ಎದೆಯ ಒಂದೇ ಬದಿಯಲ್ಲಿ ಸೂಜಿ ಚುಚ್ಚಿದಂತೆ ನೋವಾಗುತ್ತಿದೆಯೇ?

By Manu
Subscribe to Boldsky

ಸಾಮಾನ್ಯವಾಗಿ ಎದೆಯ ಭಾಗದಲ್ಲಿ ನೋವು ಬಂದರೆ ಹೆಚ್ಚಿನವರು ಇದು ಹೃದಯದ ತೊಂದರೆ ಎಂದುಕೊಂಡು ಭಯಭೀತರಾಗುತ್ತಾರೆ. ಆದರೆ ಎದೆಗೂಡಿನಲ್ಲಿ ಹೃದಯದ ಹೊರತಾಗಿ ಶ್ವಾಸಕೋಶ, ವಪೆ, ಸ್ನಾಯುಗಳು ಮೊದಲಾದ ಅಂಗಗಳಿವೆ. ಎಚ್ಚರ: ಎದೆ ನೋವು ಎನ್ನುವುದು ಸಾಮಾನ್ಯ ಕಾಯಿಲೆ ಅಲ್ಲ..!

ಅಲ್ಲದೇ ಹೃದಯ ಮತ್ತು ಶ್ವಾಸಕೋಶಗಳು ಸರಿಸುಮಾರು ಒಂದೇ ಕಡೆ ಅಕ್ಕಪಕ್ಕದಲ್ಲಿಯೇ ಇವೆ. ಆದ್ದರಿಂದ ಎದೆಯಲ್ಲಿ ನೋವು ಬಂದರೆ ತಕ್ಷಣವೇ ಭಯಭೀತರಾಗಬೇಕಿಲ್ಲ. ಇದಕ್ಕೆ ಬೇರೆಯೇ ಕಾರಣಗಳಿರಬಹುದು. ಎದೆಯುರಿ ಸಮಸ್ಯೆ- ಒಂದೆರಡು ದಿನಗಳಲ್ಲಿಯೇ ನಿಯಂತ್ರಣಕ್ಕೆ!

ಹೃದಯ ಸ್ತಂಭನಕ್ಕೂ ಮುನ್ನ ಎದೆಯಲ್ಲಿ ಸೂಜಿ ಚುಚ್ಚಿದಂತೆ ನೋವಾಗುವುದು ಸಹಜ. ಆಗ ತಕ್ಷಣವೇ ರೋಗಿಯನ್ನು ವೈದ್ಯರ ಬಳಿ ಕರೆದೊಯ್ಯಬೇಕು. ವೈದ್ಯರ ತಪಾಸಣೆಯ ಬಳಿಕವೇ ಈ ನೋವಿಗೆ ನಿಜವಾದ ಕಾರಣವನ್ನು ಕಂಡುಕೊಳ್ಳಬಹುದು. ಎದೆಯಲ್ಲಿ ಒಂದೇ ಬದಿ ನೋವಾಗಲು ಈ ಕೆಳಗೆ ವಿವರಿಸಿದ ಕಾರಣಗಳೂ ಇರಬಹುದು....  

ಎದೆಗೂಡಿನ ಮೂಳೆ ಮುರಿತ

ಎದೆಗೂಡಿನ ಮೂಳೆ ಮುರಿತ

ಎದೆಗೂಡಿನ ಮೂಳೆಗಳು ಕೊಂಚ ಚಪ್ಪಟೆಯಾಗಿದ್ದು ಇವುಗಳ ಮೇಲೆ ಬಿದ್ದ ಪ್ರಹಾರ ಅಥವಾ ಬಿದ್ದ ಪೆಟ್ಟಿನಿಂದಾಗಿ ಸೂಕ್ಷ್ಮವಾದ ಬಿರುಕು ಉಂಟಾಗಬಹುದು. ಕೆಲವೊಮ್ಮೆ ಆತ್ಮೀಯರನ್ನು ಕಂಡಾಗ ಉದ್ವೇಗದಲ್ಲಿ ಬಿಗಿಯಪ್ಪುಗೆಯ ಭರದಲ್ಲಿಯೂ ಈ ಮೂಳೆಯಲ್ಲಿ ಕೂದಲಿನಷ್ಟೇ ಚಿಕ್ಕ ಬಿರುಕು ಉಂಟಾಗಬಹುದು. ಕೆಲವೊಮ್ಮೆ ಶ್ವಾಸಕೋಶಕ್ಕೆ ಆದ ಗಾಯ ಅಥವಾ ಕಾಯಿಲೆಯೂ ಎದೆಯ ಒಂದು ಬದಿಯ ನೋವಿಗೆ ಕಾರಣವಾಗಬಹುದು.

ಕ್ಯಾನ್ಸರ್

ಕ್ಯಾನ್ಸರ್

ಶ್ವಾಸಕೋಶದ ಕ್ಯಾನ್ಸರ್ ಸಹಿತ ಕೆಲವು ವಿಧದ ಕ್ಯಾನ್ಸರ್ ಗಳು ಎದೆಯ ಒಂದೇ ಬದಿ ನೋವನ್ನು ನೀಡುತ್ತವೆ. ವಿಶೇಷವಾಗಿ ಧೂಮಪಾನಿಗಳಲ್ಲಿ ಈ ನೋವು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ತಕ್ಷಣವೇ ಧೂಮಪಾನವನ್ನು ತ್ಯಜಿಸಿ ವೈದ್ಯರನ್ನು ಭೇಟಿಯಾಗುವುದು ಅವಶ್ಯ. ಅಲ್ಲದೇ ಸಿಮೆಂಟ್ ಶೀಟ್ ಎಂದು ಕರೆಯಲಾಗುವ ಆಸ್ಬೆಸ್ಟಾಸ್ ನಾರನ್ನು ಬಳಸಿ ಮಾಡುವ ಸಾಮಾಗ್ರಿಗಳಿಗೆ ಒಡ್ಡಿಕೊಂಡಿರುವವರಿಗೆ ಎದುರಾಗುವ mesothelioma ಕ್ಯಾನ್ಸರ್ ಮೂಲಕವೂ ಎದೆಯ ಒಂದೇ ಬದಿಯಲ್ಲಿ ನೋವು ಬರುತ್ತದೆ. ಇದುವೇ ಕ್ಯಾನ್ಸರ್ ನಿಯಂತ್ರಿಸುವ ಪವರ್ ಫುಲ್ ಜ್ಯೂಸ್

ವೈರಲ್ ಸೋಂಕು

ವೈರಲ್ ಸೋಂಕು

shingles ಎಂಬ ವೈರಸ್ಸಿನ ಮೂಲಕ ಆಗಮಿಸಿರಬಹುದಾದ ಸೋಂಕು ಸಹಾ ಎದೆಯ ಒಂದೇ ಬದಿಯಲ್ಲಿ ನೋವನ್ನು ನೀಡುತ್ತದೆ. ಅಲ್ಲದೇ ಶ್ವಾಸಕೋಶದ ಅಂಗಾಂಶಗಳಿಗೆ ರಕ್ತ ಪೂರೈಕೆ ಕಡಿಮೆಯಾದಾಗಲೂ ಈ ತೊಂದರೆ ಕಂಡುಬರುತ್ತದೆ.

ಇತರ ಸೋಂಕುಗಳು

ಇತರ ಸೋಂಕುಗಳು

pulmonary tuberculosis ಅಥವಾ ಕ್ಷಯ, ನ್ಯುಮೋನಿಯಾ ಜ್ವರ ಮೊದಲಾದವೂ ಎದೆಯ ಒಂದೇ ಬದಿಯಲ್ಲಿ ನೋವನ್ನುಂಟುಮಾಡುತ್ತವೆ. ಈ ಸೋಂಕುಗಳ ಮೂಲಕ ವಿಶೇಷವಾಗಿ ಶ್ವಾಸಕೋಶದಲ್ಲಿ ಸೋಂಕುಕಾರಕ ದ್ರವ ಅಥವಾ ಕೀವು ಉಂಟಾಗಿ ನೋವು ಕಾಣಿಸಿಕೊಳ್ಳುತ್ತದೆ. ಅಲ್ಲದೇ ಸೋಂಕುಗಳ ಮೂಲಕ ಕೆಂಪಗಾಗುವ ಶ್ವಾಸನಾಳಗಳು (bronchiectasis) ಸಹಾ ಎದೆಯ ಒಂದೇ ಭಾಗದಲ್ಲಿ ನೋವು ನೀಡಬಲ್ಲವು.

ಎದೆಯುರಿ

ಎದೆಯುರಿ

ಎದೆಯುರಿಗೆ ಅಜೀರ್ಣತೆ ಪ್ರಮುಖ ಕಾರಣವಾಗಿದೆ. ಅಜೀರ್ಣತೆಯಿಂದ ಹೊಟ್ಟೆಯಲ್ಲಿ ಉತ್ಪತ್ತಿಯಾಗುವ ಕೆಲವು ಅನಿಲಗಳು ಅನ್ನನಾಳದ ಮೂಲಕ ಹೊರಬರಲು ಯತ್ನಿಸುವುದರಿಂದ ಉರಿ ಕಾಣಿಸಿಕೊಳ್ಳುತ್ತದೆ. ಈ ಉರಿ ವಪೆಯನ್ನು ಬಾಧಿಸುವುದರಿಂದ ರೋಗಿಗೆ ಎದೆಯಲ್ಲಿಯೇ ಉರಿಯಾದಂತಹ ಭಾವನೆ ಮೂಡುತ್ತದೆ.ನರಕಯಾತನೆ ನೀಡುವ ಎದೆಯುರಿ ಸಮಸ್ಯೆಗೆ ಫಲಪ್ರದ ಮನೆಮದ್ದು

ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ

ತಕ್ಷಣವೇ ವೈದ್ಯರ ಸಲಹೆ ಪಡೆಯಿರಿ

ಕಾರಣವೇನೇ ಇರಲಿ, ನೋವು ಅಥವಾ ಉರಿ ಕಾಣಿಸಿಕೊಂಡ ತಕ್ಷಣವೇ ವೈದ್ಯರನ್ನು ಕಂಡು ಅಗತ್ಯವಿರುವ ಪರೀಕ್ಷೆಗಳನ್ನು ಮಾಡಿಸಿಕೊಂಡು ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಪರೀಕ್ಷೆಗಳ ಮೂಲಕ ಮಾತ್ರವೇ ಈ ನೋವಿಗೆ ನಿಜವಾದ ಕಾರಣವೇನು ಎಂದು ಕಂಡುಕೊಳ್ಳಬಹುದು.

 
For Quick Alerts
ALLOW NOTIFICATIONS
For Daily Alerts

    English summary

    Reasons For Pain On One Side Of Chest

    Chest pain is alarming because we associate the condition to a heart attack. It is important to rush to a doctor to rule out any serious health issues. Also, diagnosis can specify the actual cause behind the pain on one side of the chest. Here are some reasons behind such pains
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more