ಸಾಲ ಮಾಡಿಯಾದರೂ ತುಪ್ಪ ತಿನ್ನಿ!! ಆರೋಗ್ಯಕ್ಕೆ ಒಳ್ಳೆಯದು...

By: manu
Subscribe to Boldsky

ಬೆಣ್ಣೆ ಮಸಾಲೆ ದೋಸೆಯಲ್ಲಿ ಬೆಣ್ಣೆಯ ಪಾತ್ರವೇನು? ವಾಸ್ತವವಾಗಿ ದೋಸೆಯ ಮೇಲೆ ಇಟ್ಟಿರುವ ಚಿಕ್ಕ ಮುದ್ದೆ ಬೆಣ್ಣೆ ಗ್ರಾಹಕನ ಆಕರ್ಷಣೆ ಸೆಳೆಯಲೇ ಹೊರತು ದೋಸೆ ಹುಯ್ಯುವ ಮೊದಲು ಸಾಮಾನ್ಯ ಎಣ್ಣೆಯನ್ನೇ ಬಳಸುತ್ತಾರೆ. ಇದೇ ತುಪ್ಪಕ್ಕೂ ಅನ್ವಯಿಸುತ್ತದೆ. ದೇಸೀ ಹಸುವಿನ ತುಪ್ಪ, ಆರೋಗ್ಯದ ಪಾಲಿನ ಸಂಜೀವಿನಿ

ತುಪ್ಪ ದುಬಾರಿಯಾದ ಕಾರಣ ತುಪ್ಪವನ್ನು ಕಣ್ಣಿಗೆ ಕಾಣುವಂತೆ ಆಹಾರದ ಮೇಲೆ ಸುರಿದು ಆಗ ಹೊಮ್ಮುವ ಪರಿಮಳವನ್ನು ಆಘ್ರಾಣಿಸುವ ಮೂಲಕ ತುಪ್ಪವನ್ನೇ ಸೇವಿಸಿದ ಅನುಭವವಾಗುತ್ತದೆ. ತುಪ್ಪವನ್ನು ಅತಿ ಕಡಿಮೆ ಪ್ರಮಾಣದಲ್ಲಿ ಸುರಿಯಲೆಂದೇ 'ಮಿಳ್ಳೆ' ಎಂಬ ಕಡಿಮೆ ಆಳದ ಚಿಕ್ಕ ಚಮಚವೂ ಇದೆ. ಹೆರಿಗೆಯ ನಂತರ, ತುಪ್ಪದ ಡಬ್ಬಿಯನ್ನು ಪಕ್ಕಕ್ಕೆ ಸರಿಸಿ..!

ತುಪ್ಪವನ್ನು ಅನ್ನದೊಂದಿಗೆ ಕಲಸಿಕೊಳ್ಳಲು ಮಾತ್ರವಲ್ಲ, ಕೆಲವು ಸಿಹಿತಿಂಡಿಗಳಲ್ಲಿ, ಹುರಿದ ಖಾದ್ಯಗಳಲ್ಲಿ ಸಹಾ ಬಳಸಲಾಗುತ್ತದೆ. ಬೆಣ್ಣೆಯನ್ನು ಬಿಸಿಮಾಡಿ ಇದಕ್ಕೆ ಕೊಂಚ (ಚಿಟಿಕೆಯಷ್ಟು) ಮೆಂತೆ, ಏಲಕ್ಕಿ ಸೇರಿಸಿ ಕುದಿಸಿ ಇಳಿಸಿದ ಬಳಿಕ ಸಿಗುವ ಸಾಂಪ್ರಾದಾಯಿಕ ವಿಧಾನದ ತುಪ್ಪ ಅತಿ ಆರೋಗ್ಯಕರವಾಗಿದ್ದು ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಹುದು. ಆದರೆ ದುಬಾರಿ ಎಂಬ ಒಂದೇ ಕಾರಣಕ್ಕೆ ನಾವು ಇದನ್ನು ದೂರವಿಡುತ್ತಾ ಬಂದಿರುವ ಕಾರಣ ನಾವು ಏನನ್ನು ಕಳೆದುಕೊಂಡಿದ್ದೇವೆ ಎಂಬುದನ್ನು ಮುಂದೆ ಓದಿ... 

ಮೂಳೆಗಳನ್ನು ಬಲಪಡಿಸುತ್ತದೆ

ಮೂಳೆಗಳನ್ನು ಬಲಪಡಿಸುತ್ತದೆ

ತುಪ್ಪದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್ ಡಿ ಇದೆ. ಹಾಲಿನಲ್ಲಿರುವ ಈ ಪೋಷಕಾಂಶ ತುಪ್ಪದ ರೂಪ ಪಡೆದರೂ ಬದಲಾಗದೇ ದೇಹಕ್ಕೆ ಲಭ್ಯವಾಗುತ್ತದೆ. ಇದು ಹಾಲಿನಲ್ಲಿರುವ ಕ್ಯಾಲ್ಸಿಯಂ ಅನ್ನು ಮೂಳೆಗಳು ಹೀರಿಕೊಳ್ಳಲು ನೆರವಾಗುವ ಮೂಲಕ ಮೂಳೆಗಳು ಆರೋಗ್ಯಕರವಾಗಿರಲು ಹಾಗೂ ದೃಢಗೊಳ್ಳಲು ನೆರವಾಗುತ್ತದೆ.

ಕಣ್ಣುಗಳ ಆರೋಗ್ಯ ವೃದ್ಧಿಸುತ್ತದೆ

ಕಣ್ಣುಗಳ ಆರೋಗ್ಯ ವೃದ್ಧಿಸುತ್ತದೆ

ತುಪ್ಪದಲ್ಲಿ ವಿಟಮಿನ್ ಇ ಹೆಚ್ಚಿನ ಪ್ರಮಾಣದಲ್ಲಿದ್ದು ವಿಶೇಷವಾಗಿ ಕಣ್ಣುಗಳಿಗೆ ಹಾಗೂ ದೃಷ್ಟಿನರಕ್ಕೆ ಹೆಚ್ಚಿನ ಪೋಷಣೆ ನೀಡುತ್ತದೆ. ಇದರಿಂದ ಕಣ್ಣುಗಳ ಆರೋಗ್ಯ ಉತ್ತಮವಾಗಿರುತ್ತದೆ. ಅಲ್ಲದೇ ಕಣ್ಣೀರಿನ ಪ್ರಮಾಣವನ್ನು ಹೆಚ್ಚಿಸಿ ಕಣ್ಣುಗಳಲ್ಲಿ ತೇವವನ್ನೂ ಹೆಚ್ಚಿಸುತ್ತದೆ.

ಆರೋಗ್ಯಕರ ಕೊಬ್ಬನ್ನು ಹೆಚ್ಚಿಸುತ್ತದೆ

ಆರೋಗ್ಯಕರ ಕೊಬ್ಬನ್ನು ಹೆಚ್ಚಿಸುತ್ತದೆ

ಬೆಣ್ಣೆಯ ಬಳಕೆಯಿಂದ ದೇಹದಲ್ಲಿ ಕೊಬ್ಬು ಹೆಚ್ಚಿ ತೂಕ ಹೆಚ್ಚಲು ಕಾರಣವಾಗುತ್ತದೆ. ಆದರೆ ತುಪ್ಪದಲ್ಲಿ ಉತ್ತಮ ಕೊಬ್ಬು ಅಥವಾ ಒಮೆಗಾ 3 ಕೊಬ್ಬಿನ ಆಮ್ಲವಿರುವ ಕಾರಣ ಇದು ಆರೋಗ್ಯಕ್ಕೆ ಹಾಗೂ ವಿಶೇಷವಾಗಿ ಮೆದುಳಿನ ಜೀವಕೋಶಗಳಿಗೆ ಹೆಚ್ಚಿನ ಪೋಷಣೆ ನೀಡುತ್ತದೆ.

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ತುಪ್ಪದಲ್ಲಿ ಬ್ಯೂಟೈರಿಕ್ ಆಮ್ಲ ಎಂಬ ಕಿಣ್ವವಿದೆ. ಇದು ವಿಶೇಷವಾಗಿ ಜೀರ್ಣಕ್ರಿಯೆಗೆ ಹೆಚ್ಚಿನ ನೆರವು ನೀಡುತ್ತದೆ ಹಾಗೂ ಕರುಳುಗಳಲ್ಲಿ ಉರಿಯೂತವಾಗದಂತೆ ತಡೆಯುತ್ತದೆ. ಇದರಿಂದ ಆಮ್ಲೀಯತೆ ಹಾಗೂ ತನ್ಮೂಲಕ ಎದುರಾಗುವ ತೊಂದರೆಗಳಿಂದ ರಕ್ಷಣೆ ನೀಡುತ್ತದೆ.ದೇಹದ ತೂಕ ಇಳಿಸಲು ದಿನಕ್ಕೆರಡು ಚಮಚ ತುಪ್ಪ ಸಾಕು!

ಚರ್ಮದ ಉರಿತವನ್ನು ಕಡಿಮೆ ಮಾಡುತ್ತದೆ

ಚರ್ಮದ ಉರಿತವನ್ನು ಕಡಿಮೆ ಮಾಡುತ್ತದೆ

ಚರ್ಮದಲ್ಲಿ ಉರಿಯುಂಟಾಗಿದ್ದರೆ ಆಯುರ್ವೇದ ಈ ಭಾಗಕ್ಕೆ ತುಪ್ಪವನ್ನು ಸವರಲು ಸೂಚಿಸುತ್ತದೆ. ಚರ್ಮದಲ್ಲಿ ಉರಿ, ಕೆಂಪಗಾಗುವುದು,

ಚರ್ಮದ ಉರಿತವನ್ನು ಕಡಿಮೆ ಮಾಡುತ್ತದೆ

ಚರ್ಮದ ಉರಿತವನ್ನು ಕಡಿಮೆ ಮಾಡುತ್ತದೆ

ಚಿಕ್ಕ ಪುಟ್ಟ ಗಾಯ, ತರಚುಗಾಯ, ಸುಟ್ಟ ಗಾಯ ಮೊದಲಾದವುಗಳಿಗೆ ತುಪ್ಪವನ್ನು ಹಚ್ಚುವ ಮೂಲಕ ಉರಿ ಕಡಿಮೆಯಾಗುತ್ತದೆ ಹಾಗೂ ಶೀಘ್ರವಾಗಿ ಹೊಸಚರ್ಮ ಬೆಳೆಯಲು ನೆರವಾಗುತ್ತದೆ. ತುಪ್ಪದಲ್ಲಿರುವ ಉರಿಯೂತ ನಿವಾರಕ ಗುಣ ಚರ್ಮವನ್ನು ಹಲವು ರೀತಿಯಲ್ಲಿ ಪೋಷಿಸುತ್ತದೆ.

ವೀರ್ಯದ ಗುಣಮಟ್ಟ ಹೆಚ್ಚಿಸುತ್ತದೆ

ವೀರ್ಯದ ಗುಣಮಟ್ಟ ಹೆಚ್ಚಿಸುತ್ತದೆ

ಇದರಲ್ಲಿ ಸಮತೋಲನದಲ್ಲಿರುವ ಪ್ರೋಟೀನು ಮತ್ತು ಕೊಬ್ಬು ಪುರುಷರ ಶಕ್ತಿಯನ್ನು ಉತ್ತಮ ಮಟ್ಟದಲ್ಲಿರಿಸಲು ನೆರವಾಗುತ್ತದೆ. ಇದೇ ಕಾರಣಕ್ಕೆ ಮನೆಯಲ್ಲಿ ಮಾಡಿದ ತುಪ್ಪವನ್ನು "ಅತ್ಯಂತ ಆರೋಗ್ಯಕರ ಕೊಬ್ಬು" ಎಂಬುದಾಗಿ ವರ್ಣಿಸಲಾಗುತ್ತದೆ.

 
English summary

Surprising Reasons Why You Should Use Ghee More!

Ghee is nothing but butter that is clarified, which means, the water and the milk solids present in butter are removed, by simmering and churning the butter, to obtain ghee. So, if you are wondering why it is better to use ghee instead of butter, then here are the reasons!
Please Wait while comments are loading...
Subscribe Newsletter