Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನೀವು ತಿಳಿದಿರುವ ಕೆಲವೊಂದು ಆರೋಗ್ಯ ಸಲಹೆಗಳು ಸುಳ್ಳಾಗಿರಬಹುದು!
ನಮಗೆ ಅಜ್ಜಿ, ಅಮ್ಮ ಹೇಳಿರುವಂತಹ ಕೆಲವೊಂದು ಆರೋಗ್ಯ ಸಲಹೆಗಳು ಮತ್ತು ನಾವು ಓದುವ ಪುಸ್ತಕಗಳು ಹಾಗೂ ಇಂದಿನ ದಿನಗಳಲ್ಲಿ ಇಂಟರ್ನೆಟ್ ನಲ್ಲಿ ಸಿಗುವ ಹಲವಾರು ರೀತಿಯ ಆರೋಗ್ಯ ಸಲಹೆಗಳನ್ನು ನಾವು ಕಣ್ಣು ಮುಚ್ಚಿಕೊಂಡು ಪಾಲಿಸಿಕೊಂಡು ಬಂದಿದ್ದೇವೆ. ಆದರೆ ಇದರಲ್ಲಿ ಎಷ್ಟು ನಿಜ ಎನ್ನುವುದನ್ನು ನಾವು ಯಾವತ್ತೂ ಪರೀಕ್ಷಿಸಲು ಹೋಗಿಲ್ಲ.
ಯಾಕೆಂದರೆ ನಮ್ಮ ಆರೋಗ್ಯಕ್ಕೆ ಇದೆಲ್ಲವೂ ಅಗತ್ಯವೆಂದು ಭಾವಿಸಿರುತ್ತೇವೆ. ಆದರೆ ನಾವು ನಂಬಿಕೊಂಡು ಬಂದಿರುವಂತಹ ಅದಷ್ಟೋ ಆರೋಗ್ಯ ಸಲಹೆಗಳು ಸುಳ್ಳು ಎಂದರೆ ನಿಮಗೆ ನಂಬಲು ಕಷ್ಟವಾಗಬಹುದು. ಆದರೆ ಬೋಲ್ಡ್ ಸ್ಕೈ ಈ ಲೇಖನದಲ್ಲಿ ನಿಮಗೆ ಇಂತಹ ಸುಳ್ಳು ಆರೋಗ್ಯ ಸಲಹೆಗಳ ಬಗ್ಗೆ ತಿಳಿಸಿಕೊಡಲಿದೆ. ಇದನ್ನು ಕೆಲವೊಂದು ಸಂಶೋಧನೆಗಳು ಕೂಡ ದೃಢಪಡಿಸಿವೆ. ಈ ಆರೋಗ್ಯ ಸಲಹೆಗಳು ಯಾವುದು ಎಂದು ನೀವು ತಿಳಿಯಿರಿ...

ದಿನಕ್ಕೆ ಎಂಟು ಲೋಟ ನೀರು ಕುಡಿಯಬೇಕು
ಆರೋಗ್ಯವಾಗಿರಬೇಕೆಂದರೆ ಪ್ರತಿನಿತ್ಯವು ಎಂಟು ಲೋಟ ನೀರು ಕುಡಿಯಬೇಕು ಎಂದು ನಿಮಗೆ ಹಿಂದಿನಿಂದಲೂ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಇಲ್ಲಿ ತಿಳಿಯಬೇಕಾದ ವಿಚಾರವೆಂದರೆ ಪ್ರತಿಯೊಬ್ಬರ ದೇಹದ ವಿನ್ಯಾಸವು ತುಂಬಾ ಭಿನ್ನವಾಗಿರುವುದು ಮತ್ತು ಅದಕ್ಕೆ ಬೇಕಾಗಿರುವ ನೀರಿನ ಅಗತ್ಯ ಕೂಡ. ಹವಾಮಾನ ಮತ್ತು ದೈಹಿಕ ಚಟುವಟಿಕೆಗೆ ಅನುಗುಣವಾಗಿ ನೀರು ಕುಡಿಯಬೇಕು. ಪ್ರತಿನಿತ್ಯ ಎಂಟು ಲೋಟ ನೀರು ಕುಡಿಯಬೇಕೆನ್ನುವುದು ಸುಳ್ಳು.

ದಿನಕ್ಕೊಂದು ಸೇಬು ವೈದ್ಯರಿಂದ ದೂರವಿಡುವುದು
ಸೇಬು ತುಂಬಾ ಆರೋಗ್ಯಕಾರಿಯಾಗಿರುವುದು. ಆದರೆ ಈ ಮಾತನ್ನು ತುಂಬಾ ತಿದ್ದಲಾಗಿದೆ. ಯಾಕೆಂದರೆ ಸೇಬು ಎಲ್ಲಾ ಋತುಗಳಲ್ಲಿಯೂ ಸಿಗುತ್ತಿರುವುದು. ಇದಕ್ಕಾಗಿ ಹೀಗೆ ಹೇಳಲಾಗಿದೆ. ಯಾಕೆಂದರೆ ಇದರಲ್ಲಿ ಇರುವಂತಹ ವೈದ್ಯಕೀಯ ಗುಣಗಳಿಂದಾಗಿ ಅಲ್ಲ. ನೀವು ಎಲ್ಲಾ ಋತುಗಳಲ್ಲಿ ಸಿಗುವಂತಹ ಹಣ್ಣುಗಳನ್ನು ಬಳಸಿಕೊಳ್ಳಿ ಮತ್ತು ಪ್ರತಿರೋಧಕ ವ್ಯವಸ್ಥೆ ಬಲಪಡಿಸುವುದು.

ಎಂಟು ಗಂಟೆ ನಿದ್ರೆ ಅಗತ್ಯವಾಗಿರುವುದು
ಒಂದು ಸಿದ್ಧಾಂತವು ಎಲ್ಲದಕ್ಕೂ ಹೊಂದಿಕೆಯಾಗುತ್ತದೆ ಎನ್ನುವುದು ಸರಿಯಾದ ವಾದವಲ್ಲ. ಹಲವಾರು ಆರೋಗ್ಯ ಲೇಖನಗಳು ಪ್ರತಿನಿತ್ಯ ವ್ಯಕ್ತಿಗೆ ಎಂಟು ಗಂಟೆ ನಿದ್ರೆ ಬೇಕಿರುವುದು ಎಂದು ಹೇಳುತ್ತವೆ. ಆದರೆ ಇದು ದೇಹ ಪ್ರಕೃತಿಗೆ ಅನುಗುಣವಾಗಿ ಭಿನ್ನವಾಗಿರುವುದು. ಕೇವಲ ನಾಲ್ಕು ಗಂಟೆ ನಿದ್ರೆ ಮಾಡುವ ವ್ಯಕ್ತಿಗಳು ಮರುದಿನ ತುಂಬಾ ತಾಜಾವಾಗಿ ಎದ್ದೇಳಬಹುದು. ಅದರೆ ಇನ್ನು ಕೆಲವರು ಹತ್ತು ಗಂಟೆ ನಿದ್ರೆ ಮಾಡಿದ ಬಳಿಕ ಅವರ ದೇಹಕ್ಕೆ ಪುನರ್ಶ್ಚೇತನ ಸಿಗುವುದು. ಇದರಿಂದ ನಿಮಗೆ ಎಷ್ಟು ನಿದ್ರೆ ಬೇಕು ಎಂದು ತಿಳಿಯಿರಿ.

ಪ್ರತಿನಿತ್ಯ ಮಲವಿಸರ್ಜನೆ
ಈ ಹಳೆಯ ಸಿದ್ಧಾಂತವು ಸುಳ್ಳು. ಪ್ರತಿನಿತ್ಯ ಮಲ ವಿಸರ್ಜನೆ ಮಾಡಿದರೆ ಮಾತ್ರ ಆಗ ನೀವು ಆರೋಗ್ಯವಾಗಿದ್ದೀರಿ ಎಂದಲ್ಲ. ಮೂರು ದಿನಕ್ಕೊಮ್ಮೆ ಮಲ ವಿಸರ್ಜನೆ ಮಾಡಿದರೆ ನೀವು ಅನಾರೋಗ್ಯಕ್ಕೆ ಒಳಗಾಗುತ್ತೀರಿ ಎಂದಲ್ಲ. ದಿನದಲ್ಲಿ ಮೂರು ಸಲ ಮಲವಿಸರ್ಜನೆಯಿಂದ ವಾರದಲ್ಲಿ ಮೂರು ಸಲ ಮಲವಿಸರ್ಜನೆ ಮಾಡುವುದು ತುಂಬಾ ಆರೋಗ್ಯಕರವಾಗಿರುವುದು. ಮಲ ವಿಸರ್ಜನೆ ವೇಳೆ ತುಂಬಾ ನೋವು ಮತ್ತು ರಕ್ತ ಬರುತ್ತಿದ್ದರೆ ಆಗ ನೀವು ಇದನ್ನು ಗಂಭೀರವಾಗಿ ಪರಿಗಣಿಸಬೇಕು.

ಸ್ಯಾನಿಟೈಸರ್ ಮತ್ತಷ್ಟು ಶುಚಿಯಾಗಿಡುವುದು
ಹೆಚ್ಚಿನವರು ಕೈ ತೊಳೆದುಕೊಂಡ ಬಳಿಕ ಮತ್ತೆ ಸ್ಯಾನಿಟೈಸರ್ ಹಚ್ಚಿಕೊಳ್ಳುವರು. ಇದರಿಂದ ಹೆಚ್ಚಿನ ಕೀಟಾಣುಗಳು ನಾಶವಾಗುವುದು ಎಂದು ನೀವು ಭಾವಿಸಿರುವರು. ಸ್ಯಾನಿಟೈಸರ್ ನಿಂದ ಕೈಗಳನ್ನು ಸ್ವಚ್ಛಗೊಳಿಸುವುದು ಸೋಪ್ ನಿಂದ ತೊಳೆದಷ್ಟೇ ಸ್ವಚ್ಛವಾಗಿರುವುದು.

ಎಂಎಂಆರ್ ಔಷಧಿಯಿಂದ ಆಟಿಸಂ
ಈ ದಡಾರವು ಮತ್ತೆ ಬರುತ್ತದೆ ಎನ್ನುವ ಸುಳ್ಳು ಮತ್ತೆ ಕೇಳಿಬರುತ್ತಿದೆ. ಎಂಎಂಆರ್ ಔಷಧಿಯು ದಡಾರದಿಂದ ಮುಕ್ತಿ ಪಡೆಯಲು ಹಾಗೂ ಗುಣಮುಖ ಮಾಡಲು ಬಳಸಲಾಗುತ್ತದೆ. ಆದರೆ ದಶಕದಿಂದಲೂ ಕೇಳಿಬರುತ್ತಿರುವ ಮಾತೆಂದರೆ ಎಂಎಂಆರ್ ಔಷಧಿಯು ಆಟಿಸಂ ಉಂಟು ಮಾಡುತ್ತದೆ ಎಂದು. ಆದರೆ ಇದು ಸುಳ್ಳು. ಯಾಕೆಂದರೆ ಆಟಿಸಂ ಮತ್ತು ಎಂಎಂಆರ್ ಔಷಧಿಗೆ ಯಾವುದೇ ರೀತಿಯ ಸಂಬಂಧವಿಲ್ಲವೆಂದು ಹಲವಾರು ರೀತಿಯ ಅಧ್ಯಯನಗಳು ಕೂಡ ಹೇಳಿವೆ.

ನಿರ್ವಿಷಗೊಳಿಸುವುದು ಅತೀ ಅಗತ್ಯ
ದೇಹವನ್ನು ನಿರ್ವಿಷಗೊಳಿಸುವುದು ಅತೀ ಅಗತ್ಯವೆಂದು ಹೇಳಲಾಗುತ್ತದೆ. ಆದರೆ ಸೂಪರ್ ಮಾರ್ಕೆಟ್ ನಲ್ಲಿ ಸಿಗುವಂತಹ ಜ್ಯೂಸ್ ಪ್ಯಾಕೆಟ್ ಅಥವಾ ಶೇಕ್ ಪ್ಯಾಕ್ ಗಳಿಂದ ದೇಹವನ್ನು ನಿರ್ವಿಷಗೊಳಿಸುವುದಲ್ಲ. ದೇಹವನ್ನು ನಿರ್ವಿಷಗೊಳಿಸುವುದು ಎಂದರೆ ಮನೆಯ ಆಹಾರ ಸೇವಿಸುವುದು. ಧೂಮಪಾನ ಮತ್ತು ಆಲ್ಕೋಹಾಲ್ ನಿಂದ ದೂರವಿರುವುದು.



Click it and Unblock the Notifications
