ಸೆಕ್ಸ್ ಬಳಿಕ ಮಹಿಳೆಯರು, ಈ ಕೆಲಸಗಳನ್ನು ಮಾಡಲೇಬೇಕು!

Posted By: Hemanth
Subscribe to Boldsky

ಒಂದು ಆರೋಗ್ಯಕರ ಸಂಬಂಧ ಗಂಡ-ಹೆಂಡತಿಯ ನಡುವೆ ಇರಬೇಕು ಎಂದರೆ, ಅದಕ್ಕೆ ಮೂಲ ಬುನಾದಿ ಪ್ರೀತಿ ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದು. ಲೈಂಗಿಕ ಕ್ರಿಯೆಯು ಕೇವಲ ಮನಃತೃಪ್ತಿಯನ್ನು ಮಾತ್ರ ನೀಡುವುದಿಲ್ಲ. ಇದು ಗಂಡ ಹೆಂಡತಿಯರ ನಡುವೆ ಉಂಟಾಗುವ ಹಲವಾರು ಭಿನ್ನಾಭಿಪ್ರಾಯಗಳನ್ನು ಮರೆಯುವುದಕ್ಕೆ ಸಹ ವೇದಿಕೆಯಾತ್ತದೆ. ಈ ಕ್ರಿಯೆಗೆ ಎಲ್ಲವನ್ನೂ ಮರೆತು ಏಕಾಗ್ರತೆಯಿಂದ ಒಬ್ಬರಿಗೊಬ್ಬರು ಸಹಕರಿಸಬೇಕಾದ ಅಗತ್ಯವಿರುತ್ತದೆ. ಋತುಸ್ರಾವ ಅವಧಿಯಲ್ಲಿ ಮಿಲನ ಎಷ್ಟು ಸುರಕ್ಷಿತ?

ಹಾಗಾಗಿ ಗಂಡ ಹೆಂಡತಿಯ ನಡುವೆ ಹೊಂದಾಣಿಕೆ ಬರುತ್ತದೆ ಎಂದು ಸಹ ಹೇಳಬಹುದು. ಆದರೆ ಆರೋಗ್ಯಕರ ಲೈಂಗಿಕ ಕ್ರಿಯೆ ನಡೆಯಬೇಕಾದರೆ, ದಂಪತಿಗಳಿಬ್ಬರು ತಮ್ಮ ಜನನಾಂಗ ಮತ್ತು ದೇಹದ ಸ್ವಚ್ಛತೆ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದುದು ಅತ್ಯಗತ್ಯ. ಏಕೆಂದರೆ ನಿಮ್ಮ ಸಂಗಾತಿಯ ಜನನಾಂಗದ ಆರೋಗ್ಯವು ನಿಮ್ಮ ಮೇಲೆ ಸಹ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬೇಡಿ.

ಇದೇ ಕಾರಣಕ್ಕೆ, ಮಹಿಳೆಯರು 'ಸೆಕ್ಸ್' ಬೇಡ ಎನ್ನುತ್ತಾರೆ! ಇಲ್ಲಿದೆ ಏಳು ಕಾರಣಗಳು

ಕೆಲವೊಂದು ಸಮಯದಲ್ಲಿ ನಿಮ್ಮಿಂದ ಸಹ ನಿಮ್ಮ ಸಂಗಾತಿಗೆ ಕೆಲವೊಂದು ಸೋಂಕುಗಳು ತಲುಪಬಹುದು. ಹಾಗಾಗಿ ಇಬ್ಬರೂ ತಮ್ಮ ವೈಯಕ್ತಿಕ ಶುಚಿತ್ವವನ್ನು ಕಾಪಾಡುವುದು ಒಳ್ಳೆಯದು. ಹೀಗಾಗಿ ಲೈಂಗಿಕ ಕ್ರಿಯೆ ನಡೆದ ಮೇಲೆ ನಿಮ್ಮ ಜನನಾಂಗಗಳನ್ನು ತೊಳೆದುಕೊಳ್ಳುವುದು ತುಂಬಾ ಮುಖ್ಯ ಎಂಬುದನ್ನು ಮರೆಯಬೇಡಿ. ಬಹುತೇಕ ಮಹಿಳೆಯರಿಗೆ ಮೂತ್ರನಾಳದ ಸೋಂಕು ತಗುಲುತ್ತಾ ಇರುತ್ತದೆ. ಇದಕ್ಕೆ ಸಾಮಾನ್ಯವಾದ ಕಾರಣ ಎಂದರೆ, ಸಂಗಾತಿಯ ಜೊತೆಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಳ್ಳುವುದಾಗಿರುತ್ತದೆ. ಮಹಿಳೆಯರು ತಮ್ಮ ಸಂಗಾತಿಯಿಂದ ಈ ಸೋಂಕನ್ನು ಪಡೆದಿರುತ್ತಾರೆ.

ಪುರುಷರ ವೀರ್ಯವು ಮೂತ್ರದ ಜೊತೆಗೆ ಬೆರೆತು ಮಹಿಳೆಯರ ಜನನಾಂಗವನ್ನು ಪ್ರವೇಶಿಸುತ್ತದೆ. ಈ ಮೂತ್ರವು ತನ್ನೊಳಗೆ ಹಲವಾರು ಸೋಂಕುಗಳನ್ನು ಸಾಗಿಸುತ್ತದೆ. ಬನ್ನಿ ಅದಕ್ಕಾಗಿ ನಾವು ನಿಮಗೆ ಇಂದು ಮಹಿಳೆಯರು ಸಂಭೋಗವಾದ ನಂತರ ಏಕೆ ಮೂತ್ರ ವಿಸರ್ಜನೆ ಮಾಡಬೇಕು ಎಂದು ತಿಳಿಸುತ್ತೇವೆ.....

ಸೆಕ್ಸ್ ಬಳಿಕ ಶೌಚಾಲಯಕ್ಕೆ ಹೋಗುವುದು

ಸೆಕ್ಸ್ ಬಳಿಕ ಶೌಚಾಲಯಕ್ಕೆ ಹೋಗುವುದು

ಲೈಂಗಿಕ ಕ್ರಿಯೆ ವೇಳೆ ನಿಮ್ಮ ಜನನೇಂದ್ರಿಯದೊಳಗೆ ಬ್ಯಾಕ್ಟೀರಿಯಾ ಒಳಸೇರುವಂತಹ ಸಾಧ್ಯತೆಯು ಹೆಚ್ಚಾಗಿರುವುದು. ಇದರಿಂದ ಸೋಂಕು ಬರುವ ಸಾಧ್ಯತೆ ಅಧಿಕ. ಬ್ಯಾಕ್ಟೀರಿಯಾಗಳು ಬೆಚ್ಚಗಿನ ಸ್ಥಳದಲ್ಲಿ ಬೇಗನೆ ತಮ್ಮ ಸಂತಾನ ಬೆಳೆಸುವುದು. ಇದರಿಂದ ನೀವು ಲೈಂಗಿಕ ಕ್ರಿಯೆ ಬಳಿಕ ತಕ್ಷಣ ಹೋಗಿ ಮೂತ್ರ ವಿಸರ್ಜನೆ ಮಾಡಿದರೆ ಒಳ್ಳೆಯದು.

ಬಿಸಿ ನೀರಿನ ಸ್ನಾನ ಕಡೆಗಣಿಸಿ

ಬಿಸಿ ನೀರಿನ ಸ್ನಾನ ಕಡೆಗಣಿಸಿ

ಲೈಂಗಿಕ ಕ್ರಿಯೆ ಬಳಿಕ ಯೋನಿಯು ಸ್ವಲ್ಪ ಹೆಚ್ಚಾಗಿ ತೆರೆದುಕೊಳ್ಳುವುದು. ಇದರಿಂದ ಲೈಂಗಿಕ ಕ್ರಿಯೆ ಬಳಿಕ ಬಿಸಿ ನೀರಿನ ಸ್ನಾನ ಮಾಡಲು ಹೋದರೆ ಅದರಿಂದ ಸೋಂಕು ಹೆಚ್ಚಾಗುವುದು. ಇದನ್ನು ನೀವು ಮಾಡಲೇಬಾರದು.

ಬಿಸಿ ನೀರಿನ ಸ್ನಾನ ಕಡೆಗಣಿಸಿ

ಬಿಸಿ ನೀರಿನ ಸ್ನಾನ ಕಡೆಗಣಿಸಿ

ಲೈಂಗಿಕ ಕ್ರಿಯೆ ವೇಳೆ ನಿಮಗೆ ಹೆಚ್ಚು ವ್ಯಾಯಾಮ ಸಿಗುವುದು. ಇದರಿಂದಾಗಿ ಒಂದು ಲೋಟ ನೀರು ಕುಡಿಯಿರಿ. ಇದರಿಂದ ನಿಮ್ಮ ದೇಹಕ್ಕೆ ತೇವಾಂಶ ಸಿಗುವುದು ಮತ್ತು ಬ್ಯಾಕ್ಟೀರಿಯಾ ಉಂಟುಮಾಡುವ ಯುಟಿಐಯನ್ನು ಹೊರಹಾಕಲು ನೆರವಾಗುವುದು.

ಮೊಸರು ಸೇವಿಸಿ

ಮೊಸರು ಸೇವಿಸಿ

ಲೈಂಗಿಕ ಕ್ರಿಯೆ ಬಳಿಕ ಏನು ತಿನ್ನುತ್ತೀರಿ ಎನ್ನುವುದು ತುಂಬಾ ಮುಖ್ಯ. ಅತ್ಯುತ್ತಮವಾಗಿರುವ ಆಯ್ಕೆಯೆಂದರೆ ಮೊಸರು, ಕೊಂಬುಚ ಅಥವಾ ಕಿಮ್ಚಿ ಸೇವಿಸಿ. ಇದನ್ನು ಸೇವಿಸುವುದರಿಂದ ದೇಹಕ್ಕೆ ಒಳ್ಳೆಯ ಬ್ಯಾಕ್ಟೀರಿಯಾ ಸಿಗುವುದು ಮತ್ತು ನಿಮನ್ನು ಕಿಣ್ವದ ಸೋಂಕಿನಿಂದ ತಡೆಯುವುದು.

ಆ ಭಾಗಕ್ಕೆ ತಕ್ಷಣ ಸೋಪು ಹಾಕಬೇಡಿ

ಆ ಭಾಗಕ್ಕೆ ತಕ್ಷಣ ಸೋಪು ಹಾಕಬೇಡಿ

ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಬಳಿಕ ನೀವು ನೇರವಾಗಿ ಹೋಗಿ ಆ ಭಾಗಕ್ಕೆ ಸೋಪು ಹಾಕಬೇಡಿ. ಲೈಂಗಿಕ ಕ್ರಿಯೆ ಬಳಿಕ ಮಾತ್ರವಲ್ಲದೆ ಲೈಂಗಿಕ ಕ್ರಿಯೆಯ ಯಾವುದೇ ಹಂತದಲ್ಲೂ ಇದು ಸಲ್ಲ. ಯೋನಿಯು ತನ್ನನ್ನು ತಾನು ಸ್ವಚ್ಛಗೊಳಿಸುವ ಗುಣವಿರುವುದು ಮತ್ತು ಅದು ಅದರಷ್ಟಕ್ಕೆ ಸ್ವಚ್ಛವಾಗುವುದು. ಸೋಪ್ ನಿಮ್ಮ ಪಿಎಚ್ ಮಟ್ಟದಲ್ಲಿ ಮಧ್ಯಪ್ರವೇಶ ಮಾಡುವುದು ಮತ್ತು ಇದರಿಂದ ಕಿರಿಕಿರಿ, ಒಣಗುವುದು ಅಥವಾ ಹೆಚ್ಚು ಸೋಂಕು ಉಂಟಾಗಬಹುದು.

ಗಾಳಿಯಾಡದೆ ಇರುವ ಒಳ ಉಡುಪು ಧರಿಸಬೇಡಿ

ಗಾಳಿಯಾಡದೆ ಇರುವ ಒಳ ಉಡುಪು ಧರಿಸಬೇಡಿ

ಹೆಚ್ಚಿನ ಒಳ ಉಡುಪನ್ನು ನೈಲನ್ ಅಥವಾ ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಲಾಗುತ್ತದೆ. ಲೈಂಗಿಕ ಕ್ರಿಯೆ ಬಳಿಕ ಇದನ್ನು ಧರಿಸುವುದರಿಂದ ಕೀಟಾಣುಗಳಿಗೆ ಬೆಳೆಯಲು ಒಳ್ಳೆಯ ವಾತಾವರಣ ನಿರ್ಮಿಸಿಕೊಟ್ಟಂತೆ ಆಗಬಹುದು.

ಒರೆಸಲು ಒದ್ದೆ ಬಟ್ಟೆ ಕಡೆಗಣಿಸಿ

ಒರೆಸಲು ಒದ್ದೆ ಬಟ್ಟೆ ಕಡೆಗಣಿಸಿ

ಲೈಂಗಿಕ ಕ್ರಿಯೆ ಬಳಿಕ ರಾಸಾಯನಿಕ ಮತ್ತು ಸುಗಂಧವು ನಿಮ್ಮ ಜನನೇಂದ್ರೀಯದ ಭಾಗಕ್ಕೆ ಕಿರಿಕಿರಿ ಉಂಟು ಮಾಡಬಹುದು. ನೀರಿನ ಜತೆಗೆ ಸ್ವಲ್ಪ ವಿನೇಗರ್ ಹಾಕಿ ಬಳಸಿ. ಲೈಂಗಿಕ ಕ್ರಿಯೆ ಬಳಿಕ ನೀವು ಇದನ್ನು ಮಾಡಬಹುದು.

ಕಾಂಡೋಮ್‌ಗಳನ್ನು ಬಳಸುವುದು ಒಳ್ಳೆಯದು

ಕಾಂಡೋಮ್‌ಗಳನ್ನು ಬಳಸುವುದು ಒಳ್ಳೆಯದು

ಅದಕ್ಕಾಗಿ ಸುರಕ್ಷತೆಯ ದೃಷ್ಟಿಯಿಂದ ಕಾಂಡೋಮ್‌ಗಳನ್ನು ಬಳಸುವುದು ಒಳ್ಳೆಯದು. ಇದು ನಿಮ್ಮ ಸಂಗಾತಿಯು ಲೈಂಗಿಕವಾಗಿ ಹರಡುವ ರೋಗಗಳಿಗೆ ತುತ್ತಾಗದಂತೆ ತಡೆಯುತ್ತದೆ. ಒಂದು ವೇಳೆ ನೀವು ಕಾಂಡೋಮ್ ಅನ್ನು ಬಳಸುತ್ತಿದ್ದರೂ ವೈಯಕ್ತಿಕ ಶುಚಿತ್ವಕ್ಕೆ ಆದ್ಯತೆ ನೀಡಿ.

ಒಂದರ ಬದಲು ಎರಡು ಕಾಂಡೊಮ್‪ಗಳನ್ನು ಬಳಸಿದರೆ ಹೆಚ್ಚಿನ ಸುರಕ್ಷತೆ ಸಿಗಬಹುದೇ?

ಲೈಂಗಿಕ ಕ್ರಿಯೆ ಬಳಿಕ ಯೋನಿ ತೊಳೆಯುವುದು

ಲೈಂಗಿಕ ಕ್ರಿಯೆ ಬಳಿಕ ಯೋನಿ ತೊಳೆಯುವುದು

ಲೈಂಗಿಕ ಕ್ರಿಯೆ ಬಳಿಕ ತೆಗೆದುಕೊಳ್ಳಬೇಕಾದ ಮುಖ್ಯ ಕ್ರಮವೆಂದರೆ ಸೋಂಕಿನಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದು. ಕೇವಲ ಮೂತ್ರನಾಳದ ಸೋಂಕು ಮಾತ್ರವಲ್ಲ, ಬೇರೆ ರೀತಿಯ ಸೋಂಕು ನಿಮ್ಮ ದೇಹದೊಳಗೆ ಪ್ರವೇಶ ಮಾಡಬಹುದು. ಕಾಂಡೋಮ್ ಬಳಸಿದರೆ ಅದು ಇಬ್ಬರು ಸಂಗಾತಿಗಳನ್ನು ಕೂಡ ಲೈಂಗಿಕ ಸೋಂಕಿನಿಂದ ರಕ್ಷಿಸುವುದು. ಕಾಂಡೋಮ್ ಬಳಸದೆ ಇದ್ದರೆ ಆಗ ಸರಿಯಾದ ಸ್ವಚ್ಛತೆಯನ್ನು ಪಾಲಿಸಿ.

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ...

ಸ್ವಚ್ಛತೆಗೆ ಮೊದಲ ಆದ್ಯತೆ ನೀಡಿ...

ದಂಪತಿಗಳು ಲೈಂಗಿಕ ಕ್ರಿಯೆಗೆ ಮೊದಲು ಮತ್ತು ನಂತರ ಜನನಾಂಗಗಳನ್ನು ಸ್ವಚ್ಛಗೊಳಿಸಿಕೊಂಡು ತಮ್ಮನ್ನು ತಾವು ಸೋಂಕುಗಳಿಂದ ಕಾಪಾಡಿಕೊಳ್ಳುವುದು ಅತ್ಯಗತ್ಯ. ಮಹಿಳೆಯರು ಸಹ ಸಂಭೋಗದ ನಂತರ ಮೂತ್ರ ವಿಸರ್ಜನೆ ಮಾಡಿ, ತಮ್ಮ ಜನನಾಂಗದಲ್ಲಿರುವ ಸೋಂಕನ್ನು ಹೊರ ಹಾಕುವ ಪ್ರಯತ್ನ ಮಾಡಬೇಕು.

English summary

Reasons Why You Must Pee After Sex

Most of us never give a thought to the dos and don'ts after an intercourse or before having one. Most of the time, the reason why we get infections down there is due to the unhygienic habits that we follow. There are some important things that you need to follow after an intercourse. We have listed the must dos in this article. Here are a few of the things that you must do immediately after having an intercourse. Read to find out about these.