ದೇಹದ ರಕ್ತ ಹೆಪ್ಪುಗಟ್ಟುವಿಕೆಯ ಬಗ್ಗೆ ಇರುವ ಕುತೂಹಲಕಾರಿ ಸಂಗತಿಗಳು

By Sushma Charhra

ರಕ್ತ ಹೆಪ್ಪುಗಟ್ಟುವಿಕೆಯ ಬಗ್ಗೆ ಈ ಕುತೂಹಲಕಾರಿ ಸಂಗತಿಗಳು ನಿಮ್ಮನ್ನು ಶಾಕ್ ಮಾಡುತ್ತವೆ... ರಕ್ತಹೆಪ್ಪು ಗಟ್ಟುವಿಕೆಯ ನಿಜಕ್ಕೂ ಒಂದು ಭಯಾನಕ ಸನ್ನಿವೇಶವಾಗಿದ್ದು, ಇದು ರಕ್ತದಲ್ಲಿನ ಆಮ್ಲಜನಕದ ಹರಿವನ್ನು ನಿರ್ಬಂಧಿಸಿ ಕೊಳ್ಳುತ್ತದೆ ಮತ್ತು ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತ ಸಮಸ್ಯೆಗಳಿಗೂ ಕೂಡ ಕಾರಣವಾಗ ಬಹುದು. ಈ ಲೇಖನದಲ್ಲಿ ನಾವು ರಕ್ತ ಹೆಪ್ಪುಗಟ್ಟುವಿಕೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಪ್ರಮುಖ ಮತ್ತು ಆಸಕ್ತಿದಾಯಕವಾಗಿರುವ ಕೆಲವು ವಿಚಾರಗಳನ್ನು ತಿಳಿಸಲಿದ್ದೇವೆ.

ಯಾವುದೋ ಗಾಯವಾದಾಗ, ಚರ್ಮ ಕತ್ತರಿಸಿ ಹೋದಾಗ ರಕ್ತವು ಹೆಪ್ಪುಗಟ್ಟಿ ಅದರ ಹರಿವು ನಿಂತರೆ ಅದು ನಿಜಕ್ಕೂ ಒಳ್ಳೆಯದೇ. ಆದರೆ ಯಾವಾಗ ಅಗತ್ಯವಿಲ್ಲವೋ ಆಗಲೂ ಕೂಡ ರಕ್ತ ಹೆಪ್ಪುಗಟ್ಟುವಿಕೆಯು ನಡೆಯಬಹುದು. ಅದು ಖಂಡಿತವಾಗಲೂ ಒಂದು ಗಂಭೀರ ಸಮಸ್ಯೆಯೇ ಸರಿ.

Blood Clots

ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಪ್ರಮುಖವಾಗಿ ಎರಡು ವಿಧಗಳಿವೆ. ಒಂದು ಅಪಧಮನಿ ಬ್ಲಾಕ್ ಮತ್ತೊಂದು ರಕ್ತನಾಳಗಳ ಬ್ಲಾಕ್. ಮೊದಲನೇ ವಿಧಧ ರಕ್ತ ಹೆಪ್ಪುಗಟ್ಟುವಿಕೆಯು ಪ್ರಮುಖ ಅಂಗಗಳನ್ನು ಮತ್ತು ಅಂಗಾಂಶದ ಹಾನಿಗೂ ಕಾರಣವಾಗಬಹುದು.ಈ ವಿಧಧ ರಕ್ತ ಹೆಪ್ಪುಗಟ್ಟುವಿಕೆಯು ಹೃದಯ ಮತ್ತು ಮೆದುಳಿನಲ್ಲೂ ಕೂಡ ಆಗಬಹುದು ಮತ್ತು ಇದು ಹಾರ್ಟ್ ಅಟ್ಯಾಕ್ ಮತ್ತು ಸ್ಟ್ರೋಕ್ ಗಳಿಗೂ ಕೂಡ ಕಾರಣವಾಗಬಹುದು. ರಕ್ತನಾಳಗಳ ಬ್ಲಾಕ್ ಗಳು ಕಾಲಿನ ರಕ್ತನಾಳಗಳಲ್ಲಿ ಗೋಚರಿಸುತ್ತದೆ ಮತ್ತು ಇದನ್ನು ಡಿವಿಟಿ (deep vein thrombosis)ಎಂದು ಕರೆಯಲಾಗುತ್ತೆ.

ಇದು ನಿಧಾನವಾಗಿ ಡೆವಲಪ್ ಆಗುತ್ತದೆ ಮತ್ತು ಚಿಹ್ನೆಗಳು ಏಕರೂಪದಲ್ಲಿ ಇಲ್ಲದೆಯೂ ಇರಬಹುದು. ಅಮೇರಿಕಾದ ಹಾರ್ಟ್ ಅಸೋಸಿಯೇಷನ್ ಹೇಳುವ ಪ್ರಕಾರ ಕಾಲಿನ ಭಾಗದಲ್ಲಿ ಉಂಟಾಗುವ ತೀವ್ರತರವಾದ ರಕ್ತ ಹೆಪ್ಪುಗಟ್ಟುವಿಕೆಯು ಪ್ರಮುಖವಾಗಿ ನೋವು,ಉಷ್ಣತೆಯ ಅನುಭವ, ಕೆಂಪಾಗುವುದು ಮತ್ತು ಕಾಲಿನ ಕೆಳಭಾಗದಲ್ಲಿ ಊತದ ಅನುಭವವನ್ನು ನೀಡಬಹುದು. ರಕ್ತ ಹೆಪ್ಪುಗಟ್ಟುವಿಕೆಯ ಬಗೆಗಿನ ಕುತೂಹಲಕಾರಿ ಸಂಗತಿಗಳನ್ನು ಈ ಕೆಳಗೆ ತಿಳಿದುಕೊಳ್ಳಿ..

1. ರಕ್ತ ಹೆಪ್ಪುಗಟ್ಟುವಿಕೆ ನಿಜಕ್ಕೂ ಭಯಾನಕ

ವಿಶ್ವದಾದ್ಯಂತ, ಅಪಧಮನಿಯ ರಕ್ತ ಹೆಪ್ಪುಗಟ್ಟುವಿಕೆಯು ಸಾವಿನ ಸಂಖ್ಯೆಯ ನಾಲ್ಕರಲ್ಲಿ ಒಬ್ಬರಿಗೆ ಇದೇ ಕಾರಣವಾಗಿರುತ್ತದೆಯಂತೆ. ರಕ್ತನಾಳಗಳಲ್ಲಿ ಕಂಡುಬರುವ ರಕ್ತ ಹೆಪ್ಪುಗಟ್ಟುವಿಕೆಗಳು ಹೃದಯಾಘಾತದಂತಹ ಸ್ಥಿತಿಗತಿಯಂತಹ ಅಪಾಯಕಾರಿ ಅಂಶಗಳನ್ನು ಹೊಂದಿರುವವರಿಗೆ ವಿಶೇಷವಾಗಿ ಸಮಸ್ಯೆಯನ್ನು ತಂದೊಡ್ಡುವ ಸಾಧ್ಯತೆ ಹೆಚ್ಚಿರುತ್ತದೆ.ಅಷ್ಟೇ ಅಲ್ಲ, ರಕ್ತ ಹೆಪ್ಪುಗಟ್ಟುವಿಕೆಯು ಮರಣ,ಅಂಗವೈಕಲ್ಯ ಮತ್ತು ಅಸ್ವಸ್ಥತೆಯ ಸಮಸ್ಯೆಗಳಿಗೆ ಪ್ರಮುಖವಾಗಿ ಕಾರಣವಾಗುತ್ತದೆ.

2. ರಕ್ತ ಹೆಪ್ಪುಗಟ್ಟುವಿಕೆಯ ರೋಗ ಲಕ್ಷಣಗಳು ಸೂಕ್ಷ್ಮವಾಗಿರುತ್ತದೆ

ನಿಮ್ಮ ಶ್ವಾಸಕೋಶದಲ್ಲಿ ಮತ್ತು ರಕ್ತನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಂತ ಸಮಸ್ಯೆಗಳು ಕಂಡುಬಂದಲ್ಲಿ ಅದನ್ನು ಮೊದಮೊದಲಿಗೆ ಗುರುತಿಸಲು ಸಾಧ್ಯವಾಗುವುದೇ ಇಲ್ಲ. ರಕ್ತ ಹೆಪ್ಪುಗಟ್ಟುವಿಕೆಯ ಚಿಹ್ನೆಗಳಲ್ಲಿ ಪ್ರಮುಖವಾಗಿ ಕೈ ಮತ್ತು ಕಾಲುಗಳಲ್ಲಿ ನೋವು ಕಾಣಿಸಿಕೊಳ್ಳುವುದು, ಕೈ ಮತ್ತು ಕಾಲುಗಳಲ್ಲಿ ಊದಿಕೊಂಡಿರುವ ಪ್ರದೇಶ ಮತ್ತು ಅದರಲ್ಲಿ ಸಹಿಸಲು ಅಸಾಧ್ಯವಾದಂತ ನೋವು, ನಡೆದಾಡುವಾಗ ಅಥವಾ ಸುಮ್ಮನೆ ಕುಳಿತಿರುವಾಗ ಕೂಡ ಕಾಲಿನಲ್ಲಿ ಜುಮ್ ಜುಮ್ ಎಂಬ ಭಾವನೆ ಬಂದು ಊತ, ನೋವು ಕಾಣಿಸಿಕೊಳ್ಳುವುದು, ಚರ್ಮವು ಕೆಂಪಗಾಗುವುದು, ಕಾಲುಗಳಲ್ಲಿ ರಕ್ತನಾಳಗಳ ಹಿಗ್ಗುವಿಕೆಗಳು ಇತ್ಯಾದಿ ಲಕ್ಷಣಗಳು ಕಾಣಸಿಕೊಳ್ಳಬಹುದು.

3. ರಕ್ತ ಹೆಪ್ಪುಗಟ್ಟುವಿಕೆಯು ವಿಭಿನ್ನವಾಗಿ ಪ್ರಚೋದನೆ ಮಾಡುತ್ತೆ

ಕ್ಯಾನ್ಸರ್ ಸರ್ಜರಿಗಳು ವಿಶೇಷವಾಗಿ ಕಿಬ್ಬೊಟ್ಟೆಯ ಕ್ಯಾನ್ಸರ್ ಸರ್ಜರಿಗಳು ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಯನ್ನು ಪ್ರಚೋದಿಸುತ್ತದೆ. ಒಂದು ವೇಳೆ ರಕ್ತ ಹೆಪ್ಪುಗಟ್ಟುವಿಕೆಯಂತ ಸಮಸ್ಯೆಯ ಅಪಾಯವು ಹೆಚ್ಚಿದ್ದರೆ, ಇದು ಇಂತಹ ಸಮಸ್ಯೆಗಳಿಂದಲೇ ಆಗಿರಬಹುದು ಮತ್ತು ಅದು ದೀರ್ಘಕಾಲಾವಧಿಯ ನಂತರ ನಿಮಗೆ ಸಮಸ್ಯೆ ತಂದೊಡ್ಡಿರಬಹುದು. ಮೊಣಕಾಲು,ಸೊಂಟ ಅಥವಾ ಕ್ಯಾನ್ಸರ್ ಸರ್ಜರಿ, ಅಥವಾ ರಕ್ತ ಹೆಪ್ಪುಗಟ್ಟುವಿಕೆಯಿಂದ ಯಾರಾದರೂ ಈ ಹಿಂದೆ ನಿಮ್ಮ ಕುಟುಂಬದಲ್ಲಿ ಬಳಲಿದ್ದರೆ, ಈಸ್ಟ್ರೋಜನ್ ನಂತಹ ಸಂತಾನ ನಿಯಂತ್ರಕ ಮಾತ್ರೆಗಳ ಬಳಕೆ, ಬೊಜ್ಜು, ಧೂಮಪಾನ , ಅಲ್ಕೋಹಾಲ್ ಸೇವನೆ ಮಾಡುವುದು, ಗರ್ಭವತಿ ಅಥವಾ ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿದ ಬಾಣಂತಿ ಇತ್ಯಾದಿ ಪ್ರಕರಣಗಳು ಕೂಡ ರಕ್ತ ಹೆಪ್ಪುಗಟ್ಟುವಿಕೆಗೆ ಪ್ರಚೋದನೆ ನೀಡುತ್ತದೆ.

4. ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟಬಹುದು

ಯಾವ ರೋಗಿಗಳಿಗೆ ಅತ್ಯಂತ ಹೆಚ್ಚು ರಕ್ತಸ್ರಾವವಾಗುವ ಸಮಸ್ಯೆ ಆಗುತ್ತೋ, ಅಂತವರಿಗೆ ಒಂದು ವೇಳೆ ಅವರು ಆಸ್ಪತ್ರೆಗೆ ದಾಖಲಾಗಿದ್ದರೂ ಕೂಡ ಅದನ್ನು ಯಾಂತ್ರಿಕ ಸಂಕೋಚನ ಡಿವೈಸ್ ಗಳನ್ನು ಅವರ ಕಾಲುಗಳಲ್ಲಿ ಬಳಕೆ ಮಾಡಿ ನಿವಾರಣೆ ಮಾಡಲಾಗುತ್ತೆ.ರಕ್ತ ಹೆಪ್ಪುಗಟ್ಟುವಿಕೆಯ ಬಗ್ಗೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಮಾಡಬೇಕಾಗಿದೆ ಮತ್ತು ಇದನ್ನು ತಡೆಗಟ್ಟಬಹುದು ಎಂಬ ಬಗ್ಗೆ ಅರಿವು ಜನರಲ್ಲಿ ಮೂಡಬೇಕಾದ ಅನಿವಾರ್ಯತೆ ಇದೆ.

ರಕ್ತ ಹೆಪ್ಪುಗಟ್ಟುವಿಕೆಯ ಬಗ್ಗೆ ತಿಳಿದುಕೊಳ್ಳಬೇಕಾಗಿರುವ ಕೆಲವು ಶಾಕ್ ಹುಟ್ಟಿಸುವ ವಿಚಾರಗಳು ವಿಶ್ವ ದಾದ್ಯಂತ ಆಸ್ಪತ್ರೆಯಲ್ಲಿ ಗಣನೆಗೆ ಬರುವ ಸಾಯುವ ಪ್ರಕರಣಗಳಲ್ಲಿ ಹೆಚ್ಚಿನವು ಪಲ್ಮನರಿ ಎಂಬೋಲಿಸಮ್ ಅಂದರೆ ಶ್ವಾಸಕೋಶದಲ್ಲಿ ರಕ್ತ ಹೆಪ್ಪು ಗಟ್ಟುವಿಕೆಯ ಸಮಸ್ಯೆಯೇ ಸಾಮಾನ್ಯ ಕಾರಣವಾಗಿದೆ. ಕಾಲು ಅಥವಾ ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯಿಂದಾಗಿ ಅಂದರೆ ಥ್ರಂಬೋಬಾಂಬಲಿಸಮ್ ನ ಸಮಸ್ಯೆಯಿಂದ ಹೆಚ್ಚಿನ ಜನರು ಸಾಯುತ್ತಾರೆ.

• 85 ಶೇಕಡಾ ಸ್ಟ್ರೋಕ್ ಗಳು ಸಂಭವಿಸುವುದು ರಕ್ತ ಹೆಪ್ಪುಗಟ್ಟುವಿಕೆಯ ಕಾರಣದಿಂದಲೇ ಆಗಿದೆ. ಇದು ಆಗಲು ಕಾರಣ ಆಮ್ಲಜನಕ ಅಥವಾ ರಕ್ತವು ಮೆದುಳಿಗೆ ಹರಿದಾಡುವುದನ್ನು ರಕ್ತ ಹೆಪ್ಪುಗಟ್ಟುವಿಕೆಯು ಸ್ಥಗಿತಗೊಳಿಸಿದಾಗ ಅಥವಾ ದೇಹದ ಇತರೆ ಯಾವುದೇ ಭಾಗಕ್ಕೆ ಸರಬರಾಜಾಗುವುದು ನಿಂತಾಗ ಸ್ಟ್ರೋಕ್ ನಂತಹ ಸಮಸ್ಯೆ ಕಾಣಿಸಿಕೊಳ್ಳುತ್ತದೆ.ಇದಕ್ಕೆ ಇನ್ನೊಂದು ಕಾರಣ ಬೊಜ್ಜು ಮತ್ತು ಅಧಿಕ ರಕ್ತದ ಒತ್ತಡ, ಅನಿಯಮಿತ ಹೃದಯ ಬಡಿತ ಇತ್ಯಾದಿಗಳು.


• ಹೃದಯದ ಅಪಧಮನಿಯಲ್ಲಿ ರಕ್ತದ ಹೆಪ್ಪುಗಟ್ಟುವಿಕೆಯು ಕಂಡುಬಂದಲ್ಲಿ, ಅದು ಮಾಂಸಖಂಡಗಳ ಆಮ್ಲಜನಕವನ್ನು ಕಾರ್ಯಗತಗೊಳಿಸದಂತೆ ಮಾಡುತ್ತದೆ ಮತ್ತು ಹಾರ್ಟ್ ಅಟ್ಯಾಕ್ ಗೆ ಕಾರಣವಾಗುತ್ತದೆ. ಶ್ವಾಸಕೋಶದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯ ಚಿಹ್ನೆಗಳೆಂದರೆ ಉಸಿರಾಟದಲ್ಲಿ ಸಮಸ್ಯೆ, ಎದೆ ನೋವು, ಹಾರ್ಟ್ ರೇಟ್ ನಲ್ಲಿ ಹೆಚ್ಚಳವಾಗುವುದು, ವಿಷಪೂರಿತವಾಗಿ ತಪ್ಪಾಗಿ ನಿರ್ಣಯ ಮಾಡುವ ತಲೆಸುತ್ತುವಿಕೆ ಇತ್ಯಾದಿಗಳು.
• 44 ಶೇಕಡಾ ಜನರು ತಾವು ಸಕ್ರಿಯವಾಗಿರುವುದರಿಂದಾಗಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಬಹುದು ಎಂಬ ವಿಚಾರವನ್ನೇ ತಿಳಿದಿಲ್ಲ..

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

These Interesting Facts About Blood Clots Will Shock You

Blood clots fall apart on their own and they can block oxygen flow and lead to conditions like heart attacks and strokes. In this article, we will be bringing you interesting facts about blood clots. Blood clots are healthy in a way that they stop the blood flow from a cut or an injury. Blood clots can also form when they are not actually needed, which is a serious problem.
X
Desktop Bottom Promotion