Latest Updates
-
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್! -
ಭಾರತ vs ಅಫ್ಘಾನಿಸ್ತಾನ ಪಂದ್ಯ: ಮ್ಯಾಚ್ ನೋಡುವಾಗ ಮನೆಯಲ್ಲಿ ಶಾಂತಿ ಕಾಪಾಡಲು ಈ ಟಿಪ್ಸ್ ಫಾಲೋ ಮಾಡಿ! -
ನಾಳೆ ನೀಟ್ ಮರುಪರೀಕ್ಷೆ: ಮಳೆಗಾಲದ ನಡುವೆ ಪರೀಕ್ಷೆಗೆ ಸಜ್ಜಾಗುವುದು ಹೇಗೆ? ಇಲ್ಲಿದೆ ಫೈನಲ್ ಚೆಕ್ಲಿಸ್ಟ್ -
ಪಿಎಂ-ಕಿಸಾನ್ ಹಣ ಜಮೆ: ರೈತರೇ, ಈ 2,000 ರೂಪಾಯಿಯಲ್ಲಿ ಆರೋಗ್ಯಕರ ಆಹಾರ ಖರೀದಿಸಿ, ಮಧುಮೇಹ ನಿಯಂತ್ರಿಸಿ!
ಟೈಪ್-2 ಮಧುಮೇಹಿ ಸಮಸ್ಯೆ ಇರುವವರು, ಬೆಳಗ್ಗಿನ ಬ್ರೇಕ್‌ಫಾಸ್ಟ್‌ಗೆ ಮೊಟ್ಟೆ ತಿನ್ನಬೇಕಂತೆ
ಮಧುಮೇಹಿಗಳು ತಮ್ಮಆಹಾರ ಕ್ರಮದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅವರಿಗೆ ಇನ್ನು ಹಲವಾರು ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಕೆಲವು ಮಧುಮೇಹಿಗಳಿಗೆ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು ಎನ್ನುವ ಬಗ್ಗೆ ತುಂಬಾ ಗೊಂದಲವು ಇರುವುದು. ಹೀಗಾಗಿ ಅವರು ಕೆಲವೊಂದು ಆಹಾರಗಳನ್ನು ಸೇವಿಸಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚು ಮಾಡಿಕೊಳ್ಳಬಹುದು. ಟೈಪ್-2 ಮಧುಮೇಹಿಗಳಲ್ಲಿ ಇನ್ಸುಲಿನ್ ಉತ್ಪತ್ತಿ ಆಗುವುದು.
ಆದರೆ ದೇಹವು ಈ ಇನ್ಸುಲಿನ್ ನ್ನು ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಇದನ್ನು ಇನ್ಸುಲಿನ್ ಪ್ರತಿರೋಧಕತೆ ಎಂದು ಕರೆಯಲಾಗುತ್ತದೆ. ಇತ್ತೀಚೆಗೆ ನಡೆಸಿರುವಂತಹ ಒಂದು ಸಂಶೋಧನೆಯ ಪ್ರಕಾರ ಟೈಪ್-2 ಮಧುಮೇಹಿಗಳು ಬೆಳಗ್ಗಿನ ಉಪಾಹಾರಕ್ಕೆ ಮೊಟ್ಟೆ ಸೇವಿಸಬೇಕು. ಅಧಿಕ ಕೊಬ್ಬು, ಕಡಿಮೆ ಕಾರ್ಬ್ ಇರುವಂತಹ ಉಪಾಹಾರವು ಮಧುಮೇಹಿಗಳಿಗೆ ತುಂಬಾ ಒಳ್ಳೆಯದು ಎಂದು ಸಂಶೋಧನೆಯು ಕಂಡುಕೊಂಡಿದೆ. ಇದು ದಿನವಿಡಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವುದು.

ಈ ಅಧ್ಯಯನ ವರದಿಯು ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ನಲ್ಲಿ ಪ್ರಕಟವಾಗಿದೆ.
ಬೆಳಗ್ಗಿನ ಉಪಾಹಾರದ ಬಳಿಕ ಕೆಲವು ಜನರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಎಚ್ಚಾಗುವುದು. ಟೈಪ್ 2 ಮಧುಮೇಹಿಗಳಲ್ಲಿ ಬೆಳಗ್ಗಿನ ಅವಧಿಯಲ್ಲಿ ಇನ್ಸುಲಿನ್ ಪ್ರತಿರೋಧಕವು ಕೂಡ ಇರುವುದು. ಇದಕ್ಕೆ ಮುಖ್ಯ ಕಾರಣವೆಂದರೆ ಕೆಲವೊಂದು ಉಪಾಹಾರಗಳಾಗಿರುವಂತಹ ಸೀರಲ್, ಓಟ್ ಮೀಲ್, ಟೋಸ್ಟ್ ಮತ್ತು ಹಣ್ಣುಗಳು. ಯಾಕೆಂದರೆ ಇದರಲ್ಲಿ ಉನ್ನತ ಮಟ್ಟದ ಕಾರ್ಬೋಹೈಡ್ರೇಟ್ಸ್ ಗಳು ಇರುತ್ತದೆ ಎಂದು ಅಧ್ಯಯನ ಲೇಖಕ ಜೊನಾಥನ್ ಲಿಟ್ಲ್ ತಿಳಿಸಿರುವರು.
ಉಪಾಹಾರದ ವೇಳೆ ಹೆಚ್ಚಾಗಿ ದೇಹಕ್ಕೆ ಸಕ್ಕರೆಯು ಸೇರಿಕೊಳ್ಳುವುದು. ಇದರಿಂದಾಗಿ ಟೈಪ್ 2 ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟವು ಅಧಿಕವಾಗುವುದು. ಮಧುಮೇಹಿಯೊಬ್ಬ ಕಡಿಮೆ ಕಾರ್ಬ್ ಮತ್ತು ಅಧಿಕ ಕೊಬ್ಬನ್ನು ಉಪಾಹಾರಕ್ಕೆ ಸೇವನೆ ಮಾಡಿದರೆ, ಆಗ ದಿನವಿಡಿ ಹೆಚ್ಚುವರಿಯಾಗಿ ಸಕ್ಕರೆ ಸೇವನೆ ಪ್ರಮಾಣವು ತಗ್ಗುವುದು ಎಂದು ಜೊನಾಥನ್ ಅವರು ಹೇಳಿದ್ದಾರೆ. ಉಪಾಹಾರಕ್ಕೆ ಮೊಟ್ಟೆ ಸೇವಿಸಿದರೆ ಆಗ ಮಧುಮೇಹದ ಇತರ ಕೆಲವೊಂದು ಸಮಸ್ಯೆಗಳು ಕೂಡ ನಿವಾರಣೆ ಆಗುವುದು.
ಈ ಸಂಶೋಧನೆಗಾಗಿ ಟೈಪ್ 2 ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವ ಜನರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಮೊದಲ ದಿನ ಅವರಿಗೆ ಉಪಾಹಾರಕ್ಕೆ ಆಮ್ಲೆಟ್ ನೀಡಲಾಯಿತು. ಮರುದಿನ ಉಪಾಹಾರಕ್ಕೆ ಅವರಿಗೆ ಓಟ್ ಮೀಲ್ ಮತ್ತು ಹಣ್ಣುಗಳನ್ನು ನೀಡಲಾಯಿತು. ಇದರ ಬಳಿಕ ಸಾಮಾನ್ಯವಾದ ಮಧ್ಯಾಹ್ನದ ಹಾಗೂ ರಾತ್ರಿ ಊಟ ನೀಡಲಾಯಿತು. ಸಣ್ಣ ಸಾಧನವನ್ನು ರೋಗಿಗಳ ಹೊಟ್ಟೆಗೆ ಅಳವಡಿಸಲಾಗಿತ್ತು.
ಇದರಿಂದ ಪ್ರತೀ ಐದು ನಿಮಿಷಕ್ಕೆ ಅವರ ಸಕ್ಕರೆ ಪ್ರಮಾಣವು ತಿಳಿದುಬರುತ್ತಿತ್ತು. ಇದರೊಂದಿಗೆ ಕೆಲವು ಇತರ ಸಮಸ್ಯೆಗಳು ಆಗಿರುವಂತಹ ಹಸಿವು, ಹೊಟ್ಟೆ ತುಂಬಿದಂತೆ ಆಗುವುದು ಮತ್ತು ಸಿಹಿ ತಿನ್ನಬೇಕು ಎನ್ನುವ ಬಯಕೆ ಬಗ್ಗೆ ಕೂಡ ಪರೀಕ್ಷೆ ಮಾಡಲಾಯಿತು. ಕಡಿಮೆ ಕಾರ್ಬ್ ಮತ್ತು ಅಧಿಕ ಕೊಬ್ಬು ಇರುವಂತಹ ಉಪಾಹಾರ ಸೇವನೆಯಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವು ಏರಿಕೆ ಆಗುವುದು ತಗ್ಗುವುದು ಮತ್ತು ದಿನವಿಡಿ ಸಕ್ಕರೆ ಪ್ರಮಾಣ ಕಡಿಮೆ ಸೇವನೆ ಮಾಡುವಂತೆ ಆಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
