For Quick Alerts
ALLOW NOTIFICATIONS  
For Daily Alerts

ಇಲ್ಲಿದೆ ನೋಡಿ ಹಲಸಿನ ಹಣ್ಣಿನ 15 ವೈದ್ಯಕೀಯ ಲಾಭಗಳು

By Sushma Charhra
|

ಆರ್ಟೊಕಾರ್ಪಸ್ ಹೆಟೆರೋಫಿಲ್ಲಸ್, ಶ್ರೀಲಂಕಾ ಮತ್ತು ಬಾಂಗ್ಲಾದೇಶದ ರಾಷ್ಟ್ರೀಯ ಹಣ್ಣು. ಕೇರಳ ಮತ್ತು ತಮಿಳು ನಾಡಿನ ರಾಜ್ಯದ ಹಣ್ಣು. ಆದರೆ ನಮ್ಮಲ್ಲಿ ಇದನ್ನು ಹಲಸಿನ ಹಣ್ಣು ಅಂತ ಕರಿತೀವಿ. ದಕ್ಷಿಣ ಭಾರತದ ಉಷ್ಣ ವಲಯದ ಪ್ರದೇಶದಲ್ಲಿ ಹೆಚ್ಚಾಗಿ ಇದು ಕಂಡು ಬರುತ್ತದೆ. ಇದು ಮೊರೇಸಿಯ ಕುಟುಂಬಕ್ಕೆ ಸೇರಿದ ಆಂಜಿಯಸ್ಪರ್ಮ್ ಆಗಿದೆ. ಇದು ಅಂಜೂರದ, ಮಲ್ಬರಿ, ಬ್ರೆಡ್ಫ್ರೂಟ್, ಇತ್ಯಾದಿಗಳ ಅಂಶಗಳನ್ನು ಒಳಗೊಂಡಿದೆ.

ಇದು ಸುಮಾರು 50 ಕಿಲೋಗ್ರಾಂಗಳಷ್ಟು ತೂಕದ, 80-90 ಸೆಂಟಿಮೀಟರ್ ಉದ್ದ ಮತ್ತು 40-50 ಸೆಂಟಿಮೀಟರ್ಗಳಷ್ಟು ವ್ಯಾಸವನ್ನು ತಲುಪುವಷ್ಟು ದೊಡ್ಡದಾಗಿ ಬೆಳೆಯುವ ಮರವಾಗಿದ್ದು, ಹಣ್ಣು ಬಹಳ ರುಚಿಯಾಗಿರುತ್ತದೆ. ಹಲಸಿನಲ್ಲೇ ಹಲವು ವೆರೈಟಿಗಳಿರುತ್ತೆ.

ಈ ಮರದ ಪ್ರತಿಯೊಂದು ಭಾಗದಲ್ಲೂ ಔಷಧೀಯ ಗುಣಗಳಿವೆ-

. ಇದರ ಬೇರಿನ ಕಷಾಯವನ್ನು ಅಸ್ತಮಾ, ಚರ್ಮದ ಕಾಯಿಲೆ, ಜ್ವರ ಮತ್ತು ಅತಿಸಾರ ಕಾಯಿಲೆಗಳ ನಿಯಂತ್ರಣಕ್ಕೆ ಬಳಸುತ್ತಾರೆ.

• ಈ ಮರದ ತೊಗಟೆಯು ನಿದ್ದೆಯ ಸಮಸ್ಯೆಯ ಪರಿಹಾರಕ್ಕೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ ಹೊಂದಿದೆ.

• ಎಲೆಗಳಿಂದ ತಯಾರಿಸಿದ ಔಷಧವನ್ನು ಜ್ವರ,ಡಯಾಬಿಟೀಸ್,ಗಾಯಗಳನ್ನು ಗುಣಪಡಿಸಲು, ಚರ್ಮದ ಕಾಯಿಲೆಗಳನ್ನು ಸರಿಪಡಿಸಲು, ಇತ್ಯಾದಿಗಳಿಗಾಗಿ ಬಳಕೆ ಮಾಡಲಾಗುತ್ತೆ.

• ಹಲಸಿನ ಮರದ ಲ್ಯಾಟೆಕ್ಸ್ ಗಳನ್ನು ವಿನೆಗರ್ ನೊಂದಿಗೆ ಬೆರೆಸಿ ಗ್ರಂಥಿಗಳ ನೋವು ಮತ್ತು ಹಾವು ಕಡಿತದ ಸಮಸ್ಯೆಗೂ ಪರಿಹಾರ ನೀಡಲು ಬಳಸಲಾಗುತ್ತಂತೆ.

• ಸರಿಯಾಗಿ ಬೆಳೆದ ಹಣ್ಣನ್ನು ವಿರೇಚಕವಾಗಿ ಬಳಕೆ ಮಾಡಲಾಗುತ್ತಂತೆ.

ಇಲ್ಲಿದೆ ನೋಡಿ ಹಲಸಿನ ಹಣ್ಣಿನ ಇನ್ನಷ್ಟು ವೈದ್ಯಕೀಯವಾಗಿ ಪ್ರಯೋಜನಕಾರಿಯಾಗಿರುವ ಗುಣಗಳು

1. ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡುತ್ತದೆ

2. ಕ್ಯಾನ್ಸರ್ ತಡೆಗಟ್ಟುತ್ತೆ

3. ಮೂಳೆಗಳ ಆರೋಗ್ಯ ಹೆಚ್ಚಿಸುತ್ತೆ

4. ನರವ್ಯೂಹದ ಕಾರ್ಯಕ್ಕೆ ಬಹಳ ಉತ್ತಮವಾದ ಹಣ್ಣು

5. ಡಯಾಬಿಟೀಸ್ ಕಾಯಿಲೆಗಳನ್ನು ಗುಣಪಡಿಸುತ್ತೆ

6. ಹೊಟ್ಟೆಯ ಹುಣ್ಣಿನ ಸಮಸ್ಯೆಯನ್ನು ಪರಿಹರಿಸುತ್ತೆ

7. ವಯಸ್ಸಾದಂತೆ ಕಾಣುವುದು ಮತ್ತು ಚರ್ಮದ ಕಪ್ಪು ಕಲೆಗಳನ್ನು ಹೊಡೆದೋಡಿಸುತ್ತೆ

8. ಶೀತ ಮತ್ತು ಸೋಂಕುಗಳನ್ನು ತಡೆಯಲು ನೆರವಾಗುತ್ತೆ

9. ರಕ್ತದ ಸಕ್ಕರೆ ಲೆವೆಲ್ ನ್ನು ತಹಬದಿಯಲ್ಲಿ ಇಡುತ್ತೆ

10. ಅನೀಮಿಯಾ ಬರದಂತೆ ತಡೆಯುತ್ತೆ

11. ಹೃದಯದ ಸಮಸ್ಯೆಯ ರಿಸ್ಕ್ ಗಳನ್ನು ಕಡಿಮೆ ಮಾಡುತ್ತೆ.

12. ಥೈರಾಯ್ಡ್ ಗ್ರಂಥಿಗಳನ್ನು ಆರೋಗ್ಯ ವಾಗಿ ಇಡುತ್ತೆ

13. ಕಣ್ಣುಗಳ ಆರೋಗ್ಯವನ್ನು ವೃದ್ಧಿಸುತ್ತೆ

14. ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ

15. ದೇಹದಲ್ಲಿರುವ ವಿಷವನ್ನು ತೆಗೆಯಲು ಸಹಕಾರಿಯಾಗಿದೆ.

1. ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡುತ್ತದೆ

1. ರಕ್ತದೊತ್ತಡವನ್ನು ಸಮತೋಲನದಲ್ಲಿ ಇಡುತ್ತದೆ

ವಿದ್ಯುದ್ವಿಚ್ಛೇದ್ಯಗಳೊಂದಿಗೆ ದ್ರವ ಮಟ್ಟವನ್ನು ಸರಿಯಾದ ಲೆವೆಲ್ ನಲ್ಲಿ ದೇಹದಲ್ಲಿ ಇಡಬೇಕೆಂದರೆ ಅದಕ್ಕೆ ಪೊಟಾಷಿಯಂ ಅಂಶದ ಅಗತ್ಯವಿರುತ್ತದೆ. ಹಲಸಿನ ಹಣ್ಣಿನಲ್ಲಿ ಅಗತ್ಯವಿರುವ ಪೊಟಾಶಿಯಂ ಅಂಶವಿದ್ದು ಅದು ನಿಮ್ಮ ದೇಹದ ಸೋಡಿಯಂ ಮಟ್ಟವನ್ನು ನಿಯಂತ್ರಿಸುತ್ತದೆ. ಹಾಗಾಗಿ ಇದು ನಿಮ್ಮ ದೇಹದಲ್ಲಿ ರಕ್ತದೊತ್ತಡ ಯಾವುದೇ ರೀತಿಯಲ್ಲಿ ಏರಿಕೆಯಾಗುವುದನ್ನು ನಿಲ್ಲಿಸಿ ಸಮತೋಲನದಲ್ಲಿ ಇಡುತ್ತದೆ.

2. ಕ್ಯಾನ್ಸರ್ ತಡೆಗಟ್ಟುತ್ತೆ:

2. ಕ್ಯಾನ್ಸರ್ ತಡೆಗಟ್ಟುತ್ತೆ:

ಹಲಸಿನ ಹಣ್ಣಿನಲ್ಲಿ ಆಂಟಿಆಕ್ಸಿಡೆಂಟ್ ಗಳು, ಫ್ಲೆವನಾಯ್ಡ್ಸ್ ಗಳು ಮತ್ತು ಫೈಟೋ ನ್ಯೂಟ್ರೀಯಂಟ್ಸ್ ಗಳಿದ್ದು, ಇವುಗಳು ಆಕ್ಸಿಡೇಟಿವ್ ಒತ್ತಡ ಸಂಭವಿಸುವುದನ್ನು ತಡೆಯುತ್ತದೆ ಮತ್ತು ಆ ಮೂಲಕ ಕ್ಯಾನ್ಸರ್ ಬರುವುದು ತಪ್ಪಿದಂತಾಗುತ್ತದೆ

3. ಮೂಳೆಗಳ ಆರೋಗ್ಯ ಹೆಚ್ಚಿಸುತ್ತೆ:

3. ಮೂಳೆಗಳ ಆರೋಗ್ಯ ಹೆಚ್ಚಿಸುತ್ತೆ:

ನಿಮಗೆ ಆಶ್ಚರ್ಯವಾಗಬಹುದು ಆದರೂ ಇದು ಸತ್ಯ ಹಲಸಿನ ಹಣ್ಣಿನಲ್ಲಿ ಹಾಲಿನಲ್ಲಿರುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ಕ್ಯಾಲ್ಸಿಯಂ ಇದೆ. ಇದರಲ್ಲಿ ಪೊಟ್ಯಾಷಿಯಂ ಅಂಶವೂ ಇದ್ದು, ಮೂತ್ರಪಿಂಡಗಳ ಮೂಲಕ ನಷ್ಟವಾಗುವ ಕ್ಯಾಲ್ಸಿಂಯ ಅಂಶವನ್ನು ಇದು ತುಂಬಿಕೊಡುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ವಿಟಮಿನ್ ಸಿ ಅಂಶವೂ ಇದ್ದು, ಇದು ಹೆಚ್ಚಿನ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನೆರವು ಮಾಡುತ್ತದೆ. ಹಾಗಾಗಿ ಮೂಳೆಗಳ ಆರೋಗ್ಯ ಹಲಸು ತಿನ್ನುವುದರಿಂದಾಗಿ ಹೆಚ್ಚಾಗುತ್ತದೆ.

4. ನರವ್ಯೂಹದ ಕಾರ್ಯಕ್ಕೆ ಬಹಳ ಉತ್ತಮವಾದ ಹಣ್ಣು:

4. ನರವ್ಯೂಹದ ಕಾರ್ಯಕ್ಕೆ ಬಹಳ ಉತ್ತಮವಾದ ಹಣ್ಣು:

ಹಲಸಿನ ಹಣ್ಣಿನಲ್ಲಿ ಹೆಚ್ಚಿನ ಪ್ರಮಾಣದ ನಯಾಸಿನ್ ಮತ್ತು ಥಯಾಮಿನ್ ಅಂಶವಿದೆ. ಇದು ಮಾವು ಮತ್ತು ಬಾಳೆಹಣ್ಣಿನಲ್ಲಿ ಇರುವುದಕ್ಕಿಂತಲೂ ಅಧಿಕವಾಗಿರುತ್ತದೆ. ಇದು ಶಕ್ತಿಯಾಗಿ ವರ್ತಿಸುತ್ತದೆ ಮತ್ತು ಆಟಗಾರರಿಗೆ ಇದು ಬಹಳ ಒಳ್ಳೆಯದು. ಮತ್ತು ನರವ್ಯೂಹಗಳ ದೌರ್ಬಲ್ಯವನ್ನು ಇದು ಕಡಿಮೆ ಮಾಡುತ್ತೆ ಮತ್ತು ದೈಹಿಕ ಮತ್ತು ಮಾನಸಿಕ ಆರೋಗ್ಯ ಹೆಚ್ಚಿಸಲು ನೆರವಾಗುತ್ತೆ. ನರ ಜೀವಕೋಶಗಳು ಮತ್ತು ಸ್ನಾಯುಗಳಿಗೆ ಒದಗಿಸುವ ಪೋಷಕಾಂಶಗಳು ಅತ್ಯಗತ್ಯವಾಗಿರುತ್ತದೆ, ಅದು ಹಲಸಿನಿಂದ ಲಭ್ಯವಾಗುವ ಮುಖಾಂತರ ಬಲಿಷ್ಟಗೊಳ್ಳುತ್ತವೆ.

5. ಡಯಾಬಿಟೀಸ್ ಕಾಯಿಲೆಗಳನ್ನು ಗುಣಪಡಿಸುತ್ತೆ

5. ಡಯಾಬಿಟೀಸ್ ಕಾಯಿಲೆಗಳನ್ನು ಗುಣಪಡಿಸುತ್ತೆ

ಡಯಾಬಿಟೀಸ್ ನಿಂದಾಗಿ ದೇಹದಲ್ಲಿ ಹೈಪೋಗ್ಲೈಕಮಿಕ್ ಪರಿಣಾಮಗಳಾಗುತ್ತದೆ. ರೋಗಿಗಳಲ್ಲಿ ಗ್ಲೂಕೋಸ್ ಸಹಿಷ್ಣುತೆಯನ್ನು ಹೆಚ್ಚಿಸುವ ಸಾಮರ್ಥ್ಯ ಇದಕ್ಕಿರುವುದರಿಂದಾಗಿ ವೈದ್ಯಕೀಯದಲ್ಲಿ ಔಷಧಗಳ ತಯಾರಿಕೆಗೂ ಕೂಡ ಹಲಸನ್ನು ಬಳಕೆ ಮಾಡುತ್ತಾರೆ.

6. ಹೊಟ್ಟೆಯ ಹುಣ್ಣಿನ ಸಮಸ್ಯೆಯನ್ನು ಪರಿಹರಿಸುತ್ತೆ

6. ಹೊಟ್ಟೆಯ ಹುಣ್ಣಿನ ಸಮಸ್ಯೆಯನ್ನು ಪರಿಹರಿಸುತ್ತೆ

ಹೊಟ್ಟೆಯ ಹುಣ್ಣನ್ನು ಪರಿಹರಿಸುವ ಗುಣಗಳು ಹಲಸಿನ ಹಣ್ಣಿನಲ್ಲಿದೆ, ಆಂಟಿ ಸೆಪ್ಟಿಕ್, ಉರಿಯೂತ ತಡೆಯುವ ಸಾಮರ್ಥ್ಯ ಇತ್ಯಾದಿ ಗುಣಗಳು ಇದರಲ್ಲಿ ಇರುವುದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಹೊಟ್ಟೆಯ ಹುಣ್ಣಿನ ಸಮಸ್ಯೆಯಾದ ಅಲ್ಸರ್ ನ್ನು ತಡೆಯಲು ಇದು ನೆರವಾಗುತ್ತದೆ.

7. ವಯಸ್ಸಾದಂತೆ ಕಾಣುವುದು ಮತ್ತು ಚರ್ಮದ ಕಪ್ಪು

7. ವಯಸ್ಸಾದಂತೆ ಕಾಣುವುದು ಮತ್ತು ಚರ್ಮದ ಕಪ್ಪು

ಕಲೆಗಳನ್ನು ಹೊಡೆದೋಡಿಸುತ್ತೆ

ಹಲಸಿನ ಹಣ್ಣಿನಲ್ಲಿ ಮಿಲಾನಿನ್ ಉತ್ಪಾದನೆಯನ್ನು ಪ್ರತಿಬಂಧಿಸುವ ಸಾಮರ್ಥ್ಯವಿದೆ. ಇದು ಯಾವುದೇ ರೀತಿಯ ಚರಮದ ಸಮಸ್ಯೆಯನ್ನು ನಿವಾರಿಸುವಲ್ಲಿ ನೆರವು ನೀಡುತ್ತದೆ. ಹೈಪರ್ ಪಿಗ್ಮೇಂಟೇಷನ್ ಹಾಗೂ ಇತರೆ ಚರ್ಮ ಸಂಬಂಧಿ ಕಾಯಿಲೆಗಳು ಇದರಿಂದ ದೂರವಾಗುತ್ತದೆ. ಹಲಸಿನ ಬೀಜದಲ್ಲಿ ಅಧ್ಬುತ ಶಕ್ತಿಯಿಂದ್ದು ಚರ್ಮದ ಕಾಯಿಲೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯವಿದೆ. ಈ ಹಣ್ಣಿನಲ್ಲಿರುವ ಆಂಟಿ ಆಕ್ಸಿಡೆಂಟ್ ಗಳು ಬೇಗನೆ ವಯಸ್ಸಾದಂತೆ ಕಾಣುವುದು ಮತ್ತು ಚರ್ಮದ ಇತರೆ ಕಪ್ಪು ಕಲೆಗಳನ್ನು ನಿವಾರಿಸುವುದು ಮತ್ತು ಆಕ್ಸಿಡೇಟಿವ್ ಒತ್ತಡವನ್ನು ತಡೆಯುತ್ತದೆ.

8. ಶೀತ ಮತ್ತು ಸೋಂಕುಗಳನ್ನು ತಡೆಯಲು ನೆರವಾಗುತ್ತೆ

8. ಶೀತ ಮತ್ತು ಸೋಂಕುಗಳನ್ನು ತಡೆಯಲು ನೆರವಾಗುತ್ತೆ

ಹಲಸಿನ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿದ್ದು,ಇ ದು ಸಣ್ಣಪುಟ್ಟ ಸೋಂಕುಗಳು ಮತ್ತು ಶೀತವನ್ನು ತಡೆಯಲು ನೆರವಾಗುತ್ತದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳಿದ್ದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

9. ರಕ್ತದ ಸಕ್ಕರೆ ಲೆವೆಲ್ ನ್ನು ತಹಬದಿಯಲ್ಲಿ ಇಡುತ್ತೆ

9. ರಕ್ತದ ಸಕ್ಕರೆ ಲೆವೆಲ್ ನ್ನು ತಹಬದಿಯಲ್ಲಿ ಇಡುತ್ತೆ

ಅನಿಯಮಿತವಾಗಿರು ರಕ್ತದ ಸಕ್ಕರೆ ಅಂಶವು ದೇಹಕ್ಕೆ ಬಹಳ ಅಪಾಯಕಾರಿ ಆಗಿರುತ್ತದೆ. ಹಲಸಿನ ಹಣ್ಣಿನಲ್ಲಿ ಮ್ಯಾಂಗನೀಸ್ ಅಂಶವಿದ್ದು, ಇದು ರಕ್ತದ ಸಕ್ಕರೆಯ ಮಟ್ಟವನ್ನು ತಹಬದಿಯಲ್ಲಿಡಲು ನೆರವಾಗುತ್ತದೆ.

10. ಅನೀಮಿಯಾ ಬರದಂತೆ ತಡೆಯುತ್ತೆ

10. ಅನೀಮಿಯಾ ಬರದಂತೆ ತಡೆಯುತ್ತೆ

ಹಲಸು ತಿನ್ನುವುದರಿಂದಾಗಿ ಅನಿಮಿಯಾ ಬರದಂತೆ ತಡೆಯಬಹುದು. ದೇಹದಲ್ಲಿ ಕಬ್ಬಿಣಾಂಶವು ಹೀರಿಹೋಗುವ ಸಾಮರ್ಥ್ಯ ಅಧಿಕವಾಗುವುದರಿಂದಾಗಿ ಈ ಸಾಮರ್ಥ್ಯ ಹೆಚ್ಚುತ್ತದೆ. ಇದರ ಜೊತೆಗೆ ಮೆಗ್ನೀಷಿಯಂ, ಮ್ಯಾಗನೀಸ್, ಫೋಲೇಟ್, ಕಾಪರ್, ಪ್ಯಾಂಟೋಥೆನಿಕ್ ಆಸಿಡ್, ವಿಟಮಿನ್ ಬಿ6, ನಿಯಾಸಿಟ್, ವಿಟಮಿನ್ ಎ,ಸಿ,ಇ,ಮತ್ತು ಕೆ ಅಂಶವು ಇದರಲ್ಲಿ ಇರುವುದರಿಂದಾಗಿ ರಕ್ತದ ಉತ್ಪಾದನೆಗೆ ಇದು ಸಹಾಯಕವಾಗಿದೆ.

11. ಹೃದಯದ ಸಮಸ್ಯೆಯ ರಿಸ್ಕ್ ಗಳನ್ನು ಕಡಿಮೆ ಮಾಡುತ್ತೆ

11. ಹೃದಯದ ಸಮಸ್ಯೆಯ ರಿಸ್ಕ್ ಗಳನ್ನು ಕಡಿಮೆ ಮಾಡುತ್ತೆ

ಹಲಸಿನಲ್ಲಿ ವಿಟಮಿನ್ ಬಿ6 ಇದೆ. ಈ ವಿಟಮಿನ್ ಬಿ6 ಹೊಮೊಸಿಸ್ಟೈನ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಎಂಡೊಥೆಲಿಯಲ್ ಜೀವಕೋಶಗಳ ಹಾನಿಯನ್ನು ತಡೆಯುತ್ತದೆ ಆ ಮೂಲಕ ರಕ್ತದಲ್ಲಿ ಕಾಣಿಸಿಕೊಳ್ಳುವ ಉರಿಯೂತದಂತ ಸಮಸ್ಯೆ ಕಡಿಮೆಯಾಗುತ್ತೆ. ಹೆಚ್ಚಿನ ಮಟ್ಟದ ಹೊಮೊಸಿಸ್ಟೈನ್ ಮಟ್ಟವು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ, ಆದರೆ ಹಲವು ತಿನ್ನುವುದರಿಂದಾಗಿ ಈ ಭಯ ಇಲ್ಲವಾಗುತ್ತದೆ.

12. ಥೈರಾಯ್ಡ್ ಗ್ರಂಥಿಗಳನ್ನು ಆರೋಗ್ಯ ವಾಗಿ ಇಡುತ್ತೆ:

12. ಥೈರಾಯ್ಡ್ ಗ್ರಂಥಿಗಳನ್ನು ಆರೋಗ್ಯ ವಾಗಿ ಇಡುತ್ತೆ:

ಹಲಸಿನ ಹಣ್ಣಿನಲ್ಲಿ ಉತ್ತಮವಾದ ಮಟ್ಟದಲ್ಲಿ ತಾಮ್ರದ ಅಂಶವಿದ್ದು, ಇದು ಅಗತ್ಯ ಹಾರ್ಮೋನುಗಳ ಉತ್ಪಾದನೆಗೆ ಮತ್ತು ಥೈರಾಯ್ಡ್ ಗ್ರಂಥಿಯಲ್ಲಿ ಕೆಲವು ಪದಾರ್ಥಗಳ ಹೀರಿಕೊಳ್ಳುವಿಕೆಗೆ ಸಹಾಯಕವಾಗಿರುತ್ತದೆ. ಇದರಲ್ಲಿ ಹಲವು ರೀತಿಯ ಮೈಕ್ರೋ-ನ್ಯೂಟ್ರಿಯಂಟ್ಸ್ ಗಳಿದ್ದು, ಇದು ನಿಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ಸರಿಯಾದ ರೀತಿಯಲ್ಲಿ ಇಡುತ್ತದೆ.

13. ಕಣ್ಣುಗಳ ಆರೋಗ್ಯವನ್ನು ವೃದ್ಧಿಸುತ್ತೆ

13. ಕಣ್ಣುಗಳ ಆರೋಗ್ಯವನ್ನು ವೃದ್ಧಿಸುತ್ತೆ

ವಿಟಮಿನ್ ಎ ಅಂಶವು ಕಣ್ಣಿನ ಕಾರ್ಯಚಟುವಟಿಕೆಗೆ ಬಹಳ ಅಗತ್ಯವಾಗಿ ಬೇಕಾಗಿರುವುದು. ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳಿದ್ದು ಇದು ಫ್ರೀ ರ್ಯಾಡಿಕಲ್ ಗಳನ್ನು ನಿವಾರಿಸಿ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ. ಅಷ್ಟೇ ಅಲ್ಲ ಬೀಟಾ ಕ್ಯಾರೋಟಿನ್ ಮತ್ತು ಲುಟೀನ್ ಝೀಕ್ಸಾಂಥಿನ್ ಗಳು ವಿಟಮಿನ್ ಎ ಗಳಾಗಿ ಪರಿವರ್ತನೆಗೊಂಡು ಹೆಚ್ಚಿನ ಆಂಟಿ ಆಕ್ಸಿಡೆಂಟ್ ಗಳನ್ನು ನೀಡುತ್ತದೆ ಮತ್ತು ಇದು ಕಣ್ಣುಗಳಿಗೆ ಬಹಳ ನೆರವಾಗುತ್ತದೆ.

14. ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ:

14. ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ:

ಹಲಸಿನಲ್ಲಿ ಅತ್ಯಂತ ಹೆಚ್ಚು ಪ್ರಮಾಣದ ಫೈಬರ್ ಗಳಿಂದ ಶ್ರೀಮಂತವಾಗಿದೆ. ಇದು ಕರುಳಿನ ಚಲನೆಯನ್ನು ನಿಯಂತ್ರಿಸುವಲ್ಲಿ ಮತ್ತು ಕ್ಯಾಲೋರಿಯನ್ನು ಕರಗಿಸುವಲ್ಲಿ ಬಹಳ ಉಪಕಾರಿಯಾಗಿದೆ. ಇದು ಮಲಬದ್ಧತೆ ಮತ್ತು ಇತರೆ ಜೀರ್ಣಕ್ರೆಯ ಸಂಬಂಧಿ ಕಾಯಿಲೆಗಳಿಂದ ಮುಕ್ತಿ ನೀಡುತ್ತದೆ.

15. ದೇಹದಲ್ಲಿರುವ ವಿಷವನ್ನು ತೆಗೆಯಲು ಸಹಕಾರಿಯಾಗಿದೆ

15. ದೇಹದಲ್ಲಿರುವ ವಿಷವನ್ನು ತೆಗೆಯಲು ಸಹಕಾರಿಯಾಗಿದೆ

ಹಲಸಿನ ಎಲೆಗಳು ಮತ್ತು ಬೀಜಗಳಲ್ಲಿ ಆಶ್ಚರ್ಯಕರವಾಗಿರುವ ಡೀಟಾಕ್ಸಿಫೈ ಗುಣಗಳು ಮತ್ತು ಅಗತ್ಯ ಟಾಕ್ಸಿನ್ ಅಂಶಗಳನ್ನು ಒಳಗೊಂಡಿರುತ್ತದೆ. ಚರ್ಮಕ್ಕೆ ಹೊರಗಿನಿಂದ ಹಚ್ಚಿಕೊಳ್ಳಲೂ ಕೂಡ ಇದನ್ನು ಬಳಕೆ ಮಾಡಬಹುದು., ಆ ಮೂಲಕ ಚರ್ಮದಲ್ಲಿ ನೆರಿಗೆಗಳಾಗುವುದನ್ನು ತಪ್ಪಿಸಿಕೊಳ್ಳಬಹುದು. ಇದು ದೇಹವನ್ನು ಡೀಟಾಕ್ಸಿಫೈ ಮಾಡುವುದರಿಂದಾಗಿ ಚರ್ಮಕ್ಕೆ ಹೊಳಪು ನೀಡುವ ಮತ್ತು ಸಮಸ್ಯೆ ಇರದ ತ್ವಚೆಯನ್ನು ನೀಡುವ ತಾಕತ್ತು ಇದಕ್ಕಿದೆ.

ಹಲಸನ್ನು ಏಷ್ಯಾದಲ್ಲಿ ಹಲವು ರೀತಿಯ ಪಾಕಪದ್ದತಿಗಳಲ್ಲಿ ಬಳಕೆ ಮಾಡುತ್ತಾರೆ. ಯಾವಾಗಲೂ ಹಲಸಿನ ಹಣ್ಣನ್ನು ಸೇವಿಸುವುದರಿಂದಾಗಿ ಆರೋಗ್ಯದಲ್ಲಿ ಹಲವಾರು ರೀತಿಯ ಲಾಭಗಳನ್ನು ಪಡೆಯಬಹುದಾಗಿದೆ. ಇಷ್ಟೊಂದು ದೊಡ್ಡ ಇಷ್ಟೆಲ್ಲ ಲಾಭಗಳಿದೆ ಎಂದು ನಿಮಗೆ ತಿಳಿದಿರಲಿಕ್ಕಿಲ್ಲ. ಈಗಲಾದರೂ ಹಲಸು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳಿ. ನಿಮ್ಮ ಆರೋಗ್ಯವನ್ನು ಹೆಚ್ಚಿಸಿಕೊಳ್ಳಿ.

Read more about: health wellness
English summary

From Curing Diabetes To Detox, Here Are 15 Medicinal Benefits Of Jackfruit

Artocarpus heterophyllus, the national fruit of Sri Lanka and Bangladesh, state fruit of Kerala and Tamil Nadu, commonly known as jackfruit, jak, jack, jack tree, fenne or jakfruit, is a tree mostly found in the tropical regions which is native to South India. It is an angiosperm belonging to the family of Moraceae, which also contains fig, mulberry, breadfruit, etc. It is the heaviest tree-borne fruit that reaches a weight of about 50 kilograms, 80-90 centimetres in length and 40-50 centimetres in diameter.
Story first published: Sunday, June 17, 2018, 12:05 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more