For Quick Alerts
ALLOW NOTIFICATIONS  
For Daily Alerts

  20 ರ ಹರೆಯಕ್ಕೆ ಕಾಲಿಟ್ಟ ಮಹಿಳೆಗೆ ಈ ಕಾಯಿಲೆಗಳು ಕಾಡುತ್ತೆ...!!

  By Sushma Charhra
  |

  ಮಹಿಳೆಯೊಬ್ಬಳು 20 ರ ಹರೆಯಕ್ಕೆ ಕಾಲಿಟ್ಟಳೆಂದರೆ, ಆಕೆಗೆ ಎಲ್ಲರೂ ಹೇಳುವ ಅಥವಾ ಕೇಳುವ ಪ್ರಮುಖ ವಿಚಾರವೇನೆಂದರೆ, ಆರೋಗ್ಯದ ಬಗ್ಗೆ ಮತ್ತು ತಿನ್ನುವ ಆಹಾರದ ಬಗ್ಗೆ ಜಾಗೃತರಾಗಿರಬೇಕು ಎಂದು. ಇದನ್ನು ಹಲವಾರು ಮಂದಿ ವೈದ್ಯರೂ ಕೂಡ ಹೇಳುತ್ತಾರೆ. ಯಾಕೆಂದರೆ 20 ರ ಹರೆಯಕ್ಕೆ ಕಾಲಿಡುವ ಮಹಿಳೆಯ ವಯಸ್ಸು ತುಂಬಾ ನಿರ್ಣಾಯಕ ಹಂತವಾಗಿರುತ್ತೆ ಯಾಕೆಂದರೆ ಆಕೆಯ ದೇಹದಲ್ಲಿ ಬಹಳಷ್ಟು ಹಾರ್ಮೋನುಗಳ ವ್ಯತ್ಯಾಸವು ಈ ಸಂದರ್ಬದಲ್ಲಿ ನಡೆಯಲಿದೆ.

  ಸಮಸ್ಯೆಗಳ ಅರಿವಿದ್ದರೂ, ಜಾಗೃತೆ ತೆಗೆದುಕೊಳ್ಳುವಂತೆ ಹಲವರು ಹೇಳಿದರೂ ಕೂಡ ಹೆಚ್ಚಿನ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ ತೋರುತ್ತಾರೆ. ಹಾಗಾಗಿ ಹಲವಾರು ಸಮಸ್ಯೆಗಳನ್ನು ಎದುರಿಸಿ ಹಾನಿಗೊಳಗಾಗುತ್ತಾರೆ. ಹೆಚ್ಚಿನ 20 ರ ಹರೆಯ ಮಹಿಳೆಯರು ಪಾರ್ಟಿ ಮಾಡುವುದು, ಪ್ರವಾಸ ಕೈಗೊಳ್ಳುವುದು,ತಮ್ಮನ್ನು ತಾವು ಖುಷಿಯ ಮೂಡ್ ನಲ್ಲಿ ಇರುವಂತೆ ನೋಡಿಕೊಳ್ಳುವುದರಲ್ಲೇ ಇರುತ್ತಾರೆ.

  ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳದೆ ಕೇವಲ ಇಂತಹ ಚಟುವಟಿಕೆಯಲ್ಲೇ ತಮ್ಮನ್ನು ತಾವು ತೊಡಗಿಸಿಕೊಂಡರೆ, ಶಾಶ್ವತವಾದ ಆರೋಗ್ಯದ ತೊಂದರೆಗಳಿಗೆ ಅವರು ತುತ್ತಾಗಬೇಕಾಗುತ್ತದೆ. ಇಂತಹ ಮಹಿಳೆಯರು ತಮ್ಮ ಚಿಕ್ಕ ವಯಸ್ಸಿನಲ್ಲೇ ತಮಗೆ ಉಂಟಾಗಬಹುದಾದ ಭವಿಷ್ಯದ ಕಾಯಿಲೆಗಳ ಬಗ್ಗೆ ಅರಿತಿರುವುದು ಒಳಿತು.

  20 ರ ಹರೆಯಕ್ಕೆ ಕಾಲಿಡುವುದು ಎಂದರೆ ಅವರು ಅವರ ಜೀವನದ ಪ್ರಮುಖ ಘಟ್ಟವೊಂದಕ್ಕೆ ಹೆಜ್ಜೆ ಇಡುತ್ತಿದ್ದಾರೆ ಎಂದರ್ಥ. ಇಂತಹ ಕಾಯಿಲೆಗಳನ್ನು ತಡೆಗಟ್ಟಲು ಹಲವು ವಿಧಾನಗಳಿದ್ದು, ಪ್ರತಿದಿನ ವ್ಯಾಯಾಮ ಮಾಡುವುದು, ಆಹಾರ ಕ್ರಮಗಳನ್ನು ಬದಲಿಸಿಕೊಳ್ಳುವುದು, ಜಂಕ್ ಫುಡ್ ಗಳನ್ನು ಸೇವಿಸದೇ ಇರುವ ಮೂಲಕ ಆರೋಗ್ಯವಾಗಿರಲು ಸಾಧ್ಯವಿದೆ. ಈ ಕೆಳಗಿನ ಕೆಲವು ಕಾಯಿಲೆಗಳು 20 ರ ಹರೆಯದಲ್ಲಿ ಮಹಿಳೆಯರನ್ನು ಕಾಡುತ್ತೆ. ಯಾವುದು ಎಂಬುದರ ಬಗ್ಗೆ ತಿಳಿಯಲು ಮುಂದೆ ಓದಿ....

  ಲೂಪಸ್

  ಲೂಪಸ್

  ಲೂಪಸ್ ಒಂದು ಆಟೋ ಇಮ್ಯೂನ್ ಕಾಯಿಲೆಯಾಗಿದ್ದು,1.5 ಮಿಲಿಯನ್ ಮಂದಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಈ ಸಮಸ್ಯೆಗೆ ತುತ್ತಾಗಿದ್ದಾರೆ.5 ಮಿಲಿಯನ್ ನಷ್ಟು ಮಂದಿ ವಿಶ್ವದಾದ್ಯಂತ ಈ ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಅಂದಾಜಿಸಲಾಗಿದೆ. ಲೂಪಸ್ ಕಾಣಿಸಿಕೊಂಡವಲರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಅದು ಯುವತಿಯರು., ಇದೇ ಕಾರಣಕ್ಕೆ 20 ರ ಹರೆಯದ ಯುವತಿಯವರು ಆಗಾಗ ವೈದ್ಯರನ್ನು ಸಂಪರ್ಕಿಸುತ್ತಿರಬೇಕು ಮತ್ತು ಆರೋಗ್ಯ ತಪಾಸಣೆ ಮಾಡಿಸುತ್ತಿರಬೇಕು, ಈ ಕಾಯಿಲೆಯ ಗುಣಲಕ್ಷಣಗಳು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತೆ. ಚಿಹ್ನೆಗಳು ಪ್ರಮುಖವಾಗಿ ರ್ಯಾಷಸ್ ಆಗುವುದು, ಮೂಡಿನಲ್ಲಿ ಬದಲಾವಣೆ,ತಲೆನೋವು, ಬಳಲಿಕೆ ಇತ್ಯಾದಿ. ಇದು 20 ರ ಹರೆಯದವರಿಗೆ ದೊಡ್ಡ ಸಮಸ್ಯೆಯಾಗುತ್ತೆ. ಸರಿಯಾದ ಚಿಕಿತ್ಸೆ ಸಿಗದಿದ್ದರೆ ಜೀವನಪೂರ್ತಿ ಬಳಲಬೇಕಾಗಬಹುದು. ಆದರೆ ಅದೃಷ್ಟವಶಾತ್ ಈ ಸಮಸ್ಯೆಗೆ ಔಷಧಗಳು ಲಭ್ಯವಿದೆ.

  ಮೊಡವೆ

  ಮೊಡವೆ

  ಪ್ರತಿಯೊಬ್ಬರೂ ಈ ಸಮಸ್ಯೆಗೆ ಒಳಗಾಗುವುದಿಲ್ಲ. ಆದರೆ ಹೆಚ್ಚಿನವರಿಗೆ ಈ ಮೊಡವೆಯ ಸಮಸ್ಯೆ ಕಾಣಿಸಿಕೊಳ್ಳಬಹುದು. ಅದರಲ್ಲೂ ಪ್ರಮುಖವಾಗಿ ಎಣ್ಣೆ ತ್ವಚೆ ಇರುವವರಲ್ಲಿ ಹೆಚ್ಚಾಗಿ ಮೊಡವೆ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಮೊಡವೆಗಳು ಹೆಚ್ಚಾಗಿ 20 ನೇ ವಯಸ್ಸಿಗೆ ಬಂದವರಲ್ಲಿ ಕಾಣಿಸಿಕೊಳ್ಳುತ್ತೆ. ಅದ್ರಲ್ಲೂ ಮಹಿಳೆಯರಿಗೆ ಈ ಸಮಸ್ಯೆ ಹೆಚ್ಚು. ಚರ್ಮವೈದ್ಯರು ಹೇಳುವ ಪ್ರಕಾರ ಈ ಸಮಸ್ಯೆಗೆ ಪ್ರಮುಖ ಕಾರಣ 20 ಮತ್ತು 30 ಹರೆಯ ಮಹಿಳೆಯರಲ್ಲಾಗುವ ಹಾರ್ಮೋನುಗಳ ವ್ಯತ್ಯಾಸ.

  ಫೈಬ್ರೊಮ್ಯಾಲ್ಗಿಯ

  ಫೈಬ್ರೊಮ್ಯಾಲ್ಗಿಯ

  ಯಾವ ಮಹಿಳೆಗೆ ಈ ಸಮಸ್ಯೆ ಇರುತ್ತೋ ಅಂತವರು ಮಾಂಸಖಂಡಗಳ ಅತಿಯಾದ ನೋವು, ಕೀಲುಗಳಲ್ಲಿ ನೋವನ್ನು ಅನುಭವಿಸುತ್ತಿರುತ್ತಾರೆ. ಅಷ್ಟೇ ಅಲ್ಲ, ನಿತ್ಯದ ಕೆಲಸಗಳನ್ನು ಮಾಡಿಕೊಳ್ಳಲೂ ಕೂಡ ಆಯಾಸ ಪಡುತ್ತಾರೆ. ಕೆಲವು ಸಿಂಪಲ್ ಕೆಲಸಗಳು ಉದಾಹರಣೆಗೆ ಕಾರ್ ಡ್ರೈವಿಂಗ್ ಮಾಡುವುದು, ಮೆಟ್ಟಿಲುಗಳನ್ನು ಇಳಿಯುವುದು ಕೂಡ ಅವರಿಗೆ ದೊಡ್ಡ ನೋವು ತರುವ ಕೆಲಸಗಳಾಗಿರುತ್ತೆ. ಹೆಚ್ಚಿನವರು ಈ ಸಮಸ್ಯೆ ವಯಸ್ಸಾದವರಲ್ಲಿ ಬರುತ್ತೆ ಎಂದು ಭಾವಿಸಿರುತ್ತಾರೆ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಕೆಲವು 20 ರ ಹರೆಯದ ಹುಡುಗಿಯರಲ್ಲೂ ಕೂಡ ಈ ಸಮಸ್ಯೆ ಕಂಡುಬರುತ್ತೆ.

  ಸ್ಕಿಜೋಫ್ರೇನಿಯಾ ಅಥವಾ ಛಿದ್ರಮನಸ್ಕತೆ

  ಸ್ಕಿಜೋಫ್ರೇನಿಯಾ ಅಥವಾ ಛಿದ್ರಮನಸ್ಕತೆ

  ಈ ರೀತಿಯ ಸ್ಕಿಜೋಫ್ರೇನಿಯಾ ಕಾಯಿಲೆಯ ಗುಣಲಕ್ಷಣಗಳು 20ನೇ ವಯಸ್ಸಿಗೆ ಬರುವ ಮುನ್ನವೇ ಕಾಣಿಸಿಕೊಂಡಿರುತ್ತೆ. ಸಹಜವಾಗಿ 20 ರ ನಂತರದವರಿಗೆ ಈ ಕಾಯಿಲೆ ಕಾಣಿಸುವುದು ವಿರಳ. ಕೆಲವರಲ್ಲಿ ಹಠಾತ್ ವ್ಯಕ್ತಿತ್ವ ಬದಲಾಗುವಿಕೆ, ಹಠಾತ್ ಹಾನಿಗೊಳಗಾಗುವಿಕೆ ಅಥವಾ ವಿಪ್ಲವಗೊಳ್ಳುವಿಕೆಯಂತ ಗುಣಲಕ್ಷಣಗಳು ಕಾಣಬಹುದು. ಕೆಲವರಲ್ಲಿ ನಿಧಾನಗತಿಯಲ್ಲಿ ಈ ಗುಣಲಕ್ಷಣಗಳು ಗೋಚರಿಸಬಹುದು. ಇನ್ನು ಕೆಲವರು ಭ್ರಮೆಯಾದಂತ ಅನುಭವವನ್ನು ಪಡೆಯಬಹುದು, ಆದರೆ ಇಂತಹ ಅವರ ವರ್ತನೆಯ ಬಗ್ಗೆ ಅವರಿಗೆ ಅರಿವೇ ಇರುವುದಿಲ್ಲ. ಇದನ್ನು ಒಂದು ರೀತಿಯ ಮನಸ್ಸಿನ ಉದ್ವೇಗ ಎಂದರೆ ತಪ್ಪಾಗಲಿಕ್ಕಿಲ್ಲ. ಸ್ಕಿಜೋಫ್ರೇನಿಯಾದ ಗುಣಲಕ್ಷಣಗಳೇ ಹಾಗೆ, ಹಠಾತ್ ಭ್ರಮೆಗೆ ಒಳಗಾಗುವುದು, ದಿಗ್ಭಮೆಗೆ ಒಳಗಾಗುವುದು, ಮಾತನಾಡುವಾಗ ಒಂದು ಸಮತೋಲನ ಇಲ್ಲದೆ ಇರುವುದು, ಏನೇನೋ ಬಡಬಡಾಯಿಸುವುದು

  ಇತ್ಯಾದಿಗಳಾಗಿವೆ.ಇಂತಹ ವ್ಯಕ್ತಿಗಳಿಗೆ ತಮ್ಮ ಭಾವನೆಗಳನ್ನು ಹೊರಹಾಕಲು ಕೂಡ ಕೆಲವು ಗೊಂದಲಗಳಿರುತ್ತೆ ಅಥವಾ ಅದು ಅಸಾಧ್ಯವಾಗಿರುತ್ತೆ.ನಿತ್ಯದ ಅವರ ವರ್ತನೆಯು ಭಾರೀ ಭಿನ್ನವಾಗಿ ಕಾಣುತ್ತೆ. ವಿಚಿತ್ರವೆಂದೂ ಅನ್ನಿಸುವ ಸಾಧ್ಯತೆಗಳಿರುತ್ತೆ. ಆದರೆ ಈ ಕಾಯಿಲೆಯ ಗುಣಲಕ್ಷಣಗಳು ಒಬ್ಬೊಬ್ಬ ವ್ಯಕ್ತಿಯಲ್ಲಿ ಒಂದೊಂದು ರೀತಿ ಇರುತ್ತೆ.

  ಸಂಧಿವಾತ

  ಸಂಧಿವಾತ

  ಸಂಧಿವಾತ ಸಮಸ್ಯೆಯು 20 ರ ಹರೆಯದಲ್ಲಿ ಪುರುಷ ಮತ್ತು ಮಹಿಳೆ ಇಬ್ಬರಲ್ಲೂ ಕಾಣಿಸಿಕೊಳ್ಳುತ್ತೆ. ಕುಟುಂಬದಲ್ಲಿ ಯಾರಿಗಾದರೂ ಆಟೋಇಮ್ಯೂನ್ ಸಮಸ್ಯೆ ಇದ್ದಲ್ಲಿ, ಖಂಡಿತ ಅವರ ಮನೆಯ 20 ರ ಹರೆಯದವರಿಗೆ ಈ ಸಂಧಿವಾತ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತೆ, ಧೂಮಪಾನ ಕೂಡ ಈ ಸಮಸ್ಯೆಗೆ ಕಾರಣವಾಗಬಹುದು. ಈ ಕಾಯಿಲೆಯ ನಿವಾರಣೆಗೆ ಯಾವುದೇ ಔಷಧವಿಲ್ಲ ಆದರೆ ನೋವು ನಿವಾರಕಗಳು ಕೆಲವು ಇದ್ದು,ಅವು ಸಂಧಿನೋವನ್ನು ತಡೆಯುವಲ್ಲಿ ಸಹಕಾರಿಯಾಗಬಹುದು ಅಷ್ಟೇ.

  ಕ್ರೋನ್ಸ್ ಕಾಯಿಲೆ

  ಕ್ರೋನ್ಸ್ ಕಾಯಿಲೆ

  ಕ್ರೋನ್ಸ್ ಕಾಯಿಲೆಯು 20 ರ ಹರೆಯದಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು.ಯಾರಿಗೆ ಆಟೋ ಇಮ್ಯೂನ್ ಸಮಸ್ಯೆ ಇರುತ್ತೋ,ಆರೋಗ್ಯಕಾರಿ ಜೀವಕೋಶಗಳೇ ಹೊಡೆದಾಡಿಕೊಂಡು ಅವು ನೋವಿಗೆ ಕಾರಣವಾಗುತ್ತೆ. ಗರ್ಭಕೋಶದಲ್ಲಿ ನೋವು ಕಾಣಿಸಿಕೊಳ್ಳುವುದು, ವಾಂತಿ, ನೋವು ಇತ್ಯಾದಿ ಇದರ ಪ್ರಾಥಮಿಕ ಹಂತದ ಲಕ್ಷಣಗಳಾಗಿರುತ್ತದೆ. ಇದು ಒಂದು ವೇಳೆ ಅಧಿಕವಾದರೆ ಕ್ಯಾನ್ಸರ್ ಕಾರಕವಾಗಲೂ ಬಹುದು ಮತ್ತು ಅಪೌಷ್ಟಿಕತೆಗೂ ಕಾರಣವಾಗುತ್ತೆ.

  ಜೀವಶಕ್ತಿ ಇಲ್ಲದ ಗರ್ಭಧಾರಣೆಯ ಲಕ್ಷಣಗಳು

  ಜೀವಶಕ್ತಿ ಇಲ್ಲದ ಗರ್ಭಧಾರಣೆಯ ಲಕ್ಷಣಗಳು

  20 ರ ಹರೆಯದ ಮತ್ತು 30 ರ ಒಳಗಿನ ಮಹಿಳೆಯರಿಗೆ ಮಾತೃತ್ವದ ಸಮಸ್ಯೆಯಾಗಬಹುದು, ಗರ್ಭಪಾತವಾಗುವ ಸಾಧ್ಯತೆಗಳಿರುತ್ತೆ ಅಷ್ಟೇ ಅಲ್ಲ, ಕೆಲವು ಮಹಿಳೆಯರಲ್ಲಿ ಜೀವಶಕ್ತಿ ಇಲ್ಲದ ಗರ್ಭಧಾರಣೆಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದರೆ ಅಧ್ಯಯನಕಾರರು ತಿಳಿಸುವಂತೆ, ಇದಕ್ಕೆ ಕಾರಣ ಅವರ ಆಹಾರ ಕ್ರಮ, ಹೈಬ್ರೀಡ್ ತರಕಾರಿಗಳ ಸೇವನೆ ಮತ್ತು ಅಶುದ್ಧ ಆಹಾರಗಳ ಸೇವನೆಯಿಂದ ಈ ಸಮಸ್ಯೆ ಕಾಡುವುದು ಹೆಚ್ಚು.ಅಂತಿಮವಾಗಿ ಹೇಳುವುದಾದರೆ, ಪ್ರಪಂಚದಾದ್ಯಂತ ಮಹಿಳೆಯರು ಜಾಗೃತಿ ವಹಿಸಬೇಕಾಗಿದ್ದು, ಅವರ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು ಅದ್ರಲ್ಲೂ ಪ್ರಮುಖವಾಗಿ 20 ರ ಹರೆಯಕ್ಕೆ ಕಾಲಿಡುವಾಗ ಹೆಚ್ಚು ಜಾಗೃತಿ ತೆಗೆದುಕೊಳ್ಳಬೇಕು. ಅವರು ಎಲ್ಲದನ್ನೂ ಬಂದ ಹಾಗೆ ಬರಲಿ ಎಂಬಂತ ಮನಸ್ಥಿತಿಯಲ್ಲಿ ಇರಬಾರದು. ಅವರು ಸರಿಯಾದ ದೈಹಿಕ ತಜ್ಞರನ್ನು ಭೇಟಿಯಾಗಬೇಕು ಮತ್ತು ಒಂದು ವೇಳೆ ಅಗತ್ಯವಿದ್ದರೆ ಸರಿಯಾದ ಸಮಯಕ್ಕೆ,ಸರಿಯಾದ ಚಿಕಿತ್ಸೆ ತೆಗೆದುಕೊಳ್ಳಬೇಕು.

  English summary

  Women In Their 20s Are Prone To These Diseases

  When women enter their 20s, the most common thing they get to hear often is to take care of their health and eat healthy. It is being emphasized by many doctors too because this age of women is considered as crucial because of the hormonal changes happening in the body. Instead of hearing these problems so many times, there are still a lot of women who don't care about their health even after knowing that it may cause them significant harm.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more