ದಿನನಿತ್ಯ ಒಂದೆರಡು ಟೊಮೆಟೊ ಸೇವಿಸಿ-ವೈದ್ಯರಿಂದ ದೂರವಿರಿ...

By: manu
Subscribe to Boldsky

ಟೊಮೆಟೊ ಎಂದರೆ ನಾವೆಲ್ಲಾ ಒಂದು ತರಕಾರಿ ಎಂದೇ ತಿಳಿದುಕೊಂಡು ತರಕಾರಿಯಂತೆಯೇ ಬಳಸುತ್ತಿದ್ದೇವೆ. ಸಸ್ಯಶಾಸ್ತ್ರದ ಪ್ರಕಾರ ಇದೊಂದು ಹಣ್ಣು. ಅಂತೆಯೇ ಈ ಹಣ್ಣನ್ನು ಹಸಿಯಾಗಿ ಸೇವಿಸುವುದು ಆರೋಗ್ಯಕ್ಕೆ ಉತ್ತಮವಾಗಿದ್ದು ನಿಮ್ಮ ನಿತ್ಯದ ಸಾಲಾಡ್‌ನ ಒಂದು ಭಾಗವಾಗಿ ಸೇವಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಹೊಸ ರುಚಿ: ಟೊಮೇಟೊ ಬೆಳ್ಳುಳ್ಳಿ ಚಟ್ನಿ-ಸಕತ್ ರುಚಿ!

ದಿನಕ್ಕೊಂದು ಕಪ್ (ಒಂದು ಅಥವಾ ಎರಡು ಟೊಮೆಟೊ) ಟೊಮೆಟೊ ಹಣ್ಣಿನ ತುಂಡುಗಳನ್ನು ಹಸಿಯಾಗಿ ತಿಂದರೆ ದಿನದ ಅಗತ್ಯದ ಅರ್ಧದಷ್ಟು ವಿಟಮಿನ್ ಎ ಲಭ್ಯವಾಗುತ್ತದೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ. ಅದೇ ಬೇಯಿಸಿದ ಟೊಮೆಟೊ ನಿಂದ ವಿಟಮಿನ್ ಗಳು ನಷ್ಟವಾಗುವ ಕಾರಣ ಸಾಧ್ಯವಾದಷ್ಟು ಹಸಿಯಾಗಿಯೇ ಸೇವಿಸಬೇಕು. ಟೊಮೇಟೊ ಜ್ಯೂಸ್ ಮಿಸ್ ಮಾಡದೇ ದಿನಾ ಸೇವಿಸಿ!

ಮಧುಮೇಹಿಗಳಿಗೂ ಟೊಮೆಟೊ ಒಂದು ಉತ್ತಮ ಆಯ್ಕೆಯಾಗಿದೆ. ಈ ಹಣ್ಣನ್ನು ಹಸಿಯಾಗಿ ಸೇವಿಸುವ ಮೂಲಕ ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಯಂತ್ರಣದಲ್ಲಿರುತ್ತದೆ ಹಾಗೂ ಮಧುಮೇಹದ ಪರಿಣಾಮಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

ಟೊಮೆಟೊವಿನಲ್ಲಿ ವಿಟಮಿನ್ ಎ ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಕಾರಣ ಇದು ಕಣ್ಣಿಗೆ ಮತ್ತು ಚರ್ಮಕ್ಕೆ ಅತ್ಯುತ್ತಮವಾಗಿದೆ. ಅಲ್ಲದೇ ಟೊಮೆಟೊಗೆ ಕೆಂಪು ಬಣ್ಣ ಬರಲು ನೆರವಾಗುವ ಲೈಕೋಪಿನ್ ಮತ್ತು ಕ್ಯಾಲ್ಸಿಯಂ ಮೂಳೆಗಳನ್ನು ದೃಢಗೊಳಿಸಲು ನೆರವಾಗುತ್ತದೆ. ಇದರಿಂದ ಮೂಳೆಗಳಲ್ಲಿ ಗಾಳಿಗುಳ್ಳೆಗಳು ತುಂಬಿಕೊಳ್ಳುವ osteoporosis ಎಂಬ ಸ್ಥಿತಿಯಿಂದ ತಪ್ಪಿಸುತ್ತದೆ. ಟೊಮೆಟೊದಲ್ಲಿರುವ ಪೋಷಕಾಂಶಗಳು ರಕ್ತವನ್ನು ಹೆಪ್ಪುಗಟ್ಟಿಸುವ ಸಾಧ್ಯತೆಯನ್ನು ಕಡಿಮೆಗೊಳಿಸಿ ಈ ಮೂಲಕ ಎದುರಾಗುವ ಸ್ತಂಭನ ಹಾಗೂ ಇತರ ತೊಂದರೆಗಳಿಂದ ರಕ್ಷಿಸುತ್ತದೆ. ಬನ್ನಿ, ಟೊಮೆಟೊ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂದು ನೋಡೋಣ..... 

ಮೂಳೆಗಳಿಗೆ ಉತ್ತಮವಾಗಿದೆ

ಮೂಳೆಗಳಿಗೆ ಉತ್ತಮವಾಗಿದೆ

ಅಚ್ಚರಿ ಎಂಬಂತೆ, ಟೊಮೆಟೊದಲ್ಲಿಯೂ ಕ್ಯಾಲ್ಸಿಯಂ ಇದೆ. ಮೂಳೆಗಳಿಗೆ ಕ್ಯಾಲ್ಸಿಯಂ ಅಗತ್ಯವಾಗಿದ್ದು ಇದು ಮೂಳೆಗಳನ್ನು ದೃಢಗೊಳಿಸಲು ನೆರವಾಗುತ್ತದೆ. ಒಂದು ವೇಳೆ ನಿಮ್ಮ ಮೂಳೆಗಳು ಶಿಥಿಲವಾಗಿದ್ದರೆ ನಿಮಗೆ ಹಸಿ ಟೊಮೆಟೊಗಳನ್ನು ತಿನ್ನುವುದು ಅಗತ್ಯವಾಗಿದೆ. ಅಲ್ಲದೇ ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸಲು ಟೊಮೆಟೊದಲ್ಲಿನ ಲೈಕೋಪಿನ್ ನೆರವಾಗುತ್ತದೆ.

ಉರಿಯೂತ ಮತ್ತು ಸಂಧಿವಾತವನ್ನು ಕಡಿಮೆ ಮಾಡುತ್ತದೆ

ಉರಿಯೂತ ಮತ್ತು ಸಂಧಿವಾತವನ್ನು ಕಡಿಮೆ ಮಾಡುತ್ತದೆ

ಟೊಮೆಟೊ ಹಣ್ಣನ್ನು ಜ್ಯೂಸ್ ಮಾಡಿಕೊಂಡು ಕುಡಿಯುವ ಮೂಲಕ TNF-alpha ಎಂಬ ಕಣಗಳ ಮಟ್ಟ ಕಡಿಮೆಯಾಗುತ್ತದೆ. ಈ ಕಣಗಳು ಹೆಚ್ಚಿದ್ದಷ್ಟೂ ಉರಿಯೂತ ಮತ್ತು ಸಂಧಿವಾತ ಹೆಚ್ಚುತ್ತದೆ. ಒಂದು ವೇಳೆ ಸಂಧಿವಾತ ಮತ್ತು ಉರಿಯೂತದ ತೊಂದರೆ ಇದ್ದರೆ ಟೊಮೆಟೊ ಜ್ಯೂಸ್ ಅಥವಾ ಹಸಿ ಟೊಮೆಟೊಗಳನ್ನು ಕತ್ತರಿಸಿ ಸೇವಿಸಿ.

ತ್ವಚೆ, ಮೂಳೆ ಮತ್ತು ಕಣ್ಣುಗಳ ಆರೋಗ್ಯ ಹೆಚ್ಚಿಸಲು

ತ್ವಚೆ, ಮೂಳೆ ಮತ್ತು ಕಣ್ಣುಗಳ ಆರೋಗ್ಯ ಹೆಚ್ಚಿಸಲು

ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಎ ಕಣ್ಣುಗಳು, ತ್ವಚೆ ಮತ್ತು ಮೂಳೆಗಳಿಗೆ ಉತ್ತಮವಾಗಿದೆ. ಆಹಾರ ತಜ್ಞರ ಪ್ರಕಾರ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಒಂದು ಕಪ್ ನಷ್ಟು ಹಸಿ ಟೊಮೆಟೊ ಹಣ್ಣಿನ ತುಂಡುಗಳನ್ನು ತಿನ್ನುವುದು ಉತ್ತಮ.

ಮಧುಮೇಹಿಗಳಿಗೆ ಅಗತ್ಯ

ಮಧುಮೇಹಿಗಳಿಗೆ ಅಗತ್ಯ

ಮಧುಮೇಹಿಗಳ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಸಂತುಲಿತ ಮಟ್ಟದಲ್ಲಿರಿಸಲು ಟೊಮೆಟೊ ನೆರವಾಗುತ್ತದೆ.

ಮಧುಮೇಹಿಗಳಿಗೆ ಅಗತ್ಯ

ಮಧುಮೇಹಿಗಳಿಗೆ ಅಗತ್ಯ

ಇದೇ ಕಾರಣಕ್ಕೆ ಊಟದ ಜೊತೆಗೆ ಸಾಲಾಡ್ ರೂಪದಲ್ಲಿ ಸೇವಿಸುವ ಮೂಲಕ ರಕ್ತದಲ್ಲಿ

ಥಟ್ಟನೇ ಸಕ್ಕರೆಯ ಪ್ರಮಾಣ ಏರದಂತೆ ನೋಡಿಕೊಳ್ಳಬಹುದು. ಬರೆಯ ಊಟದ ಸಮಯ ಮಾತ್ರವಲ್ಲ, ಯಾವಾಗ ಹಸಿವಾಗುತ್ತದೆಯೋ ಆಗೆಲ್ಲಾ ಹಸಿ ಟೊಮೆಟೊ ಬಿಲ್ಲೆಗಳನ್ನು ಸೇವಿಸಬಹುದು.

ರಕ್ತ ಹೆಪ್ಪುಗಟ್ಟುವುದರಿಂದ ರಕ್ಷಿಸುತ್ತದೆ

ರಕ್ತ ಹೆಪ್ಪುಗಟ್ಟುವುದರಿಂದ ರಕ್ಷಿಸುತ್ತದೆ

ದೇಹದಲ್ಲಿ ಚಲಿಸುತ್ತಿರುವ ರಕ್ತದಲ್ಲಿ ಯಾವುದೋ ಕಾರಣಕ್ಕೆ ಎಲ್ಲೋ ಒಂದೆಡೆ ರಕ್ತ ಹೆಪ್ಪುಗಟ್ಟಿದರೆ ಇದು ಅಪಾಯಕಾರಿಯಾಗಬಹುದು.

ರಕ್ತ ಹೆಪ್ಪುಗಟ್ಟುವುದರಿಂದ ರಕ್ಷಿಸುತ್ತದೆ

ರಕ್ತ ಹೆಪ್ಪುಗಟ್ಟುವುದರಿಂದ ರಕ್ಷಿಸುತ್ತದೆ

ಉಲ್ಬಣಗೊಂಡರೆ ಹೃದಯಾಘಾತದಿಂದ ಮರಣವೂ ಸಂಭವಿಸಬಹುದು. ಟೊಮೆಟೊ ತಿನ್ನುವ ಮೂಲಕ ರಕ್ತ ಹೆಪ್ಪುಗಟ್ಟುವ ಸಾಧ್ಯತೆಯನ್ನು ಕಡಿಮೆಮಾಡುತ್ತದೆ.

 
English summary

Reasons Why You Must Eat Tomatoes

Tomatoes normalise the high blood sugar level and also prevent the risks associated with diabetes. Tomatoes are good for your eye sight and skin as they are rich in vitamin A. The calcium and lycopene present in tomatoes will make your bones healthy and prevent osteoporosis. Tomatoes also prevent blood clots thus, prevent the risk of stoke and heart attack. Here are few more health benefits of tomatoes.
Please Wait while comments are loading...
Subscribe Newsletter