ಎಚ್ಚರ: ನಿದ್ದೆಯ ಸಮಯದಲ್ಲಿ ಮೊಬೈಲ್ ಬಳಸಿದರೆ ದೃಷ್ಟಿ ದೋಷ!

By: Jaya subramanya
Subscribe to Boldsky

ಇಂದಿನ ದಿನಗಳಲ್ಲಿ ಮೊಬೈಲ್ ಬಳಕೆ ಮಾಡುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ನಿಂತಲ್ಲಿ, ಕುಳಿತಲ್ಲಿ, ಮಲಗುವಾಗ ನಿಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಮೊಬೈಲ್ ಇಲ್ಲದೇ ಏನೂ ನಡೆಯಲಾರದು ಎಂಬಂತಹ ಸ್ಥಿತಿ ಏರ್ಪಟ್ಟಿದೆ. ಹುಟ್ಟುವ ಮಗು ಕೂಡ ಆಟಿಕೆಗಳ ಬದಲಿಗೆ ಮೊಬೈಲ್ ಹಿಡಿಯುತ್ತಿದೆ. ಇದನ್ನು ನೀವು ತಂತ್ರಜ್ಞಾನದ ಅದ್ಭುತ ಕೊಡುಗೆ ಅಥವಾ ಸೂಪರ್ ಫಾಸ್ಟ್ ಮಾರ್ಪಾಡು ಎಂದು ಕರೆದರೂ ನಿಮ್ಮ ಆರೋಗ್ಯವನ್ನು ಈ ಮೊಬೈಲ್ ಎಂಬ ಮಾರಕಾಸ್ತ್ರ ಕಬಳಿಸುತ್ತಿದೆ ಎಂದರೆ ನೀವು ಅದನ್ನು ಒಪ್ಪಲೇಬೇಕು. ಹಾಸಿಗೆ ಬಳಿ ಮೊಬೈಲ್ ಇಟ್ಟುಕೊಂಡರೆ ಅಪಾಯ ಗ್ಯಾರಂಟಿ..

ಇಂದು ಮೊಬೈಲ್ ಬಳಕೆ ಮಲಗುವ ಹಾಸಿಗೆಯವರೆಗೆ ಬಂದೆತ್ತಿದೆ ಎಂದರೆ ನಿಮ್ಮ ಆರೋಗ್ಯ ಎಷ್ಟು ಹದಗೆಡುತ್ತಿದೆ ಎಂಬುದರ ಸಣ್ಣ ಅಂಕಿ ಅಂಶ ಇದರಿಂದ ತಿಳಿದು ಬರುತ್ತದೆ. ಮಲಗುವಾಗ ಮೊಬೈಲ್ ಅನ್ನು ತಮ್ಮ ತಲೆಯ ಬಳಿಯೇ ಇಲ್ಲವೇ ದಿಂಬಿನ ಪಕ್ಕದಲ್ಲಿ ಅಥವಾ ಅಲ್ಲೇ ಆಚೆ ಈಚೆ ಇಟ್ಟುಕೊಂಡು ಮಲಗ್ತಾರೆ. ಹೀಗೆ ಮಾಡುವ ಪರಿಪಾಠ ನಿಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಉಂಟು ಮಾಡುತ್ತೆ ಅನ್ನೋದು ಸಂಶೋಧನೆಯಿಂದ ಬಹಿರಂಗಗೊಂಡಿದೆ. ಸಾವಿನ ಕೂಪಕ್ಕೆ ತಳ್ಳುತ್ತಿದೆ, ಮೊಬೈಲ್ ಫೋನ್‌ಗಳ ವಿಕಿರಣ!

ನಿಮ್ಮ ಮಲಗುವ ಕೋಣೆಯ ಬೆಳಕನ್ನು ಆರಿಸಿ ಮೊಬೈಲ್ ಆನ್ ಮಾಡುವುದರಿಂದಾಗಿ ಹಾನಿಕಾರಕ ನೀಲಿ ಬೆಳಕು ನಿಮ್ಮ ಕಣ್ಣಿಗೆ ದೋಷವನ್ನುಂಟು ಮಾಡಲಿದೆ. ನಿಮ್ಮ ದೃಷ್ಟಿಗೆ ಮಾತ್ರವೇ ತೊಂದರೆಯನ್ನುಂಟು ಮಾಡದೇ ಮೆಲಟೋನಿನ್ ಹಾರ್ಮೋನ್ ಉತ್ಪಾದನೆಗೆ ಮಾರಕವಾಗಲಿದೆ. ಇಷ್ಟೇ ಅಲ್ಲದೆ ನಿದ್ದೆಯ ಸಮಯದಲ್ಲಿ ಮೊಬೈಲ್ ಬಳಕೆಯಿಂದ ಉಂಟಾಗುವ ಹಾನಿಗಳನ್ನು ಇಂದಿಲ್ಲಿ ತಿಳಿದುಕೊಳ್ಳೋಣ....  

ರೆಟೀನಾಗೆ ತೊಂದರೆ

ರೆಟೀನಾಗೆ ತೊಂದರೆ

ಮೊಬೈಲ್ ಫೋನ್ ಹೊರಚೆಲ್ಲುವ ನೀಲಿ ಬೆಳಕು ಅದರಲ್ಲೂ ಸ್ಮಾರ್ಟ್‌ಫೋನ್ ಹೊಂದಿರುವ ಬೆಳಕು ಕಡಿಮೆ ತರಂಗಾಂತರ ಅಲುಗಾಡುವಿಕೆಯನ್ನು ಈ ಬೆಳಕು ಒಳಗೊಂಡಿದೆ. ಇದು ಹೆಚ್ಚು ಸಮಯ ನಿಮ್ಮ ದೃಷ್ಟಿಯ ಮೇಲೆ ಪರಿಣಾಮವನ್ನು ಬೀರಲಿದೆ ಮತ್ತು ರೆಟೀನಾಗೆ ಹಾನಿಯನ್ನುಂಟು ಮಾಡಲಿದೆ.

ನಿದ್ರಾಭಂಗ

ನಿದ್ರಾಭಂಗ

ಫೋನ್ ಹೊರಚೆಲ್ಲುವ ನೀಲಿ ಬೆಳಕು ಮೆಲಟೋನಿನ್ ಹಾರ್ಮೋನ್ ಉತ್ಪಾದನೆಯನ್ನು ಕುಂಠಿತಗೊಳಿಸಲಿದೆ. ನಿಮ್ಮ ನಿದ್ದೆಯ ಚಕ್ರವನ್ನು ನಿರ್ವಹಿಸುವ ಈ ಹಾರ್ಮೋನ್ ಮೇಲೆ ನೀಲಿ ಬೆಳಕು ದುಷ್ಪರಿಣಾಮವನ್ನು ಬೀರಲಿದೆ. ನಿದ್ದೆ ಮಾಡುವಾಗ ಫೋನ್ ಬಳಸುವುದು ನಿಮ್ಮ ನಿದ್ದೆಯನ್ನು ಹಾಳು ಮಾಡಲಿದೆ ಮತ್ತು ಖಿನ್ನತೆಗೆ ನಿಮ್ಮನ್ನು ನೂಕಲಿದೆ.

ಕ್ಯಾನ್ಸರ್ ಅಪಾಯ

ಕ್ಯಾನ್ಸರ್ ಅಪಾಯ

ಮೊಬೈಲ್‌ ಫೋನ್ ಹೊರಬಿಡುವ ನೀಲಿ ಬೆಳಕು ಮೆಲಟೋನಿನ್ ಉತ್ಪಾದನೆಯನ್ನು ಕುಂಠಿತಗೊಳಿಸಲಿದೆ ಮತ್ತು ನಿದ್ದೆಗೆ ಹಾನಿಯನ್ನುಂಟು ಮಾಡಲಿದೆ. ಈ ಹಾರ್ಮೋನ್ ಉತ್ತಮ ಉತ್ಕರ್ಷಣ ನಿರೋಧಿ ಎಂದೆನಿಸಿದ್ದು ಕ್ಯಾನ್ಸರ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದೆ. ಅದರಲ್ಲೂ ಸ್ತನ ಮತ್ತು ಜನನೇಂದ್ರಿಯ ಕ್ಯಾನ್ಸರ್ ವಿರುದ್ಧ ಹೋರಾಡಲಿದೆ.

ಮೆದುಳಿಗೆ ಹಾನಿ

ಮೆದುಳಿಗೆ ಹಾನಿ

ನಿಮ್ಮ ನಿದ್ದೆಗೆ ಭಂಗವಾದಂತೆ, ನೀವು ಮೊಬೈಲ್‌ನ ನೀಲಿ ಬೆಳಕಿಗೆ ಹೆಚ್ಚು ಪ್ರಭಾವಕ್ಕೆ ಒಳಗಾಗುತ್ತೀರಿ. ಇದು ಮೆದುಳು ನಿಮ್ಮ ಸ್ಮರಣೆ ಶಕ್ತಿಯ ಮೇಲೆ ಪರಿಣಾಮವನ್ನು ಬೀರಲಿದೆ. ವ್ಯಕ್ತಿಯು ನಿದ್ರಾಹೀನತೆಗೆ ಒಳಗಾದಂತೆ ದೇಹದ ಚಯಾಪಚಯ ಶಕ್ತಿಯ ಮೇಲೆ ಇದು ಪರಿಣಾಮವನ್ನು ಬೀರಲಿದೆ ಮತ್ತು ಮೆದುಳಿಗೆ ಇದು ಹಾನಿಯನ್ನುಂಟು ಮಾಡಲಿದೆ.

ಕಣ್ಣಿಗೆ ಸಮಸ್ಯೆ

ಕಣ್ಣಿಗೆ ಸಮಸ್ಯೆ

ಕತ್ತಲೆಯ ಸಮಯದಲ್ಲಿ ನೀಲಿ ಬೆಳಕನ್ನು ಮಾತ್ರವೇ ನಿಮ್ಮ ಕಣ್ಣು ನೋಡುತ್ತಿದ್ದಾಗ ಇದು ಕಣ್ಣಿಗೆ ಸುಸ್ತು ಮತ್ತು ನೋವನ್ನು ಉಂಟುಮಾಡಲಿದೆ. ದೀರ್ಘ ಸಮಯದಿಂದ ಈ ರೀತಿಯ ತೊಂದರೆಗೆ ನೀವು ಒಳಗಾಗುತ್ತಿದ್ದಿರಿ ಎಂದರೆ ನೀವು ದೃಷ್ಟಿಯನ್ನು ಕಳೆದುಕೊಳ್ಳುವ ಸಂಭವ ಇದೆ.

 
English summary

Reasons You Need To Stop Using Your Mobile Phones At Night

Using mobile phone in the night can cause serious health problems. Listed here are the reasons why one should stop using mobile phone at night. Read on to know more.
Story first published: Wednesday, March 15, 2017, 23:41 [IST]
Please Wait while comments are loading...
Subscribe Newsletter