Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಟೊಮೇಟೊ ಜ್ಯೂಸ್ ಮಿಸ್ ಮಾಡದೇ ದಿನಾ ಸೇವಿಸಿ!
ಟೊಮೇಟೊ ಹಣ್ಣು ಇಡೀ ಪ್ರಪಂಚದಲ್ಲಿ ತನ್ನ ರಸ ಮತ್ತು ಹುಳಿಯ ಸ್ವಾದಕ್ಕೆ ಹೆಸರಾಗಿರುವ ಹಣ್ಣು!. ಹೌದು, ನಮ್ಮ ಭಾರತೀಯ ಅಡುಗೆಗಳಲ್ಲಿ ಇದಕ್ಕೆ ತನ್ನದೆ ಆದ ಸ್ಥಾನಮಾನವಿದೆ. ಇದನ್ನು ಬಹುತೇಕ ಎಲ್ಲಾ ಬಗೆಯ ಅಡುಗೆಯಲ್ಲಿ ನಾವು ಬಳಸುತ್ತೇವೆ. ಇದರಲ್ಲಿ ಪೋಷಕಾಂಶಗಳ ಪ್ರಮಾಣ ಅಧಿಕವಾಗಿರುತ್ತದೆ. ಆಹಾರಗಳಿಗೆ ಬಣ್ಣವನ್ನು ಮತ್ತು ರುಚಿಯನ್ನು ನೀಡುವುದರ ಜೊತೆಗೆ ಇದು ತನ್ನಲ್ಲಿರುವ ಆರೋಗ್ಯಕಾರಿ
ಪ್ರಯೋಜನಗಳ ಕಾರಣ ಸೂಪರ್ ಫುಡ್ ಆಗಿ ಗುರುತಿಸಿಕೊಂಡಿದೆ. ಇದರಿಂದ ದೊರೆಯುವ ಆರೋಗ್ಯಕಾರಿ ಪ್ರಯೋಜನಗಳನ್ನು ನೀವು ತಿಳಿದುಕೊಂಡರೆ ಅಚ್ಚರಿ ಪಡುವಿರಿ. ಟೊಮೇಟೊ ಹಣ್ಣಿನ ಜ್ಯೂಸ್ ನಲ್ಲಿ ಹೆಚ್ಚಿನ ಪ್ರಮಾಣದವಿಟಮಿನ್ ಸಿ ಮತ್ತು ವಿಟಮಿನ್ ಎ ಇರುವುದರಿಂದ ನಮ್ಮ ದೇಹಕ್ಕೆ ರೋಗದ ಸೋಂಕಿನಿಂದ ರಕ್ಷಣೆ ಪಡೆಯಲು ಅತ್ಯುತ್ತಮವಾಗಿದೆ.
ಇದರ ನಿಯಮಿತ ಬಳಕೆಯಿಂದ ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಬ್ರೆಸ್ಟ್ ಕ್ಯಾನ್ಸರ್ ರೋಗಗಳಿಗೆ ಚಿಕಿತ್ಸೆ ನೀಡಬಹುದು ಎಂದು ತೋರಿಸುವ ಅಧ್ಯಯನಗಳಿವೆ. ಟೊಮೇಟೊ ಹಣ್ಣಿನಲ್ಲಿ ಅತಿ ಹೆಚ್ಚಿನ ಮಟ್ಟದ ಉತ್ಕರ್ಷಣ ನಿರೋಧಕ ಶಕ್ತಿ ಇರುವುದರಿಂದ ಅನಾರೋಗ್ಯ ಮತ್ತು ರೋಗಗಳನ್ನು ದೂರವಿರಿಸಬಹುದು.
ಟೊಮೇಟೊ ರಸವನ್ನು ಬಳಸುವಾಗ ಅರೋಗ್ಯಕರ ಕೊಬ್ಬಿರುವ ಆಹಾರಗಳು, ಉದಾಹರಣೆಗೆ ಅವೊಕಾಡೊ ಅಥವ ಆಲಿವ್ ಎಣ್ಣೆಯನ್ನು ಸೇರಿಸಬೇಕೆಂದು ಸಲಹೆ ಮಾಡುತ್ತಾರೆ. ಹೀಗೆ ಮಾಡುವುದರಿಂದ ಟೊಮೇಟೊದಲ್ಲಿರುವ ಸಸ್ಯಜನ್ಯ (Phytochemicals)ವನ್ನು 15 ಬಾರಿಯಷ್ಟು ಹೀರಿಕೊಳ್ಳುವುದಕ್ಕೆ ಸಹಾಯಮಾಡುತ್ತವೆ.
ಟೊಮೇಟೊ ದೇಹಕ್ಕೆ ಹೆಚ್ಚು ಪರಿಣಾಮಕಾರಿಯಾಗಬೇಕಾದರೆ ರಸದ ರೂಪದಲ್ಲಿ ಸೇವಿಸಬೇಕು. ಆದರೆ ಗರಿಷ್ಠ ಸವಲತ್ತುಗಳನ್ನು ಪಡೆಯಲು ಸಾವಯುವ (Organic) ಟೊಮೇಟೊ ಅತ್ಯುತ್ತಮ ಆಯ್ಕೆ ಎಂಬುದನ್ನು ನೆನಪಿಟ್ಟುಕೊಳ್ಳಿ. ಈ ಲೇಖನದಲ್ಲಿ ಟೊಮೇಟೊ ರಸ ಆರೋಗ್ಯಕಾರಿ ಪ್ರಯೋಜನಗಳ ಬಗ್ಗೆ ವಿಶೇಷ ಗಮನವನ್ನು ಕೊಟ್ಟಿದ್ದೇವೆ... ಅವು ಯಾವುದು ಎಂಬುದನ್ನು ಬನ್ನು ಮುಂದೆ ಓದಿ...

ಉತ್ಕರ್ಷಣ ನಿರೋಧಕ ಶಕ್ತಿ(ಆಂಟಿಆಕ್ಸಿಡೆಂಟ್ಸ್)
ಅನೇಕ ಅಧ್ಯಯನಗಳ ಪ್ರಕಾರ ಟೊಮೇಟೊದಲ್ಲಿ ಅತ್ಯಧಿಕ ಪ್ರಮಾಣದ ವಿರೋಧಿ ಆಕ್ಸಿಡೆಂಟ್ಸ್ ಇರುವುದರಿಂದ ಇದರ ರಸ ಸೇವನೆಯು ಅನೇಕ ಪ್ರಯೋಜನಗಳನ್ನು ಕೊಡುತ್ತವೆ ಎಂದು ಋಜುವಾತಾಗಿದೆ. ಇದರಿಂದ ಫ್ರೀ ರಾಡಿಕಲ್ ವಿರುದ್ಧ ಹೋರಡಲು ಸಹಾಯವಾಗುತ್ತದೆ. ಫ್ರೀ ರಾಡಿಕಲ್ ಹಾಗೆಯೇ ಇದ್ದರೆ, ಅತ್ಯುಗ್ರ, ಕಡುಸೋಂಕಿನ ತೊಂದರೆಗಳನ್ನು ಪ್ರಚೋದಿಸಬಹುದು. ಹಾಗೆಯೇ, ಹೆಚ್ಚಿನ ವಿರೋಧಿ ಆಕ್ಸಿಡೆಂಟ್ಸ್‌ನ ಪೂರೈಕೆ ಇದ್ದರೆ ಮೂಳೆಯ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಲು
ದೇಹದಲ್ಲಿ ಸಾಕಷ್ಟು ಲೈಕೊಪೇನ್ (Lycopene) ಇದ್ದಾಗ, ಪ್ರತಿರಕ್ಷಣೆ ಪ್ರತಿಕ್ರಿಯೆಯನ್ನು ಉತ್ತೇಜಿಸುತ್ತದೆ ಮತ್ತು ಇತರ ರೋಗಗಳು ತಟ್ಟುವುದನ್ನು ಎದುರಿಸುತ್ತದೆ. ಲೈಕೊಪೈನ್ ಟೊಮೇಟೊ ರಸದಲ್ಲಿರುವುದರಿಂದ ರೋಗ ನಿರೋಧಕ ಸಾಮರ್ಥ್ಯವನ್ನು ಹೆಚ್ಚಿಸುವುದರಲ್ಲಿ ಇದು ಸಹಕಾರಿಯಾಗಲಿದೆ

ಹೃದಯರೋಗಗಳು ಕಡಿಮೆಯಾಗುವುದು
ಟೊಮೇಟೊದಲ್ಲಿ ಅಧಿಕವಾಗಿ ನಿಯಾಸಿನ್, ಫೋಲೇಟ್ ಮತ್ತು ವಿಟಮಿನ್ ಬಿ6 ಇರುವುದರಿಂದ ಹೃದಯ ರೋಗಗಳ ಸಾಧ್ಯತೆಯನ್ನು ಶೇಕಡ 30 ರಷ್ತು ಕಡಿಮೆಮಾಡುತ್ತದೆ. ಟೊಮೇಟೊ ಬಳಕೆಯಿಂದ ಹೊಮೊಸಿಸ್ಟೈನ್ (Homocysteine) ಮಟ್ಟವನ್ನು ನಿರ್ವಹಿಸುವಲ್ಲಿ ಹೆಚ್ಚು ಪರಿಣಾಮಕಾರಿಯೆಂದು ಕಂಡುಹಿಡಿಯಲಾಗಿದೆ.

ಲೈಕೋಪೇನ್
ಟೊಮೇಟೊ ರಸದಲ್ಲಿ ಲೈಕೋಪೇನ್ ಇರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಲು ಒಂದು ಪ್ರಮುಖವಾದ ಆಯ್ಕೆಯಾಗಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಯಂತ್ರಿಸುವಲ್ಲಿ ಸಹಾಯಮಾಡುತ್ತದೆ.

ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ
ಮೇಲೆ ಹೇಳಿದಂತೆ ಟೊಮೇಟೊನಲ್ಲಿ ಅತ್ಯಧಿಕ ಉತ್ಕರ್ಷಣ ನಿರೋಧಕ ಅಂಶವಿದೆ. ಇದರಿಂದ ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು ತೆಗೆದುಹಾಕಲು ಸಹಾಯಮಾಡುತ್ತದೆ. ಫ್ರೀ ರಾಡಿಕಲ್ ಚಟುವಟಿಕೆಗಳಿಂದ ಕ್ಯಾನ್ಸರ್ ರೋಗ ಬರುವುದಕ್ಕೆ ಒಂದು ಪ್ರಮುಖ ಕಾರಣ. ಟೊಮೇಟೊ ರಸವನ್ನು ಕುಡಿಯುವುದು ಸಂಪೂರ್ಣ ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸಲು ಒಂದು ಅತ್ಯುತ್ತಮ ವಿಧಾನವಾಗಿದೆ.

ಸೋಂಕುಗಳ ವಿರುದ್ಧ ಹೋರಾಡಲು
ಟೊಮೇಟೊ ರಸದಲ್ಲಿರುವ ಹೆಚ್ಚು ಉತ್ಕರ್ಷಣ ಮತ್ತು ವಿಟಮಿನ್ ಸಿ ಸೋಂಕುಗಳನ್ನು ತಡೆಯಲು ಮತ್ತು ಅದರ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ರೋಗ ನಿರೋಧಕ ವ್ಯವಸ್ಥೆಯನ್ನು ಅತ್ಯಂತ ಸಕ್ರಿಯ ಸ್ಥಿತಿಯಲ್ಲಿಟ್ಟುಕೊಂಡಿರಲು ಟೊಮೇಟೊ ರಸದ ಸಾಮರ್ಥ್ಯವೇ ಕಾರಣ. ನಿಮ್ಮ ನಿರೋಧಕ ವ್ಯವಸ್ಥೆಯು ಉತ್ತಮವಾಗಿ ಕೆಲಸಮಾಡಿದರೆ ರೋಗಗಳನ್ನು ತಡೆಯಲು ಮತ್ತು ಅದರ ಚಿಕಿತ್ಸೆಗೆ ಸುಲಭವಾಗುತ್ತದೆ.

ಮಲಬದ್ಧತೆಯನ್ನು ನಿವಾರಿಸುತ್ತದೆ
ನಿಮ್ಮ ಕೋಲನ್‌ನಲ್ಲಿ ಆಹಾರ ಸಿಕ್ಕಿ ಹಾಕಿಕೊಂಡಾಗ ಮಲಬದ್ಧತೆ ಕಾಡುತ್ತದೆ. ಆಗ ಇದು ನಿಮಗೆ ಅತ್ಯಂತ ಅಸೌಖ್ಯವನ್ನುಂಟು ಮಾಡುತ್ತದೆ. ಟೊಮೇಟೊಗಳಲ್ಲಿ ರಸದಲ್ಲಿ ಅಧಿಕ ಪ್ರಮಾಣದ ನಾರಿನಂಶವು ನಿಮ್ಮ ಕೋಲನ್‌ನಲ್ಲಿರುವ ಆಹಾರ ನಿವಾರಣೆಯಾಗುವಂತೆ ಮಾಡುತ್ತದೆ. ಹೀಗೆ ಮಲಬದ್ಧತೆ ಸಹ ನಿವಾರಣೆಯಾಗುತ್ತದೆ.



Click it and Unblock the Notifications