ಲವಲವಿಕೆಯ ಜೀವನ ಶೈಲಿಗೆ, 'ಆಕ್ಯುಪ್ರೆಷರ್ ಚಿಕಿತ್ಸೆ'

By: manu
Subscribe to Boldsky

ಹಳೆಯದು ಮತ್ತೆ ಹೊಸದಾಗುತ್ತದೆ ಎಂಬುದೊಂದು ಗಾದೆ. ಅಂತೆಯೇ ಹಿಂದೆಲ್ಲಾ ಬಳಸಿ ಬೇಜಾರಾಗಿ ಬಿಟ್ಟುಬಿಟ್ಟಿದ್ದ ಉಡುಪುಗಳೂ, ವೈದ್ಯಪದ್ಧತಿಗಳೂ, ಅಡುಗೆಗಳೂ, ಮನೆಮದ್ದುಗಳೂ ಇಂದು ಪ್ರವರ್ಧಮಾನಕ್ಕೆ ಬರುತ್ತಿವೆ. ವಿಶೇಷವಾಗಿ ಚೀನಾದಲ್ಲಿ ಬಳಸಲಾಗುತ್ತಿದ್ದ ಆಕ್ಯುಪ್ರೆಷರ್ ಒಂದು ಚಿಕಿತ್ಸಾ ಪದ್ಧತಿಯೇ ಆಗಿತ್ತು.

ಈ ವಿಧಾನದ ಮೂಲಕ ಕೆಲವು ತೊಂದರೆಗಳಿಗೆ ಪರಿಹಾರ ಪಡೆಯಲಾಗುತ್ತಿತ್ತು. ಈ ವಿಧಾನದಲ್ಲಿ ದೇಹದ ಕೆಲವು ಭಾಗಗಳ ನಿರ್ದಿಷ್ಟ ಸ್ಥಳಗಳಲ್ಲಿ ಕೊಂಚವೇ ಒತ್ತಡ ಮೂಡಿಸುವ ಮೂಲಕ ರಕ್ತಸಂಚಾರವನ್ನು ಆ ಕ್ಷಣ ನಿಲ್ಲಿಸಿ ಬಳಿಕ ಒಂದೇ ಸಮನೆ ಧಾರೆಯಂತೆ ಧಾವಿಸುವ ಮೂಲಕ ಕೆಲವು ರೋಗಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇದನ್ನು ಹೋಲುವ ಆಕ್ಯುಪಂಕ್ಚರ್‌ನಲ್ಲಿ ಅತಿ ಸಪೂರವಾದ ಸೂಜಿಗಳನ್ನು ಚರ್ಮದೊಳಗೆ ಚುಚ್ಚಲಾಗುತ್ತದೆ. ಏಕಾಗ್ರತೆ-ಜ್ಞಾಪಕಶಕ್ತಿ ಹೆಚ್ಚಿಸುವ ಆಕ್ಯುಪ್ರೆಷರ್ ಚಿಕಿತ್ಸೆ

ಈ ವಿಧಾನದಲ್ಲಿ ನೂರಾರು ಕ್ರಮಗಳಿದ್ದು ಇವುಗಳಲ್ಲಿ ತಕ್ಷಣವೇ ದೇಹದಲ್ಲಿ ಶಕ್ತಿ ಪ್ರವಹಿಸಲು ನೆರವಾಗುವ ಕೆಲವು ಆಕ್ಯುಪ್ರೆಷರ್ ವಿಧಾನಗಳನ್ನು ಇಂದಿನ ಲೇಖನದ ಮೂಲಕ ಅರಿಯೋಣ. ಆಕ್ಯುಪ್ರೆಷರ್ ಮೂಲಕ ನಿಲ್ಲಿಸಿದ್ದ ರಕ್ತದ ಸಂಚಾರದಿಂದ ಎಂಡಾರ್ಫಿನ್‌ಗಳು ಬಿಡುಗಡೆಯಾಗುತ್ತವೆ.

ತನ್ಮೂಲಕ ರಕ್ತಸಂಚಾರ ಉತ್ತಮಗೊಳ್ಳುವುದು, ಸ್ನಾಯುಗಳ ಸೆಳೆತ ಕನಿಷ್ಟಮಟ್ಟಕ್ಕೆ ಇಳಿಯುವುದು, ಮಾನಸಿಕ ಒತ್ತಡ ನಿವಾರಣೆಯಾಗುವುದು ಮೊದಲಾದ ಪ್ರಯೋಜನಗಳಿವೆ. ಮೂಲತಃ ಈ ವಿಧಾನ ನೋವನ್ನು ನಿವಾರಿಸುವ ಒಂದು ಕ್ರಮವಾಗಿದ್ದು ಇದನ್ನು ಬಳಸುವವರು ತನ್ನ ಅನುಭವದ ಮೂಲಕ ಈ ವಿಧಾನದಿಂದ ಚೈತನ್ಯವನ್ನೂ ತಕ್ಷಣ ಪಡೆಯಬಹುದು ಎಂದು ಕಂಡುಕೊಂಡರು.ಬನ್ನಿ, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯೋಣ...

ನೆತ್ತಿನ ನಡುಭಾಗ

ನೆತ್ತಿನ ನಡುಭಾಗ

ಆಕ್ಯುಪ್ರೆಷರ್‌ನ ಮೂಲಕ ಒತ್ತಡ ನೀಡಬೇಕಾದ ಪ್ರಥಮ ಸ್ಥಾನವೆಂದರೆ ತಲೆಯ ಮೇಲೆ, ನೆತ್ತಿನ ನಟ್ಟ ನಡುವಣ ಭಾಗಕ್ಕೆ. ಇದನ್ನು ನೀವೇ ಸ್ವತಃ ನಿಮ್ಮ ತಲೆಗೆ ಮಾಡಿಕೊಳ್ಳಬಹುದು ಅಥವಾ ಇನ್ನೊಬ್ಬರಿಂದ ಮಾಡಿಸಿಕೊಳ್ಳಬಹುದು. ಬೇರೆಯವರಿಂದ ಮಾಡಿಸಿಕೊಳ್ಳುವುದು ಉತ್ತಮ. ಇದರಿಂದ ತಕ್ಷಣವೇ ಚೈತನ್ಯ ಸಿಗುವುದು ಮಾತ್ರವಲ್ಲ, ಮಾನಸಿಕವಾಗಿ ನಿರಾಳರಾಗಲೂ ನೆರವಾಗುತ್ತದೆ.

ಪಾದಗಳ ಅಡಿಯಲ್ಲಿ

ಪಾದಗಳ ಅಡಿಯಲ್ಲಿ

ತಕ್ಷಣದ ಚೈತನ್ಯಕ್ಕಾಗಿ ಮುಂದಿನ ಸ್ಥಾನವೆಂದರೆ ಪಾದಗಳ ಅಡಿಯ ಭಾಗ. ಪಾದವನ್ನು ಒಂದು ಅಳತೆಯನ್ನಾಗಿ ಪರಿಗಣಿಸಿದರೆ ಬೆರಳುಗಳಿಂದ ಪ್ರಾರಂಭಿಸಿದರೆ ಕಾಲು ಅಳತೆಯಷ್ಟು ದೂರದ ಸ್ಥಾನದಲ್ಲಿ ಕೊಂಚ ಒತ್ತಡ ನೀಡುವ ಮೂಲಕ ತಕ್ಷಣದ ಶಕ್ತಿ ದೊರಕುತ್ತದೆ.

ಮೊಣಕಾಲಿನಿಂದ ಪ್ರಾರಂಭಿಸಿ...

ಮೊಣಕಾಲಿನಿಂದ ಪ್ರಾರಂಭಿಸಿ...

ಮುಂದಿನ ಸ್ಥಾನವೆಂದರೆ ಮೊಣಕಾಲಿನಿಂದ ಪ್ರಾರಂಭಿಸಿ ಕೆಳಗೆ ಸಾಗುತ್ತಾ ಮೂರು ಇಂಚಿನಷ್ಟು ಕೆಳಗಿನ ಭಾಗದಲ್ಲಿ ಕಾಲಿನ ಮೂಳೆಯ ಪಕ್ಕದ ಮಾಂಸಲ ಭಾಗದ ನಡುಭಾಗ. ಇಲ್ಲಿ ಒತ್ತಡ ನೀಡುವ ಮೂಲಕವೂ ತಕ್ಷಣದ ಶಕ್ತಿ ದೊರಕುತ್ತದೆ.

ತೋರು ಮತ್ತು ಹೆಬ್ಬೆರಳಿನ ನಡುವಣ ಭಾಗ

ತೋರು ಮತ್ತು ಹೆಬ್ಬೆರಳಿನ ನಡುವಣ ಭಾಗ

ಮುಂದಿನ ಸ್ಥಾನವೆಂದರೆ ಹೆಬ್ಬರಗಳನ್ನು ಬಿಡಿಸಿದಾಗ ಹೆಬ್ಬೆರಳು ಮತ್ತು ತೋರುಬೆರಳಿನ ನಡುವೆ ತೆರೆದುಕೊಳ್ಳುವ ರೆಕ್ಕೆಯಂತಹ ಭಾಗದ ನಡುವಣ ಭಾಗ. ಸುಸ್ತು ಆವರಿಸಿದ್ದರೆ ಟೀವಿ ಮುಂದೆ ಕುಳಿತು ಈ ಭಾಗವನ್ನು ಕೆಲವು ನಿಮಿಷಗಳ ವರೆಗೆ ಬಲ ಮತ್ತು ಎಡಗೈಗಳಿಗೆ ಒತ್ತಡ ನೀಡುವ ಮೂಲಕ ತಕ್ಷಣವೇ ಶಕ್ತಿಯನ್ನು ಪಡೆಯಬಹುದು. ಅಚ್ಚರಿಗೆ ತಳ್ಳುವ ಕೈ ಬೆರಳಿನ ಮೂಲಕ ಮಾಡುವ ಚಿಕಿತ್ಸೆ!

ಬುರುಡೆಯ ಹಿಂಬದಿಯ ತಳಭಾಗ

ಬುರುಡೆಯ ಹಿಂಬದಿಯ ತಳಭಾಗ

ತಲೆಬುರುಡೆ ಮತ್ತು ಕುತ್ತಿಗೆ ಸೇರುವಲ್ಲಿ, ಬೆನ್ನುಹುರಿ ಪ್ರಾರಂಭವಾಗುವ ಸ್ಥಳದ ಒಂದು ಇಂಚಿನ ಆಚೀಚಿನ ಸ್ಥಾನದಲ್ಲಿ ಕೊಂಚ ಒತ್ತಡ ನೀಡುವ ಮೂಲಕವೂ ತಕ್ಷಣದ ಶಕ್ತಿಯನ್ನು ಪಡೆಯಬಹುದು.

 
English summary

Acupressure Points For Instant Energy

Today in this article we shall talk about certain acupressure points that help to give you instant energy. Acupressure helps in the release of endorphins, enhanced circulation, minimized muscle tension and it basically works like a natural pain and stress reliever.
Please Wait while comments are loading...
Subscribe Newsletter