ನೆನಪಿಡಿ ಪಪ್ಪಾಯಿ ಹಣ್ಣು, ಎಲ್ಲರೂ ತಿನ್ನುವ ಹಾಗಿಲ್ಲ! ಯಾಕಿರಬಹುದು?

By: manu
Subscribe to Boldsky

ಪಪ್ಪಾಯಿ ಹಣ್ಣಿನಲ್ಲಿರುವ (ಪರಂಗಿ ಹಣ್ಣು )ಸುವಾಸನೆಯ ರುಚಿ, ಮೃದು ಬೆಣ್ಣೆಯಂತಿರುವ ಸಾಂದ್ರತೆ ಮತ್ತು ಉತ್ಕೃಷ್ಟ ರಚನೆ ಇವುಗಳನ್ನು ಕಂಡುಕೊಂಡ ಕ್ರಿಸ್ಟೋಫರ್ ಕೊಲಂಬಸ್ ಈ ಹಣ್ಣಿಗೆ "ದೇವತೆಗಳ ಹಣ್ಣು - ಫ್ರೂಟ್ಸ್ ಆಫ್ ಏಂಜೆಲ್ಸ್" ಎಂದು ಅಡ್ಡ ಹೆಸರಿಟ್ಟನು. ಪಪ್ಪಾಯಿಹಣ್ಣು ಒಳ್ಳೆಯ ಕಾರಣಕ್ಕಾಗಿ ಪ್ರಪಂಚಾದ್ಯಂತ ಅತ್ಯಂತ ಜನಪ್ರಿಯವಾಗಿದೆ.  ಮಕ್ಕಳ ಆರೋಗ್ಯಕ್ಕೆ 'ಪಪ್ಪಾಯಿ ಹಣ್ಣು' ಬಹಳ ಒಳ್ಳೆಯದು...

ಇದರಲ್ಲಿರುವ ಮೆಗ್ನೀಸಿಯುಂ, ಪೊಟಾಸ್ಸಿಯುಂ, ನಿಯಾಸಿನ್, ಕ್ಯಾರೋಟೀನ್, ಪ್ರೋಟೀನ್, ನಾರಿನಾಂಶ ಮತ್ತು ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಪಪೈನ್ ಎಂಬ ಕಿಣ್ವ ಅಧಿಕ ಪ್ರಮಾಣದಲ್ಲಿದ್ದು, ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ಇದು ವಹಿಸುತ್ತದೆ. ಆದರೆ ಇಷ್ಟೆಲ್ಲಾ ಆರೋಗ್ಯ ಗುಣಗಳನ್ನು ಹೊಂದಿರುವ ಪಪ್ಪಾಯಿ ಹಣ್ಣನ್ನು ಎಲ್ಲರೂ ತಿನ್ನುವ ಹಾಗೆಯಿಲ್ಲ! ಕೇಳಿ ಅಚ್ಚರಿವಾಯಿತಲ್ಲವೇ? ಮುಂದೆ ಓದಿ..    ಆರೋಗ್ಯಕಾರಿ ಟಿಪ್ಸ್: ಪಪ್ಪಾಯಿ ಹಣ್ಣಿನ ಬಗ್ಗೆ ತಪ್ಪು ತಿಳಿಯಬೇಡಿ!

ಹೌದು ಪಪ್ಪಾಯಿ ಆರೋಗ್ಯಕ್ಕೆ ತುಂಬಾ ಲಾಭಕಾರಿಯಾದರೂ ಕೆಲವು ಸಮಸ್ಯೆಗಳು ಇರುವವರು ಇದನ್ನು ಸೇವಿಸಬಾರದು. ಯಾಕೆಂದರೆ ಇದರಿಂದ ಅಡ್ಡಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ. ಪ್ರತೀ ನೂರು ಗ್ರಾಂ ಪಪ್ಪಾಯಿಯಲ್ಲಿ 43 ಕ್ಯಾಲರಿ ವಿಟಮಿನ್ ಸಿ ಮತ್ತು ಫಾಲಟೆ ಲಭ್ಯವಿದೆ. ಯಾರು ಪಪ್ಪಾಯಿ ತಿನ್ನುವುದರಿಂದ ದೂರ ಉಳಿಯಬೇಕು ಎಂದು ನಿಮಗೆ ಬೋಲ್ಡ್ ಸ್ಕೈ ಹೇಳಿಕೊಡಲಿದೆ....    

ಗರ್ಭಿಣಿಯರು

ಗರ್ಭಿಣಿಯರು

ಪಪ್ಪಾಯಿ ಅದರಲ್ಲೂ ಹಸಿ ಪಪ್ಪಾಯಿಯನ್ನು ಗರ್ಭಿಣಿ ಮಹಿಳೆಯರು ಸೇವಿಸಲೇಬಾರದು. ಯಾಕೆಂದರೆ ಇದರಿಂದ ಗರ್ಭಪಾತವಾಗುವ ಸಾಧ್ಯತೆ ಹೆಚ್ಚಿದೆ. ಪಪ್ಪಾಯಿಯಲ್ಲಿರುವಂತಹ ಲ್ಯಾಟೆಕ್ಸ್ ಅಂಶವು ಗರ್ಭಪಾತವಾಗುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಇದರಿಂದ ಹಸಿ ಪಪ್ಪಾಯಿಯಿಂದ ದೂರ ಉಳಿಯಿರಿ.

ಪುರುಷರ ಫಲವತ್ತತೆ

ಪುರುಷರ ಫಲವತ್ತತೆ

ಅತಿಯಾಗಿ ಪಪ್ಪಾಯಿಯನ್ನು ಸೇವನೆ ಮಾಡಿದಾಗ ಇದು ಪುರುಷರ ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ. ಇದು ಪುರುಷರಲ್ಲಿ ವೀರ್ಯದ ಗಣತಿಯನ್ನು ಕಡಿಮೆ ಮಾಡುವುದು.ಬೇಗನೆ ಮಗುವಾಗಬೇಕೆಂದು ಬಯಸುವವರು ಪಪ್ಪಾಯಿಯನ್ನು ಅತಿಯಾಗಿ ಸೇವಸಲೇಬಾರದು.

ಜಠರ ಹಾಗೂ ಕರುಳಿನ ಸಮಸ್ಯೆ ಇರುವವರು

ಜಠರ ಹಾಗೂ ಕರುಳಿನ ಸಮಸ್ಯೆ ಇರುವವರು

ಅತಿಯಾಗಿ ಪಪ್ಪಾಯಿ ಹಣ್ಣನ್ನು ಸೇವಿಸುವುದರಿಂದ ಜಠರ ಹಾಗೂ ಕರುಳಿನ ಸಮಸ್ಯೆ ಇರುವವರ ಮೇಲೆ ಪರಿಣಾಮ ಬೀರಬಹುದು. ಪಪ್ಪಾಯಿಯಲ್ಲಿ ಇರುವಂತಹ ಪಪೈನ್ ಎನ್ನುವ ಅಂಶವು ಹೊಟ್ಟೆಯಲ್ಲಿ ಕಿರಿಕಿರಿ ಉಂಟು ಮಾಡಬಹುದು.

ಚರ್ಮದ ಸಮಸ್ಯೆ

ಚರ್ಮದ ಸಮಸ್ಯೆ

ನಿಮ್ಮ ಚರ್ಮವು ಬಣ್ಣವನ್ನು ಕಳಕೊಂಡಿದ್ದರೆ ಅಥವಾ ಅಂಗೈಯು ಹಳದಿ ಬಣ್ಣಕ್ಕೆ ತಿರುಗಿದ್ದರೆ ನೀವು ಕ್ಯಾರೊಟೆನಿಮಾ ಎನ್ನಲಾಗುತ್ತದೆ. ಇಂತಹ ಸಮಸ್ಯೆಯು ಅತಿಯಾಗಿ ಪಪ್ಪಾಯಿ ಸೇವನೆಯಿಂದ ಬರುವುದು. ಕ್ಯಾರೊಟೆನಾಯ್ಡ್ ಎನ್ನುವ ಕುಟುಂಬದಿಂದ ಬಂದಿರುವ ಬೆಟಾ ಕ್ಯಾರೊಟೆನೆ ಅಂಶವು ವಿಟಮಿನ್ ಎಯನ್ನು ಒದಗಿಸುತ್ತದೆ. ಅತಿಯಾದ ಪ್ರಮಾಣದಲ್ಲಿ ಬೆಟಾ ಕ್ಯಾರೊಟೆನ್ ಸೇವನೆಯಿಂದ ಚರ್ಮವು ಪೇಲವವಾಗುವುದು.

ಸಕ್ಕರೆ ಮಟ್ಟ ಕಡಿಮೆ

ಸಕ್ಕರೆ ಮಟ್ಟ ಕಡಿಮೆ

ಪಪ್ಪಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಅತಿಯಾಗಿ ಪಪ್ಪಾಯಿ ಸೇವಿಸಿದರೆ ಈಗಾಗಲೇ ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುವವರ ರಕ್ತದಲ್ಲಿನ ಸಕ್ಕರೆ ಅಂಶವು ಮತ್ತಷ್ಟು ಕಡಿಮೆಯಾಗುವುದು.

ಅತಿಯಾಗಿ ಪಪ್ಪಾಯ ಸೇವಿಸಬೇಡಿ!

ಅತಿಯಾಗಿ ಪಪ್ಪಾಯ ಸೇವಿಸಬೇಡಿ!

ಪಪ್ಪಾಯಿ ತುಂಬಾ ರುಚಿಯಾಗಿರುವ ಹಾಗೂ ಹಲವಾರು ಪೋಷಕಾಂಶಗಳನ್ನು ಹೊಂದಿರುವ ಹಣ್ಣಾದರೂ ಇದನ್ನು ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಅಡ್ಡಪರಿಣಾಮಗಳು ಉಂಟಾಗಬಹುದು.

ಅತಿಯಾಗಿ ಪಪ್ಪಾಯ ಸೇವಿಸಬೇಡಿ!

ಅತಿಯಾಗಿ ಪಪ್ಪಾಯ ಸೇವಿಸಬೇಡಿ!

ಇದನ್ನು ಸರಿಯಾಗಿ ತಿಳಿದುಕೊಂಡು ಪಪ್ಪಾಯಿ ಸೇವಿಸಬಹುದು. ಕೆಲವೊಂದು ಸಮಸ್ಯೆಯಿರುವವರು ಮಾತ್ರ ಪಪ್ಪಾಯಿ ತಿನ್ನುವುದರಿಂದ ದೂರ ಉಳಿಯಬೇಕು ಎನ್ನುವುದೇ ಈ ಲೇಖನದ ಉದ್ದೇಶವಾಗಿದೆ.

English summary

People Suffering From These Health Problems Should Avoid Papaya

Papaya, also known as Carica Papaya, is a tree which is a native of tropic regions such as India, Brazil, etc. Its fruit is healthy and delicious for most of the people. In a 100-gram serving, papaya fruit provides about 43 calories and is a significant source of vitamin C (75% of the Daily Value, DV) and a moderate source of folate (10% DV). One needs to limit the intake of this fruit if they have any one or many of the below-listed medical conditions. Take a look.
Subscribe Newsletter