For Quick Alerts
ALLOW NOTIFICATIONS  
For Daily Alerts

ಮನೆಮದ್ದು: ಹಣ್ಣಿನ ರಸದ, ಔಷಧೀಯ ಗುಣಗಳು.....

ಹಣ್ಣುಗಳನ್ನು ಔಷಧಿಯ ರೂಪದಲ್ಲಿ ಬಳಸುವುದೇನೂ ಕಷ್ಟಕರ ಕೆಲಸವಲ್ಲ. ಯಾವ ವ್ಯಾಧಿಗೆ ಯಾವ ಹಣ್ಣು ಎಂದು ಗೊತ್ತಾದರೆ ಸಾಕು. ಇದರ ತಿರುಳನ್ನು ಸೇವಿಸುವ ಮೂಲಕ ಅಥವಾ ರಸ ಸಂಗ್ರಹಿಸಿ ಕುಡಿಯುವ ಮೂಲಕ ಉತ್ತಮ ಪರಿಹಾರವನ್ನು ಪಡೆಯಬಹುದು.

By Arshad
|

ಸುಮಾರು ನೂರು ವರ್ಷಗಳ ಹಿಂದೆ ವೈದ್ಯವಿಜ್ಞಾನ ಇಂದಿನಷ್ಟು ಮುಂದುವರಿದಿರಲಿಲ್ಲ. ಆಗ ಮನೆಮದ್ದುಗಳೇ ಔಷಧಿಗಳ ಕೆಲಸ ಮಾಡುತ್ತಿದ್ದವು. ಈ ಮನೆಮದ್ದುಗಳಲ್ಲಿ ಹಣ್ಣುಗಳ ರಸ ಪ್ರಧಾನ ಪಾತ್ರ ವಹಿಸಿತ್ತು. ಸಾಮಾನ್ಯವಾಗಿ ಕಾಡುವ ಯಾವುದೇ ಕಾಯಿಲೆಗೂ ಅಂದು ಹಣ್ಣುಗಳ ರಸವನ್ನೇ ಸೇವಿಸಿ ಪರಿಹಾರ ಪಡೆಯಲಾಗುತ್ತಿತ್ತು. ಪವರ್‌ಫುಲ್ ಜ್ಯೂಸ್: ಇದು ಬರೋಬ್ಬರಿ 7 ಕಾಯಿಲೆಗಳಿಗೆ ರಾಮಬಾಣ!

ಹಣ್ಣುಗಳನ್ನು ಔಷಧಿಯ ರೂಪದಲ್ಲಿ ಬಳಸುವುದೇನೂ ಕಷ್ಟಕರ ಕೆಲಸವಲ್ಲ. ಯಾವ ವ್ಯಾಧಿಗೆ ಯಾವ ಹಣ್ಣು ಎಂದು ಗೊತ್ತಾದರೆ ಸಾಕು. ಇದರ ತಿರುಳನ್ನು ಸೇವಿಸುವ ಮೂಲಕ ಅಥವಾ ರಸ ಸಂಗ್ರಹಿಸಿ ಕುಡಿಯುವ ಮೂಲಕ ಉತ್ತಮ ಪರಿಹಾರವನ್ನು ಪಡೆಯಬಹುದು. ಬನ್ನಿ, ಸಾಮಾನ್ಯವಾದ ತೊಂದರೆಗಳಿಗೆ ಯಾವ ಹಣ್ಣುಗಳು ಉಪಯುಕ್ತ ಎಂಬುದನ್ನು ನೋಡೋಣ. ಆದರೆ ಯಾವುದಕ್ಕೂ ನಿಮ್ಮ ಕುಟುಂಬ ವೈದ್ಯರನ್ನು ಕಂಡು ಈ ವಿಧಾನ ಸೂಕ್ತವೇ ಎಂಬ ಸಲಹೆ ಪಡೆಯುವುದು ಸೂಕ್ತ....

ಸೈನಸ್ ಅಥವಾ ಕುಹರದ ಸೋಂಕು

ಸೈನಸ್ ಅಥವಾ ಕುಹರದ ಸೋಂಕು

ಮಿಕ್ಸಿಯ ಬ್ಲೆಂಡರಿನಲ್ಲಿ ಅರ್ಧ ಕಪ್ ಸೆಲೆರಿ ಎಲೆಗಳು, ತುರಿದ ಎರಡು ಕ್ಯಾರೆಟ್, ಒಂದು ಚಕ್ಕೋತ, ಒಂದು ಕಿತ್ತಳೆ ಅರ್ಧ ಭಾಗ ನೀರುಳ್ಳಿ ಮತ್ತು ಎರಡು ಚಿಕ್ಕ ಚಮಚ ಲಿಂಬೆರಸವನ್ನು ಮಿಶ್ರಣ ಮಾಡಿ ಇದಕ್ಕೆ ಎರಡು ಲೋಟ ನಿರು ಬೆರೆಸಿ ಕಡೆಯಿರಿ. ಈ ಪೇಯವನ್ನು ತಕ್ಷಣವೇ ಕುಡಿಯುವ ಮೂಲಕ ಸೈನಸ್ ಸೋಂಕಿನಿಂದ ಮುಕ್ತಿ ಪಡೆಯಬಹುದು....ಸೈನಸ್ ಸೋಂಕಿನಿಂದ ಬಳಲುತ್ತಿದ್ದೀರಾ? ಇನ್ನು ಚಿಂತೆ ಬಿಡಿ!

ತಲೆನೋವು

ತಲೆನೋವು

ಮಿಕ್ಸಿಯ ಬ್ಲೆಂಡರಿನಲ್ಲಿ ಒಂದು ಬೆಣ್ಣೆಹಣ್ಣಿನ ತಿರುಳು, ಒಂದು ತುರಿದ ಕ್ಯಾರೆಟ್ ಮತ್ತು ಕೆಲವು ಬೀಜರಹಿತ ಚೆರ್ರಿ ಹಣ್ಣುಗಳನ್ನು ಸೇರಿಸಿ ಕಡೆಯಿರಿ. ಇದಕ್ಕೆ ಕೊಂಚ ಕೊತ್ತಂಬರಿ ಎಲೆಗಳನ್ನೂ ಸೇರಿಸಬಹುದು. ಒಂದು ಲೋಟ ನೀರು ಸೇರಿಸಿ ಮಿಶ್ರಣ ಮಾಡಿ ಸೇವಿಸುವ ಮೂಲಕ ತಲೆನೋವು ಕಡಿಮೆಯಾಗುತ್ತದೆ.ಕ್ಷಣಾರ್ಧದಲ್ಲಿ ತಲೆನೋವು ನಿವಾರಿಸುವ ಮನೆಮದ್ದುಗಳು

ಮಲಬದ್ಧತೆ

ಮಲಬದ್ಧತೆ

ಒಂದು ಬೀಟ್ರೂಟ್, ಒಂದು ಬಾಳೆಹಣ್ಣು ಒಂದು ಸೇಬಿನ ಬೀಜ ನಿವಾರಿಸಿ ಬ್ಲೆಂಡರಿನಲ್ಲಿ ಹಾಕಿ. ಇದಕ್ಕೆ ಎರಡು ದೊಡ್ಡ ಚಮಚ ಲಿಂಬೆರಸ ಮತ್ತು ಒಂದು ಲೋಟ ನೀರು ಬೆರೆಸಿ ಬೆಳಗ್ಗೆ ಕುಡಿಯುವ ಮೂಲಕ ಮಲಬದ್ಧತೆಯ ತೊಂದರೆ ಇಲ್ಲವಾಗುತ್ತದೆ. ಮಲಬದ್ಧತೆ ನಿವಾರಣೆಗೆ ಇಲ್ಲಿದೆ ನೋಡಿ ನೈಸರ್ಗಿಕ ಜ್ಯೂಸ್

ಅಮಲಿನಿಂದ ಮುಕ್ತಿ ಪಡೆಯಲು

ಅಮಲಿನಿಂದ ಮುಕ್ತಿ ಪಡೆಯಲು

ಒಂದು ಚಕ್ಕೋತದ ತಿರುಳು, ಒಂದು ಚಿಕ್ಕ ತುಂಡು ಹಸಿಶುಂಠಿ, ಒಂದು ಲೋಟದಷ್ಟು ಕಲ್ಲಂಗಡಿ ಹಣ್ಣಿನ ರಸ ಇಷ್ಟನ್ನೂ ಬ್ಲೆಂಡರಿನಲ್ಲಿ ಕಡೆದು ಬೆಳಿಗ್ಗೆ ಕುಡಿಯುವ ಮೂಲಕ ರಾತ್ರಿಯ ನಶೆಯ ಅಮಲು ತಕ್ಷಣ ಇಳಿಯುತ್ತದೆ.

ಅಜೀರ್ಣತೆಯ ತೊಂದರೆಗೆ

ಅಜೀರ್ಣತೆಯ ತೊಂದರೆಗೆ

ಅರ್ಧ ಕಪ್ ಪಾಲಕ್ ಸೊಪ್ಪು, ಒಂದು ಬಾಳೆಹಣ್ಣು, ಒಂದು ಸೇಬು ಮತ್ತು ಒಂದು ಬೆಣ್ಣೆಹಣ್ಣಿನ ತಿರುಳನ್ನು ಬ್ಲೆಂಡರಿನಲ್ಲಿ ಒಂದೊ ಲೋಟ ನೀರನ್ನು ಬೆರೆಸಿ ಕುಡಿಯುವ ಮೂಲಕ ಅಜೀರ್ಣತೆ ಇಲ್ಲವಾಗುತ್ತದೆ. ಅಜೀರ್ಣ ಸಮಸ್ಯೆಗೆ ಒಂದಿಷ್ಟು ಸರಳೋಪಾಯಗಳು

ಶೀತದಿಂದ ಮುಕ್ತಿ ಪಡೆಯಲು

ಶೀತದಿಂದ ಮುಕ್ತಿ ಪಡೆಯಲು

ಒಂದು ಹಸಿರು ಸೇಬು, ಒಂದು ಚಿಕ್ಕ ತುಂಡು ಹಸಿಶುಂಠಿ, ಕೊಂಚ ಸೆಲೆರಿ ಎಲೆಗಳು, ಎರಡು ದೊಡ್ಡ ಚಮಚ ತೆಂಗಿನ ತುರಿ ಇಷ್ಟನ್ನೂ ಬ್ಲೆಂಡರಿನಲ್ಲಿ ಹಾಕಿ ಚಿಟಿಕೆಯಷ್ಟು ಅರಿಶಿನಪುಡಿ ಬೆರೆಸಿ ಕಡೆಯಿರಿ. ಈ ಪೇಯವನ್ನು ದಿನಕ್ಕೆ ಮೂರು ಬಾರಿ ಕುಡಿಯುವ ಮೂಲಕ ಶೀತ ಶೀಘ್ರವಾಗಿ ಗುಣವಾಗುತ್ತದೆ.

ಕಣ್ಣಿನ ತೊಂದರೆಗಳು

ಕಣ್ಣಿನ ತೊಂದರೆಗಳು

ಒಂದು ಲೋಟ ನೀರಿಗೆ ಕೊಂಚ ಪಾರ್ಸ್ಲೆ ಎಲೆಗಳು, ಒಂದು ಟೊಮೇಟೊ ಮತ್ತು ಒಂದು ಆಪ್ರಿಕಾಟ್ ಹಣ್ಣಿನ ತಿರುಳನ್ನು ಹಾಕಿ ಬ್ಲೆಂಡರಿನಲ್ಲಿ ಕಡೆಯಿರಿ. ಈ ಪೇಯವನ್ನು ಕುಡಿಯುವ ಮೂಲಕ ಕಣ್ಣಿನ ಉರಿ ಹಾಗೂ ಇತರ ತೊಂದರೆಗಳು ಇಲ್ಲವಾಗುತ್ತವೆ.

ವಿಷಕಾರಿ ವಸ್ತುಗಳನ್ನು ವಿಸರ್ಜಿಸಲು

ವಿಷಕಾರಿ ವಸ್ತುಗಳನ್ನು ವಿಸರ್ಜಿಸಲು

ಒಂದು ಸೇಬು, ಒಂದು ಕಪ್ ಕೇಲ್ ಎಲೆಗಳು, ಒಂಚು ಚಿಟಿಕೆ ಕಾಳುಮೆಣಸಿನ ಪುಡಿ, ಮೂರು ಚಿಕ್ಕ ಚಮಚ ಲಿಂಬೆರಸ ಇಷ್ಟನ್ನೂ ಬ್ಲೆಂಡರಿನಲ್ಲಿ ಹಾಕಿ ಕಡೆದು ಬೆಳಗ್ಗಿನ ಪ್ರಥಮ ಆಹಾರವಾಗಿ ಸೇವಿಸಿ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಒಂದು ಸೇಬು, ಕೆಲವು ಪುದಿನಾ ಎಲೆಗಳು ಮತ್ತು ಒಂದು ಎಳೆ ಸೌತೆಕಾಯಿಯನ್ನು ಬ್ಲೆಂಡರಿನಲ್ಲಿ ಹಾಕಿ ಕುಡಿಯುವ ಮೂಲಕ ಹೊಟ್ಟೆಯಲ್ಲಿರುವ ಕಲ್ಮಶಗಳು ಸುಲಭವಾಗಿ ವಿಸರ್ಜಿಸಲ್ಪಡುತ್ತವೆ.

English summary

Juice Recipes For Every Ailment

A century ago, juice cures were popular as people relied on home remedies more than medicines. There are juice cures for almost every single health issue. Here are such juice cures for several minor health issues that most of us face. But consult a doctor before trying any of these remedies.
X
Desktop Bottom Promotion