ಎದೆಯುರಿ ಸಮಸ್ಯೆ- ಒಂದೆರಡು ದಿನಗಳಲ್ಲಿಯೇ ನಿಯಂತ್ರಣಕ್ಕೆ!

By Arshad
Subscribe to Boldsky

ಎದೆಯುರಿ ಅಥವಾ ಹೊಟ್ಟೆಯ ಉರಿ ಊಟದ ಬಳಿಕ ಎದುರಾಗುವ ಸಾಮಾನ್ಯ ತೊಂದರೆಯಾಗಿದ್ದು ಹೊಟ್ಟೆಯಲ್ಲಿ ಅಜೀರ್ಣತೆಯಿಂದ ಉಂಟಾದ ಆಮ್ಲೀಯ ಗಾಳಿ ಅನ್ನನಾಳದ ಮೂಲಕ ಹೊರಬರಲು ಯತ್ನಿಸುವಾಗ ಹೊಟ್ಟೆಯ ಮೇಲ್ಭಾಗ ಮತ್ತು ಅನ್ನನಾಳದ ಒಳಗೆ ಮಾಡುವ ಉರಿಯಾಗಿದೆ. ಇನ್ನು ಎದೆಯುರಿ ಸಮಸ್ಯೆಗೆ ದಯವಿಟ್ಟು ಕಂಗಾಲಾಗದಿರಿ!

gastro esophageal reflux disease ಎಂದು ಕರೆಯಲಾಗುವ ಈ ಸ್ಥಿತಿ ಬಂದಾಗ ತಡೆಯಲು ಸಾಧ್ಯವಾಗದೇ ಉರಿ ಅನುಭವಿಸಬೇಕಾಗುತ್ತದೆ. ಬನ್ನಿ, ಈ ತೊಂದರೆಯನ್ನು ಸುಲಭ ಮನೆಮದ್ದುಗಳಿಂದ ಹೇಗೆ ಶಮನಿಸಬಹುದು ಎಂಬುದನ್ನು ನೋಡೋಣ...    

ಎದೆಯುರಿ ಎಂದರೇನು?

ಎದೆಯುರಿ ಎಂದರೇನು?

ಹುಳಿತೇಗು, ಎದೆಯುರಿ, ಹೊಟ್ಟೆಯುರಿ ಮೊದಲಾದ ಹೆಸರುಗಳಿಂದ ಕರೆಯಲ್ಪಡುವ ಈ ತೊಂದರೆ ಎದೆಯ ಮೇಲ್ಭಾಗ ಅಂದರೆ ಗಂಟಲಿನ ಕೊಂಚವೇ ಕೆಳಗೆ ಅತೀವ ಉರಿಯನ್ನು ಉಅಂಟುಮಾಡುತ್ತದೆ. ಇದಕ್ಕೆ ಹೊಟ್ಟೆಯಲ್ಲಿ ಉತ್ಪತ್ತಿಯಾದ ಆಮ್ಲೀಯ ರಸ ಮತ್ತು ವಾಯುಗಳು ಕಾರಣವಾಗಿದ್ದು ಒತ್ತಡ ತಾಳಲಾರದೇ ಮೇಲ್ಮುಖವಾಗಿ ಒತ್ತಲ್ಪಡುತ್ತವೆ. ಇದಕ್ಕೆ ಆಸಮರ್ಪಕವಾದ ಆಹಾರಗಳ ಸಂಯೋಜನೆ, ಆಸಮರ್ಪಕ ಭಂಗಿಯಲ್ಲಿ ಪವಡಿಸುವುದು, ಹೊಟ್ಟೆಯ ಭಾಗದಲ್ಲಿ ಒತ್ತಡ ಹೇರುವುದು ಮೊದಲಾದವು ಎದೆಯುರಿಗೆ ಕಾರಣವಾಗಿದೆ. ಎದೆಯುರಿಗೆ pyrosis, cardialgia, ಅಥವಾ acid indigestion ಎಂಬ ಹೆಸರುಗಳೂ ಇವೆ.

ಎದೆಯುರಿಗೆ ಪರಿಹಾರ

ಎದೆಯುರಿಗೆ ಪರಿಹಾರ

ಅರ್ಧ ಲಿಂಬೆಯ ರಸ ಅಥವಾ ಒಂದು ದೊಡ್ಡ ಚಮಚ ಲಿಂಬೆಯ ಸಿದ್ಧ ರಸವನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಬೆರೆಸಿ ಇದಕ್ಕೆ ಕೊಂಚ ಜೇನು ಸೇರಿಸಿ ಬೆಳಿಗ್ಗೆದ್ದ ತಕ್ಷಣ ಖಾಲಿಹೊಟ್ಟೆಯಲ್ಲಿ ಕುಡಿದರೆ ರಾತ್ರಿಯ ಊಟದ ಪರಿಣಾಮವಾಗಿ ಉಂಟಾಗಿದ್ದ ಎದೆಯುರಿ ಕಡಿಮೆಯಾಗುತ್ತದೆ.

ಏಳೆಂಟು ಒಣದ್ರಾಕ್ಷಿ

ಏಳೆಂಟು ಒಣದ್ರಾಕ್ಷಿ

ಒಂದು ವೇಳೆ ಈ ವಿಧಾನ ಇಷ್ಟವಾಗದಿದ್ದರೆ ಅಥವಾ ಮಧ್ಯಾಹ್ನದ ಊಟದ ಬಳಿಕ ತೊಂದರೆ ಎದುರಾದರೆ ಸುಮಾರು ಏಳೆಂಟು ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು ಊಟದ ಬಳಿಕ ನೀರಿನ ಸಹಿತ ಕುಡಿಯಬೇಕು. ಈ ನೀರನ್ನೂ ಬೆಳಿಗ್ಗೆ ಪ್ರಥಮ ಆಹಾರವಾಗಿ ಸೇವಿಸುವ ಮೂಲಕ ದಿನದ ಆಹಾರಗಳ ಸೇವನೆಯಿಂದ ಎದೆಯುರಿ ಉಂಟಾಗುವುದಿಲ್ಲ.

ದಿನಕ್ಕೊಂದು ಬಾಳೆಹಣ್ಣು ತಿನ್ನಿ

ದಿನಕ್ಕೊಂದು ಬಾಳೆಹಣ್ಣು ತಿನ್ನಿ

ಊಟದ ಬಳಿಕ ಬಾಳೆಹಣ್ಣನ್ನು ತಿನ್ನುವ ಮೂಲಕ ಆಮ್ಲ ಉತ್ಪತ್ತಿಯಾಗದೇ ಇರಲು ಸಾಧ್ಯವಾಗುತ್ತದೆ. ಅಲ್ಲದೇ ಹೊಟ್ಟೆ ತುಂಬಿದಂತೆ ಅನ್ನಿಸುವುದರಿಂದ ಅನಗತ್ಯವಾಗಿ ಹೆಚ್ಚಿನ ಆಹಾರ ಸೇವನೆಯನ್ನು ತಡೆಯುತ್ತದೆ.

ತುಳಸಿ ಎಲೆಗಳನ್ನು ಜಗಿಯಿರಿ

ತುಳಸಿ ಎಲೆಗಳನ್ನು ಜಗಿಯಿರಿ

ಎದೆಯುರಿಯನ್ನು ತಕ್ಷಣ ಕಡಿಮೆಗೊಳಿಸಲು ಉತ್ತಮ ವಿಧಾನವೆಂದರೆ ತುಳಸಿ ಎಲೆಗಳನ್ನು ಜಗಿಯುವುದು. ಅದರಲ್ಲೂ ಎದೆಯುರಿಯೊಂದಿಗೆ ವಾಕರಿಕೆಯೂ ಆವರಿಸಿದ್ದರೆ ಈ ಎಲೆಗಳು ತಕ್ಷಣ ಶಮನ ನೀಡುತ್ತವೆ ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಶೀತ ಮೊದಲಾದ ತೊಂದರೆಗಳನ್ನೂ ನಿವಾರಿಸುತ್ತವೆ.ಆರೋಗ್ಯ ರಕ್ಷಕ- ತುಳಸಿ ಎಲೆಯ ವೈಶಿಷ್ಟ್ಯ ಒಂದೇ, ಎರಡೇ?

ತಣ್ಣಗಿನ ಹಸಿ ಹಾಲು ಕುಡಿಯಿರಿ

ತಣ್ಣಗಿನ ಹಸಿ ಹಾಲು ಕುಡಿಯಿರಿ

ತಕ್ಷಣಕ್ಕೆ ಎದೆಯುರಿಯನ್ನು ಶಮನಗೊಳಿಸಲು ಇನ್ನೊಂದು ಸಮರ್ಥ ವಿಧಾನವೆಂದರೆ ತಣ್ಣಗಿನ ಹಸಿ ಹಾಲನ್ನು ಕುಡಿಯುವುದು. ಇದರಿಂದಲೂ ಎದೆಯುರಿ ಮತ್ತು ವಾಕರಿಕೆ ತಕ್ಷಣ ಕಡಿಮೆಯಾಗುತ್ತದೆ.

 
For Quick Alerts
ALLOW NOTIFICATIONS
For Daily Alerts

    English summary

    Top home remedies for heartburn

    Heartburn is a common digestive problem, which can be prevented. The build-up of acidity causes heartburn, which is an uneasy feeling and is a symptom of gastro esophageal reflux disease.
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more