ಬಾಳೆ ಹಣ್ಣಿನ ಆಯ್ಕೆಯ ಗೊಂದಲದಲ್ಲಿದ್ದೀರಾ? ಹಾಗಾದರೆ ಇದನ್ನು ಓದಿ...

By: Divya
Subscribe to Boldsky

ಭಾರತೀಯರ ದೈನಂದಿನ ಆಹಾರದಲ್ಲಿ ಬಾಳೆಹಣ್ಣು ಸಹ ಒಂದು. ಇದರಲ್ಲಿ ಇರುವ ವಿವಿಧತೆ ಅಪಾರ. ಒಬ್ಬಬ್ಬರಿಗೆ ಒಂದೊಂದು ಬಗೆಯ ಹಣ್ಣು ಇಷ್ಟವಾಗುತ್ತದೆ. ಅಂತೆಯೇ ಕೆಲವರು ಮಾಗಿದ ಹಣ್ಣನ್ನು ಇಷ್ಟಪಟ್ಟರೆ ಇನ್ನು ಕೆಲವರು ಹಸಿರಾಗಿರುವ (ಸ್ವಲ್ಪ ಕಾಯಂತೆ ಇರುವ ಬಾಳೆ ಹಣ್ಣು) ಹಣ್ಣನ್ನು ಇಷ್ಟಪಡುತ್ತಾರೆ. ಆದರೆ ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು? ಎನ್ನುವುದು ತಿಳಿದಿಲ್ಲ.

ದಿನಕ್ಕೆರಡು ಬಾಳೆಹಣ್ಣು ಸೇವಿಸಿ, ವೈದ್ಯರಿಂದ ದೂರವಿರಿ!

ಎಲ್ಲಾ ಬಗೆಯ ಬಾಳೆ ಹಣ್ಣಿನಲ್ಲೂ ಫಾಸ್ಪರಸ್, ವಿಟಮಿನ್‌ಗಳು, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ಗಳು ಇರುತ್ತವೆ. ಇದರಲ್ಲಿ ನಾರಿನಂಶವೂ ಸಮೃದ್ಧವಾಗಿದೆ. ಬಾಳೆಹಣ್ಣಿನ ಸೇವನೆಯಿಂದ ವಿವಿಧ ಕ್ಯಾನ್ಸರ್‌ಗಳನ್ನೂ ತಡೆಗಟ್ಟಬಹುದು ಎಂದು ಕೆಲವು ಅಧ್ಯಯನಗಳು ದೃಢ ಪಡಿಸಿವೆ. ಹಾಗಾದರೆ ಮಾಗಿದ ಬಾಳೆಹಣ್ಣು ಒಳ್ಳೆಯದಾ? ಬಲಿಯದ ಬಾಳೆಹಣ್ಣು ಒಳ್ಳೆಯದಾ? ಎನ್ನುವುದನ್ನು ತಿಳಿಯೋಣ....

ಬಲಿಯದ ಬಾಳೆಹಣ್ಣು

ಬಲಿಯದ ಬಾಳೆಹಣ್ಣು

ಇದು ದೇಹಕ್ಕೆ ಸೂಕ್ತವಾದ ಕ್ಯಾಲ್ಸಿಯಂ ನೀಡುತ್ತದೆ. ಅತಿಸಾರದಿಂದ ಬಳಲುತಿದ್ದರೆ ಬಲಿಯದ ಬಾಳೆಹಣ್ಣನ್ನು ಸೇವಿಸಬೇಕು. ಇದು ದೇಹಕ್ಕೆ ಹೆಚ್ಚು ಪೋಷಕಾಂಶಗಳನ್ನು ನೀಡುವುದು. ಇದರಿಂದ ದೇಹದ ಕೊಲೊನ್ ಆರೋಗ್ಯವನ್ನು ಹೆಚ್ಚಿಸುತ್ತದೆ.

ತುಂಬಾ ಹಣ್ಣಾಗದ ಬಾಳೆಹಣ್ಣು ಮಧುಮೇಹಿಗಳಿಗೆ ಒಳ್ಳೆಯದು

ತುಂಬಾ ಹಣ್ಣಾಗದ ಬಾಳೆಹಣ್ಣು ಮಧುಮೇಹಿಗಳಿಗೆ ಒಳ್ಳೆಯದು

ಹಣ್ಣಾಗದ ಬಾಳೆಹಣ್ಣು ಎರಡನೇ ಬಗೆಯ ಮಧುಮೇಹಿಗಳಿಗೆ ಉತ್ತಮವಾದದ್ದು. ಇದರಲ್ಲಿ ರೆಸಿಸ್ಟೆಂಟ್ ಸ್ಟಾರ್ಚ್ ಗುಣ ಅಧಿಕವಾಗಿರುತ್ತದೆ.

ಸಿಪ್ಪೆಯ ಮೇಲೆ ಚುಕ್ಕೆ ಬಿದ್ದ ಬಾಳೆಹಣ್ಣಿನ ಅದ್ಭುತ ಪವರ್....

ಬಲಿತ ಬಾಳೆ ಹಣ್ಣು ಅಥವಾ ಹಣ್ಣಾದ ಬಾಳೆಹಣ್ಣು

ಬಲಿತ ಬಾಳೆ ಹಣ್ಣು ಅಥವಾ ಹಣ್ಣಾದ ಬಾಳೆಹಣ್ಣು

ಬಲಿಯದ ಬಾಳೆ ಹಣ್ಣಿಗೆ ಹೋಲಿಸಿದರೆ ಬಲಿತ ಬಾಳೆಹಣ್ಣು (ಹಳದಿ ಬಣ್ಣದ ಬಾಳೆ ಹಣ್ಣು) ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕ ಶಕ್ತಿಯನ್ನು ಒಳಗೊಂಡಿರುತ್ತದೆ.

ಗ್ಯಾಸ್ ಉಂಟಾಗದು

ಗ್ಯಾಸ್ ಉಂಟಾಗದು

ಬಲಿತ ಬಾಳೆ ಹಣ್ಣಿನ ಸೇವನೆಯಿಂದ ಹೊಟ್ಟೆ ಉಬ್ಬುವುದು ಅಥವಾ ಗ್ಯಾಸ್ ಸಮಸ್ಯೆ ಉಂಟಾಗದು. ಹಸಿರು ಬಾಳೆ ಹಣ್ಣಿನಿಂದ ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಉಂಟಾಗುವ ಸಾಧ್ಯತೆ ಇರುತ್ತದೆ.

ಜೀರ್ಣವಾಗುವುದು

ಜೀರ್ಣವಾಗುವುದು

ಬಲಿತ ಮತ್ತು ಹಸಿರಾದ ಬಾಳೆ ಹಣ್ಣಿನ ಉಪಯೋಗಗಳನ್ನು ಲೆಕ್ಕ ಹಾಕಿದರೆ ಬಲಿತ ಬಾಳೆ ಹಣ್ಣು ಬಹು ಬೇಗ ಜೀರ್ಣವಾಗುವುದು.

ಮಧುಮೇಹಿಗಳಿಗಲ್ಲ

ಮಧುಮೇಹಿಗಳಿಗಲ್ಲ

ಬಲಿತ ಬಾಳೆಹಣ್ಣಿನಲ್ಲಿ ಗ್ಲೈಸೆಮಿಕ್ ಸೂಚಿಯು ಅಧಿಕವಾಗಿರುತ್ತವೆ. ಇವು ಮಧುಮೇಹಿಗಳಿಗೆ ಒಳ್ಳೆಯದಲ್ಲ.

ಸೂಕ್ಷ್ಮ ಪೋಷಕಾಂಶಗಳು

ಸೂಕ್ಷ್ಮ ಪೋಷಕಾಂಶಗಳು

ಬಾಳೆ ಹಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶಗಳು ಇರುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಹಣ್ಣು ಹೆಚ್ಚು ಬಲಿತಂತೆ ಸೂಕ್ಷ್ಮ ಪೋಷಕಾಂಶಗಳು ಕಡಿಮೆಯಾಗುತ್ತವೆ.

 ಸಣ್ಣ ಕರುಳಿಗೆ ಒಳ್ಳೆಯದು

ಸಣ್ಣ ಕರುಳಿಗೆ ಒಳ್ಳೆಯದು

ಹಸಿರು ಬಾಳೆ ಹಣ್ಣಿನಲ್ಲಿ ಫ್ಯಾಟಿ ಆಸಿಡ್ಸ್ ಹೆಚ್ಚಿರುತ್ತವೆ. ಇವು ಸಣ್ಣ ಕರುಳಿಗೆ ಉತ್ತಮವಾದದ್ದು. ಬಲಿತ ಹಣ್ಣಿನಲ್ಲಿ ಕಡಿಮೆ ಪ್ರಮಾಣದಲ್ಲಿರುತ್ತದೆ.

ಈ ರೀತಿಯಲ್ಲಿ ಬಲಿತ ಮತ್ತು ಕಾಯಾಗಿರುವ ಬಾಳೆ ಹಣ್ಣಿನ ಪ್ರಯೋಜನಗಳಿವೆ. ಇವುಗಳಲ್ಲಿ ಯಾವುದು ನಿಮಗೆ ಅಗತ್ಯ ಎನ್ನುವುದನ್ನು ನಿರ್ಧರಿಸಿ ಬಾಳೆ ಹಣ್ಣನ್ನು ಸವಿಯಿರಿ.

ಅಚ್ಚರಿಯಾದರೂ ನಿಜ-ತೂಕ ಇಳಿಸಲು 'ಬಾಳೆಹಣ್ಣಿನ ಡಯಟ್'!

English summary

Which Is Better: Ripe Or Unripe Banana?

Bananas are a part of daily diet for many Indians. Some of us prefer the ripe banana whereas some like it green. But which of them is healthy? A banana offers phosphorous, vitamins, potassium and magnesium. Banana also contains fibre. Some ongoing studies claim that bananas also have the ability to prevent some types of cancers.
Subscribe Newsletter