ಆರರಿಂದ ಏಳು ಸಲ ಹಸ್ತಮೈಥುನ ಮಾಡುವ ಪುರುಷರಿಗೆ ಇಂತಹ ಸಮಸ್ಯೆ ಕಾಡಲಿದೆ!

By

ದೇಹವು ಬಯಸುವಂತಹ ಕಾಮವನ್ನು ತಣಿಸಲು ಪುರುಷರು ಮಾಡುವಂತಹ ಕ್ರಿಯೆಯೇ ಹಸ್ತುಮೈಥುನ. ಅತಿಯಾದ ಒತ್ತಡದ ಸಹಿತ ಕೆಲವೊಂದು ಸಮಸ್ಯೆಗಳಿಂದ ಹಸ್ತಮೈಥುನವು ಪಾರು ಮಾಡಬಹುದು. ಆದರೆ ಇದು ಅತಿಯಾದರೆ ಅದರಿಂದ ಕೆಲವು ದುಷ್ಪರಿಣಾಮಗಳು ಕೂಡ ಇವೆ. ಇದು ಮಾನವ ದೇಹದ ಸಾಮಾನ್ಯ ಕಾರ್ಯಗಳ ಮೇಲೆ ಪರಿಣಾಮ ಬೀರುವುದು. ಈ ಲೇಖನದಲ್ಲಿ ಹಸ್ತಮೈಥುನದಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಚರ್ಚಿಸಲಿದ್ದೇವೆ.

ಯಾವ ಮಟ್ಟದ ಹಸ್ತಮೈಥುನವು ಅಪಾಯಕಾರಿ ಎನ್ನುವ ಬಗ್ಗೆಯೂ ಗೊಂದಲವಿದೆ. ಎಷ್ಟು ಮಟ್ಟದಲ್ಲಿ ಹಸ್ತಮೈಥುನ ಅಥವಾ ದಿನದಲ್ಲಿ ಎಷ್ಟು ಸಲ ಹಸ್ತಮೈಥುನ ಎನ್ನುವುದಕ್ಕೆ ವೈದ್ಯಕೀಯ ವಿಜ್ಞಾನಿಗಳಲ್ಲಿ ಸ್ಪಷ್ಟವಾಗಿರುವಂತಹ ಉತ್ತರವಿಲ್ಲ. ಆದರೆ ವಾರದಲ್ಲಿ ಮೂರರಿಂದ ನಾಲ್ಕು ಸಲಕ್ಕಿಂತ ಹೆಚ್ಚು ಹಸ್ತಮೈಥುನ ಮಾಡಬಾರದು ಎಂದು ಹೇಳಲಾಗುತ್ತದೆ.

ಅತಿಯಾಗಿ ಹಸ್ತಮೈಥುನ ಮಾಡಿಕೊಂಡರೆ ಅದರಿಂದ ಹಲವಾರು ರೀತಿಯ ಸಮಸ್ಯೆಗಳೂ ಕಾಣಿಸಬಹುದು. ಅತಿಯಾಗಿ ಹಸ್ತಮೈಥುನ ಮಾಡಿಕೊಂಡರೆ ದೇಹದಲ್ಲಿ ಹಾರ್ಮೋನು ಬದಲಾವಣೆಗಳು ಆಗುವುದು. ಹಸ್ತಮೈಥುನವು ಯಾವ ಮಟ್ಟದಲ್ಲಿ ಇದೆ ಎನ್ನುವುದರ ಮೇಲೆ ಹಾರ್ಮೋನುಗಳ ಬದಲಾವಣೆಯಾಗುವುದು. ಅತಿಯಾಗಿ ಹಸ್ತಮೈಥುನ ಮಾಡಿಕೊಂಡರೆ ಅದರಿಂದ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳು ಕಾಣಿಸಿಕೊಳ್ಳುವುದು.

ಹಸ್ತಮೈಥುನ ಎಂದರೇನು? ದೇಹದ ಕಾಮದಾಹವನ್ನು ಸ್ವಯಂ ಆಗಿ ತಣಿಸಿಕೊಳ್ಳುವುದು. ಇದರಿಂದ ಕಾಮ ಪರಾಕಾಷ್ಠೆ ತಲುಪುವುದು. ಪುರುಷರು ಹಾಗೂ ಮಹಿಳೆಯರಲ್ಲಿ ಹಸ್ತಮೈಥುನವು ಸಾಮಾನ್ಯವಾಗಿದೆ. ತಜ್ಞರು ಮತ್ತು ಸಂಶೋಧಕರ ಪ್ರಕಾರ ಹಸ್ತಮೈಥುನವು ಸಂಪೂರ್ಣವಾಗಿ ಎಲ್ಲಾ ಮನುಷ್ಯರಿಗೆ ಸಾಮಾನ್ಯ ಪ್ರಕ್ರಿಯೆಯಾಗಿದೆ ಮತ್ತು ಇದೊಂದು ಆರೋಗ್ಯಕರ ಲೈಂಗಿಕ ನಡವಳಿಕೆ ಎಮದು ಪರಿಗಣಿಸಲಾಗಿದೆ. ಹಸ್ತುಮೈಥುನದಿಂದ ಪುರುಷರಿಗೆ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ. ಇದನ್ನು ನೀವು ಓದುತ್ತಾ ಸಾಗಿ...

ಹಸ್ತಮೈಥುನದಿಂದ ಪುರುಷರಿಗೆ ಆಗುವ ದುಷ್ಟಪರಿಣಾಮಗಳು

ಶಕ್ತಿಯ ಘಟಕ

ಶಕ್ತಿಯ ಘಟಕ

ಇದು ಹಸ್ತಮೈಥುನದ ದುಷ್ಟಪರಿಣಾಮವೆಂದು ಪರಿಗಣಿಸಲು ಆಗಲ್ಲ. ಆದರೆ ಅದರ ಅಸ್ಪಷ್ಟತೆಯಿಂದ ಒಂದು ಪ್ರಮುಖ ಪರಿಣಾಮವೆಂದು ವರ್ಗೀಕರಿಸಬಹುದು. ಹಸ್ತಮೈಥುನದಿಂದಾಗಿ ನಿಮ್ಮ ದೇಹದ ಶಕ್ತಿಯು ವ್ಯಯವಾಗುವುದು. ಅತಿಯಾಗಿ ಹಸ್ತಮೈಥುನ ಮಾಡಿಕೊಂಡರೆ ಪುರುಷರಲ್ಲಿ ನಿಶ್ಯಕ್ತಿ ಬರುವುದು.

 ಕಾಮಾಸಕ್ತಿ ಕುಗ್ಗುವುದು

ಕಾಮಾಸಕ್ತಿ ಕುಗ್ಗುವುದು

ಹಸ್ತಮೈಥುನವನ್ನು ಅತಿಯಾಗಿ ಮಾಡುವಂತಹ ಪುರುಷರು ನಿಧಾನವಾಗಿ ಲೈಂಗಿಕತೆಯಲ್ಲಿ ಆಸಕ್ತಿ ಕಳೆದುಕೊಳ್ಳುವುದನ್ನು ಮನವರಿಕೆ ಮಾಡಿಕೊಳ್ಳಬಹುದು. ಹಸ್ತಮೈಥುನವು ದೇಹದಲ್ಲಿ ಟೆಸ್ಟೊಸ್ಟೆರಾನ್ ಮಟ್ಟದ ಮೇಲೆ ಪರಿಣಾಮ ಬೀರುವುದು.

ವಯಸ್ಸಾಗುವುದು!

ವಯಸ್ಸಾಗುವುದು!

ವಾರದಲ್ಲಿ ಆರರಿಂದ ಏಳು ಸಲ ಹಸ್ತಮೈಥುನ ಮಾಡುವ ಪುರುಷರಿಗೆ ಬೇಗನೆ ವಯಸ್ಸಾಗುವುದು ಎಂದು ಅಧ್ಯಯನಗಳು ಹೇಳೀವೆ. ಟೆಸ್ಟೊಸ್ಟೆರಾನ್ ಮಟ್ಟವು ಕುಸಿಯುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

ಲೈಂಗಿಕ ಸೂಕ್ಷ್ಮತೆ ಕುಗ್ಗುವುದು

ಲೈಂಗಿಕ ಸೂಕ್ಷ್ಮತೆ ಕುಗ್ಗುವುದು

ಅತಿಯಾಗಿ ಹಸ್ತುಮೈಥುನ ಮಾಡಿಕೊಳ್ಳುವಂತಹ ಪುರುಷರಲ್ಲಿ ಲೈಂಗಿಕ ಚಟುವಟಿಕೆ ವೇಳೆ ಲೈಂಗಿಕ ಸೂಕ್ಷ್ಮತೆಯು ಕುಗ್ಗುವುದು. ಇದು ಸಂಗಾತಿ ಮೇಲೆ ಪರಿಣಾಮ ಬೀರಬಹುದು.

 ನೆನಪಿನ ಶಕ್ತಿ ಕುಂದುವುದು

ನೆನಪಿನ ಶಕ್ತಿ ಕುಂದುವುದು

ಅತಿಯಾದ ಹಸ್ತಮೈಥುನದಿಂದ ಮೆದುಳಿನಲ್ಲಿ ಅತಿಯಾದ ಡೊಪಮೈನ್ ಬಿಡುಗಡೆಯಾಗುವುದು. ಇದರಿಂದ ನೆನಪಿನ ಶಕ್ತಿ ಕುಂದುವುರು.

ಕೂದಲು ಉದುರುವುದು

ಕೂದಲು ಉದುರುವುದು

ಅತಿಯಾಗಿ ಹಸ್ತಮೈಥುನ ಮಾಡಿಕೊಳ್ಳುವ ಕಾರಣದಿಂದ ಪುರುಷರಲ್ಲಿ ಕೂದಲು ಉದುರುವ ಸಮಸ್ಯೆ ಬರುವುದು. ವಾರಕ್ಕೆ 6-7 ಸಲ ಹಸ್ತಮೈಥುನ ಮಾಡಿಕೊಂಡರೆ ಕೂದಲು ಉದುರುವಿಕೆ ಆರಂಭವಾಗುವುದು. ಇದರಿಂದ ನೀವು ಅಚ್ಚರಿಪಡಬೇಕಿಲ್ಲ.

ನಪುಂಸಕತ್ವ ಬರಬಹುದು

ನಪುಂಸಕತ್ವ ಬರಬಹುದು

ನಮ್ಮ ದೇಹದ ಎಲ್ಲಾ ಕ್ರಿಯೆಗಳಿಗೂ ಒಂದು ಸಮಯ ಹಾಗೂ ಸಂದರ್ಭ ಇದ್ದೇ ಇರುತ್ತದೆ. ಇದನ್ನು ಮೀರಿ ನಡೆಸುವ ಯಾವುದೇ ಕಾರ್ಯ ಅಪಾಯಕಾರಿಯಾಗಿದೆ. ಉದಾಹರಣೆಗೆ ಬಿಟ್ಟೂ ಬಿಡದೇ ಸತತವಾಗಿ ನೀರು ಕುಡಿಯುತ್ತಲೇ ಇದ್ದರೆ ಏನಾಗುತ್ತದೆ? ಹೊಟ್ಟೆಯ ಸಾಮರ್ಥ್ಯಕ್ಕೂ ಮೀರಿ ನೀರು ಸಂಗ್ರಹಗೊಂಡರೆ ಇದು ಇತರ ಅಂಗಗಳಿಗೆ ಒತ್ತಿ ತೊಂದರೆ ಎದುರಾಬಹುದಲ್ಲವೇ? ಹಾಗೇ ಈ ಕ್ರಿಯೆ ಸಹಾ. ಈ ಕ್ರಿಯೆ ಅತಿಯಾದರೆ ಇದಕ್ಕನುಗುಣವಾಗಿ ಲೈಂಗಿಕ ರಸದೂತಗಳನ್ನೂ ಅನಿವಾರ್ಯವಾಗಿ ದೇಹ ಉತ್ಪಾದಿಸಬೇಕಾಗುತ್ತದೆ ಅಥವಾ ನರಗಳ ಸಂವಹಕಗಳನ್ನೂ (neurotransmitters) ಹೆಚ್ಚಿಸಬೇಕಾಗುತ್ತದೆ. ಇದರ ಪರಿಣಾಮ ಪ್ರತಿ ಪುರುಷನಲ್ಲಿಯೂ ಬೇರೆ ಬೇರೆ ರೀತಿಯಲ್ಲಾಗುತ್ತದೆ. ಕೆಲವರಿಗೆ ಸುಸ್ತು, ಕಣ್ಣು ಕತ್ತಲಾಗುವುದು, ಕೂದಲು ಉದುರುವುದು, ವೃಷಣಗಳಲ್ಲಿ ಅಪಾರ ನೋವು, ಸೊಂಟ ಬಗ್ಗಿಸಲೂ ಆಗದಂತಹ ನೋವು ಮೊದಲಾದವು ಎದುರಾಗುತ್ತವೆ. ಮಾನಸಿಕವಾಗಿಯೂ ವ್ಯಕ್ತಿ ಕುಗ್ಗಬಹುದು. ಹಾಗಾಗಿ ಇವುಗಳಲ್ಲಿ ಯಾವುದೊಂದು ಲಕ್ಷಣವೂ ಕಂಡುಬಂದರೆ ತಕ್ಷಣ ಹಸ್ತಮೈಥುನದ ಆವರ್ತನವನ್ನು ಹೆಚ್ಚಿಸಬೇಕು. ಅಗತ್ಯಬಿದ್ದರೆ ವೈದ್ಯರನ್ನು ಕಾಣುವುದೇ ಮೇಲು.

ನಿಮಿರುವಿಕೆ ಸಮಸ್ಯೆ ಕಾಡಬಹುದು

ನಿಮಿರುವಿಕೆ ಸಮಸ್ಯೆ ಕಾಡಬಹುದು

ಪುರುಷರಲ್ಲಿ ಸ್ವಮೈಥುನದ ಪ್ರಮಾಣ ಹೆಚ್ಚಾದರೆ ಎದುರಾಗುವ ಅಡ್ಡ ಪರಿಣಾಮಗಳಲ್ಲಿ ಇದು ಅತ್ಯಂತ ಘೋರವಾಗಿದೆ. ಮೊದಲ ನಿಮಿರುವಿಕೆ ಯಲ್ಲಿ ಪುರುಷರಿಗೆ ಅತಿ ಹೆಚ್ಚಿನ ದೃಢತೆ ಸಿಗುತ್ತದೆ. ತದನಂತದರ ನಿಮಿರುವಿಕೆಯಲ್ಲಿ ಹಿಂದಿನಷ್ಟು ದೃಢತೆ ಇರುವುದಿಲ್ಲ ಹಾಗೂ ಕ್ರಮೇಣ ಇದು ಇನ್ನಷ್ಟು ಕಡಿಮೆಯಾಗುತ್ತಾ ಸೌಮ್ಯವಾದ ಸ್ಪಂಜಿನಂತಾಗುತ್ತದೆ. ಆದರೆ ಎಷ್ಟು ಸ್ಖಲನಗಳ ಬಳಿಕ ಹೀಗಾಗುತ್ತದೆ ಎಂಬುದಕ್ಕೆ ಯಾವುದೇ ಖಚಿತ ವಿವರಣೆಯಿಲ್ಲ. ಪ್ರತಿ ಪುರುಷರಿಗೂ ಇದು ಭಿನ್ನವಾಗಿರುತ್ತದೆ. ಅಲ್ಲದೇ ಸತತ ಘರ್ಷಣೆ ಯಿಂದ ಸೂಕ್ಷ್ಮಗೀರುಗಳು, ಚರ್ಮ ಸುಲಿಯುವುದು ಹಾಗೂ ಬಾವು ಕಾಣಿಸಿಕೊಳ್ಳಬಹುದು.

ಶೀಘ್ರಸ್ಖಲನ

ಶೀಘ್ರಸ್ಖಲನ

ಅತಿಹೆಚ್ಚೇ ಹಸ್ತಮೈಥುನ ಮಾಡಿಕೊಳ್ಳುವ ಪುರುಷರು ತಮ್ಮ ಸ್ಖಲನವನ್ನು ತಡೆಹಿಡಿದುಕೊಳ್ಳಲು ತೀರಾ ಅಸಮರ್ಥರಾಗಿರುತ್ತಾರೆ. ಅತಿಹೆಚ್ಚೇ ಜನನಾಂಗದ ನರವನ್ನು ತೀಡುವುದು ಇದಕ್ಕೆ ಪ್ರಮುಖ ಕಾರಣವಾಗಿದೆ.

 ಹಸ್ತಮೈಥುನ ಯಾರು ಮಾಡುವರು?

ಹಸ್ತಮೈಥುನ ಯಾರು ಮಾಡುವರು?

ಅಧ್ಯಯನಗಳ ಪ್ರಕಾರ ಸಾಮಾನ್ಯ ಲೈಂಗಿಕ ಬೆಳವಣಿಗೆಗಾಗಿ ಪುರುಷರು ಹಸ್ತಮೈಥುನ ಮಾಡಿಕೊಳ್ಳುವರು. ಕಾಮದಾಹ ಕಡಿಮೆ ಮಾಡಲು ಇದು ಆರೋಗ್ಯಕರ ಎಂದು ಪರಿಗಣಿಸಲಾಗಿದೆ. ಲೈಂಗಿಕವಾಗಿ ಕ್ರಿಯಾತ್ಮಕವಾಗಿ ಅಥವಾ ಸಂಬಂಧದಿಂದ ದೂರ ಉಳಿಯಲು ಬಯಸುವವರು ಇದನ್ನು ಮಾಡಬಹುದು. ಇದು ಸುರಕ್ಷಿತ ಮತ್ತು ಯಾವುದೇ ಲೈಂಗಿಕ ರೋಗಗಳು ಬರುವ ಸಾಧ್ಯತೆಯಿಲ್ಲವೆಂದು ಪುರುಷರು ಭಾವಿಸುತ್ತಾರೆ.

ನಿದ್ದೆಯ ಮಂಪರು ಸದಾ ಇರುವಂತೆ ಮಾಡುತ್ತದೆ

ನಿದ್ದೆಯ ಮಂಪರು ಸದಾ ಇರುವಂತೆ ಮಾಡುತ್ತದೆ

ನೀವು ಅಧಿಕ ಪ್ರಮಾಣದಲ್ಲಿ ಹಸ್ತ ಮೈಥುನದಲ್ಲಿ ತೊಡಗಿಸಿಕೊಂಡರೆ, ಅದು ನಿಮ್ಮನ್ನು ನಿದ್ದೆಯ ಮಂಪರಿನಲ್ಲಿರುವಂತೆ ಮಾಡುತ್ತದೆ. ಏಕೆಂದರೆ ಹಸ್ತ ಮೈಥುನವು ಅಧಿಕವಾದಷ್ಟು ಮೆದುಳಿನಲ್ಲಿ ಅಧಿಕ ಪ್ರಮಾಣದ ಡೋಪಮೈನ್ ಬಿಡುಗಡೆಯಾಗುತ್ತದೆ. ಇದರಿಂದ ಮಂಪರು ಆವರಿಸುತ್ತದೆ.

ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ

ಲೈಂಗಿಕ ಜೀವನದ ಮೇಲೆ ಪರಿಣಾಮ ಬೀರುತ್ತದೆ

ಈ ಅಂಶವು ಹಿಂದೆ ಹೇಳಲಾದ ಅಂಶಕ್ಕೆ ಪೂರಕವಾಗಿ ಬರುತ್ತದೆ. ಅಂದರೆ ಶೀಘ್ರ ವೀರ್ಯ ಸ್ಖಲನ ಸಮಸ್ಯೆಯಿರುವವರು ತಮ್ಮ ಸಂಗಾತಿಯೊಂದಿಗೆ ಉತ್ತಮವಾದ ಲೈಂಗಿಕ ಜೀವನವನ್ನು ನಡೆಸಲು ತೊಂದರೆಯಾಗುತ್ತದೆ. ಮಿಲನ ಸುಖವನ್ನು ಮಹತ್ತರ ಹಂತಕ್ಕೆ ಕೊಂಡೊಯ್ಯುವ ಘಟ್ಟವೇ ವೀರ್ಯ ಸ್ಖಲನ ಅದೇ ಬೇಗ ಆದರೆ ಇನ್ನೂ ಅದರಲ್ಲಿ ಆನಂದ ಎಲ್ಲಿ ಸಿಗುತ್ತದೆ.

English summary

Harmful Effects Of Masturbation In Men

Masturbation is essential in order to ensure normal functioning of the body. While masturbation in the case of men can tag along several benefits including respite from excessive stress, masturbating too much can pose a threat to the normal functioning of the body. Here's what we will be discussing - the harmful effects of masturbation.
X
Desktop Bottom Promotion