Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣವಿರುವ ಇಂತಹ ಆಹಾರಗಳನ್ನು ಡಯಟ್‌ನಲ್ಲಿ ಅಳವಡಿಸಿಕೊಳ್ಳಿ
ವಿಶ್ವದಾದ್ಯಂತ ಸಂಭವಿಸುವ ಸಾವುಗಳಿಗೆ ಅತಿ ಸಾಮಾನ್ಯ ಕಾರಣದಲ್ಲಿ ಕ್ಯಾನ್ಸರ್ ಎರಡನೆಯದಾಗಿದೆ. 2018ರ ಅಂಕಿ ಅಂಶಗಳ ಪ್ರಕಾರ ಭಾರತವೊಂದರಲ್ಲಿಯೇ 7,84,821 ವ್ಯಕ್ತಿಗಳು ಕ್ಯಾನ್ಸರ್ ನಿಂದ ಸಾವಿಗೀಡಾಗಿದ್ದಾರೆ. ಇವರಲ್ಲಿ 4,13,519 ಪುರುಷರು ಮತ್ತು 3,71,302 ಮಹಿಳೆಯರಾಗಿದ್ದಾರೆ. ಭಾರತದಲ್ಲಿ ಪ್ರತಿ ಎಂಟು ನಿಮಿಷಕ್ಕೊಬ್ಬ ಮಹಿಳೆ ಗರ್ಭಕಂಠದ ಕ್ಯಾನ್ಸರ್ ನಿಂದ ಸಾವಿಗೀಡಾಗುತ್ತಾಳೆ ಎಂಬುದು ಈ ಅಂಕಿ ಅಂಶಗಳು ಸಾದರಪಡಿಸುವ ಸತ್ಯವಾಗಿದ್ದು ಗಾಬರಿ ಹುಟ್ಟಿಸುತ್ತದೆ. ಇದಕ್ಕೂ ಹೊರತಾಗಿ ಹೆಚ್ಚಿನ ಮಹಿಳೆಯರು ಸ್ತನ ಕ್ಯಾನ್ಸರ್ ನಿಂದ ಸಾವಿಗೀಡಾಗಿದ್ದಾರೆ. ಪುರುಷರಲ್ಲಿ ಅತಿ ಹೆಚ್ಚು ಸಾವುಗಳಿಗೆ ಕಾರಣವಾದ ಕ್ಯಾನ್ಸರ್ ಎಂದರೆ ಬಾಯಿಯ ಕ್ಯಾನ್ಸರ್ ಆಗಿದೆ.
ಕ್ಯಾನ್ಸರ್ ಎಷ್ಟು ಮಾರಣಾಂತಿಕವೆಂಬುದನ್ನು ಈ ಅಂಕಿ ಅಂಶಗಳೇ ಸಾದರಪಡಿಸುತ್ತಿದ್ದು ವಿಶ್ವದಲ್ಲಿಯೇ ಅತಿ ಭಯಾನಕವಾದ ಈ ಕಾಯಿಲೆಯನ್ನು ಬಾರದಂತೆ ತಡೆಗಟ್ಟುವುದು ಎಷ್ಟು ಅವಶ್ಯಕ ಎಂಬುದನ್ನು ನಾವೆಲ್ಲರೂ ಮನಗಾಣಬೇಕಾಗಿದೆ. ಇತ್ತೀಚಿನ ಸಂಶೋಧನೆಗಳು ನೀಡುವ ಸಲಹೆಯ ಪ್ರಕಾರ ನೀವು ನಿಮ್ಮ ಆಹಾರಕ್ರಮವನ್ನು ಆರೋಗ್ಯಕರವಾಗಿ ಕಾಪಾಡಿಕೊಂಡು ಬಂದರೆ ಕ್ಯಾನ್ಸರ್ ಆವರಿಸುವ ಸಾಧ್ಯತೆಯನ್ನು ತಗ್ಗಿಸಬಹುದು. ಬನ್ನಿ, ನಿಮ್ಮ ನಿತ್ಯದ ಆಹಾರಕ್ರಮಗಳಲ್ಲಿ ಏನನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನೋಡೋಣ...

ಕ್ಯಾನ್ಸರ್ ತಡೆಗಟ್ಟುವ ಆಹಾರಗಳು
ಇತ್ತೀಚಿನ ದಿನಗಳಲ್ಲಿ ಸಿದ್ಧ ಮತ್ತು ಪೊಟ್ಟಣಗಳ ಆಹಾರವನ್ನು ಸೇವಿಸುವುದು ಅನಿವಾರ್ಯ ಎಂಬಂತಾಗಿದ್ದು ಹೋಟೆಲು ಮತ್ತು ದುಬಾರಿ ರೆಸ್ಟೋರೆಂಟ್ ಗಳಲ್ಲಿ ಊಟ ಮಾಡುವುದು ಪ್ರತಿಷ್ಠೆಯ ಸಂಕೇತವಾಗಿದೆ. ಅದರಲ್ಲೂ ಮಾರುಕಟ್ಟೆಯಲ್ಲಿ ಭರಪೂರಿಯಾಗಿ ಮಾರಾಟವಾಗುತ್ತಿರುವ ಸಂಸ್ಕರಿತ ಆಹಾರಗಳು ನೋಡಲು ಅತಿ ಆಕರ್ಷಕವಾಗಿದ್ದು ಯಾವುದೇ ಪೋಷಕಾಂಶಗಳನ್ನು ಹೊಂದಿರದೇ ಆರೋಗ್ಯವನ್ನು ಕೆಡಿಸುತ್ತವೆ. ವಾಸ್ತವವಾಗಿ ಈ ಆಹಾರಗಳನ್ನು ಹೆಚ್ಚು ಕಾಲ ಕೆಡದಿರಲು ಬಳಸುವ ಪ್ರಬಲ ಸಂರಕ್ಷಕಗಳು ದೇಹದ ಮೇಲೆ ಅಪಾಯವನ್ನುಂಟುಮಾಡುವ ಪ್ರಬಲ ರಾಸಾಯನಿಕಗಳೇ ಆಗಿವೆ. ಇವೇ ಕ್ಯಾನ್ಸರ್ ಎದುರಾಗಲು ಒಂದು ಕಾರಣವಾಗಿವೆ. ಹಾಗಾಗಿ, ಕ್ಯಾನ್ಸರ್ ಎದುರಾಗುವ ಸಾಧ್ಯತೆಯನ್ನು ಇಲ್ಲವಾಗಿಸಲು ಮೊದಲಾಗಿ ನಾವು ನೈಸರ್ಗಿಕ ಆಹಾರಗಳತ್ತ ಒಲವು ತೋರಬೇಕಾಗಿದೆ. ತಾಜಾ ಹಣ್ಣು ಮತ್ತು ತರಕಾರಿಗಳಲ್ಲಿ ಉತ್ತಮ ಪ್ರಮಾಣದ ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟುಗಳಿದ್ದು ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ. ಇವುಗಳಲ್ಲಿ ಪ್ರಮುಖವಾದವು ಎಂದರೆ:
* ಹಸಿರು ಮತ್ತು ತಾಜಾ ಎಲೆಸೊಪ್ಪುಗಳು ಮತ್ತು ತರಕಾರಿಗಳು
* ಅರಿಶಿನ
* ಶುಂಠಿ
* ತುಳಸಿ
* ತಾಜಾ ಹಣ್ಣುಗಳು
* ಗೋಡಂಬಿ
* ಬಾದಾಮಿ.
* ಒಣಫಲಗಳು ಈ ಎಲ್ಲಾ ಅಹಾರಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಪ್ರಬಲವಾಗಿದ್ದು ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುತ್ತವೆ.
ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುವ ತರಕಾರಿಗಳು
ತರಕಾರಿ ಯಾವುದೇ ಆಗಿರಲಿ, ಒಂದಲ್ಲಾ ಒಂದು ರೀತಿಯಲ್ಲಿ ಆರೋಗ್ಯವರ್ಧಕವೇ ಆಗಿದೆ. ಹಾಗಾಗಿ ನಮ್ಮ ಆಹಾರದಲ್ಲಿ ಸಾಕಷ್ಟು ವಿಧದ ತರಕಾರಿಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿವಿಧ ಬಗೆಯ ಆಂಟಿ ಆಕ್ಸಿಡೆಂಟುಗಳನ್ನು ಪಡೆದಂತಾಗುತ್ತದೆ ಹಾಗೂ ಇವೆಲ್ಲವೂ ನಮ್ಮ ಆರೋಗ್ಯದ ರಕ್ಷಣೆಗೆ ಅಗತ್ಯವಾಗಿದೆ. ಹಾಗಾಗಿ ಆದಷ್ಟೂ ಹೆಚ್ಚು ವಿಧದ ಬಣ್ಣಗಳ ತರಕಾರಿಗಳನ್ನು ಸೇವಿಸಿ. ಆದರೆ ಕೆಲವು ತರಕಾರಿಗಳಲ್ಲಿ ಕ್ಯಾನ್ಸರ್ ನಿರೋಧಕ ಆಂಟಿ ಆಕ್ಸಿಡೆಂಟುಗಳು ಹೆಚ್ಚೇ ಇವೆ. ಇವುಗಳೆಂದರೆ:
*ಬ್ರೋಕೋಲಿ
*ಎಲೆಕೋಸು
*ಬೆಳ್ಳುಳ್ಳಿ
*ಟೊಮಾಟೋ
*ಕ್ಯಾರೆಟ್
*ಬೀನ್ಸ್
ನಿಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬೀನ್ಸ್ ಮತ್ತು ಬ್ರೋಕೋಲಿ ಇರುವಂತೆ ನೋಡಿಕೊಳ್ಳಿ, ಇವುಗಳಿಂದ ಹೆಚ್ಚಿನ ಬಗೆಯ ಕಾಯಿಲೆಗಳಿಂದ ರಕ್ಷಣೆ ದೊರಕುತ್ತದೆ.
ಕ್ಯಾನ್ಸರ್ ತಡೆಗಟ್ಟುವ ಮೂಲಿಕೆಗಳು
ಭಾರತೀಯ ಅಡುಗೆಯಲ್ಲಿ ಮೂಲಿಕೆಗಳು ಅಥವಾ ಸಾಂಬಾರಪದಾರ್ಥಗಳು ರುಚಿಕಾರಕವಾಗಿ ಮತ್ತು ಸುವಾಸನೆಗಾಗಿ ಬಳಸಲ್ಪಡುತ್ತವೆ. ಒಂದು ವೇಳೆ ನೀವು ಸಿದ್ಧರೂಪದ ಪುಡಿಗಳನ್ನು ಮಾರುಕಟ್ಟೆಯಿಂದ ತರುತ್ತೀರಾದರೆ ಈಗ ಈ ಅಭ್ಯಾಸವನ್ನು ಬದಲಿಸಿ ಈ ಪುಡಿಗಳನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳುವತ್ತ ಗಮನ ಹರಿಸಿ. ಏಕೆಂದರೆ ಈ ಪುಡಿಗಳನ್ನು ಮಾಡಲು ಕಳಪೆ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಲಾಗುತ್ತದೆ. ಉತ್ತಮ ಗುಣಮಟ್ಟದ ಇಡಿಯ ಸಾಮಾಗ್ರಿಗಳನ್ನು ಖರೀದಿಸಿ ಪುಡಿಮಾಡಿಟ್ಟುಕೊಂಡು ಬಳಸತೊಡಗಿದರೆ ಇವು ದೇಹದಲ್ಲಿ ಎದುರಾಗಬಹುದಾದ ಹಲವಾರು ಕ್ಯಾನ್ಸರ್ ಗಳ ವಿರುದ್ದ ರಕ್ಷಣೆ ಒದಗಿಸುತ್ತವೆ. ಇವುಗಳಲ್ಲಿ ಪ್ರಮುಖವಾದವು ಎಂದರೆ:
*ಅರಿಶಿನ
*ದಾಲ್ಚಿನ್ನಿ
*ಜಾಯಿಕಾಯಿ (nutmeg)
*ಲವಂಗ
ಇವೆಲ್ಲವೂ ಅತ್ಯುತ್ತಮ ಕ್ಯಾನ್ಸರ್ ನಿವಾರಕ ಸಾಂಬಾರಗಳಾಗಿವೆ. ಆದರೆ ಇವುಗಳ ಪ್ರಯೋಜನ ಪಡೆಯಲು ಅಧಿಕ ಪ್ರಮಾಣದಲ್ಲಿ ಸೇವಿಸುವ ಅಗತ್ಯವಿಲ್ಲ. ಬದಲಿಗೆ ನಿತ್ಯವೂ ಕೊಂಚವೇ ಪ್ರಮಾಣದಲ್ಲಿ ಇವುಗಳನ್ನು ಸೇವಿಸುತ್ತಾ ಬಂದರೆ ಬೇಕಾದಷ್ಟಾಯಿತು.
ಕ್ಯಾನ್ಸರ್ ನಿಂದ ರಕ್ಷಣೆ ಒದಗಿಸುವ ಹಣ್ಣುಗಳು
ತರಕಾರಿಗಳಂತೆಯೇ ಬಹುತೇಕ ಎಲ್ಲಾ ಹಣ್ಣುಗಳಲ್ಲಿ ಒಂದಲ್ಲಾ ಒಂದು ಅರೋಗ್ಯಕರ ಪ್ರಯೋಜನವಿದ್ದೇ ಇರುತ್ತದೆ. ವಿವಿಧ ಹಣ್ಣುಗಳಿಂದ ವಿವಿಧ ಬಗೆಯ ಆಂಟಿ ಆಕ್ಸಿಡೆಂಟುಗಳು ಲಭ್ಯವಾಗುತ್ತವೆ. ಆದರೆ ಕ್ಯಾನ್ಸರ್ ರ ಸಾಧ್ಯತೆಯಿಂದ ರಕ್ಷಿಸುವ ಕೆಲವು ಹಣ್ಣುಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಬೇಕು. ಇವುಗಳೆಂದರೆ:
ಎಲ್ಲಾ ಬಗೆಯ ಬೆರ್‍ರಿ ಹಣ್ಣುಗಳು: ರಾಸ್ಪ್ಬೆರಿ, ಬ್ಲೂಬೆರಿ, ನೆಲ್ಲಿಕಾಯಿ, ಸ್ಟ್ರಾಬೆರಿ, ಬ್ಲಾಕ್ ಬೆರಿ ಇತ್ಯಾದಿ.
ಎಲ್ಲಾ ಬಗೆಯ ಸಿಟ್ರಸ್ ಅಥವಾ ಲಿಂಬೆಯಜಾತಿಯ ಹಣ್ಣುಗಳು: ಲಿಂಬೆ, ಕಿತ್ತಳೆ, ಚಕ್ಕೋತ ಇತ್ಯಾದಿ.
ಬೆಣ್ಣೆಹಣ್ಣು (ಅವೋಕಾಡೋ)
*ಕಿವಿ
*ಸೇಬು
*ಅನಾನಾಸು
*ಮರಸೇಬು (pears)
ಅದರಲ್ಲೂ ಬೆರ್‍ರಿ ಹಣ್ಣುಗಳನ್ನು ವಾರದಲ್ಲಿ ಮೂರು ದಿನವಾದರೂ ಸೇವಿಸುವ ಮೂಲಕ ಕ್ಯಾನ್ಸರ್ ನಿಂದ ಹೆಚ್ಚಿನ ರಕ್ಷಣೆ ಪಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
