For Quick Alerts
ALLOW NOTIFICATIONS  
For Daily Alerts

ನಿಮ್ಮ ಕಿವಿಯ ಈ ಭಾಗಗಳನ್ನು ಮುಟ್ಟಿದರೆ ಹೀಗೆಲ್ಲಾ ಆಗುತ್ತಂತೆ ಗೊತ್ತಾ?

ಕಿವಿಯ ಕೆಲವೊಂದು ಭಾಗಗಳಿಗೆ ಈ ಸೂಜಿಯ ಮೊನೆಯಿಂದ ಚುಚ್ಚಿದಾಗ ದೇಹದ ಒಳಗಿನ ಭಾಗಗಳ ಕಾಯಿಲೆಗಳನ್ನು ನಿವಾರಿಸಬಹುದು. ಇದು ಹೇಗೆ ಎಂದು ಈ ಲೇಖನದ ಮೂಲಕ ತಿಳಿಯಿರಿ.

By Hemanth
|

ಪ್ರತಿಯೊಂದು ರೋಗಗಳಿಗೆ ಹಲವಾರು ರೀತಿಯ ಚಿಕಿತ್ಸೆಗಳು ಇರುತ್ತದೆ. ಅಲೋಪತಿ, ಆಯುರ್ವೇದ, ಯುನಾನಿ, ಹೋಮಿಯೋಪತಿ ಇತ್ಯಾದಿ. ಕೆಲವರು ಆಯುರ್ವೇದವನ್ನು ನೆಚ್ಚಿಕೊಂಡರೆ ಇನ್ನು ಕೆಲವರಿಗೆ ಅಲೋಪತಿ ಹಿಡಿಸುತ್ತದೆ. ಹೀಗೆ ಅವರವರ ದೇಹ ಲಕ್ಷಣಕ್ಕೆ ಅನುಗುಣವಾಗಿ ಔಷಧಿ ತೆಗೆದುಕೊಳ್ಳುತ್ತಾರೆ. ಆದರೆ ನಮಗೆ ಗೊತ್ತಿರುವಂತೆ ಆಕ್ಯುಪ್ರೆಷರ್ ಬಗ್ಗೆ ನಾವು ಕೇಳಿದ್ದೇವೆ. ಲವಲವಿಕೆಯ ಜೀವನ ಶೈಲಿಗೆ, 'ಆಕ್ಯುಪ್ರೆಷರ್ ಚಿಕಿತ್ಸೆ'

ಸೂಜಿಯ ಮೊನೆಯನ್ನು ಮೆಲ್ಲನೆ ದೇಹದ ಯಾವುದಾದರೂ ಭಾಗಕ್ಕೆ ಚುಚ್ಚಿ ಒತ್ತಡ ಹಾಕಿ ಚಿಕಿತ್ಸೆ ನೀಡಲಾಗುವುದು. ಬಟ್ಟೆಗಳಿಗೆ ಬಳಸಲಾಗುವಂತಹ ಸೂಜಿಯನ್ನು ಇದಕ್ಕೆ ಬಳಸಲಾಗುತ್ತದೆ. ಅಂಗೈ, ಬೆರಳುಗಳು ಹಾಗೂ ದೇಹದ ಇತರ ಕೆಲವೊಂದು ಭಾಗಗಳಿಗೆ ಈ ಸೂಜಿಯಿಂದ ಒತ್ತಡ ಹಾಕಿದಾಗ ಕೆಲವೊಂದು ರೋಗಗಳು ಶಮನವಾಗುವುದು. ಮ್ಯಾಜಿಕ್ ಟ್ರಿಕ್ಸ್! ಹೀಗೂ ದೇಹದ ತೂಕ ಇಳಿಸಿಕೊಳ್ಳಬಹುದು!
ಕಿವಿಯ ಕೆಲವೊಂದು ಭಾಗಗಳಿಗೆ ಈ ಸೂಜಿಯಿಂದ ಚುಚ್ಚಿದಾಗ ದೇಹದ ಒಳಗಿನ ಭಾಗಗಳ ಕಾಯಿಲೆಗಳನ್ನು ನಿವಾರಿಸಬಹುದು. ಇದು ಹೇಗೆ ಎಂದು ಈ ಲೇಖನದ ಮೂಲಕ ತಿಳಿಯಿರಿ....

#1 ಎಂದು ಗುರುತಿಸಿರುವ ಭಾಗ

#1 ಎಂದು ಗುರುತಿಸಿರುವ ಭಾಗ

ಚಿತ್ರದಲ್ಲಿ ಒಂದು ಎಂದು ಗುರುತಿಸಿರುವಂತಹ ಭಾಗವನ್ನು ಸರಿಯಾಗಿ ಗಮನಿಸಿ. ಇದು ನಿಮ್ಮ ಬೆನ್ನು ಮತ್ತು ಭುಜಕ್ಕೆ ಸಂಬಂಧಿಸಿರುವುದಾಗಿದೆ. ಈ ಭಾಗಕ್ಕೆ ಪಿನ್‌ನಿಂದ 60 ಸೆಕೆಂಡುಗಳ ಕಾಲ ಒತ್ತಡ ಹಾಕಿದಾಗ ಬೆನ್ನು ಹಾಗೂ ಕುತ್ತಿಗೆಯಲ್ಲಿನ ಒತ್ತಡವು ಕಡಿಮೆಯಾಗುವುದು.

#2 ಎಂದು ಗುರುತಿಸಿರುವ ಭಾಗ

#2 ಎಂದು ಗುರುತಿಸಿರುವ ಭಾಗ

2 ಎಂದು ಗುರುತಿಸಿರುವ ಭಾಗವನ್ನು ನೋಡಿ. ಈ ಭಾಗಕ್ಕೆ ಒತ್ತಡ ಹಾಕಿದರೆ ದೇಹದೊಳಗಿನ ಸಮಸ್ಯೆಯನ್ನು ನಿವಾರಿಸುವುದು.

#3 ಎಂದು ಗುರುತಿಸಿರುವ ಭಾಗ

#3 ಎಂದು ಗುರುತಿಸಿರುವ ಭಾಗ

3 ಎಂದು ಗುರುತಿಸಿರುವ ಭಾಗವು ಗಂಟುಗಳಿಗೆ ಸಂಬಂಧಿಸಿದ್ದಾಗಿದೆ. ಈ ಭಾಗಕ್ಕೆ ಸ್ವಲ್ಪ ಒತ್ತಡ ಹಾಕಿದಾಗ ಗಂಟು ನೋವು ಕಡಿಮೆಯಾಗುವುದು.

#4 ಎಂದು ಗುರುತಿಸಿರುವ ಭಾಗ

#4 ಎಂದು ಗುರುತಿಸಿರುವ ಭಾಗ

4 ಎಂದು ಗುರುತಿಸಿರುವ ಈ ಭಾಗವು ಸೈನಸ್ ಮತ್ತು ಗಂಟಲಿಗೆ ಸಂಬಂಧಿಸಿದ್ದಾಗಿದೆ. ಮೂಗು ಕಟ್ಟಿರುವ ಕಾರಣದಿಂದ ನಿಮಗೆ ರಾತ್ರಿ ವೇಳೆ ನಿದ್ರೆ ಬರುತ್ತಿಲ್ಲವೆಂದಾದರೆ ಈ ಭಾಗದ ಮೇಲೆ ಒತ್ತಡ ಹಾಕಿ.

#5 ಎಂದು ಗುರುತಿಸಿದ ಭಾಗ

#5 ಎಂದು ಗುರುತಿಸಿದ ಭಾಗ

5 ಎಂದು ಗುರುತು ಹಾಕಿರುವ ಭಾಗವು ಜೀರ್ಣಕ್ರಿಯೆಗೆ ಸಂಬಂಧಿಸಿದ್ದಾಗಿದೆ. ಈ ಭಾಗಕ್ಕೆ ಒತ್ತಡ ಹಾಕಿದಾಗ ಜೀರ್ಣಕ್ರಿಯೆ ಸಮಸ್ಯೆ ಕಡಿಮೆಯಾಗಿ ಹೊಟ್ಟೆ ನೋವು ನಿವಾರಣೆಯಾಗುವುದು.

#6 ಎಂದು ಗುರುತಿಸಲ್ಪಟ್ಟಿರುವ ಭಾಗ

#6 ಎಂದು ಗುರುತಿಸಲ್ಪಟ್ಟಿರುವ ಭಾಗ

6 ಎಂದು ಗುರುತು ಹಾಕಲಾಗಿರುವ ಭಾಗವು ತಲೆ ಹಾಗೂ ಹೃದಯಕ್ಕೆ ಸಂಬಂಧಿಸಿದ್ದು. ಈ ಭಾಗದ ಮೇಲೆ ಸೂಜಿಯಿಂದ ಒತ್ತಡ ಹಾಕಿದರೆ ತಲೆನೋವು ಮತ್ತು ಮೈಗ್ರೇನ್ ಕಡಿಮೆಯಾಗುವುದು. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು.

English summary

Press These Spots On Your Ear & See What Happens!

Some things may not appeal to logic but they might work. Of course, our knowledge is limited. It is not possible for any of us to really know all the mysteries of medicine. One unconventional method that is followed by some people who have knowledge of acupressure and reflexology may surprise you.
X
Desktop Bottom Promotion