Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ ಟ್ರಿಕ್ಸ್ ಅನುಸರಿಸಿ, ಗೊರಕೆ ಕಡಿಮೆಯಾಗಿ ಕಣ್ತುಂಬ ನಿದ್ದೆ ಬರುತ್ತೆ!
ಉತ್ತಮ ಆರೋಗ್ಯಕ್ಕೆ ಸಾಕಷ್ಟು ನಿದ್ದೆಯೂ ಅಗತ್ಯ. ಗೊರಕೆ ನಿದ್ದೆಯನ್ನು ಹಾಳುಮಾಡುವ ಜೊತೆಗೇ ಸುತ್ತಮುತ್ತಲಿನವರ ನೆಮ್ಮದಿಯನ್ನೂ ಹಾಳುಗೆಡವುತ್ತದೆ. ಇದರ ಪರಿಹಾರಕ್ಕಾಗಿ ಒಂದು ಸುಲಭ ಮತ್ತು ಸರಳ ವಿಧಾನವಿದ್ದು ಯಾವುದೇ ಖರ್ಚಿಲ್ಲದೇ ಅನುಸರಿಸಬಹುದಾದ ನೈಸರ್ಗಿಕ ವಿಧಾನವಾಗಿದೆ. ಮಕ್ಕಳಿಗೆ ಕಾಡುವ ಗೊರಕೆಯ ಸಮಸ್ಯೆಯನ್ನು ನಿರ್ಲಕ್ಷಿಸಬೇಡಿ
ಇದರಿಂದ ಸುಖನಿದ್ದೆ ಆವರಿಸುತ್ತದೆ ಹಾಗೂ ಗೊರಕೆಯೂ ಕಡಿಮೆಯಾಗುತ್ತದೆ. ಈ ವಿಧಾನಕ್ಕೆ ಬ್ಯೂಟೆಕ್ಯೋ (Buteyko Breathing Method) ಎಂದು ಕರೆಯುತ್ತಾರೆ. ಇದು ಉಸಿರಾಟದ ತೊಂದರೆಗಳನ್ನು ನಿವಾರಿಸಿ ಸರಾಗ ಉಸಿರಾಟವನ್ನು ಹಿಂದೆ ಪಡೆಯಲು ಉತ್ತಮವಾದ ವಿಧಾನವಾಗಿದೆ. ಗೊರಕೆಯ ಅಬ್ಬರಕ್ಕೆ ಕಡಿವಾಣ ಹಾಕುವ ಮನೆಮದ್ದು
ಒಮ್ಮೆ ಈ ವಿಧಾನವನ್ನು ಕಲಿತುಕೊಂಡಿರೋ, ಬಳಿಕ ನಿಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ದೊರಕುವ ಮೂಲಕ ದೇಹದ ಅಂಗಾಂಶ ಹಾಗೂ ಇತರ ಅಂಗಾಗಗಳು ಉತ್ತಮಗೊಳ್ಳುತ್ತವೆ. ಇದರಲ್ಲಿ ಮೆದುಳು ಸಹಾ ಸೇರಿರುವ ಕಾರಣ ಇದರ ಪರೋಕ್ಷ ಪ್ರಯೋಜನಗಳನ್ನು ಪಟ್ಟಿ ಮಾಡಲು ಸಾಧ್ಯವಿಲ್ಲ. ಅಲ್ಲದೇ ವಿಶೇಷವಾಗಿ ಗೊರಕೆಯನ್ನು ನಿವಾರಿಸುವಲ್ಲಿ ಈ ವಿಧಾನ ಅತ್ಯಂತ ಸಮರ್ಥವಾಗಿದೆ. ಬನ್ನಿ, ಈ ವಿಧಾನವನ್ನು ಹೇಗೆ ಅನುಸರಿಸುವುದು ಎಂಬುದನ್ನು ನೋಡೋಣ....

ಹಂತ #1
ಮೊದಲು ಮೂಗಿನಿಂದ ಚಿಕ್ಕದಾಗಿ ಆದರೆ ಕ್ಷಿಪ್ರವಾಗಿ ಉಸಿರಾಡಿ. ಅಂದರೆ ಮೂಗಿನಿಂದಲೇ ಉಶ್ವಾಸ-ನಿಃಶ್ವಾಸ ಅನುಸರಿಸಿ.

ಹಂತ#2
ಪೂರ್ಣ ಉಸಿರನ್ನು ಒಳಗೆಳೆದುಕೊಂಡ ಬಳಿಕ ಮೂಗಿನ ಎರಡೂ ಹೊಳ್ಳೆಗಳನ್ನು ಮುಚ್ಚಿ ಉಸಿರುಗಟ್ಟಿ.

ಹಂತ #3
ಉಸಿರುಗಟ್ಟಿದ ಬಳಿಕ ಈಗ ಉಸಿರಾಡಲೇ ಬೇಕು, ಇಲ್ಲದಿದ್ದರೆ ಸಾಧ್ಯವೇ ಇಲ್ಲ ಎನ್ನುವ ಬಯಕೆ ಮೂಡುವ ತನಕ ಎಷ್ಟು ಸೆಕೆಂಡುಗಳಾದವು ಎಂದು ಲೆಕ್ಕ ಹಾಕಿ.

ಹಂತ#4
ಈ ಹಂತದಲ್ಲಿ ನಿಮ್ಮ ಮೂಗಿನ ಒಳಗೆ ಅನೈಚ್ಛಿಕವಾಗಿ ಕೆಲವು ಸ್ನಾಯುಗಳು ಚಲಿಸುತ್ತವೆ. ಈ ಸಮಯದಲ್ಲಿ ಹೊಟ್ಟೆ ಕೊಂಚ ಅಲುಗಾಡಿದಂತಾಗುತ್ತದೆ ಹಾಗೂ ಕುತ್ತಿಗೆಯ ಸುತ್ತಲ ಭಾಗ ಸಂಕುಚಿತಗೊಂಡ ಅನುಭವವಾಗುತ್ತದೆ.

ಹಂತ #5
ಬಳಿಕ ಮೂಗನ್ನು ತೆಗೆದು ಅತಿ ಸಾವಕಾಶವಾಗಿ, ನಿಧಾನವಾಗಿ ಪೂರ್ಣವಾಅಗಿ ಉಸಿರನ್ನು ಒಳಗೆಳೆದುಕೊಳ್ಳಿ.

ಹಂತ #6
ಬಳಿಕ ಮೂಗಿನಿಂದಲೇ ಪೂರ್ಣವಾಗಿ, ನಿಧಾನವಾಗಿ ಉಸಿರನ್ನು ಬಿಟ್ಟು ಕೆಲವು ಬಾರಿ ಉಸಿರಾಡಿ. ಮೂಗಿನಲ್ಲಿ ಅನೈಚ್ಛಿಕವಾಗಿ ಜರುಗುವ ಸ್ನಾಯುಗಳ ಚಲನೆ ಈ ಸ್ನಾಯುಗಳನ್ನು ಬಲಪಡಿಸಿ ನಿದ್ದೆಯ ಸಮಯದಲ್ಲಿ ಸಡಿಲವಾಗುವುದನ್ನು ತಪ್ಪಿಸುತ್ತದೆ. ವಾಸ್ತವವಾಗಿ ಸಡಿಲಗೊಂಡ ಈ ಸ್ನಾಯುಗಳು ನಿದ್ದೆಯ ಸಮಯದಲ್ಲಿ ಅಪಾರವಾಗಿ ಕಂಪಿಸುವ ಪರಿಣಾಮವೇ ಗೊರಕೆ. ಈ ವಿಧಾನದಿಂದ ಸ್ನಾಯು ಬಲಗೊಂಡು ಗೊರಕೆ ಕಡಿಮೆಯಾಗುತ್ತಾ ಹೋಗುತ್ತದೆ ಹಾಗೂ ಸುಖನಿದ್ದೆ ಆವರಿಸುತ್ತದೆ.

ನಲವತ್ತು ಸೆಕೆಂಡುಗಳ ಕಾಲ ಸರಾಗವಾಗಿ ಉಸಿರಾಡುತ್ತಲಿರಿ...
ಪ್ರಥಮ ಬಾರಿ ಉಸಿರುಗಟ್ಟಿದ ಬಳಿಕ ಸುಮಾರು ನಲವತ್ತು ಸೆಕೆಂಡುಗಳ ಕಾಲ ಸರಾಗವಾಗಿ ಉಸಿರಾಡುತ್ತಲಿರಿ. ಬಳಿಕ ಈ ವಿಧಾನವನ್ನು ಮುಂದಿನ ಮೂರು ನಿಮಿಷಗಳವರೆಗೆ ಮುಂದುವರೆಸಿ. ಪ್ರತಿದಿನವೂ ಈ ವಿಧಾನವನ್ನು ಅನುಸರಿಸುತ್ತಾ ಬಂದು ನಡುವಣ ಅಂತರವನ್ನು ಇಪ್ಪತ್ತೈದು ಮೂವತ್ತು ಸೆಕೆಂಡುಗಳಿಗೆ ಇಳಿಸಿ. ಕೆಲವೇ ದಿನಗಳಲ್ಲಿ ಗೊರಕೆ ಕಡಿಮೆಯಾಗಿರುವುದನ್ನು ಕಂಡುಕೊಳ್ಳಿ.



Click it and Unblock the Notifications
