ಪದೇ ಪದೇ ಹಸಿವಾಗುವುದನ್ನು ತಡೆಯುವ ಆಹಾರಗಳು

Posted By: Hemanth
Subscribe to Boldsky

ಹಸಿವಾಗುವ ಕಾರಣದಿಂದಲೇ ಈ ಭೂಮಿ ಮೇಲೆ ಪ್ರತಿಯೊಬ್ಬರು ಶ್ರಮ ವಹಿಸಿ ಕೆಲಸ ಮಾಡುತ್ತಿರುವುದು. ಅದೇ ಹಸಿವೇ ಇಲ್ಲದೆ ಇರುತ್ತಾ ಇದ್ದರೆ ಎಲ್ಲರೂ ಆಲಸಿಗಳಾಗುತ್ತಾ ಇದ್ದರು. ಆದರೆ ಹಸಿವು ಎನ್ನುವುದು ದೇಹದ ಶ್ರಮದ ಮೇಲೆ ಅವಲಂಬಿತವಾಗಿರುವುದು. ಆದರೆ ಕೆಲವರಿಗೆ ಕುಳಿತುಕೊಂಡಿದ್ದರೂ ಹಸಿವಾಗುವುದು. ಅದು ಕೂಡ ಪದೇ ಪದೇ ಹಸಿವಾಗುವುದು. ಇದಕ್ಕಾಗಿ ಅವರು ಹಲವಾರು ಸಲ ಊಟ ಮಾಡಬೇಕಾಗುತ್ತದೆ ಅಥವಾ ಏನಾದರೂ ತಿನ್ನಬೇಕಾಗುತ್ತದೆ. ಇಂತಹ ಸಮಸ್ಯೆಯು ಕೆಲವರನ್ನು ಕಾಡುವುದಂತೂ ನಿಜ.

ಇದಕ್ಕೆ ಪ್ರಮುಖ ಕಾರಣವೆಂದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆಯಾವುದು, ಹಾರ್ಮೋನು ವೈಪರೀತ್ಯ, ಕೆಲವೊಂದು ಔಷಧಿಗಳ ಪರಿಣಾಮ ಅಸಿಡಿಟಿ ಇತ್ಯಾದಿಗಳು. ಆದರೆ ಇಂತಹ ಸಮಸ್ಯೆ ಇರುವವರು ಪದೇ ಪದೇ ತಿನ್ನುತ್ತಲೇ ಇದ್ದರೆ ಅದರಿಂದ ಬೊಜ್ಜು, ಅಜೀರ್ಣ, ಮಧುಮೇಹ, ಅಧಿಕ ಕೊಲೆಸ್ಟ್ರಾಲ್, ಹೃದಯದ ಸಮಸ್ಯೆ ಮತ್ತು ಕ್ಯಾನ್ಸರ್ ಕೂಡ ಬರಬಹುದು. ಇದಕ್ಕಾಗಿ ಪದೇ ಪದೇ ಹಸಿವಾಗಲು ಮೂಲ ಕಾರಣವೇನೆಂದು ಹುಡುಕಬೇಕು. ಇದನ್ನು ಹುಡುಕಿದರೆ ಅದರಿಂದ ಪರಿಹಾರ ಸಾಧ್ಯ. ಆದರೆ ಕೆಲವೊಂದು ಆಹಾರಗಳು ನಿಮ್ಮ ಹಸಿವನ್ನು ನಿವಾರಿಸಿ, ಹೆಚ್ಚು ತಿನ್ನದಂತೆ ತಡೆಯುವುದು. ಅದು ಯಾವುದೆಂದು ತಿಳಿದುಕೊಳ್ಳುವ.

ಪಾಪ್ ಕಾರ್ನ್

ಪಾಪ್ ಕಾರ್ನ್

ಸಿನೆಮಾ ವೀಕ್ಷಿಸುವಾಗ ಅಥವಾ ಸ್ನೇಹಿತರೊಂದಿಗೆ ಸುತ್ತಾಡಲು ಹೋಗುವಾಗ ಕೈಯಲ್ಲಿ ಪಾಪ್ ಕಾರ್ನ್ ಹಿಡಿದುಕೊಂಡು ತಿನ್ನುತ್ತಾ ಇರುತ್ತೀರಿ. ರುಚಿಕರ ಹಾಗೂ ಕುರುಕುರು ತಿಂಡಿಯಾಗಿರುವ ಪಾಪ್ ಕಾರ್ನ್ ನಿಮ್ಮನ್ನು ತಿನ್ನಿಸುತ್ತಾ ಇರುತ್ತದೆ. ಆದರೆ ಇದು ಹಸಿವನ್ನು ಕಡಿಮೆ ಮಾಡಿ ಹೊಟ್ಟೆ ತುಂಬುವಂತೆ ಮಾಡುವುದು ಎಂದು ನಿಮಗೆ ತಿಳಿದಿದೆಯಾ? ಹೌದು, ಇಡೀ ಧಾನ್ಯದಿಂದ ಮಾಡಲ್ಪಡುವಂತಹ ಪಾಪ್ ಕಾರ್ನ್ ದೀರ್ಘಕಾಲದ ತನಕ ಹೊಟ್ಟೆಯು ತುಂಬಿರುವಂತೆ ಮಾಡುವುದು. ಆದರೆ ಇದಕ್ಕೆ ಚೀಸ್ ಮತ್ತು ಹೆಚ್ಚು ಉಪ್ಪು ಹಾಕದಂತೆ ನೋಡಿಕೊಳ್ಳಿ.

ನೆಲಗಡಲೆ ಬೆಣ್ಣೆ

ನೆಲಗಡಲೆ ಬೆಣ್ಣೆ

ಬ್ರೆಡ್‌ಗೆ ಹಾಕಿಕೊಂಡು ತಿಂದರೆ ನೆಲಗಡಲೆ ಬೆಣ್ಣೆಯ ರುಚಿಯೇ ಬೇರೆಯಾಗಿರುವುದು. ನೆಲಗಡಲೆ ಬೆಣ್ಣೆಯಲ್ಲಿ ಪ್ರೋಟೀನ್, ಒಮೆಗಾ 3 ಕೊಬ್ಬಿನಾಮ್ಲ ಮತ್ತು ಆರೋಗ್ಯಕಾರಿ ಕಾರ್ಬ್ರೋಹೈಡ್ರೇಟ್ಸ್ ಗಳು ಇರುವ ಕಾರಣದಿಂದ ದೇಹವು ಫಿಟ್ ಆಗಿರಬೇಕೆಂದು ಬಯಸುವವರು ಇದನ್ನು ಬಳಸುವರು. ನೆಲಗಡಲೆ ಬೆಣ್ಣೆಯು ಹೊಟ್ಟೆ ತುಂಬುವಂತೆ ಮಾಡಿ ನೈಸರ್ಗಿಕವಾಗಿ ಹಸಿವು ನೀಗಿಸುವುದು. ದಿನದಲ್ಲಿ ಒಂದು ಅಥವಾ ಎರಡು ಚಮಚ ಹಾಗೆ ತಿನ್ನಬೇಕು.

ಪಿಸ್ತಾ

ಪಿಸ್ತಾ

ಬೀಜಗಳು ತುಂಬಾ ಆರೋಗ್ಯಕಾರಿ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದಿದೆ. ಇದರಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಮತ್ತು ಇದು ಆರೋಗ್ಯಕ್ಕೆ ತುಂಬಾ ಲಾಭಕಾರಿ. ಇದು ಚಯಾಪಚಯಾ ಕ್ರಿಯೆ ಹೆಚ್ಚಿಸಿ, ತೂಕ ಕಳೆದುಕೊಳ್ಳಲು ಮತ್ತು ಮೆದುಳಿನ ಕ್ರಿಯೆ ಸುಧಾರಿಸಲು ನೆರವಾಗುವುದು. ಪಿಸ್ತಾವು ತುಂಬಾ ರುಚಿಕರವಾಗಿರುವುದು ಮಾತ್ರವಲ್ಲದೆ, ಇದು ನೈಸರ್ಗಿಕವಾಗಿ ಹಸಿವು ನಿವಾರಣೆ ಮಾಡುವುದು. ಇದನ್ನು ತಿಂದಾಗ ಅದು ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸುವುದು.

ಅವಕಾಡೋ(ಬೆಣ್ಣೆಹಣ್ಣು)

ಅವಕಾಡೋ(ಬೆಣ್ಣೆಹಣ್ಣು)

ಅವಕಾಡೋದಲ್ಲಿ ಹಲವಾರು ರೀತಿಯ ಅರೋಗ್ಯ ಗುಣಗಳು ಇದೆ ಎಂದು ಇಂದಿನ ದಿನಗಳಲ್ಲಿ ನಾವು ತಿಳಿದುಕೊಳ್ಳುತ್ತಾ ಇದ್ದೇವೆ. ಅವಕಾಡೋದಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಇದ್ದು, ಇದು ಜೀರ್ಣಕ್ರಿಯೆಯ ಅಮ್ಲ ಉತ್ಪತ್ತಿ ಕಡಿಮೆ ಮಾಡುವುದು. ಇದರಿಂದ ಪದೇ ಪದೇ ಹಸಿವಾಗುವುದು ತಪ್ಪುವುದು.

ಆಲಿವ್ ತೈಲ

ಆಲಿವ್ ತೈಲ

ಆಲಿವ್ ತೈಲ ಸೇವನೆ ಮಾಡುವುದರಿಂದ ಬೊಜ್ಜು ದೇಹವನ್ನು ಕರಗಿಸಬಹುದು ಎಂದು ಹೆಚ್ಚಿನವರು ಭಾವಿಸಿದ್ದಾರೆ. ಇದು ತೂಕ ಕಳೆದುಕೊಳ್ಳಲು ನೆರವಾಗುವುದು ಮಾತ್ರವಲ್ಲದೆ, ಪದೇ ಪದೇ ಹಸಿವಾಗುವುದನ್ನು ತಡೆಯುವುದು. ಆಲಿವ್ ಎಣ್ಣೆಯಲ್ಲಿ ಇರುವಂತಹ ವಿಟಮಿನ್ ಇ ಹೊಟ್ಟೆಯ ಆಮ್ಲವನ್ನು ತಟಸ್ಥಗೊಳಿಸಿ ಹಸಿವಾಗುವುದನ್ನು ತಡೆಯುವುದು. ಇದು ಚಯಾಪಚಯ ಕ್ರಿಯೆ ಹೆಚ್ಚಿಸುವ ಕಾರಣ ತೂಕ ಹೆಚ್ಚಾಗುವುದು.

ಅಗಸೆ ಬೀಜ

ಅಗಸೆ ಬೀಜ

ಅಗಸೆ ಬೀಜದಲ್ಲಿ ಪ್ರೋಟೀನ್ ಮತ್ತು ಆ್ಯಂಟಿಆಕ್ಸಿಡೆಂಟ್ ಸಮೃದ್ಧವಾಗಿದೆ. ಅಗಸೆ ಬೀಜವನ್ನು ಸಾಮಾನ್ಯವಾಗಿ ಸಲಾಡ್ ಮತ್ತು ಇತರ ಆಹಾರಗಳಿಗೆ ಬೆರೆಸಿಕೊಂಡು ಸೇವಿಸಲಾಗುವುದು. ನಿಯಮಿತವಾಗಿ ಅಗಸೆ ಬೀಜ ಸೇವನೆ ಮಾಡಿದರೆ ಇದು ಪದೇ ಪದೇ ಹಸಿವಾಗುವುದನ್ನು ತಡೆಯುವುದು ಮಾತ್ರವಲ್ಲದೆ ಪ್ರೋಟೀನ್ ಮತ್ತು ಆ್ಯಂಟಿಆಕ್ಸಿಡೆಂಟ್ ಹಸಿವನ್ನು ನಿವಾರಿಸುವುದು.

ಮೊಸರು

ಮೊಸರು

ಮೊಸರನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದು ಹೊಟ್ಟೆಯ ಆರೋಗ್ಯವನ್ನು ಸುಧಾರಿಸುವುದು ಮಾತ್ರವಲ್ಲದೆ, ಒಳ್ಳೆಯ ಬ್ಯಾಕ್ಟೀರಿಯಾ ಹೆಚ್ಚಿಸುವುದು. ಇದು ಯೋನಿಯ ಆರೋಗ್ಯವನ್ನು ಕೂಡ ಸುಧಾರಿಸುವುದು. ಇದು ಹೊಟ್ಟೆಯಲ್ಲಿರುವ ಆಮ್ಲವನ್ನು ತಟಸ್ಥಗೊಳಿಸುವುದು. ಇದರಿಂದ ಪದೇ ಪದೇ ಹಸಿವಾಗುವುದು ತಪ್ಪುವುದು.

ಓಟ್ ಮೀಲ್ಸ್

ಓಟ್ ಮೀಲ್ಸ್

ಓಟ್ ಮೀಲ್ಸ್ ಇಂದಿನ ದಿನಗಳಲ್ಲಿ ತುಂಬಾ ಜನಪ್ರಿಯ ಉಪಾಹಾರವಾಗುತ್ತಿದೆ. ಇದರಿಂದ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ವ್ಯಾಯಮಕ್ಕೆ ಮೊದಲು ಇದರ ಸೇವನೆ ಮಾಡಿದರೆ ಅದರಲ್ಲಿರುವ ಆರೋಗ್ಯಕಾರಿ ಕಾರ್ಬ್ರೋಹೈಡ್ರೇಟ್ಸ್ ಶಕ್ತಿ ನೀಡುವುದು. ಇದು ದೀರ್ಘಕಾಲದ ತನಕ ಹೊಟ್ಟೆ ತುಂಬಿರುವಂತೆ ಮಾಡುವುದು. ಇದರಿಂದ ಪದೇ ಪದೇ ಹಸಿವಾಗುವುದು ಮತ್ತು ತಿನ್ನುವುದು ತಪ್ಪುವುದು.

ಮೆಣಸು

ಮೆಣಸು

ಇದನ್ನು ಓದಿ ನಿಮಗೆ ಸ್ವಲ್ಪ ಅಚ್ಚರಿಯಾಗಬಹುದು. ಆದರೆ ಹಸಿ ಮೆಣಸು ಅಥವಾ ಕೆಂಪು ಮೆಣಸನ್ನು ಆಹಾರದಲ್ಲಿ ಹೆಚ್ಚಾಗಿ ಬಳಸುವುದರಿಂದ ಪದೇ ಪದೇ ಹಸಿವಾಗುವುದನ್ನು ತಪ್ಪಿಸಬಹುದು ಎಂದು ಅಧ್ಯಯನಗಳು ಕೂಡ ಹೇಳಿವೆ. ಖಾರ ಪದಾರ್ಥಗಳು ದೀರ್ಘಕಾಲದ ತನಕ ಹೊಟ್ಟೆಯ ಆಮ್ಲವು ತಟಸ್ಥವಾಗಿರುವಂತೆ ಮಾಡುವುದು. ಇದರಿಂದ ಚಯಾಪಚಯ ಕ್ರಿಯೆ ಹೆಚ್ಚಿ ತೂಕ ಕಳೆದುಕೊಳ್ಳಲು ನೆರವಾಗುವುದು.

Read more about: health wellness
English summary

Here are 9 surprising foods which can reduce hunger naturally

You are in the middle of a road trip with your friends and although you had just stopped for lunch half an hour ago, you start to feel extremely hungry again and feel like asking your friends for another stop! Well, this can be rather frustrating and if some of you can relate to this situation, it could mean that you have been experiencing untimely hunger pangs often. Feeling hungry all the time, even though you have had enough meals and snacks, can be caused due to a number of reasons. Here are a few foods which can supress hunger pangs and prevent over-eating.