'ಅಪೆಂಡಿಕ್ಸ್' ಎಂಬ ದಿಢೀರ್ ರೋಗ! ಇದರ ಲಕ್ಷಣಗಳೇನು?

By: manu
Subscribe to Boldsky

ಹೊಟ್ಟೆಗಾಗದ ಆಹಾರವನ್ನು ಸೇವಿಸಿದ ಬಳಿಕ ಮಲಬದ್ದತೆ, ಆಮಶಂಕೆ, ಹೊಟ್ಟೆನೋವು, ಹೊಟ್ಟೆಯುರಿ ಮೊದಲಾದ ತೊಂದರೆಗಳು ಸಾಮಾನ್ಯ. ವಿಷಾಹಾರ ಸೇವನೆ, ಹೊಟ್ಟೆಯಲ್ಲಿ ಸೋಂಕು, IBS (Irritable bowel syndrome) ಅಥವಾ ದೊಡ್ಡಕರುಳಿನಲ್ಲಿ ಉರಿ ಮೊದಲಾದ ತೊಂದರೆಗಳನ್ನು ನಾವೆಲ್ಲಾ ಒಂದಲ್ಲ ಒಂದು ದಿನ ಅನುಭವಿಸಿಯೇ ಇದ್ದೇವೆ. ನಮ್ಮ ದೊಡ್ಡಕರುಳಿನ ಒಂದು ತುದಿಯಲ್ಲಿ ಬೆರಳಿನಾಕಾರದ ಒಂದು ಭಾಗವಿದೆ. ಇದೇ ಅಪೆಂಡಿಕ್ಸ್ ಅಥವಾ ಕರುಳುವಾಳ. ಬಲೂನುವೊಂದರ ಒಳಗೆ ಬೆರಳು ಹಾಕಿ ದೂಡಿದರೆ ಯಾವ ಆಕಾರ ಪಡೆಯುತ್ತದೆಯೋ ಈ ಅಪೆಂಡಿಕ್ಸ್ ಹಾಗೇ ಇರುತ್ತದೆ.

ವಾಸ್ತವವಾಗಿ ಈ ಭಾಗ ನಮಗೆ ಅನಗತ್ಯವಾಗಿದ್ದು ವಿಕಾಸದ ಹಂತದಲ್ಲಿ ನಮ್ಮ ದೇಹದಲ್ಲಿ ಇನ್ನೂ ಉಳಿದುಬಿಟ್ಟಿದೆ. ಒಂದು ವೇಳೆ ಅನ್ನದಲ್ಲಿ ಕಲ್ಲು, ಮೂಳೆಚೂರು ಮೊದಲಾದವುಗಳಿದ್ದರೆ ಅವು ನೇರವಾಗಿ ಈ ಬೆರಳಿನೊಳಗೆ ಹೋಗಿ ಕುಳಿತುಕೊಳ್ಳುತ್ತವೆ. ಯಾವಾಗ ಇದು ಭರ್ತಿಯಾಯಿತೋ ಆಗ ಇದರ ಮೇಲೆ ಬೀಳುವ ಒತ್ತಡ ನೋವು ನೀಡುತ್ತದೆ. ಇದಕ್ಕೆ ಅಪೆಂಡಿಸೈಟಿಸ್ (Appendicitis) ಎಂದು ಕರೆಯುತ್ತಾರೆ. ಸರಿಸುಮಾರು 5% ಜನರಿಗೆ ಈ ತೊಂದರೆ ಇರುತ್ತದೆ.  ಅಪೆಂಡಿಕ್ಸ್‌ನ ಲಕ್ಷಣಗಳು ನಿಮಗೆ ತಿಳಿದಿದೆಯೇ?

ಒಂದು ವೇಳೆ ನೀವೂ ಈ 5% ಜನರಲ್ಲೊಬ್ಬರಾಗಿದ್ದರೆ ನಿಮಗೆ ಈ ತೊಂದರೆ ಇದೆ ಎಂದು ನಿಮ್ಮ ದೇಹ ಕೆಲವು ಸಂಜ್ಞೆಗಳ ಮೂಲಕ ತಿಳಿಸುತ್ತದೆ. ನೋವು ಯಾವಾಗ ಪ್ರಾರಂಭವಾಯಿತೋ ತಕ್ಷಣವೇ ಚಿಕಿತ್ಸೆಯಿಂದ ಅಪೆಂಡಿಕ್ಸ್ ಒಳಗೆ ಸಿಲುಕಿದ್ದ ಕಲ್ಲುಗಳನ್ನು ನಿವಾರಿಸಲು ಸಾಧ್ಯ. ಆದರೆ ಇದು ತೀರಾ ಹೆಚ್ಚಾಗಿದ್ದರೆ ಚಿಕ್ಕ ಶಸ್ತ್ರಚಿಕಿತ್ಸೆಯಿಂದ ಈ ಭಾಗವನ್ನು ಕತ್ತರಿಸಿ ಹೊಲಿಗೆ ಹಾಕಿಬಿಡುತ್ತಾರೆ. (ಈ ಶಸ್ತ್ರಕ್ರಿಯೆಗೆ ಅಪೆಂಡೆಕ್ಟೋಮಿ ಎಂದು ಕರೆಯುತ್ತಾರೆ).

ಒಂದು ವೇಳೆ ಈ ನೋವನ್ನು ನಿರ್ಲಕ್ಷಿಸಿದರೆ ಕಾಲಕ್ರಮೇಣ ಕರುಳಿನ ಸೋಂಕು, ಕ್ಯಾನ್ಸರ್ ಅಥವಾ ಈ ಕರುಳುವಾಳವೇ ಒತ್ತಡ ಭರಿಸಲಾಗದೇ ಸಿಡಿದು ಆರೋಗ್ಯವನ್ನು ಅಪಾಯದ ಅಂಚಿಗೆ ದೂಡುತ್ತದೆ. ಆದ್ದರಿಂದ ಈ ಸಂಜ್ಞೆಗಳನ್ನು ಅಲಕ್ಷಿಸದೇ ತಕ್ಷಣ ವೈದ್ಯರನ್ನು ಕಂಡು ಚಿಕಿತ್ಸೆ ಪಡೆದುಕೊಳ್ಳುವುದು ಅವಶ್ಯ. ಬನ್ನಿ, ಈ ಸಂಜ್ಞೆಗಳಾವುವು ಎಂಬುದನ್ನು ನೋಡೋಣ....  

ಸಾಮಾನ್ಯಕ್ಕಿಂತಲೂ ಹೆಚ್ಚೇ ಹೊಟ್ಟೆ ನೋಯುವುದು

ಸಾಮಾನ್ಯಕ್ಕಿಂತಲೂ ಹೆಚ್ಚೇ ಹೊಟ್ಟೆ ನೋಯುವುದು

ಅಪೆಂಡಿಸೈಟಿಸ್ ತೊಂದರೆ ಇದ್ದವರಿಗೆ ಹೊಕ್ಕುಳಿನಿಂದ ಪ್ರಾರಂಭವಾಗಿ ಹೊಟ್ಟೆಯ ಬಲಭಾಗದವರೆಗೂ ತಡೆಯಲಾರದಷ್ಟು ನೋವಾಗುತ್ತದೆ. ಇದು ಸಾಮಾನ್ಯ ಹೊಟ್ಟೆನೋವಿನಂತೆಯೇ ಇದ್ದರೂ ಆ ನೋವಿಗಿಂತಲೂ ಇದು ಹೆಚ್ಚಾಗಿದ್ದು ಪ್ರಬಲವೂ ಆಗಿರುತ್ತದೆ. ವೈದರ ಭೇಟಿ ಈ ಸಂದರ್ಭದಲ್ಲಿ ಅನಿವಾರ್ಯ.

ಶೌಚಾಲಯಕ್ಕೆ ಭೇಟಿ ನೀಡುವುದು ಹೆಚ್ಚಾಗುತ್ತಾ ಹೋಗುತ್ತದೆ

ಶೌಚಾಲಯಕ್ಕೆ ಭೇಟಿ ನೀಡುವುದು ಹೆಚ್ಚಾಗುತ್ತಾ ಹೋಗುತ್ತದೆ

ಒಂದು ವೇಳೆ ಸೋಂಕಿಗೆ ಒಳಗಾದ ಕರುಳುವಾಳ ಮೂತ್ರಕೋಶದ ಸಂಪರ್ಕಕ್ಕೆ ಬಂದಿದ್ದರೆ ಮೂತ್ರಕೋಶವೂ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ಇದರಿಂದ ಪ್ರಾರಂಭವಾಗುವ ಉರಿಯೂತ ಸತತವಾಗಿ ಮೂತ್ರವಿಸರ್ಜನೆಗೆ ಅವಸರಿಸುತ್ತದೆ ಹಾಗೂ ಮೂತ್ರವೂ ಉರಿಯಿಂದ ಕೂಡಿರುತ್ತದೆ.

ವಾಕರಿಕೆ ಮತ್ತು ವಾಂತಿ

ವಾಕರಿಕೆ ಮತ್ತು ವಾಂತಿ

ಅಪೆಂಡಿಸೈಟಿಸ್ ತೊಂದರೆ ಇರುವ ಎಲ್ಲರಿಗೂ ಈ ಭಾವನೆಯುಂಟಾಗುವುದಿಲ್ಲ. ಆದರೆ ಒಂದು ವೇಳೆ ಅತಿಯಾದ ಹೊಟ್ಟೆನೋವಿನೊಂದಿಗೆ ಈ ಸೂಚನೆಗಳೂ ಇದ್ದರೆ ಇದು ಇನ್ನೇನು ಕರುಳುವಾಳ ಸಿಡಿಯುವುದರಲ್ಲಿದೆ ಎಂದು ತಿಳಿದುಕೊಳ್ಳಬೇಕು.

ನಡುಕ ಮತ್ತು ಜ್ವರ

ನಡುಕ ಮತ್ತು ಜ್ವರ

ಒಂದು ವೇಳೆ ಕರುಳುವಾಳ ಸೋಂಕಿಗೆ ಒಳಗಾಗಿದ್ದು ಊದಿಕೊಂಡಿದ್ದರೆ ಇದನ್ನು ಸರಿಪಡಿಸಲು ದೇಹದ ರೋಗ ನಿರೋಧಕ ಶಕ್ತಿ ಹಲವಾರು ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ ಹಾಗೂ ಈ ಸೋಂಕನ್ನು ಎದುರಿಸಲು ಹೆಚ್ಚಿನ ಸಂಖ್ಯೆಯ ಸೈನಿಕ ರಕ್ತಕಣಗಳನ್ನು ಕಳಿಸುತ್ತದೆ. ಪರಿಣಾಮವಾಗಿ ದೇಹದ ತಾಪಮಾನ ಏರಿ ಜ್ವರ, ಚಳಿಜ್ವರ, ನಡುಕ ಮೊದಲಾದವು ಕಾಣಿಸಿಕೊಳ್ಳುತ್ತವೆ.

ಗೊಂದಲ, ದಿಕ್ಕುತೋಚದಂತಾಗುವ ಭಾವನೆ

ಗೊಂದಲ, ದಿಕ್ಕುತೋಚದಂತಾಗುವ ಭಾವನೆ

ಒಂದು ವೇಳೆ ನಿಮಗೆ ಗೊಂದಲ, ದಿಕ್ಕೇ ತೋಚದಂತಾಗುವುದು ಮೊದಲಾದ ಭಾವನೆಗಳು ಎದುರಾಗುತ್ತಿದ್ದರೆ ಇದು ಕರುಳುವಾಳದ ಸೋಂಕು ಅತಿ ಹೆಚ್ಚಾಗಿರುವ ಸಂಕೇತವಾಗಿದೆ. ಏಕೆಂದರೆ ಈ ಸೋಂಕಿನಿಂದ ದೇಹವನ್ನು ರಕ್ಷಿಸಲು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿನ ಆಮ್ಲಜನಕವನ್ನು ಬಳಸಿಕೊಳ್ಳುತ್ತದೆ. ಪರಿಣಾಮವಾಗಿ ಮೆದುಳಿಗೆ ಅಮ್ಲಜನಕದ ಕೊರತೆಯುಂಟಾಗಿ ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದೇ ಈ ಭಾವನೆಗಳು ಉಂಟಾಗುತ್ತವೆ.

 
English summary

Warning Signs That Your Appendix Might Burst

Appendicitis is less common and only about 5% of the population ends up with it. If by any chance you fall into that group, you'll need to find out its warning signs and symptoms before it is too late. If not treated properly, your appendix can rupture and this can be very dangerous. Not all the cases of appendicitis can lead to its bursting.
Please Wait while comments are loading...
Subscribe Newsletter