For Quick Alerts
ALLOW NOTIFICATIONS  
For Daily Alerts

ದೇಸೀ ಹಸುವಿನ ತುಪ್ಪ, ಆರೋಗ್ಯದ ಪಾಲಿನ ಸಂಜೀವಿನಿ

By Super
|

ಆರೋಗ್ಯದ ವಿಷಯ ಬಂದಾಗ ತುಪ್ಪ ಮಹತ್ವದ ಪಾತ್ರ ವಹಿಸುತ್ತದೆ. ಜಿಡ್ಡಿನ ಪದಾರ್ಥಗಳಲ್ಲೇ ಅತಿ ಆರೋಗ್ಯಕರವಾದ ತುಪ್ಪ ಹಲವು ಉತ್ತಮ ಗುಣಗಳನ್ನು ಹೊಂದಿದೆ. ಇದರಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಕ್ಯಾಲೋರಿಗಳು, ಪೋಷಕಾಂಶಗಳು, ವೈರಸ್ಸಿನ ವಿರುದ್ಧ ಹೋರಾಡುವ ಗುಣ, ಶಿಲಿಂಧ್ರ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಗುಣಗಳು ಮತ್ತು ಅಂಟಿ ಆಕ್ಸಿಡೆಂಟುಗಳ ಜೊತೆಗೆ ಕೊಂಚ ಕೊಬ್ಬಿನ ತೈಲವೂ ಇವೆ.

ಆದರೆ ಎಮ್ಮೆಯ ಹಾಲಿನಿಂದ ತಯಾರಿಸಿದ ತುಪ್ಪದಲ್ಲೂ ಬಹುತೇಕ ಈ ಗುಣಗಳಿದ್ದರೂ ಕೊಬ್ಬಿನ ಪ್ರಮಾಣ ಅಪಾರವಾದುದರಿಂದ ಎಮ್ಮೆ ಹಾಲಿನ ತುಪ್ಪಕ್ಕಿಂತ ಹಸುವಿನ ಹಾಲಿನ ತುಪ್ಪವೇ ಉತೃಷ್ಟವಾಗಿದೆ. ಸಾಮಾನ್ಯವಾಗಿ ಅನ್ನ, ಚಪಾತಿ, ಸಿಹಿ ಮೊದಲಾದ ಯಾವುದೇ ಆಹಾರದೊಂದಿಗೆ ಕೊಂಚ ತುಪ್ಪವನ್ನು ಬೆರೆಸಿ ತಿಂದರೆ ಆ ಖಾದ್ಯದ ರುಚಿ ಬಹಳಷ್ಟು ಹೆಚ್ಚುತ್ತದೆ. ಅಷ್ಟೇ ಅಲ್ಲ, ಹಸುವಿನ ತುಪ್ಪವನ್ನು ಉಪಯೋಗಿಸಿ ಮೈಯನ್ನು ಮಸಾಜ್ ಮಾಡಿದರೆ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.

ಸುಟ್ಟ ಗಾಯಕ್ಕೆ, ಚಿಕ್ಕ ಪುಟ್ಟ ತರಚುಗಾಯಗಳಿಗೆ ತುಪ್ಪವನ್ನು ಹಚ್ಚುವ ಮೂಲಕ ಗಾಯಗಳು ಬೇಗನೇ ಮಾಗುತ್ತವೆ. ಅಷ್ಟೇ ಅಲ್ಲ ಇದರ ನಿಯಮಿತ ಸೇವನೆಯಿಂದ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಲೂ ಸಾಧ್ಯವಾಗುತ್ತದೆ. ಜೀವರಾಸಾಯನಿಕ ಕ್ರಿಯೆ ಹೆಚ್ಚಿಸುವುದು, ಕೂದಲು ಉದುರುವುದನ್ನು ತಡೆಗಟ್ಟುವುದು, ಹೃದಯ ಕ್ಷಮತೆಯನ್ನು ಹೆಚ್ಚಿಸುವುದು ಮೊದಲಾದ ಆರೋಗ್ಯಕರ ಪ್ರಯೋಜನಗಳಿವೆ. ಅಪ್ಪಟ ದೇಸಿ ತುಪ್ಪಕ್ಕೆ ಭೇಷ್ ಎನ್ನಲೇಬೇಕು

ಆದರೆ ಒಂದು ಎಚ್ಚರಿಕೆ, ಏನೆಂದರೆ ತುಪ್ಪವನ್ನು ಸೇವಿಸಲು ಒಂದು ಮಿತಿ ಇದೆ. ಅತಿಯಾದರೆ ಅಮೃತವೂ ವಿಷವೆನ್ನುವಂತೆ ತುಪ್ಪದ ಅತಿಸೇವನೆ ದೇಹದಲ್ಲಿ ಕೊಬ್ಬಿನ ಸಂಗ್ರಹ ಹೆಚ್ಚಿಸಲು ಕಾರಣವಾಗುತ್ತದೆ. ತುಪ್ಪವನ್ನು ತುಪ್ಪದಂತೆಯೇ ತಿನ್ನಬೇಕು ಎನ್ನುವ ಕಾರಣಕ್ಕೆ ಚಮಚಕ್ಕಿಂತಲೂ ಚಿಕ್ಕದಾದ 'ಮಿಳ್ಳೆ' ಎಂಬ ಉಪಕರಣವನ್ನು ನಮ್ಮ ಹಿರಿಯರು ಉಪಯೋಗಿಸುತ್ತಾ ಬಂದಿದ್ದಾರೆ.

ಇದರ ಆಳ ಕಡಿಮೆ ಇದ್ದು ಅಗಲ ಕೊಂಚ ಜಾಸ್ತಿ ಇರುವ ಕಾರಣ ಹೆಚ್ಚು ತುಪ್ಪ ಸುರಿದಂತೆ ಅತಿಥಿಗಳಿಗೆ ಅನ್ನಿಸಿದರೂ ನಿಜವಾಗಿ ಕೊಂಚವೇ ತುಪ್ಪ ತಟ್ಟೆಗೆ ಬಿದ್ದಿರುತ್ತದೆ! ಮಿಳ್ಳೆ ಈಗ ಅದೃಶ್ಯವಾಗಿರುವ ಕಾರಣ ತುಪ್ಪದ ಸೇವನೆಯ ಪ್ರಮಾಣ ಮತ್ತು ನಿಮ್ಮ ಇಂದಿನ ದೇಹಸ್ಥಿತಿಯನ್ನು ಪರಿಗಣಿಸಿ ಎಷ್ಟು ಸೇವಿಸಬಹುದು ಎಂಬುದನ್ನು ನಿಮ್ಮ ಕುಟುಂಬ ವೈದ್ಯರು ಸಲಹೆ ನೀಡಬಲ್ಲರು. ಆ ಪ್ರಕಾರವೇ ಸೇವಿಸಿದರೆ ಉತ್ತಮ. ಬನ್ನಿ, ತುಪ್ಪದ ಆರೋಗ್ಯಕರ ಪ್ರಯೋಜನಗಳ ವಿವರಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ...

ಪ್ರಯೋಜನ #1

ಪ್ರಯೋಜನ #1

ಚಿಕ್ಕ ಪ್ರಮಾಣದಲ್ಲಿ ತುಪ್ಪವನ್ನು ಪ್ರತಿ ಊಟದೊಂದಿಗೆ ಸೇವಿಸಿದರೆ ಜೀರ್ಣಕ್ರಿಯೆ ಸುಲಭಗೊಳ್ಳುತ್ತದೆ. ತುಪ್ಪ ಜೀರ್ಣಕ್ರಿಯೆಗೆ ಪ್ರಚೋದಕದ ರೂಪದಲ್ಲಿ ನೆರವಾಗುತ್ತದೆ.

ಪ್ರಯೋಜನ #2

ಪ್ರಯೋಜನ #2

ಕೆಲವು ಸಂಶೋಧನೆಗಳ ಪ್ರಕಾರ ತುಪ್ಪದ ಸೇವನೆಯಿಂದ ಕ್ಯಾನ್ಸರ್ ಬೆಳವಣಿಕೆ ಕುಂಠಿತಗೊಳ್ಳುತ್ತದೆ. ಸಾಮಾನ್ಯವಾಗಿ ತುಪ್ಪವನ್ನು ನಿತ್ಯವೂ ಸೇವಿಸುತ್ತಾ ಬಂದಿರುವವರಲ್ಲಿ ಕ್ಯಾನ್ಸರ್ ಪ್ರಮಾಣ ಅತಿ ಕಡಿಮೆ ಇರುವುದಕ್ಕೆ ಇದೇ ಕಾರಣವಿರಬಹುದು.

ಪ್ರಯೋಜನ #3

ಪ್ರಯೋಜನ #3

ಚಿಕ್ಕ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸುತ್ತಾ ಬಂದರೆ ಹಸಿವು ಹೆಚ್ಚುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಇದಕ್ಕಾಗಿ ಚಿಕ್ಕ ಪ್ರಮಾಣದಲ್ಲಿ ತುಪ್ಪವನ್ನು ಚಪಾತಿ ಅಥವಾ ರೊಟ್ಟಿಗಳಿಗೆ ಸವರಿ ಅಥವಾ ಅನ್ನಕ್ಕೆ ಸೇರಿಸಿ ಸೇವಿಸಬಹುದು.

ಪ್ರಯೋಜನ #4

ಪ್ರಯೋಜನ #4

ತುಪ್ಪ ಒಂದು ಉತ್ತಮ ಕಾಮೋತ್ತೇಜಕ ಹಾಗೂ ವೀರ್ಯವರ್ಧಕವೂ ಆಗಿದೆ. ನಿತ್ಯದ ಸೇವನೆಯಿಂದ ಸಂತಾನಭಾಗ್ಯದ ಸಾಧ್ಯತೆ ಹೆಚ್ಚುತ್ತದೆ.

ಪ್ರಯೋಜನ #5

ಪ್ರಯೋಜನ #5

ತುಪ್ಪ ಚರ್ಮದ ಆರೈಕೆಯಲ್ಲಿಯೂ ಉಪಯೋಗಕ್ಕೆ ಬರುತ್ತದೆ. ಅಲ್ಲದೇ ಕಣ್ಣುಗಳಿಗೂ ಉತ್ತಮವಾಗಿದ್ದು ಒಟ್ಟಾರೆ ಆರೋಗ್ಯವನ್ನು ವೃದ್ಧಿಸುತ್ತದೆ. ಆದರೆ ನಿತ್ಯವೂ ಚಿಕ್ಕ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ.

ಪ್ರಯೋಜನ #6

ಪ್ರಯೋಜನ #6

ರಾತ್ರಿ ಮಲಗುವ ಮುನ್ನ ಬಿಸಿಬಿಸಿ ಹಾಲಿಗೆ ಕೊಂಚವೇ ಕೊಂಚ ತುಪ್ಪವನ್ನು ಸೇರಿಸಿ ಕುಡಿಯುಅ ಮೂಲಕ ಉತ್ತಮ ನಿದ್ದೆ ಬರುತ್ತದೆ ಹಾಗೂ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಬೆಳಿಗ್ಗೆ ಕಲ್ಮಶಗಳು ಸುಲಭವಾಗಿ ಹೊರಹೋಗಲು ಸಾಧ್ಯವಾಗುತ್ತದೆ.

ಪ್ರಯೋಜನ #7

ಪ್ರಯೋಜನ #7

ಸ್ಮರಣಶಕ್ತಿ ಮತ್ತು ಬುದ್ದಿಮತ್ತೆ ಹೆಚ್ಚಲು ತುಪ್ಪ ನೆರವಾಗುತ್ತದೆ ಎಂದು ಬಹಳ ಹಿಂದಿನಿಂದಲೂ ಭಾರತದಲ್ಲಿ ನಂಬಿಕೊಂಡು ಬರಲಾಗಿದೆ. ಇದೇ ಕಾರಣಕ್ಕೆ ವಿದ್ಯಾರ್ಥಿಗಳಿಗೆ ತುಪ್ಪದ ತಿಂಡಿಗಳನ್ನು ಆಗಾಗ ನೀಡಲಾಗುತ್ತಿತ್ತು.

ಪ್ರಯೋಜನ #8

ಪ್ರಯೋಜನ #8

ಮೂಗಿನಿಂದ ರಕ್ತ ಬರುತ್ತಿದ್ದರೆ ವೈದ್ಯರಿಗೆ ತೋರಿಸುವ ಮೊದಲು ತುಪ್ಪವನ್ನು ಪ್ರಯೋಗಿಸಿ ಒಂದು ಕೈ ನೋಡಬಹುದು. ಇದಕ್ಕಾಗಿ ಕರಗಿದ ತುಪ್ಪವನ್ನು ಮೂಗಿನ ತುದಿ ಮತ್ತು ಹೊಳ್ಳೆಗಳ ಒಳಗೆ, ವಿಶೇಷವಾಗಿ ರಕ್ತ ಒಸರುವೆಡೆ ದಿನಕ್ಕೆ ಮೂರು ನಾಲ್ಕು ಬಾರಿಯಂತೆ ಎರಡರಿಂದ ಮೂರು ದಿನ ಹಚ್ಚಬೇಕು.

 ತುಪ್ಪವನ್ನು ಪರೀಕ್ಷಿಸುವುದು ಹೇಗೆ?

ತುಪ್ಪವನ್ನು ಪರೀಕ್ಷಿಸುವುದು ಹೇಗೆ?

ಇಂದು ದುಬಾರಿ ತುಪ್ಪದೊಂದಿಗೆ ಅಗ್ಗದ ಡಾಲ್ಡಾವನ್ನು ಬೆರೆಸಿ ಮಾರಾಟ ಮಾಡುವ ಖದೀಮರಿದ್ದಾರೆ. ಆದರೆ ತುಪ್ಪವನ್ನು ತಕ್ಷಣ ಪರೀಕ್ಷಿಸಲು ಕೆಲವು ಸುಲಭ ವಿಧಾನಗಳಿವೆ.

* ಶುದ್ಧ ತುಪ್ಪ ಬಿಸಿ ಅಂಗೈಯಲ್ಲಿ ತಕ್ಷಣ ಕರಗುತ್ತದೆ. ಇದಕ್ಕಾಗಿ ಎರಡೂ ಹಸ್ತಗಳನ್ನು ಸುಮಾರು ಇಪ್ಪತ್ತು ಸೆಕೆಂಡ್ ಉಜ್ಜಿ ತಕ್ಷಣ ಒಂದು ಚಿಕ್ಕ ಪ್ರಮಾಣದ ಗಟ್ಟಿ ತುಪ್ಪವನ್ನು ಕೈ ಮೇಲೆ ಇಟ್ಟಾಕ್ಷವೇ ಕರಗಲು ಪ್ರಾರಂಭವಾಗಬೇಕು. ಹಾಗೂ ಕೆಲವೇ ಸೆಕೆಂಡುಗಳಲ್ಲಿ ದ್ರವವಾಗಬೇಕು. ಒಂದು ವೇಳೆ ಕರಗಲು ಹೆಚ್ಚು ಸಮಯ ತೆಗೆದುಕೊಂಡರೆ ಇದು ಅಪ್ಪಟವಲ್ಲ ಎಂದು ಖಾತ್ರಿಯಾಗುತ್ತದೆ.

* ಹಿರಿಯರು ಪರೀಕ್ಷಿಸಲು ಇನ್ನೊಂದು ವಿಧಾನ ಅನುಸರಿಸುತ್ತಿದ್ದರು. ಇದಕ್ಕೆ ಶುದ್ದ ತುಪ್ಪದ ಪರಿಮಳ ನಿಮ್ಮ ನೆನಪಿನಲ್ಲಿರಬೇಕು. ಕೊಂಚ ತುಪ್ಪವನ್ನು ಹಸ್ತದ ಹಿಂಬದಿಗೆ ಸವರಿ ನಾಲ್ಕಾರು ಬಾರಿ ಉಜ್ಜಿ

ಒರೆಸಿಬಿಡಬೇಕು. ಅಪ್ಪಟ ತುಪ್ಪವಾದರೆ ತುಪ್ಪದ ವಾಸನೆ ಹೆಚ್ಚು ಹೊತ್ತು ಉಳಿದಿರುತ್ತದೆ. ಡಾಲ್ಡಾ ಸೇರಿಸಿದ್ದರೆ ಈ ಪರಿಮಳ ಒಂದು ನಿಮಿಷದೊಳಗೇ ಖಾಲಿಯಾಗುತ್ತದೆ.

 ತುಪ್ಪವನ್ನು ಪರೀಕ್ಷಿಸುವುದು ಹೇಗೆ?

ತುಪ್ಪವನ್ನು ಪರೀಕ್ಷಿಸುವುದು ಹೇಗೆ?

* ಶುದ್ಧ ತುಪ್ಪದ ಬಾಟಲಿಯ ಮೇಲ್ಭಾಗದಲ್ಲಿ ಕರಗಿದ್ದು ಇದರ ಕೊಂಚವೇ ಕೆಳಗೆ ತುಪ್ಪ ಮರಳು ಮರಳಾಗಿರುತ್ತದೆ. ಆದರೆ ಇದು ಹಸುವಿನ ಮತ್ತು ಎಮ್ಮೆಹಾಲಿನ ತುಪ್ಪದಲ್ಲಿ ಎರಡರಲ್ಲೂ ಕಂಡುಬರುತ್ತದೆ. ಒಂದು ವೇಳೆ ಡಾಲ್ಡಾ ಬೆರೆಸಿದ್ದರೆ ಮೇಲ್ಭಾಗ ಕರಗುವುದಿಲ್ಲ, ಗಟ್ಟಿಯಾಗಿಯೇ ಇರುತ್ತದೆ.

* ಶುದ್ಧ ತುಪ್ಪದ ದೀಪ ಯಾವುದೇ ಚಿಟಿಪಿಟಿಯಿಲ್ಲದೇ ಉರಿಯುತ್ತದೆ. ತುಪ್ಪವನ್ನು ಹತ್ತಿಯ ಬತ್ತಿಗೆ ಸವರಿ ಬೆಂಕಿ ಕೊಟ್ಟು ಉರಿಸಿ ಸೂಕ್ಷ್ಮವಾಗಿ ಗಮನಿಸಿ. ಶುದ್ದ ತುಪ್ಪವಾದರೆ ಜ್ವಾಲೆ ನೇರವಾಗಿ, ಏಕಪ್ರಕಾರವಾಗಿ ಹೊಗೆಯಿಲ್ಲದೇ ಉರಿಯುತ್ತದೆ. ಡಾಲ್ಡಾ ಬೆರೆಸಿದ್ದರೆ ಜ್ವಾಲೆ ಕೊಂಚ ಚಿಟಿಪಿಟಿ ಎನ್ನುವುದು ಅಥವಾ ವೇಗವಾಗಿ ಚಿಕ್ಕದೊಡ್ಡದಾಗುವುದು ಮತ್ತು ಜ್ವಾಲೆಯ ತುದಿಯಲ್ಲಿ ಕೊಂಚ ಕಪ್ಪು ಹೊಗೆಯಂತಿರುವುದು

ಕಂಡುಬರುತ್ತದೆ.

English summary

Health Benefits Of Cow Ghee

Cow ghee is healthier than other options as it contains many nutrients, anti-viral agents, anti-fungal properties, anti-bacterial properties, anti-oxidants,a and fatty acids too. It tastes good and enhances the taste of the food when you use it in your recipes. Some people apply cow ghee on roti or chapathi and others prefer it along with rice. Massaging your body with cow ghee can enhance your immunity too.
X
Desktop Bottom Promotion