ಶೀಘ್ರಸ್ಖಲನದ ಬಗ್ಗೆ ನಿಮಗೆ ಗೊತ್ತೇ ಇರದ ಆಸಕ್ತಿಕರ ಸಂಗತಿಗಳು

ಆಂಗ್ಲ ಸುಭಾಶಿತವೊಂದರ ಪ್ರಕಾರ ಒಳ್ಳೆಯ ಕೆಲಸಗಳನ್ನು ಬೇಗನೇ ಮುಗಿಸಿದಷ್ಟೂ ಒಳ್ಳೆಯದು. ಜೀವನದ ಹಲವು ಬಯಕೆಗಳನ್ನು ಆರೋಗ್ಯ ಮತ್ತು ಸಮಯವಿದ್ದಾಗಲೇ ಪೂರೈಸಿಕೊಳ್ಳಬೇಕು. ದೂರಪ್ರವಾಸ, ತೀರ್ಥಯಾತ್ರೆ ಮೊದಲಾದವುಗಳನ್ನು ಕೈಕಾಲು ಗಟ್ಟಿಯಿದ್ದಾಲೇ ಪೂರೈಸಿಬಿಟ್ಟರೆ ಇಳಿವಯಸ್ಸಿನಲ್ಲಿ ಕೊರಗುವುದು ತಪ್ಪುತ್ತದೆ. ಅಂತೆಯೇ ನಿವೃತ್ತಿ ಜೀವನಕ್ಕಾಗಿ ಹಣ ಉಳಿಸಿಡುವುದು ಸಹಾ! ಆದರೆ ಲೈಂಗಿಕ ಕ್ರಿಯೆಯ ವಿಷಯದಲ್ಲಿ ಮಾತ್ರ 'ಬೇಗನೇ' ಮುಗಿಸುವುದು ಯಾರಿಗೂ ಇಷ್ಟವಿಲ್ಲದ ಕಾರ್ಯವಾಗಿದೆ ಹಾಗೂ ಇದು ದಂಪತಿಗಳಲ್ಲಿ ಅಸಂತುಷ್ಟಿಗೆ ಕಾರಣವಾಗಬಹುದು.

ಇಲ್ಲಿ 'ಬೇಗನೇ' ಎಂಬ ಪದ ಶೀಘ್ರಸ್ಖಲನಕ್ಕೆ ಅನ್ವಯಿಸುತ್ತದೆ ಹಾಗೂ ಲೈಂಗಿಕ ಕ್ರಿಯೆ ಪಾರಂಭವಾದ ಕೆಲವೇ ಕ್ಷಣಗಳಲ್ಲಿ ಅಥವಾ ಕಾಮಪರಾಕಾಷ್ಠೆ ತಲುಪುವುದಕ್ಕೆ ಇನ್ನೂ ಬಹಳ ದೂರವಿರುವಾಗಲೇ ಸ್ಖಲನಗೊಳ್ಳುವುದು ಈ ಪದದ ಅರ್ಥವಾಗಿದೆ. ಇನ್ನೂ ಕೆಲವರಲ್ಲಿ ಪ್ರವೇಶಕ್ಕೂ ಮೊದಲೇ ಅಥವಾ ಪ್ರವೇಶದ ತಕ್ಷಣವೇ ಸ್ಖಲನವಾಗಿಬಿಡುತ್ತದೆ. ಇದೊಂದು ಅನೈಚ್ಛಿಕ ಕಾರ್ಯವಾಗಿದ್ದು ಈ ತೊಂದರೆಗೆ ಒಳಗಾದ ಪುರುಷರು ಅಪಾರವಾದ ನಿರಾಶೆ ಅನುಭವಿಸುವುದು ಮಾತ್ರವಲ್ಲ, ತಮ್ಮಲ್ಲಿ ಪುರುಷತ್ವವೇ ಇಲ್ಲವೇನೋ ಎಂಬಂತೆ ಆತ್ಮವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಲೈಂಗಿಕ ಪರಾಕಾಷ್ಠೆಯನ್ನು ಮೆದುಳು ನಿರ್ಧರಿಸಿದರೆ ಸ್ಖಲನವನ್ನು ಮೆದುಳುಬಳ್ಳಿ ನಿರ್ಧರಿಸುವುದೇ ಇದಕ್ಕೆ ಪ್ರಮುಖ ಕಾರಣ! ಈ ತೊಂದರೆ ಸರ್ವವ್ಯಾಪಿಯಾಗಿದೆ ಹಾಗೂ ಒಂದು ಅಂದಾಜಿನ ಪ್ರಕಾರ ಪ್ರತಿ ಮೂವರಲ್ಲಿ ಓರ್ವ ಪುರುಷರು ತಮ್ಮ ಜೀವಮಾನ ದಲ್ಲೊಮ್ಮೆಯಾದರೂ ಈ ತೊಂದರೆ ಅನುಭವಿಸಿದ್ದಾರೆ. ಈ ಮಾಹಿತಿಗಳನ್ನು ಗಮನದಲ್ಲಿಟ್ಟುಕೊಂಡು ಈ ಸೂಕ್ಷ್ಮ ವಿಷಯದ ಬಗ್ಗೆ ಸಾಮಾನ್ಯವಾಗಿ ನಮಗೆ ಗೊತ್ತಿಲ್ಲದ ನಾಲ್ಕು ಅಮೂಲ್ಯ ಮಾಹಿತಿಗಳನ್ನು ಈಗ ನೋಡೋಣ.....

ಶೀಘ್ರಸ್ಖಲನ ಒಂದು ಕಾಯಿಲೆಯಲ್ಲ

ಶೀಘ್ರಸ್ಖಲನ ಒಂದು ಕಾಯಿಲೆಯಲ್ಲ

ಶೀಘ್ರಸ್ಖಲನದ ಬಗ್ಗೆ ಹಲವಾರು ಮಾಹಿತಿಗಳಿದ್ದು ಇದರಲ್ಲಿ ಹೆಚ್ಚಿನವುಗಳ ಬಗ್ಗೆ ನಮಗೆ ತಿಳಿದೇ ಇಲ್ಲ. ಈಗ ತಾನೇ ಲೈಂಗಿಕ ಜೀವನ ಪ್ರಾರಂಭಿಸಿದವರಿಗೆ ಈ ತೊಂದರೆ ಒಂದು ಕಾಯಿಲೆಯೇ ಅಲ್ಲ. ಅಲ್ಲದೇ ಇದು ಬೇರಾವುದೋ ಕಾಯಿಲೆಯ ಲಕ್ಷಣವೂ ಅಲ್ಲ. ಈ ಬಗ್ಗೆ ವಿಶ್ವದಾದ್ಯಂತ ಸಾವಿರಾರು ಸಂಶೋಧನೆಗಳು ನಡೆದಿವೆ. ಇವುಗಳ ಮೂಲಕ ಕಂಡುಬಂದ ಸಮಾನ ಅಂಶವೆಂದರೆ ಪ್ರತಿಯೊಬ್ಬರಿಗೂ ಶೀಘ್ರಸ್ಖಲನದ ತೊಂದರೆ ಕನಿಷ್ಟ ಒಂದು ಬಾರಿಯಾದರೂ ಸಂಭವಿಸಿರಬಹುದು ಅಥವಾ ಇವು ಜೀವನದಾದ್ಯಂತ ಹಲವು ಬಾರಿ ಸಂಭಸಿರಬಹುದು.

ಶೀಘ್ರಸ್ಖಲನ ಒಂದು ಕಾಯಿಲೆಯಲ್ಲ

ಶೀಘ್ರಸ್ಖಲನ ಒಂದು ಕಾಯಿಲೆಯಲ್ಲ

ಕೆಲವರಿಗೆ ಈ ಬಗೆಯ ಸ್ಖಲನದ ಅನುಭವವೇ ಆಗಿರಲಿಕ್ಕಿಲ್ಲ. ಸಾಮಾನ್ಯವಾಗಿ ಮಿಲನಕ್ರಿಯೆ ಪ್ರಾರಂಭವಾದ ಬಳಿಕ ಒಂದು ನಿಮಿಷದಲ್ಲಿಯೇ ಸ್ಖಲನವಾದರೆ ಇದನ್ನು 'ಶೀಘ್ರಸ್ಖಲನ' ಎಂದು ಕರೆಯಬಹುದು. ಈ ತೊಂದರೆಗೆ ದೈಹಿಕ ಕಾರಣಗಳಷ್ಟೇ ಮಾನಸಿಕವಾದ ಕಾರಣಗಳೂ ಇರಬಹುದು.

ಪ್ರತಿಬಾರಿಯೂ ಇದಕ್ಕೆ ಮಾನಸಿಕ ಕಾರಣವೇ ಆಗಬೇಕೆಂದಿಲ್ಲ

ಪ್ರತಿಬಾರಿಯೂ ಇದಕ್ಕೆ ಮಾನಸಿಕ ಕಾರಣವೇ ಆಗಬೇಕೆಂದಿಲ್ಲ

ಕೇವಲ ಮಾನಸಿಕವಾದ ಕಾರಣವೇ ಶೀಘ್ರಸ್ಖಲನಕ್ಕೆ ಪ್ರೇರೇಪಿಸುತ್ತದೆ ಎಂದು ಎಂದಿಗೂ ಯೋಚಿಸಬಾರದು. ಮಾನಸಿಕ ಒತ್ತಡ, ಉದ್ವೇಗ, ಮಾನಸಿಕ ಆಯಾಸ ಮೊದಲಾದವು ಉಳಿದ ಸಮಯದಲ್ಲಿ ಶೀಘ್ರಸ್ಖಲನ ಇರದೇ ಇರುವ ಆರೋಗ್ಯವಂತ ಪುರುಷನಲ್ಲಿಯೂ ಶೀಘ್ರಸ್ಖಲನಕ್ಕೆ ಕಾರಣವಾಗಬಹುದು. ಕೆಲವು ಪುರುಷರಲ್ಲಿ ಪ್ರಾಸ್ಟೇಟ್ ಗ್ರಂಥಿ ಊದಿಕೊಂಡಿದ್ದು ಇವರಿಗೆ ಶೀಘ್ರಸ್ಖಲನದ ತೊಂದರೆ ಪ್ರತಿಬಾರಿಯೂ ಎದುರಾಗುತ್ತದೆ. ಹಾಗಾಗಿ ಈ ತೊಂದರೆ ಇದ್ದರೆ ತಜ್ಞ ವೈದ್ಯರ ಸಲಹೆ ಪಡೆಯುವುದು ಸೂಕ್ತವಾಗಿದೆ ಹಾಗೂ ಇದಕ್ಕೆ ನಿಜವಾದ ಕಾರಣವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ನೀವು ತಿಳಿದಿರುವುದಕ್ಕಿಂತಲೂ ಈ ತೊಂದರೆ ಹೆಚ್ಚು ಜನರಲ್ಲಿ ಕಾಣಬರುತ್ತದೆ

ನೀವು ತಿಳಿದಿರುವುದಕ್ಕಿಂತಲೂ ಈ ತೊಂದರೆ ಹೆಚ್ಚು ಜನರಲ್ಲಿ ಕಾಣಬರುತ್ತದೆ

ಕೆಲವು ಅಧ್ಯಯನಗಳ ಪ್ರಕಾರ ಶೇಖಡಾ ಮೂವತ್ತರಷ್ಟು ಪುರುಷರು ತಮ್ಮ ಜೀವನದಲ್ಲಿ ಕನಿಷ್ಟ ಒಂದು ಬಾರಿಯಾದರೂ ಶೀಘ್ರಸ್ಖಲನದ ತೊಂದರೆ ಎದುರಿಸಿರುತ್ತಾರೆ. ವಯಸ್ಸು ಹೆಚ್ಚಿದಂತೆಯೇ ಈ ತೊಂದರೆಯೂ ಹೆಚ್ಚುವುದು ಸಾಮಾನ್ಯವಾಗುತ್ತದೆ. ಈ ಸ್ಥಿತಿಯನ್ನು ಇನ್ನೂ ಹದಿನೆಂಟರ ಹರೆಯದ ಯುವಕರಲ್ಲಿಯೂ ಕಾಣಲಾಗಿದೆ. ಉತ್ತಮ ಆರೋಗ್ಯ ಹಾಗೂ ಸಂಗಾತಿಯೊಂದಿಗೆ ಸುಖಕರ ಲೈಂಗಿಕ ಜೀವನ ನಡೆಸುತ್ತಿರುವ ಪುರುಷರಲ್ಲಿಯೂ ಈ ತೊಂದರೆ ಕಾಣಬರುತ್ತದೆ.

ನೀವು ತಿಳಿದಿರುವುದಕ್ಕಿಂತಲೂ ಈ ತೊಂದರೆ ಹೆಚ್ಚು ಜನರಲ್ಲಿ ಕಾಣಬರುತ್ತದೆ

ನೀವು ತಿಳಿದಿರುವುದಕ್ಕಿಂತಲೂ ಈ ತೊಂದರೆ ಹೆಚ್ಚು ಜನರಲ್ಲಿ ಕಾಣಬರುತ್ತದೆ

ಪರಿಣಾಮವಾಗಿ ಇವರಿಗೆ ಉದ್ವೇಗ ಹಾಗೂ ಖಿನ್ನತೆ ಕಂಡುಬರುತ್ತದೆ. ಆದರೆ ಈ ತೊಂದರೆಗಳಿಗೆಲ್ಲಾ ಇಂದು ಸೂಕ್ತ ಚಿಕಿತ್ಸೆ ಇದೆ ಹಾಗೂ ತಜ್ಞ ವೈದ್ಯರು ನಿಜವಾದ ಕಾರಣವನ್ನು ಹುಡುಕಿ ಇದನ್ನು ಸರಿಪಡಿಸಲು ಮಾತ್ರವಲ್ಲ ಇದಕ್ಕೆ ಸಂಬಂಧಿಸಿದ ಇತರ ತೊಂದರೆಗಳಾದ ನಿಮಿರು ದೌರ್ಬಲ್ಯ ಮೊದಲಾದ ತೊಂದರೆಗಳನ್ನೂ ಸರಿಪಡಿಸಲು ನೆರವಾಗುತ್ತಾರೆ.

ಮನಸ್ಸನ್ನು ಬೇರೆಡೆ ಹೊರಳಿಸುವುದರಿಂದ ಶೀಘ್ರಸ್ಖಲನವನ್ನು ಪ್ರತಿಬಾರಿಯೂ ಸರಿಪಡಿಸಲು ಸಾಧ್ಯವಿಲ್ಲ

ಮನಸ್ಸನ್ನು ಬೇರೆಡೆ ಹೊರಳಿಸುವುದರಿಂದ ಶೀಘ್ರಸ್ಖಲನವನ್ನು ಪ್ರತಿಬಾರಿಯೂ ಸರಿಪಡಿಸಲು ಸಾಧ್ಯವಿಲ್ಲ

ಸಾಮಾನ್ಯವಾಗಿ ಈ ತೊಂದರೆ ಇರುವವರಿಗೆ ಲಭಿಸುವ ಪುಕ್ಕಟೆ ಸಲಹೆ ಎಂದರೆ ಸ್ಖಲನವಾಗುವ ಸಮಯ ಸನ್ನಿಹಿತವಾಗುತ್ತಿದೆ ಎಂದಾಕ್ಷಣ ಒಂದರಿಂದ ನೂರರ ವರೆಗೆ ಎಣಿಸಲು ತೊಡಗಿ ಎಂಬುದಾಗಿದೆ. ಅಂದರೆ ಈ ಮೂಲಕ ಮನಸ್ಸನ್ನು ಲೈಂಗಿಕ ಕ್ರಿಯೆಯಿಂದ ಹೊರಳಿಸುವುದೇ ಆಗಿದ್ದು ಈ ಮೂಲಕ ಲೈಂಗಿಕ ಕ್ರಿಯೆಯನ್ನು ಇನ್ನಷ್ಟು ಹೊತ್ತು ಮುಂದುವರೆಸಲು ಸಾಧ್ಯವಾಗುತ್ತದೆ.

ಮನಸ್ಸನ್ನು ಬೇರೆಡೆ ಹೊರಳಿಸುವುದರಿಂದ ಶೀಘ್ರಸ್ಖಲನವನ್ನು ಪ್ರತಿಬಾರಿಯೂ ಸರಿಪಡಿಸಲು ಸಾಧ್ಯವಿಲ್ಲ

ಮನಸ್ಸನ್ನು ಬೇರೆಡೆ ಹೊರಳಿಸುವುದರಿಂದ ಶೀಘ್ರಸ್ಖಲನವನ್ನು ಪ್ರತಿಬಾರಿಯೂ ಸರಿಪಡಿಸಲು ಸಾಧ್ಯವಿಲ್ಲ

ಆದರೆ ವಾಸ್ತವವಾಗಿ ಹೀಗೆ ಮಾಡುವುದರಿಂದ ಮೆದುಳಿಗೆ ದುಪ್ಪಟ್ಟು ಒತ್ತಡ ನೀಡಿದಂತಾಗುತ್ತದೆ ಹಾಗೂ ಈ ಸಮಯದಲ್ಲಿ ಮೆದುಳಿನಲ್ಲಿ ಸ್ರವಿಸಬೇಕಾದ ರಸದೂತಗಳೂ ಅರ್ದಂಭರ್ಧ ಸ್ರವಿಸಿ ಮಾನಸಿಕ ವ್ಯವಸ್ಥೆಯನ್ನು ಏರುಪೇರಾಗಿಸಬಹುದು. ಪರಿಣಾಮವಾಗಿ ಇದು ಲೈಂಗಿಕ ಸಂತೃಪ್ತಿಯನ್ನೂ ಕುಗ್ಗಿಸುವುದು ಮಾತ್ರವಲ್ಲ ಗಂಭೀರ ಮಾನಸಿಕ ತೊಂದರೆಗಳು ಎದುರಾಗಬಹುದು. ಹಾಗಾಗಿ ಶೀಘ್ರಸ್ಖಲನದ ತೊಂದರೆಯ ನಿವಾರಣೆಗೆ ಮನಸ್ಸನ್ನು ಹೊರಳಿಸುವುದು ಏಕಮಾತ್ರ ಪರಿಹಾರ ಎಂಬ ನಿರ್ಧಾರಕ್ಕೆ ಬರಬಾರದು. ಈ ತೊಂದರೆಗೆ ಕೆಲವಾರು ಇತರ ಪರಿಹಾರಗಳಿವೆ ಹಾಗೂ ತಜ್ಞರ ಸಲಹೆ ಪಡೆಯುವ ಮೂಲಕ ಖಂಡಿತವಾಗಿಯೂ ಈ ತೊಂದರೆಯನ್ನು ನಿವಾರಿಸಬಹುದು.

English summary

Facts You Probably Didn’t Know About Premature Ejaculation

You will often hear the phrase “sooner is better than later” when it comes to many things in life, such as saving for retirement. When it comes to sexual intercourse, sooner may not always be better, but it is a reality many couples face. This “sooner” is referred to as premature ejaculation, which is when a man ejaculates sooner than he wishes during sexual intercourse, most often just before or just after penetration. Premature ejaculation often causes men to feel like they are the only one who cannot perform during sex; however, they are not alone.
X
Desktop Bottom Promotion