು, ಇದು ಮಹಿಳಾ ಹಾರ್ಮೋನಿನ ಬದಲು ಪುರುಷರ ಹಾರ್ಮೋನು ನಿರ್ಮಾಣ ಮಾಡುವುದು. ಇದರಿಂದಾಗಿ ಅನಿಯಮಿತ ಋತುಚಕ್ರ ಮತ್ತು ಗರ್ಭಧಾರಣೆ ಸಮಸ್ಯೆಗಳು ಕಾಣಿಸಬಹುದು.

ಪಿಸಿಒಎಸ್‌ನ ಲಕ್ಷಣಗಳು
ಮಹಿಳೆಯರಲ್ಲಿ ಈ ಪಿಸಿಒಎಸ್ ಒಂದು ಮಟ್ಟಕ್ಕೆ ತಲುಪಿದ ಬಳಿಕ ಅದರ ಲಕ್ಷಣಗಳು ಕಾಣಿಸಿಕೊಳ್ಳುವುದು. ಪಿಸಿಒಎಸ್ ಲಕ್ಷಣಗಳು ಈ ರೀತಿಯಲ್ಲಿದೆ. ಮೊಡವೆ-ಈ ಪರಿಸ್ಥಿತಿಯಲ್ಲಿ ಟೆಸ್ಟೋಸ್ಟೆರಾನ್ ಮಟ್ಟವು ಅಧಿಕವಾಗಿರುವುದು, ಇದರಿಂದ ಚರ್ಮವು ತುಂಬಾ ಎಣ್ಣೆಯಂಶದಿಂದ ಕೂಡಿರುವುದು ಮತ್ತು ಮೊಡವೆ ಉಂಟು ಮಾಡುವುದು.

ಪಿಸಿಒಎಸ್ ನ ಲಕ್ಷಣಗಳು
ಅನಗತ್ಯ ಕೂದಲು-ಪಿಸಿಒಎಸ್ ಸಮಸ್ಯೆ ಇರುವಂತಹ ಮಹಿಳೆಯ ಮುಖ ಹಾಗೂ ದೇಹದ ಇತರ ಭಾಗಗಳಲ್ಲಿ ಕೂದಲು ಬೆಳೆಯಲು ಆರಂಭವಾಘುವುದು. ಇದನ್ನು ಹಿರ್ಸುಟಿಸಮ್ ಎಂದು ಕರೆಯಲಾಗುತ್ತದೆ. ತೂಕ ಹೆಚ್ಚಳ-ಪಿಸಿಒಎಸ್ ದಿಂದಾಗಿ ಶೇ.80ರಷ್ಟು ಮಹಿಳೆಯರು ಅತಿಯಾದ ತೂಕದಿಂದ ಬಳಲುತ್ತಾರೆ. ಅನಿಯಮಿತ ಋತುಚಕ್ರ-ಪಿಸಿಒಎಸ್ ನ ಸಾಮಾನ್ಯ ಲಕ್ಷಣವೆಂದರೆ ಅದು ಅನಿಯಮಿತವಾಗಿ ಋತುಚಕ್ರವಾಗುವುದು. ತಲೆನೋವು-ತಲೆನೋವು ಸಾಮಾನ್ಯ ಲಕ್ಷಣವಾಗಿದೆ. ಇದು ಕೆಲವು ಮಹಿಳೆಯರಲ್ಲಿ ಕಾಣಿಸಿಕೊಳ್ಳಬಹುದು.
ಕೂದಲು ತೆಳ್ಳಗಾಗುವುದು-ಈ ಪರಿಸ್ಥಿತಿಯು ಮುಂದುವರಿದಂತೆ ಕೂದಲು ತೆಳ್ಳಗಾಗುವುದು ಮತ್ತು ಉದುರಲು ಆರಂಭವಾಗುವುದು.
ಪಿಸಿಒಎಸ್ ಚಿಕಿತ್ಸೆಗೆ ನೈಸರ್ಗಿಕ ವಿಧಾನಗಳು

ಅರಿಶಿನ
ಉರಿಯೂತದಿಂದಾಗಿ ಹಾರ್ಮೋನ್ ಗಳಲ್ಲಿ ಏರುಪೇರು ಆಗಿ ಕಿರುಚೀಲಗಳು ನಿರ್ಮಾಣವಾಗುತ್ತದೆ. ಅರಿಶಿನವು ಉರಿಯೂತ ಶಮನಕಾರಿ ಎಂದು ಹೇಳಲಾಗುತ್ತದೆ ಮತ್ತು ಇದು ತುಂಬಾ ಲಾಭಕಾರಿ ಮತ್ತು ಸಂಧಿವಾತ ಹಾಗೂ ಅಲ್ಸರ್ ನಂತಹ ಉರಿಯೂತ ಕಡಿಮೆ ಮಾಡಲು ಇದು ತುಂಬಾ ಪರಿಣಾಮಕಾರಿಯಾಗಿದೆ.

ಸಿಒಡಿ ಲಿವರ್ ಆಯಿಲ್
ಸಿಒಡಿ ಲಿವರ್ ತೈಲವನ್ನು ಸೇವನೆ ಮಾಡುವ ಕಾರಣದಿಂದಾಗಿ ಗರ್ಭಕೋಶದ ಕಾರ್ಯಗಳು ಸುಧಾರಣೆ ಆಗುವುದು ಮತ್ತು ಪಿಸಿಒಎಸ್ ನಿಂದ ಬಳಲುತ್ತಿರುವ ಮಹಿಳೆಯರಲ್ಲಿ ಆಂಡ್ರೋಜನ್ ಮಟ್ಟ ಕಡಿಮೆ ಮಾಡುವುದು. ಇದು ಮಹಿಳಾ ಹಾರ್ಮೋನ್ ನ್ನು ನಿಯಂತ್ರಿಸುವುದು. ಸಿಒಡಿ ಲಿವರ್ ತೈಲವು ಪಿಸಿಒಎಸ್ ನಿಂದಾಗಿ ಕಾಣಿಸಿಕೊಳ್ಳುವಂತಹ ಅಸಾಮಾನ್ಯ ಕೂದಲು ಬೆಳವಣಿಗೆ ಮತ್ತು ಅನಿಯಮಿತ ಋತುಚಕ್ರ ಸಮಸ್ಯೆ ನಿವಾರಿಸುವುದು.

ಗ್ರೀನ್ ಟೀ
ಗ್ರೀನ್ ಟೀ ಇನ್ಸುಲಿನ್ ಸೂಕ್ಷ್ಮತೆ ಹಾಗೂ ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ಸುಧಾರಣೆ ಮಾಡುವಲ್ಲಿ ತುಂಬಾ ಸಹಕಾರಿ. ಇನ್ಸುಲಿನ್ ಮಟ್ಟವು ಅಧೀಕವಾಗಿದ್ದರೆ ಆಗ ಟೆಸ್ಟೊಸ್ಟೆರಾನ್ ಮಟ್ಟವು ಹೆಚ್ಚಾಗುವುದು ಮತ್ತು ಪಿಸಿಒಎಸ್ ನ ಅಸಾಮಾನ್ಯ ಲಕ್ಷಣಕ್ಕೆ ಕಾರಣವಾಗುವುದು. ಪ್ರತಿನಿತ್ಯ ಎರಡರಿಂದ ಮೂರು ಕಪ್ ಗ್ರೀನ್ ಟೀ ಕುಡಿದರೆ ಅದರಿಂದ ಹೆಚ್ಚಿನ ಆರೋಗ್ಯ ಲಾಭಗಳು ಸಿಗುವುದು.

ತುಳಸಿ
ತುಳಸಿ ಸೇವನೆ ಮಾಡುವ ಕಾರಣದಿಂದ ಅದು ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸುವುದು. ಇದರಿಂದ ಟೆಸ್ಟೋಸ್ಟೆರಾನ್ ಉತ್ಪತ್ತಿ ತಡೆಯುವುದು. ತುಳಸಿ ಎಲೆಗಳನ್ನು ಚಹಾಗೆ ಹಾಕಿ ಕುಡಿಯಿರಿ. ಇದನ್ನು ಸ್ಮೂಥಿ ಮತ್ತು ಸಲಾಡ್ ಗೆ ಕೂಡ ಹಾಕಿಕೊಳ್ಳಬಹುದು. ತುಳಸಿಯು ಕಾರ್ಟಿಸಾಲ್ ಮಟ್ಟವನ್ನು ತಗ್ಗಿಸುವುದು ಮತ್ತು ತೂಕ ಹೆಚ್ಚಳವಾಗದಂತೆ ತಡೆಯುವುದು.

ಆರೋಗ್ಯಕಾರಿ ತೂಕ
ಆರೋಗ್ಯಕಾರಿ ತೂಕ ನಿರ್ವಹಣೆ ಮಾಡಿದರೆ ಅದರಿಂದ ಇನ್ಸುಲಿನ್ ಮಟ್ಟವನ್ನು ಕಾಪಾಡಬಹುದು ಮತ್ತು ಪಿಸಿಒಎಸ್ ನ ಅಪಾಯವನ್ನು ತಡೆಯಬಹುದು. ಅತ್ಯಧಿಕ ದೇಹತೂಕವಿದ್ದರೆ ಆಗ ಅದರಿಂದ ದೊಡ್ಡ ಮಟ್ಟದಲ್ಲಿ ಪಿಸಿಒಎಸ್ ಕಾಣಿಸುವುದು. ಕಡಿಮೆ ಕ್ಯಾಲರಿ ಇರುವ ಆಹಾರ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡಿದರೆ ಪಿಸಿಒಎಸ್ ಲಕ್ಷಣಗಳನ್ನು ತಡೆಯಬಹುದು.

ಒತ್ತಡ ಕಡಿಮೆ ಮಾಡಿ
ಆಧುನಿಕ ಯುಗದಲ್ಲಿ ಪ್ರತಿಯೊಬ್ಬರಿಗೂ ಒತ್ತಡವಿರುತ್ತದೆ. ಅದರಲ್ಲೂ ಮಹಿಳೆಯರಿಗೆ ಹೆಚ್ಚು. ಒತ್ತಡದಿಂದ ದೇಹದಲ್ಲಿ ಕಾರ್ಟಿಸಾಲ್ ಮಟ್ಟವು ಹೆಚ್ಚಾಗುವುದು. ಇದರಿಂದಾಗಿ ಅತಿಯಾಗಿ ತಿನ್ನುವುದು ಮತ್ತು ದೇಹದಲ್ಲಿ ಕೊಬ್ಬು ಶೇಖರಣೆ ಆಗಬಹುದು. ಸರಿಯಾಗಿ ನಿದ್ರಿಸುವುದು, ಕೆಫಿನ್ ಸೇವನೆ ಕಡಿಮೆ ಮಾಡುವುದು, ಯೋಗ ಮತ್ತು ಧಾನ್ಯದಿಂದ ಒತ್ತಡದ ಮಟ್ಟ ಕಡಿಮೆ ಮಾಡಿಕೊಳ್ಳಬಹುದು.

ನಿದ್ರೆಯು ಸರಿಯಾಗಿರಲಿ
ನಿದ್ರಾಹೀನತೆಯಿಂದಾಗಿ ಒತ್ತಡದ ಮಟ್ಟವು ಕಾಡುವುದು ಮತ್ತು ಹಾರ್ಮೋನು ಅಸಮತೋಲನ ಕಂಡುಬರುವುದು. ನಿದ್ರೆಯಲ್ಲಿ ವ್ಯತ್ಯಯವಾದರೆ ಆಗ ಮಹಿಳೆಯರಲ್ಲಿ ಪಿಸಿಒಎಸ್ ಕಾಡುವುದು ಹೆಚ್ಚು. ಇದನ್ನು ಕಡಿಮೆ ಮಾಡಿಕೊಳ್ಳಲು 6-8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಸರಿಯಾದ ಸಮಯಕ್ಕೆ ನಿದ್ರೆ ಮಾಡಬೇಕು ಮತ್ತು ಕೊಬ್ಬಿನ ಆಹಾರ ಕಡಿಮೆ ಸೇವಿಸಬೇಕು.



Click it and Unblock the Notifications