Latest Updates
-
MI vs RCB ಮ್ಯಾಚ್ ನೋಡುವಾಗ ದಂಪತಿಗಳ ಜಗಳ ತಪ್ಪಿಸುವುದು ಹೇಗೆ? -
ವಿಷು, ಬೈಸಾಖಿ ಹಬ್ಬಕ್ಕೆ ನಿಮ್ಮ ಮನೆ ಮಿಂಚಬೇಕೆ? ಈ ಟಿಪ್ಸ್ ಫಾಲೋ ಮಾಡಿ -
ಗರ್ಭಿಣಿಯರ ಆಹಾರ ಕ್ರಮ: ಮಗುವಿನ ಆರೋಗ್ಯಕ್ಕೆ ಈ ಬದಲಾವಣೆ ಕಡ್ಡಾಯ! -
ಬೇಸಿಗೆ ಬಿಸಿಲಿಗೆ ತಂಪಾಗಲು ವೈರಲ್ ಆಗುತ್ತಿರುವ ಫ್ಯಾಷನ್ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ಫಿಟ್ನೆಸ್ ರೂಟೀನ್ ಬದಲಿಸಿ -
ಹಬ್ಬದ ಫ್ಯಾಷನ್ ಟ್ರೆಂಡ್ಸ್: ಈ ಲುಕ್ ಟ್ರೈ ಮಾಡಿ ಮಿಂಚಿ -
ಬೆಳಗಿನ ವ್ಯಾಯಾಮ: ಬಿಸಿಲ ಧಗೆಯಿಂದ ಪಾರಾಗಲು ಹೀಗೆ ಮಾಡಿ -
ಬಿಸಿಲಿನ ತಾಪಕ್ಕೆ ದಾಂಪತ್ಯದಲ್ಲಿ ಜಗಳವೇ? ಈ ಟಿಪ್ಸ್ ಪಾಲಿಸಿ -
ದೆಹಲಿ ಬಿಸಿಲು: ಮನೆಯನ್ನು ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ತೂಕ ಇಳಿಸುವ ಔಷಧಿಗಳ ಬೆಲೆ ಇಳಿಕೆ: ಬೊಜ್ಜು ನಿವಾರಣೆಗೆ ಹೊಸ ಭರವಸೆ
ದೇಹದಿಂದ ಕೊಬ್ಬು ಕಲ್ಮಶಗಳನ್ನು ಹೊರಹಾಕುವ ಮನೆಮದ್ದು
ದೇಹದಿಂದ ಕಲ್ಮಶಗಳನ್ನು ಬಲವಂತವಾಗಿ ಹೊರಹಾಕುವುದು ಪ್ರಾಚೀನ ಕಾಲದಿಂದಲೂ ನಡೆದುಬರುತ್ತಿರುವ ಪದ್ದತಿಯಾಗಿದೆ. ಈ ವಿಧಾನವನ್ನು ಬಹಳ ಎಚ್ಚರಿಕೆಯಿಂದ ನಡೆಸಬೇಕು. ಏಕೆಂದರೆ ಈ ಕ್ರಿಯೆಯಲ್ಲಿ ದೇಹ ಪೋಷಕಾಂಶಗಳ ಕೊರತೆಯಿಂದ ಬಳಲಿ ಅತೀವ ಆಯಾಸವಾಗುತ್ತದೆ ಹಾಗೂ ಜೀವರಾಸಾಯನಿಕ ಕ್ರಿಯೆ ನಿಧಾನಗೊಳ್ಳುತ್ತದೆ.
ಒಂದು ವೇಳೆ ಈ ವಿಧಾನವನ್ನು ಸರಿಯಾದ ಕ್ರಮದಲ್ಲಿ ಅನುಸರಿಸದೇ ಇದ್ದರೆ ಇದರ ಪರಿಣಾಮದಿಂದ ನಿರ್ಜಲೀಕರಣ, ಸುಸ್ತು, ವಾಕರಿಕೆ ಹಾಗೂ ಕಣ್ಣು ಮಂಜಾಗುವುದು ಸಹಾ ಸಂಭವಿಸಬಹುದು. ನಮ್ಮ ದೇಹದ ಪ್ರಮುಖ ಅಂಗಗಳಾಗಿರುವ ಯಕೃತ್, ಮೂತ್ರಪಿಂಡಗಳು ಹಾಗೂ ಕರುಳುಗಳು, ವಿಶೇಷವಾಗಿ ದೊಡ್ಡಕರುಳು-ಇವುಗಳ ಕೆಲಸವೇ ದೇಹದಿಂದ ಕಲ್ಮಶಗಳನ್ನು ಹೊರಹಾಕುವುದು. ಇದರಲ್ಲಿ ಯಕೃತ್ ನ ಕೆಲಸ ಪ್ರಧಾನವಾದುದು. ಇದು ಆಹಾರದಲ್ಲಿರುವ ಕಲ್ಮಶಗಳನ್ನು ಶೋಧಿಸಿ ರಕ್ತಕ್ಕೆ ಬೆರೆಯದಂತೆ ತಡೆಯುತ್ತದೆ. ಕರುಳು ಆಹಾರದ ತ್ಯಾಜ್ಯಗಳನ್ನು ಪ್ರತ್ಯೇಕಿಸಿ ವಿಸರ್ಜಿಸಲು ಹಾಗೂ ಮೂತ್ರಪಿಂಡಗಳು ಸತತವಾಗಿ ರಕ್ತವನ್ನು ಶೋಧಿಸುತ್ತಾ ಕಲ್ಮಶಗಳನ್ನು ನಿವಾರಿಸುತ್ತಾ ಮೂತ್ರದ ಮೂಲಕ ಹೊರಹಾಕುತ್ತಿರುತ್ತವೆ.

ಆದ್ದರಿಂದ ಈ ಅಂಗಗಳ ಕಾರ್ಯಕ್ಷಮತೆ ಸರಿಯಾದ ಕ್ರಮದಲ್ಲಿ ಆಗಬೇಕಾದರೆ ನಮ್ಮ ದೇಹಕ್ಕೆ ಒಗ್ಗುವ ಆಹಾರಗಳನ್ನೇ ಸೇವಿಸಬೇಕು. ಇದೇ ವಿಷಯವನ್ನು 'ಊಟ ಬಲ್ಲವನಿಗೆ ರೋಗವಿಲ್ಲ' ಎಂಬ ಗಾದೆಯಲ್ಲಿ ಹೇಳಲಾಗಿದೆ. ದೇಹದಿಂದ ಕಲ್ಮಶಗಳನ್ನು ಹೊರಹಾಕಬಲ್ಲ ಈ ಪ್ರಬಲ ವಿಧಾನದಲ್ಲಿ ಈ ಮೂರೂ ಅಂಗಗಳು ನಲವತ್ತೆಂಟು ಗಂಟೆಗಳ ಕಾಲ ಕಲ್ಮಶಗಳನ್ನು ಶೋಧಿಸಲು ಅಗತ್ಯವಿರುವಷ್ಟು ಪೋಷಕಾಂಶಗಳನ್ನು ಮೊದಲೇ ಒದಗಿಸಬೇಕಾಗುತ್ತದೆ. ಬನ್ನಿ, ಈ ವಿಧಾನದಲ್ಲಿ ನಲವತ್ತೆಂಟು ಗಂಟೆಗಳ ಕಾಲ ಸರಿಯಾದ ಕ್ರಮವನ್ನು ಅನುಸರಿಸುವ ಮೂಲಕ ದೇಹವನ್ನು ಕಲ್ಮಶರಹಿತವಾಗಿಸುವುದು ಹೇಗೆ ಎಂಬುದನ್ನು ನೋಡೋಣ:
ಅಗತ್ಯವಿರುವ ಸಾಮಾಗ್ರಿಗಳು:
ಒಂದು ಕಪ್ ನೀರು
ಒಂದು ಚಿಟಿಕೆ ಜಾಯಿಕಾಯಿ ಪುಡಿ
ಅರ್ಧ ಕಪ್ ಕ್ವಿನೋವಾ ಬೀಜಗಳು
ಒಂದು ಚಿಕ್ಕ ಚಮಚ ತುರಿದ ಹಸಿಶುಂಠಿ
ಒಂದು ಚಿಕ್ಕ ಚಮಚ ಅಗಸೆ ಬೀಜದ ಎಣ್ಣೆ
1/3 ಕಪ್ ನಷ್ಟು ಒಣ ಪ್ರೂನ್ ಹಣ್ಣುಗಳು (prune)
¼ ಕಪ್ ಅಕ್ಕಿಯ ಹಾಲು
ವಿಧಾನ
ಒಂದು ಚಿಕ್ಕ ಪಾತ್ರೆಯಲ್ಲಿ ನೀರು ಹಾಕಿ ಇದಕ್ಕೆ ಕ್ವಿನೋವಾ, ಅಗಸೆ, ಶುಂಠಿ ಹಾಕಿ ಮಿಶ್ರಣ ಮಾಡಿ. ಬಳಿಕ ಇದನ್ನು ಬಿಸಿಮಾಡಿ ಕುದಿಬರಿಸಿ.
ಕುದಿಬರಲು ಪ್ರಾರಂಭವಾದೊಡನೆ ಉರಿ ಅತಿ ಚಿಕ್ಕದಾಗಿಸಿ ಮುಚ್ಚಳ ಮುಚ್ಚಿ ಹತ್ತು ನಿಮಿಷ ಬಿಸಿ ಮಾಡಿ.
ಈಗ ಪ್ರೂನ್ ಹಣ್ಣುಗಳು ಮತ್ತು ಅಕ್ಕಿಯ ಹಾಲನ್ನು ಬೆರೆಸಿ. ಮತ್ತೊಮ್ಮೆ ಮುಚ್ಚಳ ಮುಚ್ಚಿ ಉರಿ ಆರಿಸಿ ಐದು ನಿಮಿಷ ತಣಿಯಲು ಬಿಡಿ. ಇದನ್ನು ಕುಡಿಯುವ ಮುನ್ನ ಇದಕ್ಕೆ ಅಗಸೆ ಬೀಜದ ಎಣ್ಣೆ ಬೆರೆಸಿ ಕಲಕಿ ಬಳಿಕ ಕುಡಿಯಿರಿ.
ನಂತರದ ನಲವತ್ತೆಂಟು ಘಂಟೆಗಳ ಅವಧಿಯಲ್ಲಿ ದೇಹದ ಕಲ್ಮಶಗಳು ಪೂರ್ಣವಾಗಿ ಹೊರಹೋಗುತ್ತವೆ. ಹಾಗೂ ದೇಹ ಕಲ್ಮಶ ರಹಿತವಾಗಿರಲು ಈ ವಿಧಾನವನ್ನು ನಿಯಮಿತವಾಗಿ ಪುನರಾವರ್ತಿಸುತ್ತಿರಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications












